ಕೋಟಿ ಕೊಟ್ರು ಬಿಗ್ ಬಾಸ್ ಮನೆಗೆ ಹೋಗಲ್ಲ ಎಂದು ಸಿಕ್ಕ ಅವಕಾಶವನ್ನು ತಿರಸ್ಕರಿಸಿದ ಟೆನ್ನಿಸ್ ಕೃಷ್ಣ, ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

ನಮ್ಮ ಕನ್ನಡ ಚಿತ್ರರಂಗ ಎನ್ನುವಂತಹದ್ದು ಕೇವಲ ನಟ ಮತ್ತು ನಟಿಯರಿಂದ ರಚನೆ ಆಗಿಲ್ಲ ಬದಲಿಗೆ ಅಲ್ಲಿ ಹಾಸ್ಯ ನಟರು, ಖಳನಟರು ಇನ್ನಿತರ ಪೋಷಕ ನಟರು ಹೀಗೆ ಎಲ್ಲಾ ಕಲಾವಿದರವು ಸೇರಿದರೆ ಕನ್ನಡ ಚಿತ್ರರಂಗ. ಅದರಲ್ಲಿ ಹಾಸ್ಯ ನಟನೆಯ ಮೂಲಕ ಕೆಲವೊಂದಷ್ಟು ಕಲಾವಿದರು ತಮ್ಮನ್ನು ತಾವು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟ ಟೆನ್ನಿಸ್ ಕೃಷ್ಣ ಅವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯಲೋಕವನ್ನೇ ಸೃಷ್ಟಿ ಮಾಡಿದ್ದಾರೆ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಜನರನ್ನು ರಂಜಿಸುತ್ತಾ ಬಂದಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವಂತಹ ಟೆನ್ನಿಸ್ ಕೃಷ್ಣ ಅವರು ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ ಎಂದು ಹೇಳಬಹುದು. ಅಷ್ಟೇ ಅಲ್ಲದೆ ಇವರು ಹಾಸ್ಯ ನಟಿಯಾದಂತಹ ರೇಖಾದಾಸ್ ಅವರ ಜೊತೆಯಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

1998ರಲ್ಲಿ ಬಿಡುಗಡೆಯಾದಂತಹ ಅಪ್ಪ ನಂಜಪ್ಪ ಮಗ ಗುಂಜಪ್ಪ ಎನ್ನುವಂತಹ ಸಿನಿಮಾದ ಮೂಲಕ ನಟರಾಗಿ ಗುರುತಿಸಿಕೊಂಡರು. ಟೆನ್ನಿಸ್ ಕೃಷ್ಣ ಅವರು ಮೂಲತಹ ಬೆಂಗಳೂರಿನವರು ತಮ್ಮ ವಿದ್ಯಾಭ್ಯಾಸ ಎಲ್ಲವನ್ನು ಸಹ ಬೆಂಗಳೂರಿನಲ್ಲಿಯೇ ಮುಗಿಸಿದರು ಅಷ್ಟೇ ಅಲ್ಲದೆ ಇವರು ಉತ್ತಮ ಟೆನ್ನಿಸ್ ಗಾರರು ಹೌದು ಚಿತ್ರರಂಗಕ್ಕೆ ಎಂಟ್ರಿ ಕೊಡಗುವ ಮುಂಚೆಯೇ ಇವರು ಟೆನ್ನಿಸ್ ಕೋಚ್ ಆಗಿದ್ದರು ಆದ್ದರಿಂದಲೇ ಟೆನ್ನಿಸ್ ಕೃಷ್ಣ ಎನ್ನುವಂತಹ ಹೆಸರು ಬಂದಿದೆ. ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕಿದ ನಂತರ ಇವರು ತಮ್ಮ ವೃತ್ತಿಯನ್ನು ಬಿಟ್ಟು ಚಿತ್ರರಂಗಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡರು. ಕನ್ನಡ ಚಿತ್ರರಂಗದ ಸಾಕಷ್ಟು ದೊಡ್ಡ ದೊಡ್ಡ ನಟರುಗಳ ಜೊತೆಯಲ್ಲಿ ನಟನೆಯನ್ನು ಮಾಡಿದ್ದಾರೆ ಉದಾಹರಣೆಗೆ ಡಾಕ್ಟರ್ ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್, ಅನಂತ್‌ನಾಗ್, ರವಿಚಂದ್ರನ್, ದೊಡ್ಡಣ್ಣ, ರೇಖಾದಾಸ್ ಇನ್ನು ಉಳಿದಂತೆ ಅನೇಕ ನಟರುಗಳ ಜೊತೆಯಲ್ಲಿ ಇವರು ನಟಿಸಿದ್ದಾರೆ.

ದೊಡ್ಡಣ್ಣ ಹಾಗೆ ನಟಿ ರೇಖಾದಾಸ್ ಅವರ ಕಾಂತಿ ನೇಷನ್ ನಲ್ಲಿ ಟೆನಿಸ್ ಕೃಷ್ಣ ಅವರು ಹಲವಾರು ಹಾಸ್ಯ ನಟನೆಯನ್ನು ಮಾಡಿದ್ದಾರೆ ಇದು ಜನರಿಗೆ ಹೆಚ್ಚು ಇಷ್ಟವಾಗುತ್ತದೆ. ಬುಲ್ ಬುಲ್, ದಿಗ್ಗಜರು, ಹುಬ್ಬಳ್ಳಿ, ವೀರಮದಕರಿ, ಮೇಕಪ್, ದುರ್ಗಿ, ಮೋಜುಗಾರ ಸೊಗಸುಗಾರ, ಅಪ್ಪ ನಂಜಪ್ಪ ಮಗ ಗುಂಜಪ್ಪ ಹೀಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿರುವಂತಹ ಟೆನ್ನಿಸ್ ಕೃಷ್ಣ ಅವರು ಸಿನಿಮಾ ರಂಗದಿಂದ ಈಗ ದೂರ ಉಳಿದುಕೊಂಡಿದ್ದಾರೆ. ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಟೆನ್ನಿಸ್ ಕೃಷ್ಣ ಅವರಿಗೆ ರಂಜಿತಾ ಎಂಬ ಮಗಳು ಸಹ ಇದ್ದಾಳೆ. ರಂಜಿತಾ ಅವರಿಗೆ ಒಂದು ಮಗು ಸಹ ಇದೆ ಟೆನಿಸ್ ಕೃಷ್ಣ ಅವರ ಮಗಳು ಚಿತ್ರರಂಗದಿಂದ ದೂರ ಉಳಿದಿದ್ದಾರೆ ಬದಲಿಗೆ ಅವರು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಟೆನಿಸ್ ಕೃಷ್ಣ ಅವರು ತಮ್ಮ ಕುಟುಂಬದ ಜೊತೆಯಲ್ಲಿ ಸುಖವಾದಂತಹ ಜೀವನವನ್ನು ನಡೆಸುತ್ತಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಷಯ ಹರಿದಾಡುತ್ತಿದೆ ಅದು ಏನೆಂದರೆ ಟೆನ್ನಿಸ್ ಕೃಷ್ಣ ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ಬಿಗ್ ಬಾಸ್ ಕನ್ನಡ ಸೀಸನ್ 2ರಿಂದಲೂ ಸಹ ಟೆನ್ನಿಸ್ ಕೃಷ್ಣ ಅವರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವಂತಹ ಸುದ್ದಿ ವದಂತಿಯಾಗಿದೆ ಈ ಒಂದು ಪ್ರಶ್ನೆಗೆ ಉತ್ತರಿಸಿದಂತಹ ಟೆನಿಸ್ ಕೃಷ್ಣ ಅವರು ನಾನು ಕೋಟಿ ಕೊಟ್ಟರು ಸಹ ಬಿಗ್ ಬಾಸ್ ಮನೆಗೆ ಬರುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದನ್ನು ನೋಡಿದಂತಹ ಹಲವರು ಬಿಗ್ ಬಾಸ್ ಮನೆಗೆ ಬರುವಂತಹ ಆಸೆ ಇರುವುದರಿಂದ ಕೋಟಿ ಕೊಟ್ಟರು ಬರುವುದಿಲ್ಲ ಎಂದು ಹೇಳಿದ್ದಾರೆ ಎಂದು ಸುದ್ದಿ ಆಗುತ್ತಿದೆ.

Leave a Comment

%d bloggers like this: