ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಈ ಹೊಟ್ಟೆ ಬೊಜ್ಜನ್ನು ಕರಗಿಸಿಕೊಳ್ಳಲು ನಾನಾ ರೀತಿಯಾದಂತಹ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಡೆಲಿವರಿ ನಂತ ಮಹಿಳೆಯರಿಗೆ ಈ ಹೊಟ್ಟೆ ಬೊಜ್ಜು ಎನ್ನುವಂತಹದ್ದು ಹೆಚ್ಚಾಗುತ್ತದೆ ಇದನ್ನು ಕರಗಿಸಲು ತುಂಬಾ ಕಷ್ಟ ಆದರೆ ಕೆಲವೊಂದು ಎಫೆಕ್ಟಿವ್ ಆದಂತಹ ಮನೆಮದ್ದುಗಳನ್ನು ಉಪಯೋಗಿಸಿದರೆ ಹೊಟ್ಟೆಯ ಬೊಜ್ಜು ಎಷ್ಟೇ ಇದ್ದರೂ ಸಹ ಅದು ನೀರಿನಂತೆ ಕರೆಗೆ ಹೋಗುತ್ತದೆ. ನಾವು ನಮ್ಮ ಮನೆಯಲ್ಲಿ ಇರುವಂತಹ ಕೆಲವು ಪದಾರ್ಥಗಳ ಬಗ್ಗೆ ತಿಳಿದುಕೊಂಡರೆ ಸಾಕು ಅಂದರೆ ನಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಮನೆಯಲ್ಲಿ ಇರುವಂತಹ ಪದಾರ್ಥಗಳೇ ಸಾಕು ಇದರಿಂದ ನಮ್ಮ ಬುಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮನೆ ಮದ್ದನ್ನು ತಯಾರಿಸಿಕೊಳ್ಳಲು ಬೇಕಾಗಿರುವುದು ನಾಲ್ಕು ಲವಂಗ, ಒಂದು ಟೇಬಲ್ ಸ್ಪೂನ್ ಜೀರಿಗೆ, ಎರಡು ಇಂಚು ಚಕ್ಕೆ, ಎರಡು ಲೋಟ ನೀರು, ನಿಂಬೆ ಹಣ್ಣು ಹಾಗೆ ಜೇನುತುಪ್ಪ.
ಮಾಡುವ ವಿಧಾನ ನೋಡುವುದಾದರೆ ಸ್ಟವ್ ಮೇಲೆ ಒಂದು ಪಾತ್ರೆಯನ್ನು ಕಾಯಲು ಇಟ್ಟು ಅದಕ್ಕೆ ಎರಡು ಲೋಟ ನೀರನ್ನು ಹಾಕಿ ನಂತರ ಅದಕ್ಕೆ ನಾಲ್ಕು ಲವಂಗ ಹಾಗೆ ಒಂದು ಟೇಬಲ್ ಸ್ಪೂನ್ ನಷ್ಟು ಜೀರಿಗೆ ಮತ್ತು ಒಂದು ಇಂಚಿನಷ್ಟು ಚಕ್ಕೆಯನ್ನು ಸೇರಿಸಿ ನಂತರ ಇದನ್ನು ಮೀಡಿಯಂ ಫ್ಲೇಮ್ ನಲ್ಲಿ ಇಟ್ಟು 5 ರಿಂದ 6 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಬೇಕು ಚೆನ್ನಾಗಿ ಕುದಿಸಿದ ನಂತರ ಸ್ಟವ್ ಆಫ್ ಮಾಡಿ ಒಂದು ಲೋಟಕ್ಕೆ ಶೋಧಿಸಿಕೊಳ್ಳಿ ಇದು ಬಿಸಿ ಇರುವಾಗಲೇ ಅದಕ್ಕೆ ಒಂದು ನಿಂಬೆಹಣ್ಣಿನ ರಸ ಹಾಗೆಯೇ ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಇದು ಬಿಸಿ ಇರುವಾಗಲೇ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಅಸಿಡಿಟಿ ಸಮಸ್ಯೆ ಇರುವವರು ಜೇನುತುಪ್ಪ ಮತ್ತು ನಿಂಬೆ ಹಣ್ಣನ್ನು ಸೇರಿಸುವುದು ಬೇಡ ಕೇವಲ ಲವಂಗ ಜೀರಿಗೆ ಮತ್ತು ಚಕ್ಕೆಯನ್ನು ಕುದಿಸಿರುವಂತಹ ನೀರನ್ನು ಸೇವಿಸಿದರೆ ಸಾಕು.
ಇದೊಂದು ನ್ಯಾಚುರಲ್ ಆದಂತಹ ಮನೆ ಮದ್ದು ಆಗಿದ್ದು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಇದನ್ನು ತಯಾರಿಸಿ ನಾವು ಉಪಯೋಗ ಮಾಡಿ ಬಳಸಬಹುದು ಈ ಒಂದು ಡ್ರಿಂಕ್ ಅನ್ನು ನಾವು ವಾರದಲ್ಲಿ ನಾಲ್ಕು ದಿನ ತೆಗೆದುಕೊಳ್ಳಬೇಕು ಅಂದರೆ ದಿನ ಬಿಟ್ಟು ದಿನ ತೆಗೆದುಕೊಂಡರೆ ಹೊಟ್ಟೆಯ ಬೊಜ್ಜು ನಿಧಾನವಾಗಿಯೇ ಕರೆಗುತ್ತಾ ಬರುತ್ತದೆ. ಕ್ರಮೇಣವಾಗಿ ನಿಮ್ಮ ಹೊಟ್ಟೆ ಯಾವ ರೀತಿ ಕರಗುತ್ತಿದೆ ಎನ್ನುವುದು ನಿಮಗೆ ಖಂಡಿತವಾಗಿಯೂ ತಿಳಿಯುತ್ತದೆ. ಇದು ಒಂದು ಉತ್ತಮವಾದಂತಹ ಮನೆಮದ್ದು ಆಗಿದ್ದು ಅದ್ಬುತವಾದ ರಿಸಲ್ಟ್ ನಿಮಗೆ ಸಿಗುತ್ತದೆ.
ಯಾವುದೇ ಮನೆಮದ್ದುಗಳನ್ನು ಉಪಯೋಗ ಮಾಡಿದರೂ ಸಹ ನಾವು ಕೆಲವೊಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಅಂದರೆ ಸ್ವಲ್ಪ ವ್ಯಾಯಾಮ ಮಾಡುವುದು ಹಾಗೆ ಯೋಗ ಮಾಡುವುದು ಹಾಗೆ ನಾವು ದಿನದಲ್ಲಿ ಹೆಚ್ಚು ನೀರನ್ನು ಕುಡಿಯುವುದು ಈ ರೀತಿಯಾದಂತಹ ಒಂದು ಆರೋಗ್ಯಕರವಾದ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದೆ ಆದಲ್ಲಿ ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಅಲ್ಲದೆ ನಮ್ಮ ದೇಹದ ತೂಕವನ್ನು ಸಹ ನಾವು ಇಳಿಸಿಕೊಳ್ಳಬಹುದು. ಯಾವುದೇ ಮನೆಮದ್ದುಗಳನ್ನು ನಾವು ತೆಗೆದುಕೊಳ್ಳುವುದಾದರೂ ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು ಆಗಿದ್ದರೆ ಅದು ತುಂಬಾ ಚೆನ್ನಾಗಿ ವರ್ಕ್ ಆಗುತ್ತದೆ.