ತಂದೆ ತಾಯಿ ಇರುವಾಗಲೇ ಮಕ್ಕಳಿಗೆ ಅವರ ಆಸ್ತಿಯನ್ನು ಕೊಟ್ಟು ಬಿಟ್ಟರೆ ಮಕ್ಕಳುಗಳು ಅವರವರಲ್ಲೇ ಕಲಹ ಮಾಡಿಕೊಳ್ಳವುದು ತಪ್ಪುತ್ತದೆ. ಹೀಗಾಗಿ ವಯಸ್ಸಾದ ನಂತರ ತಮ್ಮ ಎಲ್ಲಾ ಆಸ್ತಿಯನ್ನು ಮಕ್ಕಳ ಹೆಸರಿಗೆ ಹೆತ್ತವರು ಬರೆದು ಬಿಡುತ್ತಾರೆ. ಜೊತೆಗೆ ಮಕ್ಕಳಿಗೆ ಜವಾಬ್ದಾರಿ ಬಂದ ಕೂಡಲೇ ಅವರಿಗೆ ಅನುಕೂಲ ಆಗಲಿ ಅನ್ನುವ ಕಾರಣಕ್ಕೂ ಕೂಡ ಈ ರೀತಿ ತಮ್ಮದನ್ನೆಲ್ಲಾ ಮಕ್ಕಳಿಗೆ ಮಾಡಿಕೊಡುತ್ತಾರೆ.
ಈ ರೀತಿ ತಂದೆ ತಾಯಿ ಆಸ್ತಿಯನ್ನು ಮಕ್ಕಳಿಗೆ ಮಾಡಿಕೊಳ್ಳುವುದಕ್ಕೆ ಕಾನೂನು ಬದ್ಧವಾಗಿ ನಡೆಯುವ ಪ್ರೋಸೆಸ್ ಹೇಗೆ ಇರುತ್ತದೆ ಎನ್ನುವುದರ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ. ಉದಾಹರಣೆಗೆ ಒಬ್ಬ ಹಳ್ಳಿಯಲ್ಲಿರುವ ಜಮೀನುದಾರ ತನ್ನ ಮಕ್ಕಳಿಗೆ ಹೇಗೆ ತನ್ನ ಜಮೀನನ್ನು ವರ್ಗಾವಣೆ ಮಾಡಬೇಕು ಎಂದರೆ ಅದು ಜಮೀನು ಆಗಲಿ ಅಥವಾ ಮನೆ ಆಗಲಿ ಅದರ ನಕ್ಷೆ ಅದರ ಹಕ್ಕುಪತ್ರ ದಾಖಲೆ ಮತ್ತು ಅದಕ್ಕೆ ತೆರಿಗೆ ಕಟ್ಟಿರುವ ರಶೀತಿಗಳು ಅವರ ಬಳಿ ಇರುತ್ತವೆ.
ಒಂದು ವೇಳೆ ಯಾವುದೇ ಕಾರಣದಿಂದ ಇದೆಲ್ಲವನ್ನು ನೀವು ಕಳೆದುಕೊಂಡಿದ್ದರೆ ನಿಮ್ಮ ಪಂಚಾಯಿತಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿದರೆ ಆ ಎಲ್ಲಾ ದಾಖಲೆಗಳ ನಕಲಿ ಪ್ರತಿಗಳು ಮತ್ತೆ ನಿಮ್ಮ ಕೈ ಸೇರುತ್ತವೆ. ಇವೆಲ್ಲಾ ಅವಶ್ಯಕ ದಾಖಲೆಗಳಾಗಿದ್ದು ಮೊದಲಿಗೆ ಇವೆಲ್ಲವನ್ನು ನೀವು ರೆಡಿ ಮಾಡಿಕೊಳ್ಳಬೇಕು. ಈ ಅವಶ್ಯಕ ದಾಖಲಾತಿಗಳ ಜೊತೆ ನೋಂದಣಿಯನ್ನು ಮಾಡಿ ವರ್ಗಾವಣೆ ಮಾಡಬೇಕು ಮತ್ತು ತಪ್ಪದೆ ಅದು ಈ ಸ್ವತ್ತು ಆಗಿರಬೇಕು.
ಯಾಕೆಂದರೆ ಈಗಿನ ಕಾನೂನಿನ ಪ್ರಕಾರ ಈ ಸ್ವತ್ತು ಮಾಡಿ ವರ್ಗಾವಣೆ ಮಾಡಿದ ಆಸ್ತಿಗಳು ಕಾನೂನು ಬದ್ಧವಾಗಿರುತ್ತವೆ ಎನ್ನುವುದಕ್ಕೆ ಅದು ಸಾಕ್ಷಿ ಪುರಾವೆ ಆಗಿರುತ್ತದೆ. ಈ ಕಾರಣಕ್ಕಾಗಿ ಇತ್ತೀಚೆಗೆ ಇದನ್ನು ಆಸ್ತಿ ಮಾರಾಟಕ್ಕೆ ಹಾಗೂ ವರ್ಗಾವಣೆಗೆ ಕಡ್ಡಾಯ ಮಾಡಲಾಗಿದೆ. ಮೊದಲೇ ತಿಳಿಸಿದ ಅವಶ್ಯಕ ಕೆಲವು ದಾಖಲಾತಿಗಳು ಎಂದರೆ ಹಕ್ಕುಪತ್ರ ಅಥವಾ ಕ್ರಯಾ ಪತ್ರ.
ಈಗ ತಂದೆ ಹೆಸರಿನಲ್ಲಿ ಇರುವ ಆಸ್ತಿಯು ಸರ್ಕಾರದಿಂದ ಮಂಜೂರು ಆಗಿರುವುದು ಆಗಿದ್ದರು ಅಥವಾ ತಂದೆಯೇ ಖರೀದಿಸಿದ್ದರು ಅಥವಾ ತಲಾತಲಾಂತರದಿಂದ ತಂದೆಗೆ ಬಂದಿದ್ದರು ಅದು ನಿಮ್ಮದೇ ಎನ್ನುವ ದಾಖಲಾತಿಗಾಗಿ ಒಂದು ದಾಖಲೆ ಪತ್ರ ಬೇಕು ನಂತರ ಪಂಚಾಯಿತಿಯಿಂದ ಸಿಗುವ ಫಾರಂ 11 ಮತ್ತು ಫಾರಂ 9ನ್ನು ತೆಗೆದುಕೊಳ್ಳಬೇಕು ಮತ್ತು ತಂದೆ ಹಾಗೂ ಮಕ್ಕಳ ಆಧಾರ್ ಕಾರ್ಡ್ ಗಳು ಹಾಗೂ ಅವರ ಹಸ್ತಾಕ್ಷರಗಳು ಕೂಡ ಮುಖ್ಯವಾಗಿರುತ್ತದೆ.
ತಂದೆಯಿಂದ ಮಗನಿಗೆ ಮೂರು ರೀತಿಯಲ್ಲಿ ಆಸ್ತಿ ವರ್ಗಾವಣೆ ಮಾಡಬಹುದು ಅದು ವಿಭಾಗದ ಮೂಲಕ ಅಥವಾ ದಾನ ಪತ್ರದ ಮೂಲಕ ಅಥವಾ ಕ್ರಯ ಮಾಡುವ ಮೂಲಕ. ಇದರಲ್ಲಿ ಹೆಚ್ಚಿನ ಜನರು ದಾನ ಪತ್ರ ಮಾಡುವ ಮೂಲಕ ವರ್ಗಾವಣೆ ಮಾಡುತ್ತಾರೆ. ನಂತರ ಉಪ ನೋಂದಣಿ ಕಚೇರಿಗೆ ಹೋಗಿ ವಿವರವನ್ನೆಲ್ಲ ನೋಂದಣಿಸಿ ಎಲ್ಲಾ ದಾಖಲೆಗಳನ್ನು ಕೊಟ್ಟು ಸಾಕ್ಷಿಯಿಂದ ಕೂಡ ಸಹಿ ಮಾಡಿಸಬೇಕು.
ರಿಜಿಸ್ಟರ್ ಪತ್ರದ ನಕಲು ಪ್ರತಿ ತೆಗೆದುಕೊಂಡು ಗ್ರಾಮ ಪಂಚಾಯಿತಿಯಲ್ಲಿ ಖಾತೆ ವರ್ಗಾವಣೆಗೆ ಅರ್ಜಿ ಸಲ್ಲಿಸಿ, ಅದಕ್ಕೆ ವಿವರವನ್ನು ಬರೆದು ಕೊಡಬೇಕು. ನಂತರ ನಿಗದಿತ ಸಮಯದವರೆಗೂ ಯಾರು ತಕರಾರು ಅರ್ಜಿ ಸಲ್ಲಿಸಿಲ್ಲ ಎಂದರೆ ಈ ಸ್ವತ್ತು ಮೂಲಕ ಖಾತೆ ವರ್ಗಾವಣೆಗೆ ಆದೇಶ ಹೊರಡಿಸಲಾಗುತ್ತದೆ. ಈ ವಿಷಯದ ಕುರಿತು ಏನೇ ಗೊಂದಲಗಳಿದ್ದರೂ ಅಥವಾ ಹೆಚ್ಚಿನ ಮಾಹಿತಿ ಬೇಕಾದರು ನಿಮ್ಮ ಗ್ರಾಮ ಪಂಚಾಯತಿಯ ಪಿ ಡಿ ಓ ಅನ್ನು ಸಂಪರ್ಕಿಸಬಹುದು.