ಮಾನವನ ದೇಹದ ಅಲ್ಲ ಅಂಗಗಳ ಚರ್ಮವು ಹಾಗೂ ಎಲ್ಲ ಮಾನವನ ಚರ್ಮವು ಒಂದೇ ಆಗಿದೆ. ಆದರೆ ದೇಹದ ಕೆಲವು ಭಾಗಗಳ ಚರ್ಮಗಳಲ್ಲಿ ಡೆಡ್ ಸೆಲ್ಸ್ ಹೆಚ್ಚಾಗಿ ಇರುತ್ತದೆ ಅದ್ದರಿಂದ ಅಂತಹ ಜಾಗಗಳಲ್ಲಿ ಚರ್ಮವು ಸ್ವಲ್ಪ ಒರಟಾಗಿ ಇರುತ್ತದೆ. ಇನ್ನೂ ಕೆಲವು ಭಾಗಗಳಲ್ಲಿ ಡೆಡ್ ಸೆಲ್ಸ್ ಕಡಿಮೆ ಇರುತ್ತದೆ ಆದ್ದರಿಂದ ಅಲ್ಲಿನ ಚರ್ಮವು ಮೃದುವಾಗಿ ಇರುತ್ತದೆ. ಹಾಗೂ ಗಂಡಸರ ಚರ್ಮವು ಹೆಂಗಸರ ಚರ್ಮಕ್ಕಿಂತ ಒರಟಾಗಿ ಇರುತ್ತದೆ. ನಮ್ಮ ದೇಹದ ಮುಖ ಮತ್ತು ಕತ್ತಿನ ಭಾಗದ ಚರ್ಮಕ್ಕಿಂತ ಮಂಡಿ, ಹಂಗೈ, ಮತ್ತು ಪಾದದಲ್ಲಿ ಇರುವ ಚರ್ಮಗಳಲ್ಲಿ ಡೆಡ್ ಸೆಲ್ಸ್ ಹೆಚ್ಚಾಗಿ ಇರುತ್ತದೆ ಆದ್ದರಿಂದ ಆ ಭಾಗದ ಚರ್ಮ ಒರಟಾಗಿ ಇರುತ್ತವೆ. ಕೆಲವರಿಗೆ ಮುಖ ಮತ್ತು ಕತ್ತಿನ ಭಾಗದ ಚರ್ಮದಲ್ಲಿ ಹಳೆಯ ಬಂಗು, ಮೊಡವೆ ಕಲೆಗಳು, ಕಪ್ಪು ಕಲೆಗಳು ಬಂದಿರುತ್ತದೆ ಅಲ್ಲದೆ ಸನ್ ಟ್ಯಾನ್, ಪಿಗ್ಮೆಂಟೇಷನ್ ಗಳು ಆಗಿರುತ್ತವೆ. ಇವುಗಳನ್ನು ಹೋಗಲಾಡಿಸಲು ಒಂದು ಕ್ರೀಂ ಇದೆ. ಆ ಕ್ರೀಂ ಯಾವುದು? ಅದನ್ನು ಹೇಗೆ ಬಳಸಬೇಕು? ಎಂದು ಇಲ್ಲಿ ತಿಳಿಯೋಣ.
ಸನ್ ಟ್ಯಾನ್ / ಸನ್ ಬರ್ನ್ , ಪಿಗ್ಮೆಂಟೇಷನ್ ಅಥವಾ ಫೇರ್ ನೆಸ್ ಗಳಿಗೆ ಎಲ್ಲದಕ್ಕೂ ಇಲ್ಲಿ ತಿಳಿಸುವ ಕ್ರೀಂ ಅನ್ನು ಬಳಸಬಹುದು. ಆ ಕ್ರೀಂ ಗಳು ಅಂದರೆ ಮೆಲಾ ಗ್ಲೊ,ಮೆಲಾ ಕೇರ್, ಹೆಚ್ ಎಸ್ ಕ್ರೀಂ, ಸ್ಕಿನ್ ಶೈನ್ ಕ್ರೀಂ ಗಳು ಇವೆಲ್ಲವೂ ಒಂದೇ ಕ್ರೀಂ ಆಗಿದ್ದು ಒಂದೊಂದು ಕಂಪನಿ ಅವರು ಒಂದೊಂದು ಹೆಸರನ್ನು ಇಟ್ಟಿರುತ್ತಾರೆ. ಇವುಗಳಲ್ಲಿ ಯಾವುದಾದರೂ ಒಂದು ಕ್ರೀಂ ಅನ್ನು ಬಳಸಬಹುದು. ಈ ಕ್ರೀಂ ಅನ್ನು ಹೇಗೆ ಬಳಸ ಬೇಕು ಅಂದರೆ ಪ್ರತಿ ನಿತ್ಯ ರಾತ್ರಿ ಮಲಗುವ ಮುನ್ನ ಮುಖ ತೊಳೆದು ಒಣಗಿದ ನಂತರ ಯಾವ ಜಾಗದ ಚರ್ಮದಲ್ಲಿ ತೊಂದರೆ ಇರುತ್ತದೆಯೋ ಆ ಜಾಗಕ್ಕೆ ಕ್ರೀಂ ಹಚ್ಚಬೇಕು. ನಂತರ ರಾತ್ರಿ ಪೂರ್ತಿ ಹಾಗೆಯೆ ಬಿಟ್ಟು ಬೆಳಿಗ್ಗೆ ಎದ್ದಾಗ ಕ್ಲಿನ್ಸರ್, ಫೇಸ್ ವಾಶ್, ಅಥವಾ ಸೋಪ್ ಗಳನ್ನು ಬಳಸಿ ಮುಖ / ಕ್ರೀಂ ಹಚ್ಚಿದ ಜಾಗವನ್ನು ತೊಳೆಯಬೇಕು. ತೊಳೆದ ಮೇಲೆ ಮುಖವನ್ನು / ಕ್ರೀಂ ಹಚ್ಚಿದ ಜಾಗವನ್ನು ಒಣಗಿಸಿ ನಂತರ ಮಾಯಿಶ್ಚರೈಸರ್ ಅನ್ನು ಹಚ್ಚಿ ಕೊಳ್ಳಬೇಕು. ಕ್ರಿಂ ಬಳಸಿದ ಮೇಲೆ ಮಾಯುಶ್ಚರೈಸರ್ ಬಳಸುವುದು ಅಷ್ಟೇ ಮುಖ್ಯ ವಾಗಿದೆ.
ಈ ಮಾಶ್ಚರೈಸರ್ ಗಳಲ್ಲಿ ಎರಡು ವಿಧ ಒಂದು ಮೆಡಿಕಲ್ ಅಲ್ಲಿ ಸಿಗುವ ಕೊಟರೈಲ್. ಇನ್ನೊಂದು ಕಾಸ್ಮೆಟಿಕ್ ನಲ್ಲಿ ಸಿಗುವ ಹಲವಾರು ಬಗೆಯ ಮಾಯಿಶ್ಚರೈಸರ್ ಕ್ರೀಂ ಗಳು. ಮೆಡಿಕಲ್ ಮತ್ತು ಕಾಸ್ಮೆಟಿಕ್ ಮಾಯಿಶ್ಚರೈಸರ್ ಕ್ರೀಂ ಗಳಿಗೆ ಸ್ವಲ್ಪ ವ್ಯತ್ಯಾಸ ಇದೆ. ಆ ವ್ಯತ್ಯಾಸ ಎಂದರೆ ಮೆಡಿಕಲ್ ಮಾಯಿಶ್ಚರೈಸರ್ ಗಳು ಜಾಸ್ತಿ ಪರಿಣಾಮಕಾರಿ ಆಗಿ ಇರುತ್ತದೆ ಮತ್ತು ವಾಸನೆಯುಕ್ತ ವಾಗಿದ್ದು ಹಚ್ಚುವುದಕ್ಕೆ ಹೆಚ್ಚಿನ ಕಂಫರ್ಟ್ ಇರುವುದಿಲ್ಲ. ಕಾಸ್ಮೆಟಿಕ್ ಮಾಯಿಶ್ಚರೈಸರ್ ಗಳು ಹೆಚ್ಚು ಪರಿಣಾಮಕಾರಿ ಆಗಿ ಇರುವುದಿಲ್ಲ ಆದರೆ ಸುವಾಸನೆ ಯುಕ್ತ ವಾಗಿ ಇರುತ್ತವೆ ಇದರಿಂದ ಹಚ್ಚುವುದಕ್ಕೆ ಕಂಫರ್ಟ್ ಆಗಿರುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ಮಾಯಿಶ್ಚರೈಸರ್ ಅನ್ನು ಬಳಸಬಹುದು.
ಬಿಸಿಲಿನಲ್ಲಿ ಓಡಾಡುವಾಗ ಸೂರ್ಯನಿಂದ ಬರುವ ಅಲ್ಟ್ರವೈಲೆಟ್ ಕಿರಣಗಳು ನಮ್ಮ ಚರ್ಮದ ಮೇಲೆ ಬೀಳುವುದರಿಂದ ಹೆಚ್ಚು ಸನ್ ಟ್ಯಾನ್ ಆಗುತ್ತದೆ . ಅದಕ್ಕಾಗಿ ಸನ್ ಸ್ಕ್ರೀನ್ ಲೋಷನ್ ಅನ್ನು ಬಿಸಿಲಿನಲ್ಲಿ ಹೋಗುವಾಗ ಮಾತ್ರ ಬಳಸಬೇಕು ಇಲ್ಲವೇ ಛತ್ರಿ ಅಥವಾ ಟೋಪಿ ಬಳಸಿ ಸೂರ್ಯನ ಕಿರಣು ನಮ್ಮ ಚರ್ಮದ ಮೇಲೆ ಬೀಳದ ಹಾಗೆ ರಕ್ಷಿಸಿ ಕೊಳ್ಳಬೇಕು. ಈ ಸನ್ ಸ್ಕ್ರೀನ್ ಲೋಷನ್ ಸೂರ್ಯನಿಂದ ಬರುವ ಅಲ್ಟ್ರವೈಲೆಟ್ ಕಿರಣಗಳನ್ನು ತಡೆದು ನಮ್ಮ ಚರ್ಮವನ್ನು ರಕ್ಷಿಸುತ್ತದೆ. ಹೀಗೆ ಕ್ರೀಂ ಬಳಸುವುದರಿಂದ ಮೊದಲಿಗೆ ಮೃದು ಚರ್ಮ ಇರುವವರಿಗೆ ಚರ್ಮ ಕಪ್ಪಾಗುತ್ತದೆ. ಏಕೆಂದರೆ ಈ ಕ್ರೀಂ ಬಳಸಿದಾಗ ಮೃದು ಚರ್ಮದಲ್ಲಿ ಇರುವ ಡೆಡ್ ಸೆಲ್ ಗಳು ಒಂದು ಕಡೆ ಸೇರುತ್ತದೆ. ಸ್ವಲ್ಪ ದಿನ ಕಳೆದ ನಂತರ ಆ ಡೆಡ್ ಸೆಲ್ ಗಳು ಹೊರ ಬೀಳಲು ಪ್ರಾರಂಭಿಸುತ್ತದೆ ಆಗ ಚರ್ಮ ಎಡೆಯುವುದಕ್ಕೆ ಪ್ರಾರಂಭವಾಗುತ್ತದೆ. ಇದಾದ ನಂತರ ಕೆಲವು ದಿನಗಳ ಮೇಲೆ ನಿಧಾನವಾಗಿ ಚರ್ಮ ಸರಿ ಹೋಗುತ್ತದೆ. ಆದ್ದರಿಂದ ರೆಗ್ಯುಲರ್ ಆಗಿ ಈ ಕ್ರೀಂ ಮತ್ತು ಲೋಷನ್ ಗಳನ್ನು ಬಳಸುತ್ತಿರಬೇಕು. ಇವುಗಳನ್ನು ಬಾಣಂತಿಯರು ಮತ್ತು ಗರ್ಭಿಣಿಯರು ಬಳಸಬಾರದು.