ಕರ್ನಾಟಕ ರಾಜ್ಯದಲ್ಲಿ BPL ಕಾರ್ಡ್ ಹೊಂದಿರುವ ಮನೆಯ ಯಜಮಾನಿಗೆ ಈಗ ಸಿಹಿ ಸುದ್ದಿ. ಯಾಕೆಂದರೆ ಇನ್ನು ಮುಂದೆ ನೀವು ಪ್ರತಿ ತಿಂಗಳೂ ಕೂಡ ಸರ್ಕಾರದಿಂದ 2850 ರೂಪಾಯಿಗಳನ್ನು ಸಹಾಯಧನವಾಗಿ ಪಡೆಯಬಹುದು. ಇದು ಹೇಗೆಂದರೆ ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಪಣತೊಟ್ಟಿದೆ.
ಮನೆ ಯಜಮಾನಿಗೆ 2000 ಪ್ರತಿ ತಿಂಗಳು ಸಹಾಯಧನ ನೀಡುವುದಾಗಿ ಗೃಹಲಕ್ಷ್ಮಿ ಯೋಜನೆಯನ್ನು ಘೋಷಿಸಿ ಇದಕ್ಕೆ ಅರ್ಜಿ ಸ್ವೀಕೃತಿ ಮಾಡಲು ಆಪ್ ಸಿದ್ಧಗೊಳಿಸಿಕೊಳ್ಳುತ್ತಿದೆ. ಆಗಸ್ಟ್ ತಿಂಗಳಿಂದ ಪ್ರತಿ ಮಹಿಳೆಯ ಖಾತೆಗೆ 2000 ಸಹಾಯಧನ ಹಾಕಲು ವ್ಯವಸ್ಥೆ ಮಾಡಿಕೊಂಡಿದೆ. ಇದನ್ನು BPL ಕಾರ್ಡ್ ಮಾತ್ರ ಅಲ್ಲದೆ APL ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿ ಕೂಡ ಪಡೆಯಲಿದ್ದಾರೆ.
ಹಾಗೆಯೇ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಸರ್ಕಾರವು 10Kg ಗೆ ಹೆಚ್ಚಿಸುವುದಾಗಿ ಹೇಳಿತ್ತು. ಇದಕ್ಕಾಗಿ ಅಕ್ಕಿ ಖರೀದಿಸಲು ಸಾಕಷ್ಟು ಕಸರತ್ತು ಕೂಡ ನಡೆಸಿತ್ತು. ಆದರೆ ಜುಲೈ ತಿಂಗಳಿನಲ್ಲಿ ಹೆಚ್ಚುವರಿ ಅಕ್ಕಿ ವಿತರಣೆ ಮಾಡಲು ದಾಸ್ತಾನು ಲಭ್ಯವಾಗಿಲ್ಲ. ಆ ಕಾರಣಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಗೊಂಡು ಅಕ್ಕಿ ಸಿಗುವವರೆಗೂ ಕೂಡ ಹೆಚ್ಚುವರಿ ಅಕ್ಕಿ ಬದಲಾಗಿ ಹಣ ನೀಡಲು ತೀರ್ಮಾನ ತೆಗೆದುಕೊಂಡಿದ್ದಾರೆ.
Kg ಅಕ್ಕಿಗೆ ರೂ.35 ರಂತೆ ಪ್ರತಿ ಸದಸ್ಯನಿಗೂ 5Kg ಅಕ್ಕಿ ಮತ್ತು 175 ಸಿಗಲಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಅರ್ಜಿ ಆಹ್ವಾನ ಮಾಡುವುದಿಲ್ಲ. ಬದಲಾಗಿ ರೇಷನ್ ಕಾರ್ಡ್ ಅಲ್ಲಿ ಮೊದಲ ಪುಟದಲ್ಲಿ ಯಾವ ಸದಸ್ಯರು ಇರುತ್ತದೆ ಅವರಿಗೆ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣವನ್ನು DBT ಮೂಲಕ ನೇರ ವರ್ಗಾವಣೆ ಮಾಡಲಾಗುತ್ತದೆ.
ರೇಷನ್ ಕಾರ್ಡಲ್ಲಿ ಆಧಾರ್ ಲಿಂಕ್ ಆಗಿರುತ್ತದೆ. ಆ ಆಧಾರ್ ಸೀಡಿಂಗ್ ಯಾವ ಬ್ಯಾಂಕ್ ಅಕೌಂಟಿಗೆ ಆಗಿರುತ್ತದೆ ಆ ಅಕೌಂಟಿಗೆ ಹಣ ಹಾಕಲು ನಿರ್ಧಾರ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಕರ್ನಾಟಕದಲ್ಲಿ 90 ಪರ್ಸೆಂಟ್ಗಿಂತಲೂ ಹೆಚ್ಚು BPL ಕಾರ್ಡ್ ಮಹಿಳೆಯರ ಹೆಸರಿನಲ್ಲಿ ಇವೆ, ಹಾಗಾಗಿ ಇನ್ನು ಮುಂದೆ ಮಹಿಳೆಯರಿಗೆ ಅನ್ನಭಾಗ್ಯ ಯೋಜನೆಯಡಿ ಒಂದು ಕುಟುಂಬದಲ್ಲಿ ಐದು ಜನ ಸದಸ್ಯರಿದ್ದರೆ, ಐದು ಜನರ ಸದಸ್ಯರ ಹಣ 850ರೂ ಮತ್ತು ಗೃಹಲಕ್ಷ್ಮಿ ಯೋಜನೆಯ 2000 ಸಹಾಯಧನ ಒಟ್ಟು 2850 ರೂ. ಮಹಿಳೆಯ ಖಾತೆಗೆ ಹೋಗಲಿದೆ.
ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಹೆಚ್ಚುವರಿ ಅಕ್ಕಿಯ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಆಗಬೇಕೆಂದರೆ ಮಹಿಳೆಯ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟಿಗೆ ಸೀಡಿಂಗ್ ಆಗಿ NPCI ಮ್ಯಾಚಿಂಗ್ ಆಗಬೇಕಾಗಿರುವುದು ಕಡ್ಡಾಯ. ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಚಿಂಗ್ ಆಗಿದೆಯೇ ಎಂದು ಚೆಕ್ ಮಾಡಲು AIDAI ನ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಬಹುದು.
ಅಥವಾ DBT ಕರ್ನಾಟಕ ಎನ್ನುವ ಆಪ್ ಡೌನ್ಲೋಡ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಬಹುದು. ಈ ಕೂಡಲೇ ಮನೆಯ ಯಜಮಾನಿಯು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಎಂದರೆ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಪ್ರಕ್ರಿಯೆ ಪೂರ್ತಿಗೊಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.