ಗೃಹಲಕ್ಷ್ಮಿ ಯೋಜನೆ 2000 ಹಣ ಪಡೆಯದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ.!

 

WhatsApp Group Join Now
Telegram Group Join Now

ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ನಾಲ್ಕನೇ ಗ್ಯಾರಂಟಿಯಾಗಿ ಗೃಹಲಕ್ಷ್ಮಿ ಯೋಜನೆಯು (Gruhalakshmi) ಆಗಸ್ಟ್ 30ರಂದು ಲಾಂಚ್ ಆಗಿದೆ. ಅಂದಿನಿಂದ ಅರ್ಜಿ ಸಲ್ಲಿಸಿದ ಹಲವು ಮಹಿಳೆಯರ ಖಾತೆಗೂ ಕೂಡ ಹಣ ಹೋಗುತ್ತಿದೆ. ಆದರೆ ಯೋಚನೆ ಲಾಂಚ್ (lauch) ಆಗಿ 15 ದಿನ ಕಳೆಯುತ್ತಿದ್ದರೂ ಕೂಡ ಲಕ್ಷಾಂತರ ಫಲಾನುಭವಿಗಳಿಗೆ ತಮ್ಮ ಖಾತೆಗಳಿಗೆ ಹಣ ಪಡೆಯಲು ಸಾಧ್ಯವಾಗಿಲ್ಲ.

ಇದರಿಂದ ರಾಜ್ಯದ ಸಾಕಷ್ಟು ಮಹಿಳೆಯರು ಗೊಂದಲಕ್ಕೊಳಗಾಗಿದ್ದಾರೆ. ಅವರಿಗೆಲ್ಲ ಈ ಕುರಿತು ಒಂದು ನಿಖರ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child welfare department) ನೀಡುತ್ತಿರುವ ಅಂಕಿ ಅಂಶದ ಮಾಹಿತಿ ಪ್ರಕಾರ 1.13 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಎರಡು ಕಂತಿನ ಹಣವನ್ನು ಸಂಬಂಧಪಟ್ಟ ಇಲಾಖೆಗೆ ಮಂಜೂರು ಮಾಡಿದೆ ಒಂದು ತಿಂಗಳಿಗೆ 2,100 ಕೋಟಿ ಬಜೆಟ್ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಕುಡಿತದ ಚಟ ಬಿಡಿಸಲು, ಬೀಡಿ, ಸಿಗರೇಟ್, ತಂಬಾಕು, ಗುಟ್ಕಾ ಅಭ್ಯಾಸ ಬಿಡಿಸಲು ಈ ಮನೆ ಮದ್ದು ಮಾಡಿ.!

ಅಂತೆಯೇ ಫಲಾನುಭವಿಗಳ ಖಾತೆಗೆ ಆಗಸ್ಟ್ 30 ರಿಂದ ಹಣ ವರ್ಗಾವಣೆ ಮಾಡಲಾಗುತ್ತಿದ್ದರು ಇದು ಪೂರ್ತಿಯಾಗಿಲ್ಲ. ಯಾಕೆಂದರೆ RBI ನಿಯಮದ ಅನುಸಾರವಾಗಿ ಹಣ ತುಂಬಿಸಬೇಕಾಗಿರುವುದರಿಂದ ಹಣ ವರ್ಗಾವಣೆಗೆ ಮಿತಿ ಇರುತ್ತದೆ ಜೊತೆಗೆ ಮೊದಲ ಕಂತಿನ ಹಣ ಆಗಿರುವುದರಿಂದ DBT ಮೂಲಕ ಹಣ ವರ್ಗಾವಣೆ ಆಗುತ್ತಿರುವುದರಿಂದ ದಾಖಲೆಗಳನ್ನು ಪರಿಶೀಲಿಸಿ ಹಣ ವರ್ಗಾವಣೆ ಮಾಡಲು ಸಮಯ ಹಿಡಿಯುತ್ತಿದೆ.

ಆದರೆ ಮುಂದಿನ ತಿಂಗಳಿಂದ ಈ ರೀತಿ ತೊಂದರೆ ಆಗುವುದಿಲ್ಲ ಎನ್ನುತ್ತಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು. ಹಾಗಾಗಿ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿ ನೊಂದಾಯಿಸಿಕೊಂಡಿದ್ದ 1.13 ಲಕ್ಷ ಫಲಾನುಭವಿಗಳ ಪೈಕಿ 80 ಲಕ್ಷ ಫಲಾನುಭವಿಗಳಿಗೆ ಅಷ್ಟೇ ಹಣ ವರ್ಗಾವಣೆ ಆಗಿರುವುದು ಇನ್ನು ಶೇಕಡ 30%ರಷ್ಟು ಮಹಿಳೆಯರು ಹಣಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆಲ್ಲ ಸಮಾಧಾನಕರ ಸುದ್ದಿಯೇನೆಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣ ವರ್ಗಾವಣೆ ಆಗಲಿದೆ.

ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದಿಯಾ.? ಆಗಿದ್ರೆ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂದು ತಿಳಿಯಲು ಈ ರೀತಿ ಚೆಕ್ ಮಾಡಿ.!

ಬಾಕಿ ಉಳಿದಿರುವ 7 ರಿಂದ 8 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆ ಇನ್ನಕ್ಟಿವ್ ಆಗಿರುವುದು ಅಥವಾ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರದಲ್ಲಿ ನೀಡಿರುವ ಮಾಹಿತಿಗಳು ಹೊಂದಾಣಿಕೆ ಆಗದೆ ಇರುವುದು ಅಥವಾ ಈಗಾಗಲೇ ತಿದ್ದುಪಡಿ ಮಾಡಿಸಿದ್ದರೆ ಅದು ಅಪ್ಡೇಟ್ ಆಗದೆ ಇರುವುದು ಇಂತಹ ಸಮಸ್ಯೆಗಳಿಂದ ಇವರಿಗೆ ಮೊದಲ ಕಂತಿನ ಹಣ ವರ್ಗಾವಣೆ ಆಗುವುದಿಲ್ಲ.

ಆದರೆ ಈ ಸಮಸ್ಯೆ ಪರಿಹಾರ ಮಾಡಿಕೊಂಡ ಬಳಿಕ ಮುಂದಿನ ತಿಂಗಳು ಎರಡು ಕಂತಿನ ಹಣ ಕೂಡ ವರ್ಗಾವಣೆ ಆಗುತ್ತದೆ, ಜೊತೆಗೆ ಈಗಾಗಲೇ ಅರ್ಜಿ ಸಲ್ಲಿಸಿರುವವರ ಎಲ್ಲಾ ಮಾಹಿತಿಗಳು ಸರಿ ಇದ್ದರೂ ಹಣ ತಡೆಯಲಾಗದೇ ಇರುವವರಿಗೆ ಈ ಮೇಲೆ ತಿಳಿಸಿದಂತೆ ಹಲವು ಕಾರಣಗಳಿಂದಾಗಿ ತಡವಾಗುತ್ತಿದೆ. ಸೆಪ್ಟೆಂಬರ್ 30ರವರೆಗೆ ಖಂಡಿತವಾಗಿಯೂ ಈ ಮಹಿಳೆಯರು ಕೂಡ ಹಣ ಪಡೆಯಲಿದ್ದಾರೆ.

ಸೆಪ್ಟೆಂಬರ್ 30 ರ ಬಳಿಕ ಇಂತವರ ಬ್ಯಾಂಕ್ ಅಕೌಂಟ್ ಬಂದ್.! RBI ನಿಂದ ಹೊಸ ಆದೇಶ…!

ಆ ಬಳಿಕವೂ ಕೂಡ ಹಣ ಪಡೆಯಲು ಸಾಧ್ಯವಾಗಿಲ್ಲ ಎಂದರೆ ಅಂತಹ ಮಹಿಳೆಯರು ತಮ್ಮ ಎಲ್ಲಾ ದಾಖಲೆಗಳ ಜೊತೆಗೆ ತಾಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ CDPO ಅಧಿಕಾರಿಯನ್ನು ಭೇಟಿಯಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಇದಕ್ಕೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೆರವು ಪಡೆದುಕೊಳ್ಳಬಹುದು ಎಂದು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now