ತನ್ನ ಪ್ರಣಾಳಿಕೆಯಲ್ಲಿ ಪಂಚಖಾತ್ರಿ ಗ್ಯಾರಂಟಿ ಯೋಜನೆಗಳನ್ನು (Guarantee Scheme) ಘೋಷಿಸಿ ಕರ್ನಾಟಕದಲ್ಲಿ ಮತ ಬೇಟೆ ಮಾಡಿದ ಕಾಂಗ್ರೆಸ್ ಪಕ್ಷವು (Congress) ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ಜಾರಿಗೊಳಿಸಿ ತಮ್ಮದು ನುಡಿದಂತೆ ನಡೆವ ಸರ್ಕಾರ ಎನಿಸಿಕೊಂಡಿದೆ. ಈಗ ಇದೇ ತಂತ್ರವನ್ನು ನೆರೆ ರಾಜ್ಯವಾದ ತೆಲಂಗಾಣ ವಿಧಾನಸಭೆ ಎಲೆಕ್ಷನ್ (Telangana Assembly Election-2023) ವೇಳೆ ಉಪಯೋಗಿಸುವ ಪ್ರಯತ್ನ ಮಾಡಿದೆ.
ಇದಕ್ಕೆ ಸಾಕ್ಷಿಯಂತೆ ನೆನ್ನೆಯಷ್ಟೇ ಹೈದರಾಬಾದ್ ನ ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯ (Congress rally) ಸಾರ್ವಜನಿಕ ಸಭೆ ಉದ್ದೇಶ ಮಾತನಾಡಿದ ಸೋನಿಯಾ ಗಾಂಧಿಯವರು (Sonia Gandhi ) ಈ ಖಾತ್ರಿ ಯೋಜನೆಗಳ ಈ ಕುರಿತು ಪ್ರಸ್ತಾಪಿಸಿದ್ದಾರೆ. ತೆಲಂಗಾಣ ಜನತೆಯ ಆಕಾಂಕ್ಷಿಗಳನ್ನು ಈಡೇರಿಸಲು ನಾವು ಆರು ಭರವಸೆಗಳನ್ನು ಘೋಷಿಸುತ್ತಿದ್ದೇವೆ ಹಾಗೂ ತಮ್ಮ ಪಕ್ಷವು ಅಧಿಕಾರ ಗಳಿಸಿದರೆ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿ ಅವುಗಳ ವಿವರಣೆ ಕೂಡ ಕೊಟ್ಟಿದ್ದಾರೆ.
ಗೃಹಲಕ್ಷ್ಮಿ ಯೋಜನೆ 2000 ಹಣ ಪಡೆಯದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ.!
ಇವುಗಳಲ್ಲಿ ಕರ್ನಾಟಕದಲ್ಲಿ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನೇ ಹೋಲುವ ಯೋಜನೆಗಳು ಕೂಡ ಇವೆ. ತೆಲಂಗಾಣದಲ್ಲಿ ತಮ್ಮ ಪಕ್ಷದ ಸರ್ಕಾರ ರಚಿಸಿ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡುವ ಕನಸು ನಮ್ಮದು ಎಂದು ಹೇಳಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಮೊದಲ ಗ್ಯಾರಂಟಿಯಾಗಿ ಮಹಾಲಕ್ಷ್ಮೀ ಯೋಜನೆಯನ್ನು (Mahalakshmi) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯನ್ನೇ ಹೋಲುವ ರೀತಿಯ ಯೋಜನೆ ಇದಾಗಿದ್ದು ಮಹಾಲಕ್ಷ್ಮೀ ಯೋಜನೆಯಡಿ ತೆಲಂಗಾಣದಲ್ಲಿ ಮಹಿಳೆಯರಿಗೆ ಮಾಸಿಕ 2,500ರೂ. ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕದ ಶಕ್ತಿ ಯೋಜನೆಯಂತೆ ತೆಲಂಗಾಣದಲ್ಲಿ ರಾಜ್ಯದಲ್ಲೂ ಕೂಡ ತೆಲಂಗಾಣ ರಾಜ್ಯದಾದ್ಯಂತ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (free travel on TSRTC) ಅವಕಾಶ ಮಾಡಿಕೊಡಲಾಗುವುದು ಎಂದು ಘೋಷಿಸಿದ್ದಾರೆ.
ಕುಡಿತದ ಚಟ ಬಿಡಿಸಲು, ಬೀಡಿ, ಸಿಗರೇಟ್, ತಂಬಾಕು, ಗುಟ್ಕಾ ಅಭ್ಯಾಸ ಬಿಡಿಸಲು ಈ ಮನೆ ಮದ್ದು ಮಾಡಿ.!
ಪ್ರತಿ ಸಿಲಿಂಡರ್ಗೆ 500 ರೂಪಾಯಿ ಸಬ್ಸಿಡಿ (Subsidy on Cylinder) ನೀಡಲಾಗುವುದು ಮತ್ತು ರೈತ ಭರೋಸಾ ಯೋಜನೆಯಡಿ ಅನ್ನದಾತರಿಗೆ (Raitha Barosa) ಪ್ರತಿ ವರ್ಷ 15,000 ರೂ. ನೀಡುವ ಭರವಸೆ ನೀಡಿ ಭತ್ತಕ್ಕೆ ಪ್ರತಿ ಕ್ವಿಂಟಾಲ್ಗೆ 500 ರೂಪಾಯಿ ಹೆಚ್ಚಳ ಮಾಡವುದಾಗಿ ಹೇಳಿದ್ದಾರೆ ರೈತ ಕೂಲಿ ಕಾರ್ಮಿಕರಿಗೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಘೋಷಿಸಿದೆ.
ರೈತ ಕೂಲಿ ಕಾರ್ಮಿಕರಿಗೆ ಪ್ರತಿ ವರ್ಷ 12,000ರೂ. ಆರ್ಥಿಕ ಸಹಾಯ ಮತ್ತು ಗೃಹಜ್ಯೋತಿ ಯೋಜನೆಯಂತೆ ಮಾಸಿಕ 200 ಯುನಿಟ್ವರೆಗೆ ಉಚಿತ ವಿದ್ಯುತ್ (200 unit free current) ಯೋಜನೆ ಕೂಡ ಘೋಷಣೆ ಮಾಡಿದೆ. ಇಂದಿರಮ್ಮ ಗೃಹ ನಿರ್ಮಾಣ (Indiramma housing Scheme) ಯೋಜನೆ ಕೂಡ ಈ ಗ್ಯಾರಂಟಿ ಯೋಜನೆಯಲ್ಲಿ ಸೇರಿದ್ದು ಈ ಯೋಜನೆ ಮೂಲಕ ಮನೆ ಇಲ್ಲದವರಿಗೆ ನಿವೇಶನ ಖರೀದಿಸಲು 5 ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ.
ಹಾಗೆಯೇ ತೆಲಂಗಾಣ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಹೋರಾಟ ಮಾಡಿದವರಿಗೆ ಸಹಾ ಉಚಿತ ನಿವೇಶನ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಹಿರಿಯ ನಾಗರಿಕರಿಗೆ ಮಾಸಿಕ 4,000ರೂ. ಪಿಂಚಣಿ, 10 ಲಕ್ಷ ರೂಪಾಯಿ ಮೊತ್ತದ ರಾಜೀವ್ ಆರೋಗ್ಯಶ್ರೀ ವಿಮಾ ಯೋಜನೆ, ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ವಿದ್ಯಾ ಭರೋಸಾ ಕಾರ್ಡ್ ಯೋಜನೆ, ಪ್ರತಿ ಮಂಡಲಂ ದಲ್ಲೂ ತೆಲಂಗಾಣ ಇಂಟರ್ನ್ಯಾಷನಲ್ ಶಾಲೆ ತೆರೆಯುವುದು ಇದೆಲ್ಲವೂ ಕೂಡ ಕಾಂಗ್ರೆಸ್ ನ ಗ್ಯಾರಂಟಿ ಸ್ಕೀಮ್ ಭಾಗವಾಗಿದೆ ಆದರೆ ತೆಲಂಗಾಣದ ಮತದಾನ ಪ್ರಭುಗಳು ಕೈ ಪಕ್ಷದ ಕೈಹಿಡಿಯಲಿದ್ದಾರಾ ಎಂದು ಕಾದು ನೋಡೋಣ.