ಅಡುಗೆ ಎಣ್ಣೆ ಬೆಲೆ ಏರಿಕೆ ಕೂಡ ದೇಶದಲ್ಲಿ ಹೆಚ್ಚು ಚರ್ಚೆಯಾಗುವ ವಿಷಯ. ಯಾಕೆಂದರೆ ಇಂದು ನಾವು ಅಡುಗೆಗಳಿಗೆ ಅಷ್ಟೊಂದು ಎಣ್ಣೆಯನ್ನು ಬಳಸುತ್ತಿದ್ದೇವೆ. ಆದರೆ, ನಿಜಕ್ಕೂ ನಮ್ಮ ದೇಹಕ್ಕೆ ಇಷ್ಟೊಂದು ಎಣ್ಣೆಯ ಅವಶ್ಯಕತೆ ಇದೆಯೇ, ಅದರಲ್ಲಿ ಅಷ್ಟು ಪೋಷಕಾಂಶ ಇದೆಯೇ ಎಂದು ಪ್ರಶ್ನಿಸಿಕೊಳ್ಳುವುದಾದರೆ ಖಂಡಿತವಾಗಿಯೂ ಇಲ್ಲ ಎನ್ನುತ್ತದೆ ಸಂಶೋಧನೆ.
ಯಾಕೆಂದರೆ ನಮ್ಮ ದೇಹಕ್ಕೆ ಅಡುಗೆ ಎಣ್ಣೆಯಿಂದ ಮಾತ್ರವಲ್ಲದೆ ನಾವು ಸೇವಿಸುವ ಕೊಬ್ಬರಿ, ಕಡಲೇಬೀಜ ಇವುಗಳಿಂದ ಮಾಡಿದ ತಿಂಡಿಗಳು ಮತ್ತು ಚಟ್ನಿಯಿಂದ ಕೂಡ ದೇಹಕ್ಕೆ ಕೊಬ್ಬಿನಂಶ ಸೇರುತ್ತದೆ, ಇದರ ಮೇಲೆ ನಾವು ಬೆಣ್ಣೆ ತುಪ್ಪ ಕೂಡ ಬಳಸುತ್ತೇವೆ. ಇದು ಶುದ್ಧವಾಗಿದ್ದರೆ ದಿನಕ್ಕೊಂದು ಚಮಚ ಸೇವಿಸಿದರೆ ಇದೇ ಬೇಕಾದಷ್ಟಾಗುತ್ತದೆ. ನಾವು ನಮ್ಮ ಹಿಂದಿನ ಜೀವನವನ್ನು ನೋಡುವುದಾದರೆ ಕೇವಲ 15-20 ವರ್ಷಗಳ ಹಿಂದೆಯೇ ನಾವು ಯಾರು ಇಷ್ಟೊಂದು ಕರಿದ ಪದಾರ್ಥಗಳನ್ನು ತಿನ್ನುತ್ತದೆ ಇರಲಿಲ್ಲ.
ಹೊಸದಾಗಿ APL / BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಮಾಡಿಸಲು ಈ ದಿನಾಂಕದಿಂದ ಅರ್ಜಿ ಆಹ್ವಾನ.!
ಮನೆಯಲ್ಲಿ ಪೂರಿ ಕರಿಯುವ, ಹಪ್ಪಳ ಕರಿಯುವ ಅಭ್ಯಾಸ ಇರಲಿಲ್ಲ. ಎಲ್ಲೋ ಹಬ್ಬ ಹರಿದಿನ ಮದುವೆ ಸಮಾರಂಭಗಳಲ್ಲಿ ಮಾತ್ರ ನಾವು ಎಣ್ಣೆಯಲ್ಲಿ ಕರಿದ ತಿಳಿಸುಗಳನ್ನು ತಿನ್ನುತ್ತಿದ್ದೆವು. ಹಪ್ಪಳವನ್ನು ಸುಟ್ಟು ತಿನ್ನುವುದು, ರೊಟ್ಟಿ ಸುಟ್ಟು ತಿನ್ನುವುದು ನಮ್ಮ ಅಭ್ಯಾಸವಾಗಿತ್ತು. ಆದರೆ ಈಗ ಚಪಾತಿ, ದೋಸೆಗೂ ಕೂಡ ನಮಗೆ ಎರಡು ಸೈಡ್ ಫುಲ್ ಎಣ್ಣೆ ಹಾಕಿ ಬೇಯಿಸಿರಬೇಕು.
ಖಂಡಿತವಾಗಿಯೂ ನಮ್ಮ ದೇಹಕ್ಕೆ ಇಷ್ಟೊಂದು ಎಣ್ಣೆ ಅವಶ್ಯಕತೆ ಇಲ್ಲವೇ ಇಲ್ಲ. ಮೊದಲಾಗಿ ಈಗ ಬರುತ್ತಿರುವ ಎಣ್ಣೆಗಳು ಅಷ್ಟು ಪ್ಯೂರ್ ಆಗಿ ಕೂಡ ಇಲ್ಲ. ನಾವು ಮಾರ್ಕೆಟ್ ಗೆ ಎಣ್ಣೆ ತರಲು ಹೋದರೆ ಹತ್ತಾರು ಕಂಪನಿಗಳ ಹತ್ತಾರು ವಿಧದ ಎಣ್ಣೆಗಳನ್ನು ಕಾಣಬಹುದು ಅದು ಸಾಸಿವೆ ಎಣ್ಣೆ ಆಗಿರಲಿ ಅಥವಾ ಆಲಿವ್ ಆಯಿಲ್ ಆಗಿರಲಿ, ಸೂರ್ಯಕಾಂತಿಯದ್ದೇ ಆಗಿರಲಿ ಇದು ಯಾವುದು ಪ್ಯೂರ್ ಅಲ್ಲ.
ಗಂಡ ಹೆಂಡತಿಗೆ ಪ್ರತಿ ತಿಂಗಳು 10,000 ಪಿಂಚಣಿ ಕೇಂದ್ರ ಸರ್ಕಾರದ ಹೊಸ ಯೋಜನೆ ಇದು.!
ಈ ಕುರಿತು ಅನೇಕ ಡಾಕ್ಯುಮೆಂಟರಿಗಳು ತಯಾರಾಗಿವೆ, ಕನ್ನಡದಲ್ಲಿ ಕೂಡ ಎಣ್ಣೆಯಲ್ಲಿ ಕಲಬೆರಕೆ ಯಾವ ರೀತಿ ಆಗುತ್ತಿದೆ, ಅದರಿಂದ ಎಷ್ಟು ಕೆಟ್ಟ ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಸ್ಟಾರ್ ನಟರು ಸಿನಿಮಾ ಕೂಡ ಮಾಡಿದ್ದಾರೆ, ಇಷ್ಟಾದರೂ ಜನ ಅದರೊಳಗಿರುವ ಸಂದೇಶ ಅರ್ಥ ಮಾಡಿಕೊಂಡಿಲ್ಲ ಎಂದರೆ ಅದಕ್ಕೆ ತಕ್ಕನಾದ ಬೆಲೆ ತೆರಲೇಬೇಕಾಗುತ್ತದೆ.
ಈ ಎಣ್ಣೆಗಳಲ್ಲಿ ಪೆಟ್ರೋಲ್ ಎಣ್ಣೆ ಮಿಕ್ಸ್ ಆಗಿ ಬರುತ್ತಿದೆ ಹಾಗಂದರೆ ಪೆಟ್ರೋಲ್ ಸಂಸ್ಕರಿಸಿದಾಗ ಬರುವ ಕ್ರೂಡ್ ಆಯಿಲ್ ಬಹಳ ಹಾನಿಕಾರಕ. ಅದನ್ನು ನೀರಿಗೆ ಬಿಟ್ಟರೆ ಜಲಚರಗಳು ಸಾಯುತ್ತವೆ, ಮಣ್ಣಿಗೆ ಹಾಕಿದರೆ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ, ಹಾಗಾಗಿ ಪೆಟ್ರೋಲ್ ಡೀಸೆಲ್ ಆಮದು ಮಾಡಿಕೊಳ್ಳುವ ದೇಶಗಳಿಗೆ ಅದನ್ನು ಕಳುಹಿಸಲಾಗುತ್ತದೆ.
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
ಮತ್ತೆ ಅವರೇ ಬಂದು ಇಲ್ಲಿ ರಿಫೈನ್ ಆಯ್ಲ್ ಕಂಪನಿಗಳನ್ನು ಶುರು ಮಾಡಿ ಶುದ್ಧ ಎಣ್ಣೆ ಜೊತೆ ಮಿಕ್ಸ್ ಮಾಡಿ ಮಾರ್ಕೆಟ್ ಗೆ ಬಿಟ್ಟು ಹಣ ಮಾಡಿಕೊಳ್ಳುತ್ತಿದ್ದಾರೆ. ನಾವು ಸೆಲೆಬ್ರಿಟಿಗಳು ಈ ಬಗ್ಗೆ ಜಾಹಿರಾತು ಕೊಡುತ್ತಿದ್ದಾರೆ ಎಂದು ಕಣ್ಣುಮುಚ್ಚಿಕೊಂಡು ಖರೀದಿಸುತ್ತೇವೆ. ಅದರಲ್ಲೂ ಹೆಚ್ಚು ಬೆಲೆ ಇದ್ದರೆ ಆ ಎಣ್ಣೆ ಹೆಚ್ಚು ಶುದ್ಧವಾಗಿರುತ್ತದೆ ಎನ್ನುವ ಭ್ರಮೆ ಬೇರೆ.
ಆದರೆ ಖಂಡಿತವಾಗಿಯೂ ಈ ರೀತಿ ಇರುವುದಿಲ್ಲ ಇದೆಲ್ಲ ಮಾರ್ಕೆಟ್ ಟ್ರಿಕ್ಸ್ ಆಗಿರುತ್ತದೆ ಇದರ ಜೊತೆಗೆ ಎಣ್ಣೆಗಳಿಗೆ ಬಣ್ಣ ಮಿಕ್ಸ್ ಮಾಡಿ ಕಣ್ತಪ್ಪಿಸುತ್ತಿದ್ದಾರೆ. ಗಾಢ ಹಳದಿ ಇದ್ದರೆ ಶುದ್ಧ ಸೂರ್ಯಕಾಂತಿ ಎಣ್ಣೆ, ಹಸಿರಾಗಿರುವುದು ಶುದ್ಧ ಆಲಿವ್ ಆಯಿಲ್ ಎಂದು ನಂಬಿ ಯಾಮಾರುತ್ತಿದ್ದೇವೆ. ಹಾಗಾಗಿ ಎಲ್ಲರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಎತ್ತಿನ ಗಾಣದ ಎಣ್ಣೆಗಳನ್ನು ಬಳಸಿದರೆ ಒಳ್ಳೆಯದು ಮತ್ತು ಆದಷ್ಟು ಅಡುಗೆಯಲ್ಲಿ ಎಣ್ಣೆ ಪದಾರ್ಥವನ್ನು ಕಡಿಮೆ ಮಾಡಿಕೊಂಡರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು.