ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಇದೆ. ಅದೇನೆಂದರೆ, ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ, ಮೈಸೂರಿನಲ್ಲಿ (CFTRI Recruitment 2024) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದ್ದುಕೊಂಡು ಉದ್ಯೋಗ ಮಾಡುವಂತ ಅವಕಾಶ ಸಿಗುತ್ತಿರುವುದರಿಂದ ಈ ಬಗ್ಗೆ ಆಸಕ್ತಿ ಇರುವ ಎಲ್ಲ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳನ್ನು ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದಾಗಿದೆ.
ಈ ಸುದ್ದಿ ಓದಿ:- ರೈತರಿಗೆ ಸರ್ಕಾರದಿಂದ 10000 ಉಚಿತ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಹಣ ಪಡೆಯಲು ಯಾರು ಅರ್ಹರು ಸಂಪೂರ್ಣ ಮಾಹಿತಿ.!
ಆಸಕ್ತರಿಗೆ ಅನುಕೂಲತೆ ಮಾಡಿಕೊಡುವ ಉದ್ದೇಶದಿಂದ ನಾವು ಕೂಡ ಈ ಉದ್ಯೋಗ ಪ್ರಕಟಣೆ ಕುರಿತಂತೆ ಪ್ರಮುಖ ಸಂಗತಿಗಳಾದ ಹುದ್ದೆ ಹೆಸರು, ಹುದ್ದೆ ವಿವರ, ಖಾಲಿ ಇರುವ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಲಿಕೆ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಪ್ರಮುಖ ದಿನಾಂಕಗಳು ಇತ್ಯಾದಿ ವಿವರಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ, ಮೈಸೂರು
ಹುದ್ದೆ ಹೆಸರು:- ಪ್ರಾಜೆಕ್ಟ್ ಸೈಂಟಿಸ್ಟ್ (Project Scientist 01)
ಒಟ್ಟು ಹುದ್ದೆಗಳ ಸಂಖ್ಯೆ:- 01
ಉದ್ಯೋಗ ಸ್ಥಳ:- ಮೈಸೂರು…
ಈ ಸುದ್ದಿ ಓದಿ:- ಜನನ & ಮ.ರಣ ಪ್ರಮಾಣ ಪತ್ರ ಇನ್ಮುಂದೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಪಡೆಯಬಹುದು ಹೇಗೆ ನೋಡಿ.!
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.56,000 ವೇತನದೊಂದಿಗೆ + HRA ಹಾಗೂ ಇನ್ನಿತರ ಸೌಲಭ್ಯಗಳು ಸಿಗುತ್ತವೆ.
ಶೈಕ್ಷಣಿಕ ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಬಯೋ ಕೆಮಿಸ್ಟ್ರಿ ಅಥವಾ ಬಯೋ ಟೆಕ್ನಾಲಜಿ ಅಥವಾ ಲೈಫ್ ಸೈನ್ಸ್ ನಲ್ಲಿ (Doctoral Degree in Biochemistry/ Biotechnology/ Life Science) ಪದವಿಯನ್ನು ಹೊಂದಿರಬೇಕು.
* ಕೆಲಸದ ಅನುಭವ ಹೊಂದಿರುವವರಿಗೆ ಹೆಚ್ಚಿನ ಆಧ್ಯತೆ ಇರುತ್ತದೆ
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ಬಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ 10 ವರ್ಷಗಳು.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 36 ರೂಪಾಯಿ ಹೂಡಿಕೆ ಮಾಡಿದರೆ ಸಾಕು, 6 ಲಕ್ಷ ಸಿಗಲಿದೆ
ಅರ್ಜಿ ಸಲ್ಲಿಸುವ ವಿಧಾನ:-
* CFTRI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
* ನೋಟಿಫಿಕೇಶನ್ ಗಮನವಿಟ್ಟು ಓದಿ
* ನಂತರ ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ, ಎಲ್ಲಾ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
* ಕೇಳಲಾದ ಎಲ್ಲಾ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ನಿಮ್ಮ ವರ್ಗಕ್ಕೆ ಅನುಗುಣವಾಗಿ ಸೂಚಿಸಿರುವ ಅರ್ಜಿ ಶುಲ್ಕವನ್ನು ಪಾವತಿಸಿ ಇ-ರಸೀದಿ ಪಡೆಯಿರಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ, ಭವಿಷ್ಯದಲ್ಲಿ ಇದರ ಅಗತ್ಯತೆ ಬರುತ್ತದೆ.
ಆಯ್ಕೆ ವಿಧಾನ:-
* ಲಿಖಿತ ರೂಪದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ
* ಅಭ್ಯರ್ಥಿಗಳ ನೇರ ಸಂದರ್ಶನ
* ಅಂತಿಮವಾಗಿ ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ದುಕೊಳ್ಳಲಾಗುತ್ತದೆ.
ಈ ಸುದ್ದಿ ಓದಿ:- ಬರ ಪರಿಹಾರ ಹಣ ಯಾರಿಗೆ ಬಂದಿಲ್ಲ ಅವರು ಈ ರೀತಿ ಮಾಡಿ.! ನಿಮ್ಮ ಅಕೌಂಟ್ ಗೆ ಹಣ ಜಮೆ ಆಗುತ್ತೆ.!
ಅರ್ಜಿ ಶುಲ್ಕ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 06 ಮೇ, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22 ಮೇ, 2024.