ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಕೂಡ ಒಂದು. ಅದರಲ್ಲೂ ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆಯೇ ಜಲ ಜೀವನ್ ಮಿಷನ್ ಯೋಜನೆ.
ಪ್ರತಿಯೊಬ್ಬರಿಗೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಈ ಯೋಜನೆಯಡಿ ಕರ್ನಾಟಕದಲ್ಲೂ ಸಾಕಷ್ಟು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬವಣೆ ನೀಗಿದೆ. ಮುಂದುವರೆದು ಈಗ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಆಸ್ತಿ & ಜಮೀನಿಗೆ ತಕರಾರು ಸಲ್ಲಿಸುವುದು ಹೇಗೆ ನೋಡಿ.!
ಪ್ರತಿ ಗ್ರಾಮದ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಟ 5 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಈ ಸಂಬಂಧ ಸರ್ಕಾರದಿಂದ ಮಾರ್ಗಸೂಚಿಗಳನ್ನು ಒಳಗೊಂಡ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆಯಾಗಿದೆ. ಜಲ ಜೀವನ್ ಮಿಷನ್ ನೇಮಕಾತಿ ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ತ್ವರಿತ ಗತಿಯಲ್ಲಿ ನಡೆಯುತ್ತಿದೆ.
ಇದು ಕೇಂದ್ರ ಸರ್ಕಾರದ ಉದ್ಯೋಗವಾಗಿದ್ದು, ಖಾಯಂ ಉದ್ಯೋಗ ಕೂಡ ಆಗಿದೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿರುವ ಜನತೆಯು ಇದಕ್ಕಾಗಿ ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಲಿ ಎನ್ನುವುದು ಈ ಅಂಕಣದ ಆಶಯ.
ಟಾಟಾ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಹಾಕಿ.!
ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಅರ್ಜಿ ಸಲ್ಲಿಸಲು ಕೇಳಲಾಗಿರುವ ಶೈಕ್ಷಣಿಕ ಅರ್ಹತೆ, ಬೇಕಾಗುವ ದಾಖಲೆಗಳು ಮತ್ತು ಇತರ ಅಗತ್ಯ ಮಾಹಿತಿಯನ್ನು ಇಲಾಖೆಯು ಸೂಚಿಸಿರುವಂತೆ ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ತಪ್ಪದೇ ಈ ಮಾಹಿತಿಯನ್ನು ಹೆಚ್ಚಿನ ಜನರ ಜೊತೆ ಹಂಚಿಕೊಳ್ಳಿ.
ಒಟ್ಟು ಹುದ್ದೆಗಳು:- 3130 ಹುದ್ದೆಗಳು…
ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳ ವಿವರ:-
* ಕೊಳಾಯಿಗಾರ
* ಎಲೆಕ್ಟ್ರಿಷಿಯನ್
* ಪಂಪ್ ಆಪರೇಟರ್
* ರ್ಮೋಟಾರ್ ಮೆಕ್ಯಾನಿಕ್
* ಫಿಟ್ಟರ್
* ಮೇಸ್ತ್ರಿಗಳು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ವಿಳಾಸ ಪುರಾವೆ
* ಆದಾಯ ಪ್ರಮಾಣ ಪತ್ರ
* ಪ್ಯಾನ್ ಕಾರ್ಡ್
* ಮೊಬೈಲ್ ನಂಬರ್
* ಪಾಸ್ಪೋರ್ಟ್ ಅಳತೆಯ ಫೋಟೋ
* ಬ್ಯಾಂಕ್ ಪಾಸ್ ಬುಕ್
* ಅರ್ಜಿ ನಮೂನೆ
ಸಿಗುವ ಸಂಬಳ:-
* ಎಲ್ಲಾ ಮನೆಗಳ ಜಲ ಸಂಪನ್ಮೂಲಗಳನ್ನು ಕೇಂದ್ರೀಕರಿಸಿ, ಈ ನೇಮಕಾತಿಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು ಕನಿಷ್ಠ ರೂ.6000 ಗೌರವಧನ ನೀಡಲು ಇಲಾಖೆ ನಿರ್ಧರಿಸಿದೆ.
* ಈ ವೇತನವನ್ನು ನಂತರ ಹೆಚ್ಚಿಸಬಹುದು
ಅರ್ಜಿ ಸಲ್ಲಿಸುವ ವಿಧಾನ:-
* ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವವರು ನೇರವಾಗಿ ಮೊದಲು ನಿಮ್ಮ ಗ್ರಾಮ ಪಂಚಾಯಿತಿಗಳಿಗೆ ಭೇಟಿಕೊಟ್ಟು ಹೆಚ್ಚಿನ ಮಾಹಿತಿ ಪಡೆದು ನಂತರ ಕೇಳಲಾಗುವ ದಾಖಲೆ ಪ್ರತಿಗಳೊಂದಿಗೆ ಅರ್ಜಿ ಫಾರಂ ಭರ್ತಿ ಮಾಡಿ ಸಲ್ಲಿಸಿ
* ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವವರು ಜಲ ಜೀವನ್ ಮಿಷನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ ಅರ್ಥೈಸಿಕೊಳ್ಳಿ.
* ಇದರ ನಂತರ ನೀವು ಸೆಕ್ಟರ್ ಎಕ್ಸ್ಪರ್ಟ್ಸ್ ಎಂಪನೆಲ್ಮೆಂಟ್ಗಾಗಿ ಓಪನ್ ಕಾಲ್ ಆಪ್ಷನ್ ಕ್ಲಿಕ್ ಮಾಡಬೇಕು, ಹೊಸ ಪುಟ ತೆರೆಯುತ್ತದೆ.
* ಈಗ ನೀವು ಅನ್ವಯಿಸಲು ಆಯ್ಕೆಯನ್ನು ಟ್ಯಾಪ್ ಮಾಡಬೇಕು.
* ನೋಂದಣಿ ಫಾರ್ಮ್ ನಿಮ್ಮ ಮುಂದೆ ತೆರೆಯುತ್ತದೆ, ಅದರಲ್ಲಿ ಕೇಳಿದ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು, ನಂತರ ಕೊನೆಯಲ್ಲಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿದರೆ ಜಲ ಜೀವನ್ ಮಿಷನ್ ನೇಮಕಾತಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿ ಆಗುತ್ತದೆ, ಕೊನೆಯಲ್ಲಿ ಅರ್ಜಿ ಸ್ವೀಕೃತಿ ಪ್ರತಿಯ ಪ್ರಿಂಟ್ ಪಡೆಯಿರಿ.