ಇನ್ಮುಂದೆ ಎಣ್ಣೆ ಪ್ಯಾಕೆಟ್ ಅನ್ನು ಯಾವುದೇ ಕಾರಣಕ್ಕೂ ಎಸೆಯಬೇಡಿ, ಈ ಟಿಪ್ಸ್ ಗೊತ್ತಾದ್ರೆ ಈ ಜನ್ಮದಲ್ಲಿ ಎಣ್ಣೆ ಪ್ಯಾಕೆಟ್ ಬೀಸಕಾಲ್ಲ ಎಷ್ಟು ಪ್ರಯೋಜನವಿದೆ ಗೊತ್ತ.? ಈ ಖಾಲಿ ಪ್ಯಾಕೆಟ್ ನಿಂದ

ಸ್ನೇಹಿತರೆ ಇಂದಿನ ಪುಟದಲ್ಲಿ ವಿಶೇಷವಾದ ವಿಷಯದೊಂದಿಗೆ ಬಂದಿದ್ದೇವೆ. ಆ ವಿಶೇಷ ವಿಷಯವೇನೆಂದರೆ ನಾವುಗಳು ದಿನಸಿ ಸಾಮಾನುಗಳನ್ನು ಅಂಗಡಿಯಿಂದ ತಂದ ಮೇಲೆ ಪದಾರ್ಥಗಳನ್ನು ಡಬ್ಬಕ್ಕೆ ಸುರಿದುಕೊಂಡ ಮೇಲೆ ತುಂಬಿ ಕೊಟ್ಟಂತಹ ಪ್ಲಾಸ್ಟಿಕ್ ಕವರ್ಗಳನ್ನು ಎಸೆಯುತ್ತೇವೆ, ಅದರಲ್ಲೂ ಅಡುಗೆ ಎಣ್ಣೆ ಆಗಿರಬಹುದು ಅಥವಾ ದೀಪದ ಎಣ್ಣೆಯ ಪ್ಯಾಕ್ ಕವರ್ ಗಳೇ ಇರಬಹುದು. ಇದನ್ನು ಉಪಯೋಗಿಸುವುದು ಹೇಗೆ ಎಂಬುವ ವಿಶೇಷವಾದ ವಿಷಯವನ್ನು ಇಂದು ಹಂಚಿಕೊಳ್ಳಲಿದ್ದೇವೆ.

WhatsApp Group Join Now
Telegram Group Join Now

ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತಹದು ಹಬ್ಬದ ಹೋಳಿಗೆಯನ್ನು ಮಾಡಲು ಈ ಎಣ್ಣೆಯ ಪ್ಲಾಸ್ಟಿಕ್ ಕವರ್ ಗಳನ್ನು ಉಪಯೋಗಿಸುತ್ತೇವೆ. ಅದೇ ರೀತಿ ಇಂದು ನಾವು ಮತ್ತೆ ಬೇರೆ ಬೇರೆ ರೀತಿಯಲ್ಲಿ ಹೇಗೆ ಉಪಯೋಗಿಸಿಕೊಳ್ಳುವುದು ಎಂದು ಮುಂದೆ ನೋಡೋಣ. ಮೊದಲೇನೆಯದಾಗಿ ಎಣ್ಣೆಯ ಕವರನ್ನು ಕತ್ತರಿಸಿ ಸ್ಕ್ರಿವ್ ಡ್ರೈವರ್, ಟೆಸ್ಟರ್ಗಳಂತಹ ಮೊದಲಾದ ಟೂಲ್ಸ್ ಗಳನ್ನು ತುಕ್ಕು ಹಿಡಿಯದೆ ಹಾಗೆ ಇದರಲ್ಲಿ ಇಡಬಹುದು ಹೌದು ಕಬ್ಬಿಣದ ವಸ್ತುಗಳಾದ ಸ್ಪಾನರ್ಗಳು ಸುತ್ತಿಗೆಗಳು ಸ್ಕ್ರೂ ಡ್ರೈವರ್ ಗಳು ಸಾಮಾನ್ಯವಾಗಿ ತುಕ್ಕು ಹಿಡಿಯುತ್ತದೆ.

ಹಾಗಾಗಿ ಇವುಗಳನ್ನು ಒಂದು ತುದಿಯನ್ನು ಕತ್ತರಿಸಿ ಒಳಗೆ ಇಡುವುದರಿಂದ ಎಣ್ಣೆಯ ಕವರ್ ಗಳಲ್ಲಿ ಇರುವಂತಹ ಎಣ್ಣೆಯ ಅಂಶವು ಇವುಗಳನ್ನು ತುಕ್ಕು ಹಿಡಿಯದ ಹಾಗೆ ಕಾಪಾಡಿಕೊಳ್ಳುತ್ತದೆ ಹಾಗೂ ಇದು ಪ್ಲಾಸ್ಟಿಕ್ ಕವರ್ ಆದ ಕಾರಣ ಯಾವುದೇ ತರಹದ ನೈಸರ್ಗಿಕ ಡಿಸಿಗ್ರೇಶನ್ ಗಳಿಗೆ ಒಳಗಾಗುವುದಿಲ್ಲ. ಇದರಲ್ಲಿ ಮತ್ತೊಂದು ವಿಧಾನವೆಂದರೆ ಇಂತಹ ಕಬ್ಬಿಣದ ಆಯುಧಗಳನ್ನು ಚೆನ್ನಾಗಿ ಒರೆಸಿ ಅಥವಾ ಉಜ್ಜಿ ಇಟ್ಟುಕೊಂಡರೆ ಬಹಳ ದಿನದವರೆಗೂ ಆಯುಧಗಳು ಹಾಳಾಗದೆ ಅಥವಾ ತುಕ್ಕು ಹಿಡಿಯದೆ ಚೆನ್ನಾಗಿ ಇರುತ್ತದೆ ಇದರೊಂದಿಗೆ ಮೊಟ್ಟೆಯು ಫ್ರಿಡ್ಜ್ ನಲ್ಲಿ ಇಡದೆ ಹಾಗೆ ಇಟ್ಟರೆ ಬಹಳ ದಿನಗಳವರೆಗೂ ಇರುವುದಿಲ್ಲ.

ಸಾಮಾನ್ಯವಾಗಿ ದೂರದ ಹಳ್ಳಿಗಳಲ್ಲಿ ಅಂಗಡಿಗಳು ಇರುವುದಿಲ್ಲ ಹಾಗಾಗಿ ಕೆಲವು ವಸ್ತುಗಳು ಬೇಗನೆ ಸಿಗುವುದಿಲ್ಲ ಇದರಲ್ಲಿ ಮೊಟ್ಟೆಗೂ ಕೂಡ ಹೌದು ಮೊಟ್ಟೆಗಳನ್ನು ಬಹಳ ದಿನದವರೆಗೂ ಹಾಳಾಗದೆ ಇಟ್ಟುಕೊಳ್ಳಬೇಕು ಎಂದರೆ ಹೆಮ್ಮೆಯ ಪ್ಯಾಕೆಟ್ ಮೇಲೆ ಚೆನ್ನಾಗಿ ಒರೆಸಿ ಇಟ್ಟರೆ ಇನ್ನು ಸ್ವಲ್ಪ ದಿನಗಳ ಕಾಲ ಹೆಚ್ಚು ಹಾಳಾಗದೆ ಇಟ್ಟುಕೊಳ್ಳಬಹುದು. ಇನ್ನು ಕೆಲವು ಮಸಾಲೆಗಳನ್ನು ರುಬ್ಬಿಕೊಂಡ ನಂತರವೂ ಅಥವಾ ಇನ್ಯಾವುದ ಕಾರಣ ಮುಟ್ಟಿದ ಕಾರಣಕ್ಕೆ ಕೈ ಉರಿಗಳು ಹೆಚ್ಚಾಗುತ್ತದೆ.

ಹಾಗಾಗಿ ಎಣ್ಣೆ ಪ್ಯಾಕೆಟ್ ಗಳನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿ ಕೆಲವು ಸಮಯಗಳ ಕಾಲ ಇಟ್ಟು ನಂತರ ಆ ಪ್ಯಾಕೆಟ್ಗಳ ಮೇಲೆ ಕೈಯನ್ನು ಒಂದು ನಿಮಿಷಗಳ ಕಾಲ ಇಟ್ಟರೆ ನಮ್ಮ ಕೈಯಲ್ಲಿ ಉರಿಯುವುದು ಕಡಿಮೆಯಾಗುತ್ತದೆ. ಇನ್ನು ಮೂರನೆಯದಾದ ವಿಶೇಷವಾದ ಟಿಪ್ಸ್ ಎಂದರೆ ಹೊಸದಾಗಿ ತಂದ ಬಾಟಲ್ ಗಳಲ್ಲಿ ಮೇಲೆ ಇರುವಂತಹ ಲೇಬಲ್ ರಾಪರ್ಗಳು ಹಾಗೆ ಉಳಿದು ಹೋಗುತ್ತವೆ ಇನ್ನು ಅವುಗಳ ಮೇಲೆ ಈ ಎಣ್ಣೆ ಪ್ಯಾಕೆಟ್ ಗಳನ್ನು ಚೆನ್ನಾಗಿ ಉಜ್ಜಿದರೆ ಅವುಗಳನ್ನು ತೆಗೆಯಲು ಸುಲಭವಾಗುತ್ತದೆ.

ಇನ್ನು ಚಳಿಗಾಲಗಳಲ್ಲಿ ಕೈಕಾಲು ಹೊಡೆಯುವುದು ಸಾಮಾನ್ಯ, ಹಿಮ್ಮಡಿ ಹೊಡೆಯುವುದು ಹೆಚ್ಚು ಜನಗಳಿಗೆ ಬಹಳ ಸಮಸ್ಯೆಯಾಗಿದೆ. ಹಾಗಾಗಿ ಎಣ್ಣೆ ಪ್ಯಾಕೆಟ್ ಗಳನ್ನು ಕತ್ತರಿಸಿ ಕೆಲವು ಸಮಯಗಳ ಕಾಲ ಮಸಾಜ್ ಮಾಡುವುದರಿಂದಲೂ ಕೂಡ ಕಡಿಮೆಯಾಗುತ್ತದೆ ಅಥವಾ ಈ ಎಣ್ಣೆ ಪ್ಯಾಕೆಟ್ ಗಳನ್ನು ರಾತ್ರಿ ಹೊತ್ತು ಹಿಮ್ಮಡಿಗೆ ಕಟ್ಟಿಕೊಂಡು ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತದೆ.

ಇನ್ನು ಕೈಗೆ ಪೈಂಟ್ ಆಗಿದ್ದರೆ ಈ ಎಣ್ಣೆ ಪ್ಯಾಕೆಟ್ಗಳಿಂದ ಸ್ವಲ್ಪ ಸಮಯಗಳ ಕಾಲ ಉಜ್ಜಬೇಕು, ನಂತರ ಕೆಲವು ಹನಿಗಳ ಮೋಯಿಶ್ಚಾರೈಸರ್ ಹಾಕಿ ಉಜ್ಜಿದರೆ ಸಂಪೂರ್ಣ ಪೈಂಟ್ ಮಾಯವಾಗುತ್ತದೆ. ಅದೇ ರೀತಿ ನಮ್ಮ ಲೆದರ್ ಶೂಗಳನ್ನು ಎಣ್ಣೆ ಪ್ಯಾಕೆಟ್ ಇಂದ ಪೊಲೀಸ್ ಮಾಡಬಹುದು ಜೊತೆಗೆ ಮರದ ಕ ಅಥವಾ ಮರದ ವಸ್ತುಗಳನ್ನು ಕೂಡ ಉಜ್ಜಿದರೆ ಪಾಲಿಶ್ ಕೊಟ್ಟಂತೆ ಆಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now