ಕೇಂದ್ರ ಸರ್ಕಾರವು (Government Schemes for farmers) ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಕೃಷಿ ಕ್ಷೇತ್ರವನ್ನು ಇನ್ನಷ್ಟು ಸರಳವಾಗಿಸುವ ಹಾಗೂ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಕಿಸಾನ್ ಮಂದನ್ ಯೋಜನೆ ಸೇರಿದಂತೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆ, ಸಬ್ಸಿಡಿ ರೂಪದ ಅಥವಾ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ ನೀಡಿ ನೆರವಾಗುತ್ತಿದೆ.
ಇದರೊಂದಿಗೆ ಕೃಷಿಗೆ ಹೊಂದಿಕೊಂಡಂತೆ ಇರುವಂತಹ ಕಸುಬುಗಳಾದ ಹೈನುಗಾರಿಕೆ, ಮೀನುಗಾರಿಕೆ, ಕುರಿ ಕೋಳಿ ಸಾಕಾಣಿಕೆಗೂ ಕೂಡ ಸರ್ಕಾರದಿಂದ ನೆರವು ಸಿಗುತ್ತಿದೆ. ಅಂತಹದ್ದೇ ಒಂದು ವಿಶೇಷ ಯೋಜನೆ ಮೂಲಕ ಈಗ ದೇಶದ ಎಲ್ಲ ರಾಜ್ಯದ ರೈತರಿಗೂ ಕೂಡ ಗರಿಷ್ಠ 3 ಲಕ್ಷದವರೆಗೆ ಸಾಲ (loan upto 3lakhs) ಸೌಲಭ್ಯ ಸಿಗುತ್ತಿದೆ. ಹೈನುಗಾರಿಕೆಯಲ್ಲಿ (dairy farming) ತೊಡಗಿಕೊಂಡಿರುವ ರೈತನು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Pashu Kisan Credit card) ಮೂಲಕ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದರ ಕುರಿತ ವಿವರ ಹೀಗಿದೆ ನೋಡಿ.
ಯೋಜನೆಯ ಹೆಸರು:- ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ
ಯೋಜನೆಯ ಕುರಿತು ಪ್ರಮುಖ ಅಂಶಗಳು:-
● ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತನು ರೂ.3 ಲಕ್ಷದವರೆಗಿನ ಸಾಲ ಪಡೆಯಬಹುದು.
● ಈ ಯೋಜನೆಯಲ್ಲಿ ಪ್ರತಿ ಎಮ್ಮೆಗೆ ರೂ.60,249 ಮತ್ತು ಪ್ರತಿ ಹಸುವಿಗೆ ರೂ.40,783 ವರೆಗೆ ಸಾಲದ ನೆರವು ಸಿಗಲಿದೆ.
● ರೂ. 1,60,000 ವರೆಗಿನ ಸಾಲಗಳಿಗೆ ಯಾವುದೇ ಗ್ಯಾರಂಟಿ ನೀಡುವ ಅಗತ್ಯ ಇರುವುದಿಲ್ಲ.
● ಹೈನುಗಾರಿಕೆ ಉದ್ದೇಶಿತ ಸಾಲಗಳಿಗೆ ಇತರ ಹಣಕಾಸು ಸಂಸ್ಥೆಗಳಲ್ಲಿ ಮತ್ತು ಬ್ಯಾಂಕ್ಗಳಲ್ಲಿ 7% ಬಡ್ಡಿದರ ವಿಧಿಸಲಾಗುತ್ತದೆ ಆದರೆ ಜಾನುವಾರು ಮಾಲೀಕ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ 4% ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಹೀಗಾಗಿ ಕೇಂದ್ರ ಸರ್ಕಾರದ ವತಿಯಿಂದ 3% ರಿಯಾಯಿತಿ ಪಡೆದಂತಾಗುತ್ತದೆ.
● ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮೂಲಕ ಪಡೆದ ಸಾಲಗಳಿಗೆ ಮರುಪಾವತಿ ಅವಧಿ ಐದು ವರ್ಷಗಳು ಇರುತ್ತದೆ. ಐದು ವರ್ಷಗಳ ಒಳಗೆ ರೈತನು ಸಾಲದ ಮೊತ್ತ ಹಾಗೂ ಅದಕ್ಕೆ ಅನ್ವಯವಾಗುವ ಬಡ್ಡಿದರವನ್ನು ಮರುಪಾವತಿ ಮಾಡಬೇಕು.
● ನಿಯಮಗಳ ಒಳಪಟ್ಟು ಸರಿಯಾದ ರೀತಿಯಲ್ಲಿ ಸಾಲ ಮರುಪಾವತಿ ಮಾಡಿಕೊಂಡು ಹೋಗುವ ರೈತನಿಗೆ ಮತ್ತೆ ಸಾಲ ಪಡೆದುಕೊಳ್ಳುವ ಅವಕಾಶವಿದೆ.
ಅರ್ಜಿ ಸಲ್ಲಿಸುವ ವಿಧಾನ:-
● ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ನೀವು ಹತ್ತಿರದ ಬ್ಯಾಂಕ್ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.
● ಪಶು ಕಿಸಾನ್ ಕ್ರೆಡಿಟ್ ಕಾರ್ಡ್ಗಾಗಿ ಅರ್ಜಿ ನಮೂನೆಯನ್ನು ಪಡೆದು ಕೇಳಲಾಗುವ ಎಲ್ಲಾ KYC ದಾಖಲೆಗಳನ್ನು ಸಲ್ಲಿಸಿ.
● ರೈತನ ಅಗತ್ಯ ಅಥವಾ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು:-
● ಭರ್ತಿ ಮಾಡಿದ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ನಮೂನೆ
● ರೈತನ ಭೂಮಿಯ ದಾಖಲೆಗಳು
● ಪಶು ವೈದ್ಯರಿಂದ ಪಡೆದ ಧೃಡೀಕೃತ ಪ್ರಾಣಿಗಳ ಆರೋಗ್ಯ ಪ್ರಮಾಣಪತ್ರ
● ಇತ್ತೀಚಿನ ಪಾಸ್ಪೋರ್ಟ್ ಭಾವಚಿತ್ರಗಳು
● ಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್
● ಮತದಾರರ ಗುರುತಿನ ಚೀಟಿ
● ಬ್ಯಾಂಕ್ ಖಾತೆ ವಿವರ
● ಬ್ಯಾಂಕ್ ಅಧಿಕಾರಿಗಳು ಕೇಳುವ ಇನ್ನಿತರ ಪ್ರಮುಖ ದಾಖಲೆಗಳು.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್ ಗಳು:-
● ಆಕ್ಸಿಸ್ ಬ್ಯಾಂಕ್
● HDFC ಬ್ಯಾಂಕ್
● SBI ಬ್ಯಾಂಕ್
● ಮುಂತಾದ ಉನ್ನತ ವಲಯದ ಬ್ಯಾಂಕ್ ಗಳು.