ಗೃಹಲಕ್ಷ್ಮಿ 8ನೇ ಕಂತಿನ ಹಣ ಇಂದು ಬಿಡುಗಡೆ.! ನಿಮ್ಮ ಖಾತೆಗೂ ಹಣ ಬಂದಿದಿಯೇ ಈ ರೀತಿ ಚೆಕ್ ಮಾಡಿ, ಪೆಂಡಿಂಗ್ ಹಣ ಪಡೆಯಲು ಹೊಸ ಮಾರ್ಗಸೂಚಿ ಪ್ರಕಟ.!

 

WhatsApp Group Join Now
Telegram Group Join Now

ಲೋಕಸಭಾ ಚುನಾವಣೆ (Election) ಗದ್ದಲದ ನಡುವೆ ಕೂಡ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಭಾರಿ ಸದ್ದು ಮಾಡುತ್ತಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳ ಮಟ್ಟಿಗೆ ಹೈ ಬಜೆಟ್ ಯೋಜನೆಯಾಗಿದ್ದು ಕುಟುಂಬದ ಮುಖ್ಯಸ್ಥರಿಗೆ ಪ್ರತಿ ತಿಂಗಳು ರೂ.2000 ಸಹಾಯಧನ ನೀಡುವಂತಹ ಯೋಜನೆ ಎನ್ನುವ ಖ್ಯಾತಿಯೊಂದಿಗೆ ಯಶಸ್ವಿಯಾಗಿ ಏಳು ಕಂತುಗಳನ್ನು ಪೂರೈಸಿದೆ.

ಏಪ್ರಿಲ್ ತಿಂಗಳ 7ನೇ ಕಂತಿನ ಹಣವು ಸರ್ಕಾರದಿಂದ ಪೂರ್ತಿ ಬಿಡುಗಡೆಯಾಗಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದ 1.20 ಕೋಟಿ ಮಹಿಳೆಯರ ಪೈಕಿ 90% ಗಿಂತ ಹೆಚ್ಚು ಮಹಿಳೆಯರು ಈಗಾಗಲೇ ತಮ್ಮ ಖಾತೆಗಳಿಗೆ ಹಣವನ್ನು ಪಡೆದಿದ್ದಾರೆ, ಉಳಿದವರು ಈ ತಿಂಗಳ ಅಂತ್ಯದೊಳಗೆ ಹಣವನ್ನು ಪಡೆಯಲಿದ್ದಾರೆ ಮತ್ತು ಮುಂದಿನ ತಿಂಗಳ ಮೊದಲ ವಾರದಲ್ಲೇ ಎಂಟನೇ ಕಂತಿನ ಹಣ (8th Installment) ಬಿಡುಗಡೆಯಾಗಲಿದೆ ಎನ್ನವ ಮಾಹಿತಿ ಇದೆ.

ಈ ಸುದ್ದಿ ಓದಿ:-ಅಂಚೆ ಇಲಾಖೆ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 63,200/-

ಆದರೆ ಯೋಜನೆ ಆರಂಭವಾಗಲಿಂದಲೂ ಕೂಡ ಇರುವ ಗೃಹಲಕ್ಷ್ಮಿ ಯೋಜನೆಗಿರುವ ಒಂದು ಅಡಚಣೆ ಏನೆಂದರೆ 1.20 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದರೂ ಇದರಲ್ಲಿ 5-6 ಲಕ್ಷ ಮಹಿಳೆಯರು ಇನ್ನೂ ಸಹ ಒಂದು ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ.

ಡಿಸೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿಗಳ (CM) ಸೂಚನೆಯಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ (Gruhalakshmi) ಏರ್ಪಡಿಸಿದ ಬಳಿಕ ಸಾವಿರಾರು ಮಹಿಳೆಯರು ಭಾಗಿಯಾಗಿ ಸಮಸ್ಯೆ ಪರಿಹರಿಸಿಕೊಂಡು ಜನವರಿ ತಿಂಗಳಿನಲ್ಲಿ ಎರಡು-ಮೂರು ದಿನಗಳ ಅಂತರದಲ್ಲಿ ಹಿಂದಿನ ಕಂತುಗಳ ಎಲ್ಲಾ ಹಣವನ್ನು ಪಡೆದಿದ್ದಾರೆ.

ಈ ಸುದ್ದಿ ಓದಿ:-PF ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್, ವೇತನ ಮಿತಿ 15,000 ದಿಂದ 21,000ಕ್ಕೆ ಹೆಚ್ಚಳ.!

ಆದರೆ ಇನ್ನು ಸಮಸ್ಯೆ ಬಗೆಹರಿಯದವರ ಸಂಖ್ಯೆ ಬಹಳಷ್ಟಿದೆ, ಅವರಿಗೆ ಈಗ ಹೊಸ ಮಾರ್ಗಸೂಚಿ ಪ್ರಕಟಣೆ ಮಾಡಲಾಗಿದೆ. ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಯೂ ಇನ್ನು ಒಂದು ಕಂತಿನ ಹಣ ಪಡೆಯಲು ಆಗಿಲ್ಲ ಅಥವಾ ಒಂದೆರಡು ತಿಂಗಳು ಹಣ ಪಡೆದು ನಂತರ ಸ್ಥಗಿತಗೊಂಡಿದ್ದರೆ ಕೂಡಲೇ ನಿಮ್ಮ ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ಕೊಟ್ಟು CDPO ಅಧಿಕಾರಿಗಳನ್ನು ಭೇಟಿಯಾಗಿ.

ಆ ಸಂದರ್ಭದಲ್ಲಿ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ವೀಕೃತಿ ಪ್ರತಿಯನ್ನು ಕೂಡ ಪಡೆದುಕೊಂಡು ಹೋಗಿ ಅವರು ಸಮಸ್ಯೆಯನ್ನು ಪರಿಶೀಲಿಸಿ ವಿವರಿಸುತ್ತಾರೆ ಅಥವಾ ಎಲ್ಲ ಸರಿ ಇದ್ದು ಅನುಮೋದನೆ ಬಾಕಿ ಇದ್ದರೆ ಇದನ್ನು ಪೂರ್ತಿಗೊಳಿಸುತ್ತಾರೆ ನಂತರ ನಿಮಗೆ ಈ ಹಿಂದಿನ ಎಲ್ಲಾ ಕಂತುಗಳ ಹಣವು ಸಿಗಲಿದೆ.

ಈ ಸುದ್ದಿ ಓದಿ:-ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಲಾಭ ಸಿಗುತ್ತದೆ ಗೊತ್ತಾ.? ನಿಮ್ಮ ಹಣ ದುಪ್ಪಟ್ಟು ಮಾಡಲು ಇದೇ ಬೆಸ್ಟ್
ಸಾಮಾನ್ಯವಾಗಿ ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇರಲು ಕಾರಣಗಳು:-

* ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗದೆ ಇರುವುದು ಅಥವಾ ಖಾತೆ ಚಾಲ್ತಿಯಲ್ಲಿ ಇಲ್ಲದೆ ಇರುವುದು
* ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಯಾವ ಖಾತೆಗೆ ಹಣ ಹೋಗಿದೆ ಎನ್ನುವುದರ ಮಾಹಿತಿ ಇಲ್ಲದೆ ಇರುವುದು

* ರೇಷನ್ ಕಾರ್ಡ್ e-KYC ಆಗದೇ ಇರುವುದು ಅಥವಾ ರೇಷನ್ ಕಾರ್ಡ್ ಆ ತಿಂಗಳಿನಲ್ಲಿ ರದ್ದಾಗಿರುವುದು ಅಥವಾ ತಾತ್ಕಾಲಿಕವಾಗಿ ಸ್ಥಗಿತವಾಗಿರುವುದು
* ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ತಾಂತ್ರಿಕ ಸಮಸ್ಯೆಗಳಿಂದ ಯಶಸ್ವಿ ಆಗದೆ ಇರುವುದು
* ಫಲಾನುಭವಿ ಕಳೆದ 10 ತಿಂಗಳಿಂದ ಒಂದು ಬಾರಿ ಕೂಡ ಆಧಾರ್ ಅಪ್ಡೇಟ್ ಮಾಡಿಸದೆ ಇರುವುದು.

ಈ ಸುದ್ದಿ ಓದಿ:-HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!

* ಮುಖ್ಯವಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ನಲ್ಲಿ ಒಂದೇ ರೀತಿ ಹೆಸರು ಇಲ್ಲದೆ ದಾಖಲೆಗಳಲ್ಲಿ ವ್ಯತ್ಯಾಸ ಆಗಿರುವುದು ಹೆಚ್ಚಿನ ಜನರ ಸಮಸ್ಯೆಯಾಗಿದೆ ಇದನ್ನು ತಿದ್ದುಪಡಿ ಮಾಡಿಸುವುದರೊಂದಿಗೆ ಈ ಮೇಲ್ಕಂಡ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬರಲಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now