ಈಗಿನ ಕಾಲದಲ್ಲಿ ಬ್ಯಾಂಕ್ ಅಕೌಂಟ್ ನಮ್ಮ ದೈನಂದಿಕ ಜೀವನದ ಭಾಗವಾಗಿ ಬಿಟ್ಟಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ, ಇನ್ನು ಮುಂತಾದ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಬಂದ ಮೇಲೆ ಜನ ಜೇಬಿನಲ್ಲಿ ದುಡ್ಡು ಇಟ್ಟುಕೊಂಡು ಓಡಾಡುವುದು ಕಡಿಮೆಯಾಗಿ ತಾವು ಬಳಸುವ ಮೊಬೈಲ್ ಇಂದಲೇ ಈ ಸೇವೆಗಳನ್ನು ಬಳಸುತ್ತಿದ್ದಾರೆ ಇವುಗಳಿಗೆಲ್ಲ ಬ್ಯಾಂಕ್ ಅಕೌಂಟ್ ಹೊಂದುವುದು ಕಡ್ಡಾಯ ಆಗಿದೆ.
ಜೊತೆಗೆ ಇನ್ನು ಅನೇಕ ಅನುಕೂಲತೆಗಳಿಗಾಗಿ ಈಗ ಬ್ಯಾಂಕ್ ಹೊಂದುವುದು ಕಡ್ಡಾಯವು ಆಗಿದೆ ದೇಶದಾದ್ಯಂತ ಈಗಾಗಲೇ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳು ಸೇರಿ ಅಪಾರ ಸಂಖ್ಯೆಯ ಬ್ಯಾಂಕ್ಗಳು ಇವೆ, ಪ್ರತಿಯೊಂದು ಗ್ರಾಮ ಹಾಗೂ ನಗರದಲ್ಲೂ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಗಳು ಇವೆ. ಆದ್ದರಿಂದ ಯಾವ ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡಬೇಕು ಎನ್ನುವುದೇ ಜನರ ಗೊಂದಲ.
ಯಾವ ಬ್ಯಾಂಕ್ ಅಲ್ಲಿ ಖಾತೆ ಓಪನ್ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ, ಹೆಚ್ಚಿನ ಫೆಸಿಲಿಟಿಗಳು ಸಿಗುತ್ತವೆ ಎಂದು ಹುಡುಕಾಡಿ ನಂತರ ಆ ಬ್ಯಾಂಕಲ್ಲಿ ಖಾತೆ ತೆಗೆದು ಲಾಭ ಮಾಡಿಕೊಳ್ಳಲು ಪ್ರತಿಯೊಬ್ಬ ಗ್ರಾಹಕನು ಇಚ್ಛೆ ಪಡುತ್ತಾನೆ. ಈ ರೀತಿ ನೀವು ಸಹ ಬ್ಯಾಂಕ್ ಖಾತೆ ಹೊಂದಿ ಲಾಭ ಪಡೆಯಬೇಕು ಎಂದಿದ್ದರೆ ಈ ಬ್ಯಾಂಕ್ ಬಗ್ಗೆ ಕೂಡ ತಿಳಿದುಕೊಳ್ಳಿ. ಐಡಿಎಫ್ಸಿ ಎಂದು ಕರೆಯಲ್ಪಡುವ ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಒಂದಾಗಿರುವ ಈ ಬ್ಯಾಂಕ್ ಈಗ ದೇಶದಾದ್ಯಂತ ಹೆಸರುವಾಸಿ ಆಗಿದೆ.
ಈ ಬ್ಯಾಂಕ್ ಅಲ್ಲಿ ಖಾತೆ ಹೊಂದಿದ್ದರೆ ಬೇರೆ ಯಾವ ಬ್ಯಾಂಕ್ ಅಲ್ಲೂ ನೀಡದ ಹೆಚ್ಚಿನ ಅನುಕೂಲತೆ ಒಂದನ್ನು ಈ ಬ್ಯಾಂಕ್ ಅವರು ನೀಡಲಿದ್ದಾರೆ. ಆ ಕಾರಣಕ್ಕಾಗಿ ಜನ ಈ ಬ್ಯಾಂಕಲ್ಲಿ ಖಾತೆ ತೆರೆಯಲು ಹಾತೊರೆಯುತ್ತಿದ್ದಾರೆ. ಯಾವುದು ಆ ಅನುಕೂಲತೆ ಎಂದು ನೋಡುವುದಾದರೆ ಇದೊಂದು ಅ.ಪ.ಘಾ.ತ ವಿಮೆ ಎಂದೇ ಹೇಳಬಹುದು.
ಈ ಬ್ಯಾಂಕ್ ಅಲ್ಲಿ ಖಾತೆ ಹೊಂದಿರುವ ಗ್ರಾಹಕರು ಒಂದು ವೇಳೆ ರಸ್ತೆ ಅ.ಪ.ಘಾ.ತ.ದಲ್ಲಿ ಮೃ.ತ. ಪಟ್ಟರೇ ಅದಕ್ಕೆ ಸಂಬಂಧಪಟ್ಟ ಸಾಕ್ಷಿಗಳನ್ನು ನೀಡಿದರೆ ಅವರಿಗೆ 35 ಲಕ್ಷ ರೂ ಪರಿಹಾರವಾಗಿ ಸಿಗಲಿದೆ ಒಂದು ವೇಳೆ ವಿಮಾನ ಅ.ಪ.ಘಾ.ತ.ದಿಂದ ಮೃ.ತ ಪಟ್ಟರೆ ಈ ಮೊತ್ತ ಇನ್ನೂ ಹೆಚ್ಚಾಗಲಿದೆ. ಇಂತಹ ಒಂದು ಅನುಕೂಲತೆ ಬೇರೆ ಎಲ್ಲೂ ಇಲ್ಲ ಇದೊಂದು ಇನ್ಸೂರೆನ್ಸ್ ರೀತಿ ಆಯಿತು. ಹಾಗಾಗಿ ಇದೇ ಬ್ಯಾಂಕಿನಲ್ಲಿ ನಮಗೆ ಖಾತೆ ಬೇಕು ಎಂದು ಜನ ಆ ಬ್ಯಾಂಕ್ ಮುಂದೆ ಕ್ಯೂ ನಿಲ್ಲುವ ರೀತಿ ಆಗಿದೆ.
ಆನ್ಲೈನ್ ಅಲ್ಲೂ ಕೂಡ ಈ ಬ್ಯಾಂಕ್ ಖಾತೆ ತೆರೆಯಬಹುದು. ಈ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಖಾತೆ ತೆರೆಯುವ ಪೇಜ್ ಗೆ ಹೋಗಿ ಅಲ್ಲಿ ಕೇಳಿರುವ ಅಗತ್ಯ ಮಾಹಿತಿಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ ಮಾಹಿತಿಗಳನ್ನು ತುಂಬಿಸಿ ಸಬ್ಮಿಟ್ ಮಾಡುವ ಮೂಲಕ ಆಮೇಲೆ ಖಾತೆ ಓಪನ್ ಮಾಡಬಹುದಾಗಿದೆ. ಜೊತೆಗೆ ಇದು 6.75% ರಷ್ಟು ಬಡ್ಡಿ ದರವನ್ನು ಕೂಡ ಅನ್ನ ಗ್ರಾಹಕರಿಗೆ ನೀಡುತ್ತಿದೆ, ಬೇರೆ ಬ್ಯಾಂಕ್ಗಳಿಗೆ ಹೋಲಿಸಿಕೊಂಡರೆ ಸದ್ಯದ ಪರಿಸ್ಥಿತಿಯಲ್ಲಿ ಇದೇ ಹೆಚ್ಚು.
ಈ ಬ್ಯಾಂಕ್ ಗ್ರಾಹಕರಿಗೆ ಖಾತೆ ನಿರ್ವಹಣೆ ಮಾಡುವ ಬಗ್ಗೆ ಒಂದು ಸೂಚನೆಯೂ ಇದೆ. ಅದೇನೆಂದರೆ ಮಾಸಿಕವಾಗಿ ಇದರಲ್ಲಿ ಮಿನಿಮಮ್ ಬ್ಯಾಲೆನ್ಸ್ 25,000 ಇರಲೇಬೇಕು, ಒಂದು ವೇಳೆ ಅದಕ್ಕಿಂತ ಕಡಿಮೆ ಇದ್ದರೆ 50 ಇಂದ 400 ವರೆಗೆ ದಂಡ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಐ ಡಿ ಎಫ್ ಸಿ ಬ್ಯಾಂಕಿಗೆ ಭೇಟಿ ಕೊಟ್ಟು ಮಾಹಿತಿ ಪಡೆದು ಲಾಭ ಮಾಡಿಕೊಳ್ಳಿ.