ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಸತತವಾಗಿ 46 ವರ್ಷಗಳ ಕಾಲ ಬೆಳಗಿದ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಯಾವುದೇ ಪಾತ್ರಗಳನ್ನು ಕೊಟ್ಟರು ಸಹ ಜೀವ ತುಂಬುತ್ತಿದ್ದ ಪುನೀತ್ ರಾಜ್‌ಕುಮಾರ್ ಮರೆಯಾಗಿ ಒಂದು ವರ್ಷವಾದರೂ ಈ ಒಂದು ವಿಷಯವನ್ನು ಯಾರಿಂದಲೂ ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಪುನೀತ್ ಅವರು ಆರು ತಿಂಗಳ ಮಗುವಿದ್ದಾಗಲೇ ಕಲೆಯ ಗಂಧ ಗಾಳಿ ಗೊತ್ತಿಲ್ಲದಂತಹ ಸಮಯದಲ್ಲಿ ಕ್ಯಾಮರಾ ಮುಂದೆ ಕಾಣಿಸಿಕೊಂಡು ಬಣ್ಣದ ಬದುಕಿಗೆ ನಾಂದಿ ಹಾಡಿದರು. ಡಾಕ್ಟರ್ ರಾಜ್‌ಕುಮಾರ್ ಅವರು ನಟಿಸಿದ್ದಂತಹ ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಮಗುವಾಗಿ ಚಿತ್ರರಂಗಕ್ಕೆ ಕಾಲಿಟ್ಟಂತಹ ನಮ್ಮ ನಿಮ್ಮೆಲ್ಲರ ಪುನೀತ್ ರಾಜ್‌ಕುಮಾರ್ ಅವರು ಮಗುವಾಗಿದ್ದಲೆ ಕಲಾವಿದ ಎಂಬ ಪಟ್ಟವನ್ನು ಮೂಡಿಗೆರೆಸಿಕೊಂಡವರು.
https://www.instagram.com/reel/CknVtCsjNfD/?igshid=YmMyMTA2M2Y=
ಹೀಗೆ ಬಾಲ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಂತಹ ಪುನೀತ್ ರಾಜ್‌ಕುಮಾರ್ ಅವರು ಕೇವಲ ನಟನಲ್ಲದೆ ಉತ್ತಮ ಹಾಡುಗಾರ ಕೂಡ ಹೌದು, ಭಾಗ್ಯವಂತ ಸಿನಿಮಾದ ‘ಬಾನ ದಾರಿಯಲ್ಲಿ ಸೂರ್ಯ ತೇಲಿ ಬಂದ’ ಎನ್ನುವಂತಹ ಕನ್ನಡ ಚಿತ್ರದ ಹಾಡಿಗೆ ಹೊಸ ದಾಖಲೆಯನ್ನೇ ನಿರ್ಮಿಸಿದ. ‘ಅಪ್ಪು’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಂತಹ ನಮ್ಮ ನಿಮ್ಮೆಲ್ಲರ ಪುನೀತ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಇವರಿಗೆ ಚಿಕ್ಕ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅಪ್ಪು ಗೆ ಅಭಿಮಾನಿಗಳು ಇದ್ದಾರೆ. ಇವರನ್ನು ಯಾರು ಕೂಡ ದ್ವೇಷ ಮಾಡುವುದಿಲ್ಲ ಏಕೆಂದರೆ ಪುನೀತ್ ಅವರ ಗುಣ ಅಂತದ್ದು ಇವರು ನಟರಾಗಿ ಒಳ್ಳೆಯ ಸಂದೇಶ ಇರುವ ಸಿನಿಮಾಗಳನ್ನು ನಮಗೆ ಕೊಟ್ಟಿದ್ದಾರೆ. ಇದರ ಜೊತೆಗೆ ಸಾಕಷ್ಟು ಬಡವರಿಗೆ ಅಸಹಾಯಕರಿಗೆ ಸಹಾಯವನ್ನು ಮಾಡಿದ್ದಾರೆ ಸಾಕಷ್ಟು ಅಭಿಮಾನಿಗಳು ಪುನೀತ್ ಅವರನ್ನು ದೇವರ ರೀತಿಯಲ್ಲಿ ಕಾಣುತ್ತಾರೆ.
ಈ ರೀತಿಯ ವ್ಯಕ್ತಿತ್ವ ಇರುವ ನಟ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಮಗೆ ದೊರಕಿರುವುದು ಕನ್ನಡಿಗರಾಗಿ ನಮ್ಮ ಹೆಮ್ಮೆ ಎಂದೇ ಹೇಳಬಹುದು. ಚಿಕ್ಕವಯಸ್ಸಿನಿಂದಲೇ ಶ್ರೀಮಂತಿಕೆಯಿಂದ ಬೆಳೆದು ಪುನೀತ್ ರಾಜ್‌ಕುಮಾರ್ ಅವರು ಯಾವುದೇ ರೀತಿಯ ಅಹಂಕಾರ ಇರಲಿಲ್ಲ, ಯಾರೊಂದಿಗು ಶ್ರೀಮಂತಿಕೆಯಿಂದ ಇರಲಿಲ್ಲ ತುಂಬಾ ಸರಳತೆಯಿಂದ ಇದ್ದರು ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ಕೂಡ ಲೈಟ್ ಬಾಯ್ ನಿಂದ ಹಿಡಿದು ಎಲ್ಲರನ್ನೂ ಕೂಡ ತುಂಬಾ ನಗುನಗುತ್ತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಈ ಒಂದು ಗುಣಗಳನ್ನು ನೋಡಿದರೆ ನಮ್ಮ ಅಪ್ಪು ಅವರನ್ನು ಕಳೆದುಕೊಂಡು ಚಿತ್ರರಂಗ ಎಷ್ಟು ವ್ಯಥೆ ಪಡಿತಿದೆ ಎಂದು ಹೇಳಲು ಸಾಧ್ಯವಿಲ್ಲ.
ಇನ್ನು ಪುನೀತ್ ರಾಜ್‌ಕುಮಾರ್ ಅವರು ನಟನಲ್ಲದೆ ನಿರ್ದೇಶಕನಾಗಿ ನಿರ್ಮಾಪಕನಾಗಿ ಹಾಗೆಯೇ ಸಂಗೀತಗಾರನಾಗಿ ನಮ್ಮ ಚಲನಚಿತ್ರ ಪಡೆದುಕೊಂಡಂತಹ ಒಂದು ದೊಡ್ಡ ಕೊಡುಗೆ ಎಂದು ಹೇಳಬಹುದು. ಇದೀಗ ಪುನೀತ್ ರಾಜ್‌ಕುಮಾರ್ ಅವರು ಹಾಡಿರುವಂತಹ ಒಂದು ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತದೆ ಪುನೀತ್ ರಾಜ್‌ಕುಮಾರ್ ಅವರು ಅದ್ಭುತವಾದಂತಹ ಗಾಯಕ ತಮ್ಮ ಕಂಠಸಿರಿಯಲ್ಲಿ ಸಾಕಷ್ಟು ಹಾಡುಗಳನ್ನು ಕನ್ನಡ ಚಲನಚಿತ್ರರಂಗಕ್ಕೆ ನೀಡಿದ್ದಾರೆ. ತಮ್ಮ ತಂದೆಯಾದಂತಹ ಡಾಕ್ಟರ್ ರಾಜ್‌ಕುಮಾರ್ ಅವರ ‘ಎರಡು ಕನಸು’ ಸಿನಿಮಾದ ‘ಎಂದೆಂದು ನಿನ್ನನು ಮರೆತು ಬದುಕಿರಲಾರೆ’ ಎನ್ನುವಂತಹ ಹಾಡನ್ನು ಅಪ್ಪು ಅವರು ಅದ್ಭುತವಾಗಿ ಹಾಡಿದ್ದಾರೆ ಅವರು ಹಾಡಿರುವುದನ್ನು ಕೇಳುತ್ತಿದ್ದರೆ ಪುನೀತ್ ರಾಜ್‌ಕುಮಾರ್ ನಮ್ಮ ಎದುರಲ್ಲಿ ಕುಳಿತು ಹಾಡಿರುವ ಹಾಗೆ ಭಾಸವಾಗುತ್ತದೆ. ಪುನೀತ್ ರಾಜಕುಮಾರ್ ಅವರ ಹಾಡನ್ನು ಕೇಳಿದಿದ್ದರೆ ನಿಮಗೆ ಏನು ಅನಿಸುತ್ತದೆ ಎಂದು ಕಾಮೆಂಟ್ ಮೂಲಕ ತಿಳಿಸಿ.