ಒಂದು ವೇಳೆ ಗಂಡ ಖರ್ಚಿಗೆ ಹಣ ಕೊಡದಿದ್ರೆ ಹೆಂಡ್ತಿ ಕೇಸ್ ಹಾಕಬಹುದಾ.? ಹೀಗಿದೆ ಕಾನೂನಿನ ಹೊಸ ರೂಲ್ಸ್

 

WhatsApp Group Join Now
Telegram Group Join Now

ತನ್ನ ಹೆಂಡತಿಯ ಖರ್ಚನ್ನು ಭರಿಸುವುದು ಯಾವುದೇ ಗಂಡನ ಜವಾಬ್ದಾರಿಯಾಗಿದೆ. ಆದರೆ, ಪತಿ ತನ್ನ ಜವಾಬ್ದಾರಿಯಿಂದ ದೂರ ಸರಿಯುವ ಮೂಲಕ ತನ್ನ ಹೆಂಡತಿಯ ವೆಚ್ಚವನ್ನು ಭರಿಸಲು ನಿರಾಕರಿಸಿದರೆ ಹೇಗೆ?. ಹೀಗಿರುವಾಗ ಹೆಂಡತಿ ಗಂಡನ ಮೇಲೆ ಕೇಸು ಹಾಕಬಹುದೇ? ಇಂದಿನ ಈ ಲೇಖನದಲ್ಲಿ, ಪತಿ ಪತ್ನಿಯ ವೆಚ್ಚವನ್ನು ಭರಿಸದಿದ್ದರೆ, ಹೆಂಡತಿ ತನ್ನ ಗಂಡನ ವಿರುದ್ಧ ಪ್ರಕರಣವನ್ನು ದಾಖಲಿಸಬಹುದೇ? ಎಂಬುದರ ಬಗ್ಗೆ ನೋಡೋಣ ಬನ್ನಿ…

ಯಾವುದೇ ಧರ್ಮದಲ್ಲಿ ತೆಗೆದುಕೊಂಡರು ಕೂಡ ಹೆಂಡತಿಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದು ಹಾಗೂ ಹೆಂಡತಿಯ ನಿಗ ವಹಿಸುವುದು ಗಂಡನ ಆದ್ಯ ಕರ್ತವ್ಯ ಆಗಿರುತ್ತದೆ. ಹೀಗಾಗಿ ಈ ಜವಾಬ್ದಾರಿಯನ್ನು ಆತ ಸಂಪೂರ್ಣವಾಗಿ ನಿಭಾಯಿಸುವುದು ಆತನ ಆದ್ಯ ಕರ್ತವ್ಯ ಆಗಿರುತ್ತದೆ ಎಂಬುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಆದರೆ, ಒಂದು ವೇಳೆ ಗಂಡನಿಂದ ಆರ್ಥಿಕ ಸಹಾಯ ಹೆಂಡತಿಗೆ ಸಿಗುತ್ತಿಲ್ಲ ಎಂದಾದರೆ ಕಾನೂನಾತ್ಮಕವಾಗಿ ಯಾವುದಾದರೂ ಪ್ರಕರಣವನ್ನು ದಾಖಲಿಸುವ ಹಕ್ಕು ಇದೆಯಾ ಎನ್ನುವುದು ಎಲ್ಲರ ಅನುಮಾಮನ. ಈ ಅನುಮಾನಕ್ಕೆ ಇಲ್ಲಿದೆ ಸರಿಯಾದ ಉತ್ತರ…

ಮದುವೆಯಾದ ನಂತರ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಹಾಗೆ ಸಂಪೂರ್ಣವಾಗಿ ಗಂಡನ ಜವಾಬ್ದಾರಿಯಾಗಿರುತ್ತಾಳೆ. ಆದರೆ, ಈ ಸಮಯದಲ್ಲಿ ಗಂಡ ಹೆಂಡತಿಯ ಜೀವನ ನಿರ್ವಹಣೆಗೆ ಹಣವನ್ನು ನೀಡಿದೆ ಹೋದಲ್ಲಿ ಆಕೆ ತನ್ನ ಜೀವನ ನಿರ್ವಹಣೆಗಾಗಿ ಗಂಡನಿಂದ ಹಣದ ವಸೂಲಿಗಾಗಿ ಕೋರ್ಟಿನಲ್ಲಿ ಕೇಸ್ ಹಾಕಬಹುದಾಗಿದೆ.

ಅಂದಹಾಗೆ, ತನ್ನ ಹೆಂಡತಿಯ ವೆಚ್ಚವನ್ನು ಯಾವುದೇ ಪತಿ ಕೂಡ ಭರಿಸುತ್ತಾನೆ ಎಂದು ಕಾನೂನಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಪತಿ ಈ ಜವಾಬ್ದಾರಿಯಿಂದ ನುಣುಚಿಕೊಂಡರೆ, ಅಂತಹ ಪರಿಸ್ಥಿತಿಯಲ್ಲಿ ಹೆಂಡತಿ ತನ್ನ ಹಕ್ಕುಗಳನ್ನು ನೋಡಿಕೊಳ್ಳಬೇಕು. ಜೀವನಾಂಶ ಪಡೆಯಲು ಪತಿಯ ವಿರುದ್ಧ ಪ್ರಕರಣ ದಾಖಲಿಸಲೂ ಕಾನೂನಿನಲ್ಲಿ ಅವಕಾಶವಿದೆ.

ಹಿಂದೂ ಅಧಿನಿಯಮ 24 ಹಾಗೂ 25 ರ ಪ್ರಕಾರ ಮದುವೆಯ ನಂತರ ಒಂದು ವೇಳೆ ಗಂಡ ಬಿಟ್ಟು ಹೋದಲ್ಲಿ ಅಥವಾ ಹಾಗೆ ಕೂಡ ಹೆಂಡತಿಗೆ ಖರ್ಚು ವೆಚ್ಚಗಳನ್ನು ನಿರ್ವಹಿಸುವಂತಹ ಆರ್ಥಿಕ ಸಹಾಯ ನೀಡದಿದ್ದಲ್ಲಿ ಈ ಮೇಲೆ ಹೇಳಿರುವಂತಹ ಕಾಯ್ದೆಯ ಪ್ರಕಾರ ಪತ್ನಿಯರು ತಮ್ಮ ಗಂಡನ ವಿರುದ್ಧ ಪ್ರಕರಣವನ್ನು ದಾಖಲಿಸಬಹುದಾಗಿದೆ.

ಕೇವಲ ಈ ಸಂದರ್ಭದಲ್ಲಿ ಮಾತ್ರವಲ್ಲದೆ ಒಂದು ವೇಳೆ ಹೆಂಡತಿ ಗಂಡನಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರು ಕೂಡ ತನ್ನ ಜೀವನ ನಿರ್ವಹಣೆಗಾಗಿ ಗಂಡನಿಂದ ಆದಾಯದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವ ನಿಯಮ ಭಾರತೀಯ ಕಾನೂನಿನಲ್ಲಿದೆ. ಹಿಂದೂ ವಿವಾಹ ಕಾಯ್ದೆ 125ರ ಅಡಿಯಲ್ಲಿ ಇದನ್ನು ನೀವು ಕಾಣಬಹುದಾಗಿದೆ.

ಐಪಿಸಿ ಅಡಿಯಲ್ಲಿಯೂ ಸಹ, ಹೆಂಡತಿಗೆ ಪತಿಯಿಂದ ಜೀವನಾಂಶ ಅಥವಾ ಜೀವನಾಂಶದ ಹಕ್ಕಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ, ಪತಿ ತನ್ನ ಹೆಂಡತಿಯನ್ನು ವಿಚ್ಛೇದನ ಪಡೆದಿದ್ದರೂ ಸಹ ನಿರ್ವಹಿಸಲು ಬದ್ಧನಾಗಿರುತ್ತಾನೆ. ಪತಿ ತನ್ನ ಹೆಂಡತಿಯನ್ನು ನಿರ್ವಹಿಸದಿದ್ದರೆ ಅಥವಾ ಅವಳ ವೆಚ್ಚವನ್ನು ಖರ್ಚು ಮಾಡಲಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ, ಪತ್ನಿ ತನ್ನ ಜೀವನಾಂಶಕ್ಕಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ ತನ್ನ ಗಂಡನ ವಿರುದ್ಧ ಪ್ರಕರಣವನ್ನು ದಾಖಲಿಸಬಹುದು.

ಈ ಸಂದರ್ಭದಲ್ಲಿ ಪತ್ನಿ ಜೀವನ ನಿರ್ವಹಣೆಗೆ ಗಂಡನ ಬಳಿ ಹಣ ಕೇಳಿದಾಗ ಆತ ನೀಡಿದ ಇದ್ದಲ್ಲಿ ಪೊಲೀಸ್ ಕೇಸ್ ಅನ್ನು ಕೂಡ ಆಕೆ ದಾಖಲಿಸಬಹುದಾಗಿದೆ. ಇದು ಕೇವಲ ಮದುವೆ ವಿಚಾರದಲ್ಲಿ ಮಾತ್ರವಲ್ಲದೇ, ಲಿವಿಂಗ್ ಟುಗೆದರ್ ಸಂದರ್ಭದಲ್ಲಿ ಕೂಡ ಆಕೆ ಮದುವೆ ರೀತಿಯ ವಾತಾವರಣದಲ್ಲಿ ಇರುವುದರಿಂದಾಗಿ ಆಕೆ ಗಂಡನಿಂದ ಅಥವಾ ತನ್ನ ಸಂಗಾತಿಯಿಂದ ಹಣವನ್ನು ಪಡೆಯಲು ಪೂರ್ಣ ಹಕ್ಕು ಬಾಧ್ಯಳಾಗಿರುತ್ತಾಳೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now