ಹಣ ಉಳಿತಾಯ (Saving) ಎನ್ನುವುದು ಈಗ ಜೀವನದ ಮೊದಲ ಆದ್ಯತೆ. ಯಾಕೆಂದರೆ ಹಣಕಾಸಿನ ಅವಶ್ಯಕತೆ ಯಾವಾಗ ಬರುತ್ತದೆ ಎಂದು ಹೇಳಲು ಆಗುವುದಿಲ್ಲ ಹಾಗೆ ಒಂದೇ ಬಾರಿಗೆ ನಮ್ಮ ದೊಡ್ಡ ಕನಸುಗಳಿಗೆ ಹಣ ತರಲು ಆಗುವುದಿಲ್ಲ. ಹೀಗಾಗಿ ಪ್ರತಿ ತಿಂಗಳು ಕೂಡ ನಮ್ಮ ಸಂಬಳದಲ್ಲಿ ಸ್ವಲ್ಪ ಮೊತ್ತದ ಹಣವನ್ನು ಭವಿಷ್ಯದ ಕನಸುಗಳಿಗಾಗಿ ಅಥವಾ ಮುಂದೆ ಬರುವ ಜವಾಬ್ದಾರಿಗಳಿಗೆ ಅನುಕೂಲವಾಗಲಿ ಎಂದು ಉಳಿತಾಯ ಮಾಡಬೇಕು.
ಈ ರೀತಿ ಉಳಿತಾಯ ಮಾಡುವುದಕ್ಕಿಂತಲೂ ಹಣವನ್ನು ಒಳ್ಳೆಯ ಕಡೆ ಹೂಡಿಕೆ (Investment) ಮಾಡುವುದರಿಂದ ನಮ್ಮ ಉಳಿತಾಯದ ಹಣಕ್ಕೆ ಬಡ್ಡಿ ರೂಪದ ಲಾಭ ಕೂಡ ಪಡೆಯಬಹುದು. ಈ ರೀತಿ ಯೋಚನೆ ಮಾಡುವಾಗ ಹಣಕ್ಕೆ ಭದ್ರತೆ ವಿಚಾರವಾಗಿ ಕೂಡ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.
ಈ ಸುದ್ದಿ ಓದಿ:- ಕೇವಲ 600 ರೂಪಾಯಿನಲ್ಲಿ 4 ಎಕರೆವರೆಗೆ ಜೀವಂತ ಬೇಲಿ.! ಲಕ್ಷ ಲಕ್ಷ ಕೊಟ್ಟು ಮುಳ್ಳುತಂತಿ ಹಾಕಿಸೋ ಬದಲು ಇದು ಬೆಸ್ಟ್.!
ನೀವು ಕೂಡ ಹಣ ಹೂಡಿಕೆ ಮಾಡಬೇಕು ಲಾಭದ ಜೊತೆಗೆ ನಿಮ್ಮ ಹಣಕ್ಕೆ ಸುರಕ್ಷತೆ ಕೂಡ ಇರಬೇಕು ಎಂದರೆ ಭಾರತ ಸರ್ಕಾರದ ಅಂಚೆಕಛೇರಿ (Post office Schemes) ಯೋಜನೆಗಳು ನಿಮಗೆ ನಿರೀಕ್ಷೆಗೂ ಮೀರಿದ ಅನುಕೂಲತೆ ಮಾಡಿಕೊಡುತ್ತೇವೆ. ಸದ್ಯಕ್ಕೆ ಅಂಚೆ ಕಚೇರಿಯಲ್ಲಿ 13ಕ್ಕೂ ಹೆಚ್ಚು ಮಾದರಿಯ ಯೋಜನೆಗಳಿದ್ದು ಇದರಲ್ಲಿ ನೀವು ತಿಂಗಳಿಗೆ ರೂ.10,000 ಹೂಡಿಕೆ ಮಾಡುವುದರಿಂದ 7 ಲಕ್ಷ ರಿಟರ್ನ್ ಪಡೆಯಬಹುದಾದ ಒಂದು ವಿಶೇಷ ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ಯೋಜನೆಯ ಹೆಸರು:- ರಿಕರಿಂಗ್ ಡೆಪೋಸಿಟ್ (RD Scheme)
ಯೋಜನೆ ಕುರಿತಾದ ಕೆಲವು ಪ್ರಮುಖ ಅಂಶಗಳು:-
* ಭಾರತೀಯ ನಾಗರಿಕರಿಗೆ ಮಾತ್ರ ಈ ಯೋಜನೆ ಲಾಭ ಪಡೆಯಲು ಅವಕಾಶ
* 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಸಿಂಗಲ್ ಆಗಿ ಅಥವಾ ಜಂಟಿಯಾಗಿ RD ಖಾತೆ ತೆರೆಯಬಹುದು, 18 ವರ್ಷದ ಒಳಗಿರುವವರ ಹೆಸರಿನಲ್ಲಿ ಪೋಷಕರು ಈ ಖಾತೆಯನ್ನು ತೆರೆದು ನಿರ್ವಹಿಸಬಹುದು.
* ಪ್ರಸ್ತುತವಾಗಿ ಈ ಹೂಡಿಕೆ ಯೋಜನೆಗೆ 6.8% ಬಡ್ಡಿದರ ಅನ್ವಯವಾಗುತ್ತದೆ ಮತ್ತು ಇದು ಪ್ರತಿ ಮೂರು ತಿಂಗಳಿಗೊಮ್ಮೆ ಪರೀಷ್ಕೃತವಾಗುತ್ತಿರುತ್ತದೆ.
* ಕನಿಷ್ಠ 100 ರೂಪಾಯಿಯಿಂದ ಖಾತೆ ತೆರೆಯಬಹುದು, ಗರಿಷ್ಠ ಯಾವುದೇ ಮಿತಿ ಇಲ್ಲ
* ಐದು ವರ್ಷಗಳ ಹೂಡಿಕೆ ಯೋಜನೆ ಆಗಿರುತ್ತದೆ, ಪ್ರತಿ ತಿಂಗಳು ಕೂಡ ನೀವು ನಿಗದಿಪಡಿಸಿಕೊಂಡಷ್ಟು ಮೊತ್ತದ ಪ್ರೀಮಿಯಂ ಅನ್ನು ಐದು ವರ್ಷಗಳವರೆಗೆ ಕಟ್ಟಬೇಕು.
* ಪ್ರತಿ ತಿಂಗಳ 1ನೇ ತಾರೀಖಿನಿಂದ 15 ತಾರೀಖಿನ ಒಳಗೆ ಖಾತೆ ತೆರೆದವರು 15ರ ಒಳಗೆ ಮತ್ತು 15ರಿಂದ 30ನೇ ತಾರೀಕಿನೊಳಗೆ ಖಾತೆ ತೆರೆದಿದ್ದರೆ 30ರ ಒಳಗೆ ಪ್ರೀಮಿಯಂ ಗಳನ್ನು ಪತಿ ತಿಂಗಳು ತಪ್ಪದೇ ಪಾವತಿಸಬೇಕು.
ಈ ಸುದ್ದಿ ಓದಿ:- ಕುರಿ, ಕೋಳಿ ಸಾಕಾಣಿಕೆಗೆ 25 ರಿಂದ 50 ಲಕ್ಷ ರೂಪಾಯಿಗಳ ಸಹಾಯಧನ, ಇಂದೇ ಅರ್ಜಿ ಸಲ್ಲಿಸಿ.!
* ನಾಮಿನಿ ಫೆಸಿಲಿಟಿ ಕೂಡ ಲಭ್ಯ ಇರುತ್ತದೆ ಒಂದು ವೇಳೆ ಹೂಡಿಕೆದಾರ ಅಕಸ್ಮಾತ್ ಆಗಿ ಮ’ರ’ಣ ಹೊಂದಿದ್ದರೆ ಕಾನೂನುತ್ಮಕವಾಗಿ ಸೇರಬೇಕಾದ ಮೊತ್ತವು ಆತ ಸೂಚಿಸಿದ ನಾಮಿನಿಗೆ ಹೋಗುತ್ತದೆ
* 5 ವರ್ಷ ಮುಗಿದ ನಂತರ ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಗೆ ಯೋಜನೆ ಮೆಚುರಿಟಿ ಹಣವು ಜಮೆ ಆಗುತ್ತದೆ. ಒಂದು ವೇಳೆ ನೀವು ಮಧ್ಯದಲ್ಲಿ ಹಣ ಪಾವತಿ ಮಾಡುವುದು ನಿಲ್ಲಿಸಿದರೆ ಮೂರು ವರ್ಷಗಳ ನಂತರ ಯೋಜನೆಯನ್ನು ಕ್ಲೋಸ್ ಮಾಡಿಕೊಳ್ಳಬಹುದು. ಆಗ ಉಳಿತಾಯ ಖಾತೆ ಮೇಲೆ ಸಿಗುವ ಬಡ್ಡಿದರವಷ್ಟೇ (4%) ಅನ್ವಯಿಸಿ ನೀಡಲಾಗುತ್ತದೆ.
* ಒಂದು ವರ್ಷ ತುಂಬಿದ ಬಳಿಕ ನಿಮ್ಮ ಉಳಿತಾಯ ಅರ್ಧದಷ್ಟು ಹಣವನ್ನು ಸಾಲ ಪಡೆದುಕೊಳ್ಳಬಹುದು
* ನೀವೇನಾದರೂ ಪ್ರತಿ ತಿಂಗಳು ಈ ಯೋಜನೆಯಡಿ 10,000 ಪ್ರೀಮಿಯಂ ಪಾವತಿಸಿದರೆ ಐದು ವರ್ಷಗಳಾದ ಬಳಿಕ 7 ಲಕ್ಷ ಹಣವು ನಿಮ್ಮ ಕೈ ಸೇರಲಿದೆ. ಖಾತೆ ತೆರೆಯಲು ಇಚ್ಚಿಸಿದರೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ಕೊಡಿ.
ಬೇಕಾಗುವ ದಾಖಲೆಗಳು:-
1. ಇತ್ತೀಚಿನ ಭಾವಚಿತ್ರ
2. ಆಧಾರ್ ಕಾರ್ಡ್
3. ಪ್ಯಾನ್ ಕಾರ್ಡ್
4. ಮೊಬೈಲ್ ಸಂಖ್ಯೆ.