ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000, 3 ತಿಂಗಳಿಗೆ 60,000, ವರ್ಷಕ್ಕೆ 2,40,000 ಹಣ ಪಡೆಯಬಹುದು.! ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

 

WhatsApp Group Join Now
Telegram Group Join Now

ನಿವೃತ್ತರಾದ ಹಿರಿಯ ವಯಸ್ಕರಿಗೂ ಅವರದ್ದೇ ಆದ ಖರ್ಚು ವೆಚ್ಚಗಳು ಇರುತ್ತವೆ. ದುಡಿಯುತ್ತಾ ಇರುವಾಗ PPF, NPS ಮತ್ತ್ಯಾವುದೋ ಯೋಜನೆಗೆ ಮೂಲಕ ಸ್ವಲ್ಪ ಹಣ ಉಳಿತಾಯ ಮಾಡಿದ್ದರು ಅದನ್ನು ಹಾಗೆಯೇ ಬಳಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಹಣವನ್ನು ಒಂದೊಳ್ಳೆ ಯೋಜನೆಯಲ್ಲಿ ಹೂಡಿಕೆ ಮಾಡಿ ಅದರ ಮೂಲಕ ಬರುವ ಲಾಭವನ್ನು ಪ್ರತಿ ತಿಂಗಳ ಖರ್ಚಿಗಾಗಿ ಇಟ್ಟುಕೊಳ್ಳಬಹುದು.

ಈ ರೀತಿ ಯೋಚಿಸುವವರಿಗೆ ಅನುಕೂಲ ಆಗಲಿ ಎಂದು ಕೇಂದ್ರ ಸರ್ಕಾರವು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಜಾರಿಗೆ ತಂದಿದೆ. ಯೋಜನೆ ಕುರಿತ ಪ್ರಮುಖ ಮಾಹಿತಿಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.
ಯೋಜನೆ ಹೆಸರು:- ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Saving Scheme)

ಕೇಂದ್ರ ಸರ್ಕಾರದ ಹೊಸ ಟರ್ಮ್ ಇನ್ಸೂರೆನ್ಸ್.! ಪೋಸ್ಟ್ ಆಫೀಸ್ ನಲ್ಲಿ ಕೇವಲ 399 ರೂಪಾಯಿ ಕಟ್ಟಿ ಸಾಕು ಸಿಗುತ್ತದೆ 10 ಲಕ್ಷ ಜೀವ ವಿಮೆ ಸಿಗುತ್ತೆ.! ನಿಮ್ಮ ಕುಟುಂಬದ ಸುರಕ್ಷತೆಗಾಗಿ ಈ ಪಾಲಿಸಿ.!

● ಭಾರತದ ನಾಗರಿಕರು ಮಾತ್ರ ಈ ಯೋಜನೆಗೆ ಅರ್ಹರು.
● 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಷ್ಟೇ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ, ಆದರೆ ನೀವು ಎಕ್ಸ್ ಸರ್ವಿಸ್ ಮ್ಯಾನ್ ಆಗಿದ್ದರೆ 50 ವರ್ಷಕ್ಕೆ ಈ ಯೋಜನೆಯಡಿ ಹೂಡಿಕೆ ಮಾಡಬಹುದು.
● ಈ ಯೋಜನೆಯಡಿ ಹೂಡಿಕೆ ಮಾಡಿದ 8% ಬಡ್ಡಿದರ ನಿಗದಿಯಾಗಿದೆ.

● ವರ್ಷದಲ್ಲಿ 4 ಬಾರಿ ಅಂದರೆ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಅನ್ವಯವಾಗುವ ಬಡ್ಡಿದರವು ಲಾಭದ ರೂಪದಲ್ಲಿ ನಿಮ್ಮ ಉಳಿತಾಯ ಖಾತೆಗೆ ಬರುತ್ತದೆ.
● ಮಾರ್ಚ್ 31, ಜೂನ್ 30, ಸೆಪ್ಟೆಂಬರ್ 30 ಮತ್ತು ಡಿಸೆಂಬರ್ 31 ಈ ದಿನಾಂಕಗಳಂದು ನಿಮ್ಮ ಉಳಿತಾಯ ಖಾತೆಗೆ ಇಂಟರೆಸ್ಟ್ ಹಣ ಜಮೆ ಆಗುತ್ತದೆ.
● ಈ ಯೋಜನೆಯಡಿ ನೀವು ಹೂಡಿಕೆ ಮಾಡಲು ಬಯಸುವ ಮೊತ್ತವನ್ನು ಒಂದೇ ಬಾರಿಗೆ ಹೂಡಿಕೆ ಮಾಡಬೇಕು.

ರಾಜ್ಯದ ಜನತೆಗೆ ಮತ್ತೊಂದು ಸಿಹಿಸುದ್ದಿ.! ಗೃಹ ಆರೋಗ್ಯ ಯೋಜನೆ ಜಾರಿ.! ಶುಗರ್, ಕಿಡ್ನಿ ವೈಫಲ್ಯ, B.P, ಕ್ಯಾನ್ಸರ್ ಇನ್ನಿತರ ಸಮಸ್ಯೆಗೆ ಮನೆ ಮನೆಗೂ ಔಷದಿ ಕಿಟ್ ವಿತರಣೆ.!

● ಯೋಜನೆ ಮೆಚ್ಯುರಿಟಿ ಅವಧಿ 5 ವರ್ಷಗಳು, ಈ ಅವಧಿ ಮುಗಿದ ಬಳಿಕವು ಮುಂದುವರೆಸುವ ಇಚ್ಛೆ ಇದ್ದರೆ ಅದಕ್ಕೂ ಅವಕಾಶವಿದೆ.
● ಈಗಾಗಲೇ ನೀವು ಒಂದು ಬಾರಿ ಖಾತೆ ತೆರೆದು ಹಣ ಹೂಡಿಕೆ ಮಾಡಿದ್ದೀರಾ ಮತ್ತೊಮ್ಮೆ ನಿಮ್ಮ ಬಳಿ ಹಣ ಇದೆ, ಈಗ ಅದನ್ನು ಹಳೆ ಯೋಜನೆಗೆ ಸೇರಿಸಬಹುದೇ ಎಂದರೆ ಸಾಧ್ಯವಿಲ್ಲ, ನೀವು ಮತ್ತೊಮ್ಮೆ ಹೊಸ ಖಾತೆಯಲ್ಲಿ ಹೂಡಿಕೆ ಮಾಡಬೇಕು.
● ಕನಿಷ್ಠ 1,000 ದಿಂದ ಗರಿಷ್ಠ 30 ಲಕ್ಷದವರೆಗೆ ಹಣ ಹೂಡಿಕೆ ಮಾಡಬಹುದು.

● ಉದಾಹರಣೆಯೊಂದಿಗೆ ವಿವರಿಸುವುದಾದರೆ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು 30 ಲಕ್ಷ ಹಣವನ್ನು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಯೋಜನೆಯಡಿ ಹೂಡಿಕೆ ಮಾಡಿದ್ದಾರೆ ಎಂದುಕೊಳ್ಳೋಣ. ಈಗ ಅವರಿಗೆ 8% ಬಡ್ಡಿದರದಲ್ಲಿ, 5 ವರ್ಷ ಮುಗಿದ ಬಳಿಕ ಸಿಗುವ ಮೊತ್ತ 42 ಲಕ್ಷವಾಗಿರುತ್ತದೆ. ಅಂದರೆ ಬರೋಬ್ಬರಿ 12 ಲಕ್ಷ ಹಣವನ್ನು ನೀವು ಲಾಭವಾಗಿ ಪಡೆದಿರುತ್ತೀರಿ. ಪ್ರತಿ ತ್ರೈಮಾಸಿಕವಾಗಿ ಈ ಬಡ್ಡಿ ಜನರೇಟ್ ಆಗಿರುವುದರಿಂದ ಅದನ್ನ ನೀವು ತ್ರೈಮಾಸಿಕವಾಗಿ ಪಡೆದು ಬಳಸುವುದರಿಂದ ಪ್ರತಿ ತ್ರೈಮಾಸಿಕದ ಲೆಕ್ಕ ಹೇಳುವುದಾದರೆ 60,000ರೂ. ಅಂದರೆ ತಿಂಗಳಿಗೆ 20,000 ನಿಮ್ಮ ಆದಾಯವಾಗುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದ್ದವರಿಗೆ ಶಾ-ಕಿಂಗ್ ನ್ಯೂಸ್ 90 ಸಾವಿರ ಅರ್ಜಿ ರಿಜೆಕ್ಟ್.! ಈ ಲಿಂಕ್ ಮೂಲಕ ಚೆಕ್ ಮಾಡಿ ನಿಮ್ಮ ಅರ್ಜಿ ಸ್ಥಿತಿ ಹೇಗಿದೆ ಅಂತ.!

● ನೀವೇನಾದರೂ 10 ಲಕ್ಷ ಹಣವನ್ನು ಹೂಡಿಕೆ ಮಾಡಿದ್ದರೆ ಅಂತ್ಯದಲ್ಲಿ 14 ಲಕ್ಷ ಹಣವನ್ನು ಪಡೆದಿರುತ್ತೀರಿ. 4 ಲಕ್ಷವು ನಿಮಗೆ ಬಡ್ಡಿರೂಪದಲ್ಲಿ ಬಂದಿರುತ್ತದೆ ಅಂದರೆ ಪ್ರತಿ ತ್ರೈಮಾಸಿಕಕ್ಕೆ 20,000ರೂ. ಹಣ ನಿಮ್ಮ ಖಾತೆಗೆ ಬರುತ್ತದೆ.
● ನೀವು ಈ ಯೋಜನೆಯಲ್ಲಿ ಹೂಡಿಕೆ ಹಣಕ್ಕೆ 1.5 ಲಕ್ಷದವರೆಗೆ 80C ನಿಯಮದಡಿ ತೆರಿಗೆ ವಿನಾಯಿತಿ ಇದೆ.ನೀವು ಪಡೆಯುವ ಲಾಭವು ವಾರ್ಷಿಕವಾಗಿ 60,000 ಮೇಲಿದ್ದರೆ TDS ಕೂಡ ಅನ್ವಯವಾಗುತ್ತದೆ.

● ಮೆಚ್ಯುರಿಟಿ ಅವಧಿಗೂ ಮುನ್ನ ನೀವು ಹೂಡಿಕೆ ಹಿಂಪಡೆಯುವುದಾದರೆ ದಂಡ ಕೂಡ ಬೀಳುತ್ತದೆ. 1 ವರ್ಷದ ಒಳಗಾದರೆ ನಿಮ್ಮ ಖಾತೆಗೆ ಬಿದ್ದ ಬಡ್ಡಿ ಮೊತ್ತವನ್ನು ಕಳೆದು ಹಣ ಮಾಡಲಾಗುತ್ತದೆ. 1-2 ವರ್ಷದಲ್ಲಿ ಹಿಂಪಡೆಯುವುದಾದರೆ 1.5% ಹಣವನ್ನು ಫೈನ್ ಆಗಿ ಕಡಿತಗೊಳಿಸಲಾಗುತ್ತದೆ. 2-5 ವರ್ಷಗಳಲ್ಲಿ ಹಿಂಪಡೆಯುವುದಾದರೆ ಹೂಡಿಕೆಯ 1% ಕಡಿತಕೊಳ್ಳುತ್ತದೆ.
● ಒಂದು ವೇಳೆ ಹೂಡಿಕೆದಾರರು ಮೃ’ತ ಪಟ್ಟರೆ ಅಸಲು ಹಾಗೂ ಬಡ್ಡಿರೂಪದ ಹಣ ನಾಮಿನಿಗೆ ಸೇರುತ್ತದೆ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now