ಸರ್ಕಾರದ ಗ್ಯಾರಂಟಿ ಯೋಜನೆ ಭಾಗವಾದ ಗೃಹಜ್ಯೋತಿ ಯೋಜನೆಯಿಂದ (Gruhajyothi Guarantee Scheme) ಪ್ರತಿ ಕುಟುಂಬವು ಕೂಡ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದೆ. ಇದರ ಬೆನ್ನಲ್ಲಿಯೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ರಾಜ್ಯದ್ಯಂತ ಎಲ್ಲ ವರ್ಗದ ಗ್ರಾಹಕರಿಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ (Prepaid Smart Meter) ಅಳವಡಿಸಲು ಕರಡು ನಿಯಮಗಳ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕದ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕೈಗೊಂಡಿರುವ ಈ ಕ್ರಮದಿಂದ ESCOM ಗಳಿಗೆ ವಾರ್ಷಿಕ ಭದ್ರತಾ ಠೇವಣಿ (ESD) ಪಾವತಿಗೆ ಹೆಚ್ಚಿನ ಉಳಿತಾಯದ ದಾರಿಯಾಗುತ್ತದೆ ಎಂದು ಪರೀಗಣಿಸಲಾಗಿದೆ. ಅದಷ್ಟೇ ಅಲ್ಲದೇ ಬಿಲ್ಲಿಂಗ್ ಸಮಯದಲ್ಲಿ ವಿದ್ಯುತ್ ಬಳಕೆಯನ್ನು ತಿದ್ದುವ ಪ್ರಯತ್ನಗಳನ್ನು ನಡೆಯುತ್ತಿವೆ ಎನ್ನುವ ಆರೋಪಕ್ಕೆ ಪರಿಹಾರ ಮಾರ್ಗವೂ ಆಗಲಿದೆ. ಯಾಕೆಂದರೆ, ಈ ಎಲೆಕ್ಟ್ರಿಕ್ ಮೀಟರ್ಗಳು ಮೊಬೈಲ್ ಫೋನ್ಗಳಿಗೆ ಪ್ರಿಪೇಯ್ಡ್ ಕರೆನ್ಸಿ ಯೋಜನೆ ರೀತಿಯಲ್ಲಿ ಕೆಲಸ ಮಾಡಲಿವೆ.
ಈ ಪ್ರಿಪೇಡ್ ಸ್ಮಾರ್ಟ್ ಮೀಟರ್ ಗಳನ್ನು ಗ್ರಾಹಕರ ಸ್ಮಾರ್ಟ್ ಫೋನ್ ಗಳಿಗೆ ಲಿಂಕ್ ಮಾಡುವುದರಿಂದ ಅವರು ಆರಿಸಿಕೊಳ್ಳುವಷ್ಟು ಯೂನಿಟ್ ಮಾಸಿಕ ಪವರ್ ಕೋಟಾ (Monthly power Quota) ಖಾಲಿಯಾದಾಗ ಗ್ರಾಹಕರು ನೋಟಿಫಿಕೇಶನ್ ಪಡೆಯುತ್ತಾರೆ. ಹೆಚ್ಚಿನ ವಿದ್ಯುತ್ ಬಳಕೆ ಅವಶ್ಯಕತೆ ಇದ್ದಾಗ ರಿಚಾರ್ಜ್ ಸಹ ಮಾಡಬಹುದಾಗಿದೆ ಎಂದು KERC ಮಾಹಿತಿ ನೀಡಿದೆ
ಈ ಸ್ಮಾರ್ಟ್ ಮೀಟರ್ ಅಳವಡಿಕೆ ತಂತ್ರದಿಂದಾಗಿ ಮಾಸಿಕ ಬಳಕೆಯ ವಿದ್ಯುತ್ತನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಹಾಯ ಆಗುತ್ತದೆ ಎಂದು ಆಯೋಗ ಊಹಿಸಿದೆ. ಕಳೆದ ಬುಧವಾರ ವಿದ್ಯುತ್ ಇಲಾಖೆ ಅಧಿಕಾರಿ ಹಾಗೂ ಮುಖ್ಯಸ್ಥರೊಂದಿಗೆ ನಡೆದ ಸಭೆ ಬಳಿಕ ಈ ರೀತಿ ಒಂದು ನಿರ್ಧಾರಕ್ಕೆ ಬರಲಾಗಿದೆ KERC ಈ ಅಧಿಸೂಚನೆಗೆ ಕುರಿತು ಏನೇ ಆಕ್ಷೇಪಣೆಗಳು, ಸಲಹೆಗಳು ಇದ್ದಲ್ಲಿ 30 ದಿನಗಳಲ್ಲಿ ಸಲ್ಲಿಸುವಂತೆ ಆಯೋಗವು ಸೂಚಿಸಿದೆ.
ಕರ್ನಾಟಕದಲ್ಲಿ 2 ಕೋಟಿ ಹೆಚ್ಚು ESCOM ಗ್ರಾಹಕರಿದ್ದಾರೆ. ಇವರ ಕಡೆಯಿಂದ ಠೇವಣಿ ASDಯಾಗಿ 9,108 ಕೋಟಿ ಹಣ ಸಂಗ್ರಹಣೆಯಾಗಿದೆ. ಆದರೆ ಬಹು ವರ್ಷಗಳಿಂದ ಗ್ರಾಹಕರು ಪ್ರಿಪೇಯ್ಡ್ ಮೀಟರ್ ಅಳವಡಿಸುವಂತೆ ಬೇಡಿಕೆ ಸಲ್ಲಿಸುತ್ತಲೇ ಇದ್ದರು. 2011 ರಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಆರಂಭಿಸುವ ಪ್ರಯತ್ನವು ನಡೆದಿತ್ತು.
ಸದ್ಯಕ್ಕೆ ತಾತ್ಕಾಲಿಕವಾಗಿ ಸರ್ಕಾರಿ ಕಛೇರಿಗಳಲ್ಲಿ ಪ್ರಿಪೇಯ್ಡ್ ಮೀಟರ್ ಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಿದೆ. ಈ ಪ್ರಿಪೇಯ್ಡ್ ಮೀಟರ್ಗಳನ್ನು ಅಳವಡಿಸಿಕೊಳ್ಳುವ ಹೊರೆಯು ಕೂಡ ಗ್ರಾಹಕರ ಮೇಲೆ ಬೀಳಬಹುದು ಅವುಗಳ ಸಾಮರ್ಥ್ಯದ ಆಧಾರದ ಮೇಲೆ ಅವುಗಳ ಬೆಲೆ ನಿರ್ಧಾರವಾಗಿರುತ್ತದೆ. ಮಾರುಕಟ್ಟೆಯಲ್ಲಿ 6,000 ಇಂದ 13000 ವರೆಗೂ ಕೂಡ ಈ ಪ್ಲೀಪೇಯ್ಡ್ ಮೀಟರ್ ಗಳು ದೊರೆಯುತ್ತವೆ.
ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ.!
ಎಲ್ಲಾ ಯೋಜನೆಗಳಲ್ಲೂ ಸಾಧಕ ಬಾದಕಗಳು ಇರುವಂತೆ, ಒಂದೆಡೆ ಈ ರೀತಿ ಪ್ರಿಪೇಯ್ಡ್ ಮೀಟರ್ ಅಳವಡಿಕೆಯಿಂದ ವಿದ್ಯುತ್ ದುರ್ಬಳಕೆ ತಡೆಗಟ್ಟಬಹುದು, ಮಿತವಾಗಿ ವಿದ್ಯುತ್ತನ್ನು ಬಳಕೆ ಮಾಡಿ, ವಿದ್ಯುತ್ ಬಳಕೆ ರೀಡಿಂಗ್ ತಿದ್ಧುವುದನ್ನು ತಪ್ಪಿಸುವುದು ಸಾಧ್ಯವಾಗುತ್ತದೆ ಎನ್ನುವುದು ಎಷ್ಟು ನಿಜವೋ ಅದೇ ರೀತಿ ಪ್ರಿಪೇಯ್ಢ್ ಮೀಟರ್ ಅನ್ನು ಕೂಡ ಗ್ರಾಹಕರ ಬಳಕೆ ಅನುಗುಣವಾಗಿ ಪ್ರೋಗ್ರಾಮ್ ಚೇಂಜ್ ಮಾಡಿ ಬಳಸಬಹುದಾದ್ದರಿಂದ ವಿದ್ಯುತ್ ಕ’ಳ್ಳ’ತ’ನ ಆಗುವ ಸಾಧ್ಯತೆ ಇದೆ ಎನ್ನುವ ಕಡೆಯೂ ಅಧಿಕಾರಿಗಳ ಗಮನ ಹೋಗಿದೆ. ಆದರೂ ಆಯೋಗ ಕೈಗೊಂಡಿರುವ ಈ ಕ್ರಮ ದೇಶೀಯ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವರದಾನವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.