PPF Scheme (Public Provident fund) ಎನ್ನುವುದು ಸರ್ಕಾರದ ಯೋಜನೆ ಆಗಿರುವುದರಿಂದ ನೀವು ಹೂಡಿಕೆ ಮಾಡುವ ಹಣಕ್ಕೆ 100% ಭದ್ರತೆ ಇರುತ್ತದೆ. ಅಂಚೆ ಕಚೇರಿಯಲ್ಲಿ ಇರುವ 13ಕ್ಕೂ ಹೆಚ್ಚು ಯೋಜನೆಗಳಲ್ಲಿ PPF ಕೂಡ ಒಂದು. PPF ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡುವುದರಿಂದ ಗ್ರಾಹಕರಿಗೆ ಎಷ್ಟೆಲ್ಲ ಉಪಯೋಗ ಆಗುತ್ತದೆ.
ಪ್ರಸ್ತುತವಾಗಿ ಅಂಚೆ ಕಛೇರಿಯ ಎಲ್ಲಾ ಯೋಜನೆಗಳು ಬಡ್ಡಿದರ ಪರಿಷ್ಕೃತಗೊಂಡಿರುವುದರಿಂದ PPF ನಲ್ಲಿ ಈಗ ಎಷ್ಟು ಹೂಡಿಕೆಗೆ ಎಷ್ಟು ಲಾಭ ಸಿಗುತ್ತದೆ? ಮತ್ತು ಯಾರು ಈ ಯೋಜನೆಯನ್ನು ಖರೀದಿಸಬೇಕು? ಇದಕ್ಕಿರುವ ಕಂಡೀಶನ್ ಗಳಿಗೇನು? ಎನ್ನುವ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
* PPF ದೀರ್ಘಾವಧಿ ಹೂಡಿಕೆಯ ಪ್ಲಾನ್ ಆಗಿರುತ್ತದೆ
* PPFನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಮತ್ತು ಇದರ ಲಾಭಕ್ಕೆ ಆದಾಯ ತೆರಿಗೆ ವಿನಾಯಿತಿ ಕೂಡ ಇರುತ್ತದೆ
* ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ರೂ. 500 ರಿಂದ ಗರಿಷ್ಠ ರೂ.1,50,000 ದವರೆಗೆ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಹಣವನ್ನು ವಾರ್ಷಿಕವಾಗಿ ಒಂದೇ ಬಾರಿ ಕೂಡ ಡೆಪಾಸಿಟ್ ಮಾಡಬಹುದು ಅಥವಾ ಪ್ರತಿ ತಿಂಗಳು ಕೂಡ ಇನ್ಸ್ಟಾಲ್ಮೆಂಟ್ ಮಾದರಿಯಲ್ಲಿ ಡೆಪಾಸಿಟ್ ಮಾಡಬಹುದು. ಯೋಜನೆ ಆರಿಸುವಾಗಲೇ ಈ ಆಪ್ಷನ್ ಸೆಲೆಕ್ಟ್ ಮಾಡಬೇಕು.
* ಪುಸ್ತುತವಾಗಿ PPF ಯೋಜನೆಗೆ 7.1% ಬಡ್ಡಿದರ ಅನ್ವಯವಾಗುತ್ತಿದೆ.
* PPF ಖಾತೆ ತೆರೆಯಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ
* ಒಬ್ಬ ವ್ಯಕ್ತಿ ಒಂದು PPF ಖಾತೆ ತೆರೆಯಲು ಮಾತ್ರ ಅವಕಾಶ
* ಈ ಯೋಜನೆಯ ಮೆಚ್ಯುರಿಟಿ ಅವಧಿ 15 ವರ್ಷಗಳು ಮತ್ತು ಆಸಕ್ತಿ ಇದ್ದವರು ಇನ್ನೂ ಐದು ವರ್ಷಗಳಿಗೆ ಇದನ್ನು ವಿಸ್ತರಿಸಬಹುದು.
* ಯೋಜನೆ ಖರೀದಿಸಿ ಮೂರು ವರ್ಷ ಆದ ಬಳಿಕ ಸಾಲ ಸೌಲಭ್ಯ ಕೂಡ ಸಿಗುತ್ತದೆ ಅಥವಾ ನಿಮ್ಮ ಹೂಡಿಕೆಯ 25% ಸಾಲ ಪಡೆಯಬಹುದು
* ಮೆಡಿಕಲ್ ಮ್ಯಾರೇಜ್ ಎಜುಕೇಶನ್ ಇತ್ಯಾದಿ ಕಾರಣಗಳಿಂದಾಗಿ ಮೆಚುರಿಟಿ ಅವಧಿಗೂ ಮುನ್ನ ಯೋಜನೆಯನ್ನು ಕ್ಲೋಸ್ ಮಾಡುವುದಾದರೆ 7.1%-1%=6.1% ಬಡ್ಡಿದರ ಅನ್ವಯವಾಗುತ್ತದೆ. ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಇಲ್ಲವಾದಲ್ಲಿ ಪ್ರಿ ಮೆಚ್ಯುರ್ ವಿತ್ ಡ್ರಾವಲ್ ಮಾಡುವುದಾದರೆ ಐದು ವರ್ಷ ತುಂಬಿದ ಬಳಿಕ ನಿಮ್ಮ ಹೂಡಿಕೆ 50% ವಾಪಸ್ ಪಡೆಯಬಹುದು
* ಯಾವುದೇ ಅಂಚೆ ಕಚೇರಿಯಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಹಾಗೂ ಖಾಸಗಿ ಬ್ಯಾಂಕ್ ಗಳಲ್ಲಿ ಕೂಡ PPF ಖಾತೆ ತೆರೆಯಬಹುದು.
ಬೇಕಾಗುವ ದಾಖಲೆಗಳು:-
1.ಆಧಾರ್ ಕಾರ್ಡ್
2. ಪಾನ್ ಕಾರ್ಡ್
3. ಇತ್ತೀಚಿನ ಭಾವಚಿತ್ರ
4. ಮೊಬೈಲ್ ಸಂಖ್ಯೆ
5. ನೀವು ಹೂಡಿಕೆ ಮಾಡುವ ಮೊತ್ತದ ಹಣ ಅಥವಾ ಚೆಕ್
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ
* ಉದಾಹರಣೆಯೊಂದಿಗೆ ಈ ಹೂಡಿಕೆ ಬಗ್ಗೆ ಲೆಕ್ಕ ಹಾಕುವುದಾದರೆ ನೀವು ಪ್ರತಿ ತಿಂಗಳು ರೂ.500 ಈ ಯೋಜನೆಗೆ ಹೂಡಿಕೆ ಮಾಡಿದರೆ 15 ವರ್ಷಗಳಲ್ಲಿ ನಿಮ್ಮ ಹೂಡಿಕೆಯ ಮೊತ್ತ ರೂ.90,000 ಆಗಿರುತ್ತದೆ. ಆ ಹಣಕ್ಕೆ 7.1% ಬಡ್ಡಿ ದರ ಅನ್ವಯ 67,784.02 ಲಾಭ ಬರುತ್ತದೆ ಒಟ್ಟು ನೀವು ಯೋಜನೆ ಮುಗಿದ ಬಳಿಕ ಹಿಂಪಡೆಯುವ ಹಣದ ಮೊತ್ತ ರೂ.1,57,784.02
* ಈ ಯೋಜನೆಯ ಗರಿಷ್ಠ ಹೂಡಿಕೆ ಮೊತ್ತ ವಾರ್ಷಿಕವಾಗಿ 1.5 ಲಕ್ಷ ಆಗಿರುವುದರಿಂದ, ನೀವು 1.5 ಲಕ್ಷ ಹೂಡಿಕೆ ಮಾಡಿದರೆ 15 ವರ್ಷಕ್ಕೆ ನಿಮ್ಮ ಒಟ್ಟು ಹೂಡಿಕೆ ರೂ.22,50,000 ಆಗಿರುತ್ತದೆ. ರೂ.18,18,209 ಬಡ್ಡಿ ಅನ್ವಯವಾಗುತ್ತದೆ, ನೀವು ಕೊನೆಯಲ್ಲಿ ಒಟ್ಟಾರೆಯಾಗಿ ಹಿಂಪಡೆಯುವ ಮೊತ್ತ 40,68,209.04 ಆಗಿರುತ್ತದೆ.
* ನೀವು ಪ್ರತಿ ತಿಂಗಳು ಹಣ ಡೆಪಾಸಿಟ್ ಮಾಡುವುದಾದರೆ ಪ್ರತಿ ತಿಂಗಳ 5ನೇ ತಾರೀಖಿನ ಒಳಗಡೆ ಮಾಡಬೇಕು, ವಾರ್ಷಿಕವಾಗಿ ಹಣ ಡೆಪಾಸಿಟ್ ಮಾಡುವ ಆಪ್ಷನ್ ಆರಿಸಿದರೆ ಏಪ್ರಿಲ್ 5 ರ ಒಳಗಡೆ ಡೆಪಾಸಿಟ್ ಮಾಡಬೇಕು.