ಇತ್ತೀಚಿನ ದಿನಗಳಲ್ಲಿ ಹೃದಯದ ಸಮಸ್ಯೆ ಹಾಗೂ ಹೃ.ದ.ಯ.ಘಾ.ತದಂತ ಪ್ರಕರಣಗಳ ಬಗ್ಗೆ ಹೆಚ್ಚು ಓದುತ್ತಿದ್ದೇವೆ ಅದರಲ್ಲೂ ಕೂಡ 30 ಹಾಗೂ 40 ರ ಆಸು ಪಾಸಿನವರು ಈ ರೀತಿ ಹೃ.ದ.ಯಾ.ಘಾ.ತ.ದಿಂದ ಅಕಾಲಿಕ ಮ.ರ.ಣ.ಕ್ಕೆ ತುತ್ತಾಗುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಈ ರೀತಿ ಹೃ.ದ.ಯ.ಘಾ.ತ.ಕ್ಕೆ ಒಳಗಾಗುವವರ ಸಂಖ್ಯೆ ಭಾರತದಲ್ಲೂ ಗಣನೀಯ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಈ ರೀತಿ ಹೃ.ದ.ಯಾ.ಘಾ.ತ.ದ ಸಮಸ್ಯೆಗೆ ಹಲವಾರು ಕಾರಣಗಳಿವೆ. ಅತಿಯಾದ ಒತ್ತಡ, ಸರಿಯಾದ ಜೀವನ ಕ್ರಮ ಇಲ್ಲದೆ ಇರುವುದು ಮತ್ತು ನಾವು ಸೇವಿಸುತ್ತಿರುವ ಆಹಾರ ಪದಾರ್ಥ ಕಲುಷಿತವಾಗಿರುವುದು ಜೊತೆಗೆ ದೇಹವನ್ನು ದಂಡಿಸಿ ಮಾಡುವ ಕೆಲಸಗಳಿಂದ ಮನುಷ್ಯ ದೂರ ಉಳಿಯುತ್ತಿರುವುದು ಇನ್ನೂ ಹತ್ತು ಹಲವಾರು ಕಾರಣಗಳನ್ನು ಇದಕ್ಕೆ ನೀಡಲಾಗಿದೆ. ಇವೆಲ್ಲದರಲ್ಲಿ ನಾವು ಸೇವಿಸುತ್ತಿರುವ ಆಹಾರ ಪದಾರ್ಥದಿಂದ ಹೃದಯದ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತಿರುವ ಅಂಶಗಳು ದೇಹವನ್ನು ಸೇರುತ್ತದೆ ಎನ್ನುವುದೇ ಹೆಚ್ಚು ಅಪಾಯಕಾರಿ ಎನ್ನಲಾಗಿದೆ.
ಅಂತಹ ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ಹೇಳಲಾಗಿದೆ. ಮೊದಲನೇದಾಗಿ ಜಂಕ್ ಫುಡ್ ಗಳು ಹಾಗೂ ಫಾಸ್ಟ್ ಫುಡ್ ಗಳು. ಮನುಷ್ಯನ ಮನಸ್ಸೇ ಹಾಗೇ ಅವನಿಗೆ ಯಾವುದು ಇಷ್ಟವಾದರೂ ಅದರ ಒಳಿತು ಕೆಡಕು ಯೋಚನೆ ಮಾಡದೆ ಅದಕ್ಕೆ ದಾಸನಾಗಿ ಬಿಡುತ್ತಾನೆ. ನಮ್ಮ ಹಿರಿಯರು ಒಂದು ಮಾತು ಹೇಳುತ್ತಿದ್ದರು ಯಾವ ಪದಾರ್ಥವು ನಾಲಿಗೆಗೆ ರುಚಿ ಕೊಡುತ್ತದೆ ಅದು ದೇಹಕ್ಕೆ ಅನಾರೋಗ್ಯ ಉಂಟು ಮಾಡುತ್ತದೆ ಹಾಗೆ ನಾಲಿಗೆಗೆ ಕಹಿ ಇರುವ ಪದಾರ್ಥವು ದೇಹ ಶುದ್ದಿಗೆ ಸಹಕಾರಿಯಾಗುತ್ತದೆ ಎಂದು ಈ ಮಾತಿನಂತೆ ಜಂಕ್ ಫುಡ್ ಗಳು ಹಾಗೂ ಪಾಸ್ಟ್ ಫುಡ್ ಗಳು ಎಂದು ಹೇಳಲಾಗುವ ಅನೇಕ ಆಹಾರ ಪದಾರ್ಥಗಳು ಹೃದಯದ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಅನೇಕ ವರದಿಗಳು ಹೇಳಿದೆ ಹಾಗಾಗಿ ಇಂತಹ ಆಹಾರ ಪದಾರ್ಥಗಳಿಂದ ದೂರ ಇರುವುದು ಒಳ್ಳೆಯದು.
ಯಾವಾಗಲೂ ನಾವು ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾಕೆಂದರೆ ಶುಚಿಯಾಗಿ ಹಾಗೂ ರುಚಿಯಾಗಿ ಮತ್ತು ಗಮನವಿಟ್ಟು ಒಳ್ಳೆಯ ಅಂಶಗಳನ್ನು ಆರಿಸಿ ಮನೆಯಲ್ಲಿ ಆಹಾರ ತಯಾರಿಸುತ್ತಾರೆ ಆದರೆ ಹೊರಗಡೆ ತಿನ್ನುವ ಹೋಟೆಲ್ ಊಟಗಳು ಅಥವಾ ಹೊರಗಡೆ ಖರೀದಿಸಿ ತಿನ್ನಲಾಗುವ ಪ್ಯಾಕ್ ಮಾಡಿರುವ ಆಹಾರ ಪದಾರ್ಥಗಳು ಯಾವ ರೀತಿ ತಯಾರಿಸಲ್ಪಟ್ಟಿದೆ ಹಾಗೂ ಎಷ್ಟು ದಿನವಾಗಿದೆ ಎನ್ನುವುದರ ಅಂದಾಜು ನಮಗೆ ಇರುವುದಿಲ್ಲ ಇಂತಹವುಗಳನ್ನು ಹಸಿವು ಕಡಿಮೆ ಮಾಡಿಕೊಳ್ಳಲು ನಾವು ತಿಂದರೂ ಕೂಡ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನಾವು ಸಮಯಕ್ಕೆ ಸರಿಯಾಗಿ ಹಾಗೂ ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಅನೇಕ ಕಾಯಿಲೆಗಳಿಂದ ರಕ್ಷಿಸಿಕೊಳ್ಳಬಹುದು.
ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳು ಮನುಷ್ಯರಿಗೆ ಬಹಳ ಇಷ್ಟವಾಗುತ್ತವೆ ಇಂತಹ ಆಹಾರ ಪದಾರ್ಥಗಳನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಬಹಳ ಇಷ್ಟಪಟ್ಟು ತಿನ್ನುತ್ತಾರೆ ಆದರೆ ಪ್ರತಿದಿನ ಕೂಡ ಈ ರೀತಿ ಕರಿದ ಆಹಾರ ಪದಾರ್ಥಗಳನ್ನು ಕಂಟ್ರೋಲ್ ಇಲ್ಲದೆ ತಿನ್ನುವುದು ಹಾಗೂ ಹೆಚ್ಚಾಗಿ ಈ ರೀತಿ ಕರಿದಿರುವ ಪದಾರ್ಥಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ಈ ಕೊಲೆಸ್ಟ್ರಾಲ್ ಹೃದಯದ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಇದರಿಂದ ಹೃದಯದ ಸಮಸ್ಯೆಗಳಿಗೆ ಮನುಷ್ಯರು ಒಳಗಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಕರಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವ ಅಭ್ಯಾಸ ಇರುವವರು ಅದನ್ನು ಕಡಿಮೆ ಮಾಡಿಕೊಳ್ಳುವುದು ಅಥವಾ ಸಂಪೂರ್ಣವಾಗಿ ತ್ಯಜಿಸುವುದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಬದಲಾಗಿ ಹಸಿ ತರಕಾರಿ ಹಾಗೂ ಹಣ್ಣು ಇವುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.
ರೆಡ್ ಮೀಟ್ ಇದು ಕೂಡ ಮಾಂಸಾಹಾರಿಗಳಿಗೆ ಫೇವರೆಟ್ ಆಹಾರ. ಆದರೆ ಇಲ್ಲೂ ಕೂಡ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿರುವುದರಿಂದ ಹೆಚ್ಚು ಮಾಂಸಹಾರ ಸೇವನೆ ಮಾಡುವವರಿಗೆ ಹೃದಯಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಆದ್ದರಿಂದ ಈ ರೆಡ್ ಮೀಟ್ ತಿನ್ನುವುದನ್ನು ಕಂಟ್ರೋಲ್ ಮಾಡುವುದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವೈಟ್ ಬ್ರೆಡ್ ತಿನ್ನುವುದು ಹಲವರ ಅಭ್ಯಾಸ ಬ್ರೇಕ್ ಫಾಸ್ಟ್ ಬದಲಾಗಿ ಅಥವಾ ಸಂಜೆ ಸ್ನಾಕ್ಸ್ ಟೈಮ್ ಎಂದು ಹಸಿವಾದಾಗ ಈ ರೀತಿ ವೈಟ್ ಬ್ರೆಡ್ ಅನ್ನು ತಿನ್ನುತ್ತಾರೆ. ಆದರೆ ಈ ವೈಟ್ ಬ್ರೆಡ್ ಕೂಡ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಅದರಲ್ಲೂ ವೈಟ್ ಬ್ರೆಡ್ ದೇಹ ತೂಕ ಹೆಚ್ಚಿಸುವುದು ಬೊಜ್ಜು ಉಂಟಾಗಲು ಮಧುಮೇಹ ಮತ್ತು ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆಲೂಗೆಡ್ಡೆ ಚಿಪ್ಸ್ ಎಂದರೆ ಎಲ್ಲರ ಬಾಯಲ್ಲೂ ಕೂಡ ನೀರುರುತ್ತದೆ ಈ ಆಲೂಗಡ್ಡೆ ಚಿಪ್ಸ್ ಎಲ್ಲರಿಗೂ ತಿನ್ನಲು ಇಷ್ಟ ಹಾಗೂ ಒಳ್ಳೆಯ ಟೈಂಪಾಸ್ ಕೂಡ ಆದರೆ ಇದರಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.
ಹಾಗೆಯೇ ಈ ಲಿಸ್ಟ್ ಅಲ್ಲಿ ಇರುವ ಇನ್ನೊಂದು ಆಹಾರ ಪದಾರ್ಥ ಎಂದರೆ ಅದು ಟೊಮೊಟೊ ಸಾಸ್. ಇದು ಕೂಡ ಇಂದು ನಮ್ಮ ದೈನಂದಿಕ ಆಹಾರ ಪದಾರ್ಥದ ಪಟ್ಟಿಗಳಲ್ಲಿ ಜಾಗ ಗಿಟ್ಟಿಸಿಕೊಂಡು ಬಿಟ್ಟಿದೆ. ಜಂಕ್ ಫುಡ್ ಜೊತೆ ಫಾಸ್ಟ್ ಫುಡ್ ಜೊತೆ ಹಾಗೂ ಇತ್ತೀಚೆಗೆ ಚಪಾತಿ ದೋಸೆ ಗಳ ಜೊತೆ ಕೂಡ ಟಮೊಟೊ ಸಾಸ್ ಹಾಕಿಕೊಂಡು ತಿನ್ನುವುದು ಹಲವರಿಗೆ ರೂಢಿಯಾಗಿ ಬಿಟ್ಟಿದೆ ಮತ್ತು ಈಗಿನ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಇದನ್ನು ರೂಢಿ ಮಾಡುತ್ತಿದ್ದಾರೆ ಆದರೆ ಇದು ಒಂದು ಕೆಟ್ಟ ಅಭ್ಯಾಸ ಯಾಕೆಂದರೆ ಟಮೋಟೋ ಸಾಸ್ ಅಲ್ಲೂ ಕೂಡ ಸೋಡಿಯಂ ಅಂಶ ಹೆಚ್ಚಾಗಿರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಬಹಳ ತೊಂದರೆ ಉಂಟು ಮಾಡುತ್ತದೆ ಹಾಗಾಗಿ ಈ ಎಲ್ಲಾ ಆಹಾರ ಪದಾರ್ಥಗಳನ್ನು ದೂರ ಮಾಡಿ ನಿಮ್ಮ ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಿ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ.