ಬ್ಯಾಂಕ್ ಗಳಲ್ಲಿ ಸೇವೆಗಳನ್ನು (Bank services) ಪಡೆಯಲು ಗಂಟೆಗಟ್ಟಲೇ ಜನರು ಸರತಿಯಲ್ಲಿ ಕ್ಯೂ ನಿಂತುಕೊಳ್ಳುವ ಭೌತಿಕ ವಿಧಾನ ಈಗ ಬಹುತೇಕ ಕಡಿಮೆಯಾಗಿದೆ. ಬ್ಯಾಂಕ್ ಗ್ರಾಹಕರು ಈಗ ಕುಡಿತಲ್ಲಿಯೇ ಬ್ಯಾಂಕಿಂಗ್ ಸಹಾಯವಾಣಿಗೆ (customer care) ಕರೆ ಮಾಡುವ ಮೂಲಕ ತಮ್ಮ ಬ್ಯಾಂಕ್ ಖಾತೆಗಳ ವಹಿವಾಟಿನ ಕುರಿತು ಮಾಹಿತಿ ಪಡೆಯುತ್ತಾರೆ.
ತೀರಾ ಅವಶ್ಯಕತೆ ಬಿದ್ದರೆ ಮಾತ್ರ ಬ್ಯಾಂಕ್ ಗಳಿಗೆ ಭೇಟಿ ಕೊಡುತ್ತಾರೆ. ಇನ್ನು ಕೆಲವರು ಈಗ ಎಲ್ಲ ಬ್ಯಾಂಕ್ಗಳು ಕೂಡ ಆಯಾ ಬ್ಯಾಂಕುಗಳಿಗೆ ಸಂಬಂಧಪಟ್ಟ ಹಾಗೆ ಮೊಬೈಲ್ ಆಪ್ (Bank app) ಹೊಂದಿರುವ ಕಾರಣದಿಂದ ಅವುಗಳ ಮೂಲಕ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಕ್ಷೇತ್ರಗಳಂತೆ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕೂಡ ತಂತ್ರಜ್ಞಾನ (technology) ಹರಡಿಕೊಂಡಿದ್ದು ಇದರಿಂದ ಬ್ಯಾಂಕ್ ಸಿಬ್ಬಂದಿ ಮತ್ತು ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲ ಆಗಿದೆ.
ಈ ನಿಟ್ಟಿನಲ್ಲಿ ಮತ್ತೊಂದು ಹೊಸ ವಿಧಾನವನ್ನು ಮೊದಲ ಬಾರಿಗೆ AU ಸ್ಮಾಲ್ ಫೈನಾನ್ಸ್ (AU Small finance bank) ಬ್ಯಾಂಕ್ ಪರಿಚಯಿಸಿದೆ. ಜನರು ಈಗ ವಿಡಿಯೋ ಕಾಲ್ ಮಾಡುವ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು (Video banking) ಪಡೆಯಬಹುದು. ದೇಶದಲ್ಲಿ ಇದು ಪ್ರಥಮ ಪ್ರಯತ್ನ ಎನ್ನುವುದು ಇದರ ಮತ್ತೊಂದು ವಿಶೇಷತೆ.
ಈ ಅನುಕೂಲತೆಯಿಂದ ಆ ಬ್ಯಾಂಕ್ ನ ಗ್ರಾಹಕರು ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಸಾಲಗಳು, ಉಳಿತಾಯಗಳು ಮತ್ತು ಚಾಲ್ತಿ ಖಾತೆಗಳ ಬಗ್ಗೆ ವಿಚಾರಣೆಯಿಂದ ವ್ಯಾಪಕವಾದ ಸೇವೆಗಳನ್ನು ಪಡೆಯಬಹುದು, ಪ್ರಧಾನ ಮಂತ್ರಿಯವರ ಜನಧನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಕೂಡ ಮಾಹಿತಿ ಪಡೆಯಬಹುದು.
ಹಸು ಖರೀದಿಗೆ 40,000 ರೂಪಾಯಿ ಸಬ್ಸಿಡಿ ಘೋಷಣೆ.!
ಇದರೊಂದಿಗೆ ವೈಯಕ್ತಿಕ ಮಾಹಿತಿಯನ್ನು ನವೀಕರಿಸುವುದು, ಸಾಲಗಳ ಬಗ್ಗೆ ಒಳನೋಟಗಳನ್ನು ಪಡೆಯುವುದು, ಸ್ಥಿರ ಠೇವಣಿಗಳು, ಮರುಕಳಿಸುವ ಠೇವಣಿಗಳು, ಫಾಸ್ಟ್ಯಾಗ್ ರೀಚಾರ್ಜ್‌ಗಳು ಮತ್ತು ಚೆಕ್‌ಬುಕ್‌ಗಳನ್ನು ಸಂಗ್ರಹಿಸುವಂತಹ ಕಾರ್ಯಗಳನ್ನು ಸುಲಭವಾಗಿ ಮಾಡಿ ಮುಗಿಸಬಹುದು.
ವೀಡಿಯೊ ಬ್ಯಾಂಕಿಂಗ್ ಕೇವಲ ಮೂಲಭೂತ ಆಡಳಿತಾತ್ಮಕ ಕಾರ್ಯಗಳಲ್ಲಿ ನಿಲ್ಲದೆ ಇದು KYC ನವೀಕರಣಗಳನ್ನು ಸುಗಮಗೊಳಿಸುವವರೆಗೂ ಸಿಗುತ್ತಿದೆ, ನಿಖರವಾದ ಮತ್ತು ನವೀಕೃತ ಗ್ರಾಹಕರ ಪ್ರೊಫೈಲ್‌ಗಳನ್ನು ನಿರ್ವಹಿಸಲು ಇದು ಅತ್ಯಗತ್ಯ ಪ್ರಕ್ರಿಯೆಯಾಗಿ ಸಹಕಾರಿಯಾಗಿದೆ. AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ಈ ವಿಡಿಯೋ ಕಾಲ್ ವಿಧಾನವು ಹೆಚ್ಚು ಭದ್ರತೆಯಿಂದ ಕೂಡಿರುತ್ತದೆ.
ಗ್ರಾಹಕರ ಯಾವ ಮಾಹಿತಿಯು ಕೂಡ ಸೋರಿಕೆ ಆಗದಂತೆ ಬ್ಯಾಂಕ್ ನಿಗಾ ವಹಿಸುತ್ತದೆ ಎನ್ನುವ ನೂರಕ್ಕೆ ನೂರರಷ್ಟು ಗ್ಯಾರಂಟಿಯನ್ನು ಕೂಡ ಈ ಬ್ಯಾಂಕ್ ನೀಡುತ್ತಿದೆ. ಹಣಕಾಸಿನ ವಹಿವಾಟುಗಳು ನಿರ್ದಿಷ್ಟ ಸಮಯದ ಚೌಕಟ್ಟುಗಳಿಗೆ ಒಳಪಟ್ಟಿರುತ್ತವೆ. MEFT / IMPS ಮುಂತಾದ ವಹಿವಾಟುಗಳನ್ನು ಕೂಡ ತಡೆರಹಿತವಾದ ಈ ವಿಡಿಯೋ ಕಾಲ್ ಇಂದ ಸರಾಗವಾಗಿ ಕಾರ್ಯಗತಗೊಳಿಸಬಹುದು.
ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಈ ಸೇವೆ ಬ್ರಾಂಕಿನ ಗ್ರಾಹಕರಿಗೆ ಲಭಿಸುತ್ತದೆ ಎಂದು ಬ್ಯಾಂಕ್ ಹೇಳಿದೆ. AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೈಗೊಂಡಿರುವ ಈ ಹೊಸ ವ್ಯವಸ್ಥೆಯಿಂದ ಜನರ ಸಮಯ ಉಳಿತಾಯವಾಗುತ್ತಿದೆ. ಬ್ಯಾಂಕ್ ಶಾಖೆಗಳಿಗೆ ಅಲೆಯಬೇಕಾದ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾದ ಕ’ಷ್ಟ ತಪ್ಪುತ್ತಿದೆ ಹಾಗೂ ಆ ಖರ್ಚಿನ ಹಣವೂ ಉಳಿತಾಯ ಆಗುತ್ತಿದೆ.
ಇಂತಹ ಕ್ರಾಂತಿಕಾರಿ ಬದಲಾವಣೆಗೆ AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಯತ್ನ ಮಾಡುತ್ತಿದ್ದು ಇದು ಯಶಸ್ವಿ ಆದ ಬಳಿಕ ಬ್ಯಾಂಕಿಂಗ್ ಕ್ಷೇತ್ರದ ಭವಿಷ್ಯವನ್ನು ಇದು ಬದಲಾಯಿಸುತ್ತದೆ ಎನ್ನುವ ಊಹೆಗಳು ಇವೆ. ಮುಂದಿನ ದಿನಗಳಲ್ಲಿ ಇನ್ನುಳಿದ ಬ್ಯಾಂಕ್ ಗಳು ಕೂಡ ಈ ಕ್ರಮವನ್ನು ಅನುಸರಿಸಿದರೂ ಅನುಮಾನವಿಲ್ಲ.