ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ, ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ಹಣ ಬರೋದು.!

 

WhatsApp Group Join Now
Telegram Group Join Now

ನೆರೆಹಾವಳಿ ಅಥವಾ ಬರ ಮುಂತಾದ ಅನಿರೀಕ್ಷಿತ ಪ್ರಕೃತಿ ವಿಕೋಪಗಳಾದ ರೈತರಿಗೆ ಉಂಟಾಗುವ ಬೆಳೆ ಹಾನಿಯನ್ನು ಕಟ್ಟಿಕೊಡಲು NDRF ಕೈಪಿಡಿಯ ಪ್ರಕಾರ ರಾಜ್ಯ ಸರ್ಕಾರವು ಸರ್ವೇ ನಡೆಸಿ ವರದಿ ತಲುಪಿಯ್ಕಸಿದೆ. ಈ ರೀತಿ ನಷ್ಟ ಹೊಂದಿದ ರೈತನಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಪರಿಹಾರ ನೀಡಲಾಗುತ್ತದೆ.

ನಮ್ಮ ರಾಜ್ಯದಲ್ಲಿ ಈ ಬಾರಿ 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ಈ ತಾಲೂಕುಗಳ ರೈತರ ಖಾತೆಗೆ DBT ಮೂಲಕ ಪರಿಹಾರದ ಹಣವನ್ನು ವರ್ಗಾವಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ಸಮಯದಲ್ಲಿ ಕಂದಾಯ ಇಲಾಖೆ ವತಿಯಿಂದ ಕೆಲ ಪ್ರಮುಖ ಅಂಶಗಳನ್ನು ಹಂಚಿಕೊಳ್ಳಲಾಗಿದೆ.

ಬರ ಪರಿಹಾರದ ಹಣ DBT ಮೂಲಕ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಈ ಹಣವನ್ನು ಪಡೆಯಬೇಕು ರೈತ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ (Fruits Website) ನೋಂದಾಯಿಸಿಕೊಂಡು ರೈತರು FID ಮಾಡಿಸಿರಬೇಕು ಎಂದು ತಿಳಿಸಲಾಗಿದೆ.

FID ಮಾಡಿಸುವಾಗ ರೈತರು ತಪ್ಪದೆ ತಮ್ಮ ಎಲ್ಲಾ ಜಮೀನುಗಳ ಸರ್ವೆ ನಂಬರ್ ನ್ನು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಮಾಹಿತಿಯೊಂದಿಗೆ ನೀಡಿ ದಾಖಲಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಈ ರೀತಿ FID ಪಡೆದಿರುವ ರೈತರಿಗಷ್ಟೇ ಈ ಬಾರಿ ಬರ ಪರಿಹಾರದ ಹಣ ವರ್ಗಾವಣೆ ಆಗಲಿದೆ.

ಏಕೆಂದರೆ ಇದುವರೆಗೂ ಪರಿಹಾರ (Parihara) ತಂತ್ರಾಂಶದಲ್ಲಿ ನ’ಷ್ಟಕ್ಕೊಳಗಾದ ರೈತರ ಅರ್ಜಿಯನ್ನು ನೋಂದಣಿ ಮಾಡಿ ನಂತರ ಜಿಲ್ಲಾ ಮಟ್ಟದಲ್ಲಿ DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈ ಸಮಯದಲ್ಲಿ ಯಾರ ದಾಖಲೆಗೆ ಯಾರ ಬ್ಯಾಂಕ್ ಖಾತೆ ನೀಡಿದರೂ ಹಣ ವರ್ಗಾವಣೆ ಆಗುತ್ತಿತ್ತು, ಇದರಿಂದ ಅಸಲಿ ರೈತನಿಗೆ ಮೋ’ಸವಾಗುತ್ತಿತ್ತು.

ಇದನ್ನು ತಪ್ಪಿಸಲು ಈ ವರ್ಷದಲ್ಲಿ ರೈತರಿಗೆ FID ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಬರ ಪರಿಹಾರದ ಹಣ ಪಡೆಯುವ ರೈತರ ಲಿಸ್ಟ್ ಕೂಡ ಸರ್ಕಾರ ಬಿಡುಗಡೆ ಮಾಡಿದ್ದು, ನೀವು ಈಗ ನಾವು ಹೇಳುವ ಈ ವಿಧಾನದ ಮೂಲಕವಾಗಿ ನಿಮ್ಮ ಹೆಸರು ಕೂಡ ಈ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು.

* ಮೊದಲಿಗೆ fruitspmk.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಿ.
* Farmers Registration and Unified beneficiary Information System PM-KISAN ವೆಬ್ಸೈಟ್ ಪೇಜ್ ಓಪನ್ ಆಗುತ್ತದೆ.
* ಆಧಾರ್ ನಂಬರ್ ಕೇಳಲಾಗಿರುತ್ತದೆ, ಅದನ್ನು ನಮೂದಿಸಿ Search ಬಟನ್ ಕ್ಲಿಕ್ ಮಾಡಿ.
* FruitsID 16 ಸಂಖ್ಯೆ ಮತ್ತು ನಿಮ್ಮ ಹೆಸರನ್ನು ತೋರಿಸಿದರೆ, ನೀವು ಬರ ಪರಿಹಾರದ ಹಣವನ್ನು ಪಡೆಯಲು ಅರ್ಹರಾಗಿದ್ದೀರಿ ಎಂದು ಅರ್ಥ.

* ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಸರ್ಚ್ ಬಟನ್ ಕ್ಲಿಕ್ ಮಾಡಿದಾಗ Fruits ID ಹಾಗೂ ಹೆಸರು ತೋರಿಸದೆ object reference not set to an instance of an object ಅಥವಾ Aadhar number number is incorrect ಅಥವಾ no data found ಎಂದು ಇದ್ದರೆ ತಕ್ಷಣ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ.

ರೈತನು ತನ್ನ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಮಾಹಿತಿ ಮತ್ತು ತನ್ನ ಎಲ್ಲಾ ಜಮೀನುಗಳ RTC ನಂಬರ್ ಕೊಟ್ಟು ಫ್ರೂಟ್ಸ್ ಫಲಿತಾಂಶದಲ್ಲಿ ನೋಂದಾಯಿಸಿಕೊಂಡು FID ಪಡೆದುಕೊಳ್ಳಬೇಕು ಅಥವಾ ಯಾವುದೇ ಗ್ರಾಮ ಒನ್ ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಕೂಡ ಮಾಡಿಸಿಕೊಳ್ಳಬಹುದು. ದಯವಿಟ್ಟು ಈ ಉಪಯುಕ್ತ ಮಾಹಿತಿಯೂ ಎಲ್ಲ ರೈತರಿಗೂ ತಲುಪುವಂತೆ ಶೇರ್ ಮಾಡಿ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now