ರೈತರಿಗೆ (farmers) ಕೃಷಿ ಚಟುವಟಿಕೆ ಜೊತೆಗೆ ಪಶುಸಂಗೋಪನೆ ಕೂಡ ಆದಾಯ ತರುವ ಒಂದು ಮೂಲವಾಗಿದೆ. ದನ-ಕರು ಸಾಕಾಣಿಕೆ, ಹಸು-ಎಮ್ಮೆ ಸಾಕಾಣಿಕೆ, ಕುರಿ-ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ ಇವುಗಳನ್ನು ರೂಪಿಸಿ ರೈತರಿಗೆ ಇವುಗಳ ಘಟಕ ನಿರ್ಮಾಣಕ್ಕೆ ಸಾಲ ಅಥವಾ ಸಬ್ಸಿಡಿ ರೂಪದ ನೆರವನ್ನು ನೀಡಿ ಪ್ರೇರೇಪಿಸುತ್ತಿದೆ. ಪಶುಸಂಗೋಪನೆಯಡಿ (Animal Husbandry) ದನ-ಕರು, ಹಸು ಸಾಕಾಣಿಕೆ ಜೊತೆ ಎಮ್ಮೆ ಸಾಕಾಣಿಕೆ ಕೂಡ ಒಂದು ಭಾಗವಾಗಿದ್ದು ಇದರ ಪ್ರಮುಖ ಉದ್ದೇಶ ಹಾಲಿನ ಉತ್ಪಾದನೆಯೇ ಆಗಿರುತ್ತದೆ.
ಹಾಗಾಗಿ ಅತಿ ಹೆಚ್ಚು ಇಳುವರಿ ಕೊಡುವ ಎಮ್ಮೆಯ ತಳಿಗಳನ್ನು ಸಾಕುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು ಮತ್ತು ಈಗ ಎಮ್ಮೆಗಳ ಖರೀದಿಗೆ ಸಬ್ಸಿಡಿ ರೂಪದ ಸಾಲ ಮತ್ತು ಈಗ ಎಮ್ಮೆಗಳಿಗೆ ವಿಮೆ ಸೌಲಭ್ಯ ಕೂಡ ಲಭ್ಯವಿರುವುದರಿಂದ ರೈತರಿಗೆ ಎಮ್ಮೆ ಸಾಕಾಣಿಕೆ ಕಡಿಮೆ ರಿಸ್ಕ್ ನ ಅಧಿಕ ಲಾಭದ ಮಾರ್ಗವಾಗಿದೆ.
ಈ ರೀತಿ ನೀವು ರೈತರಾಗಿದ್ದು ಎಮ್ಮೆ ಸಾಕಾಣಿಕೆ ಮಾಡಬೇಕು ಎನ್ನುವ ಯೋಜನೆ ಹೊಂದಿದ್ದರೆ ಮುರ್ರಾ ತಳಿಯ ಎಮ್ಮೆಗಳನ್ನು (Murrah breed Buffalo) ಖರೀದಿಸಿ. ಮುರ್ರಾ ತಳಿಯಿಂದ ಅತಿಹೆಚ್ಚಿನ ಲಾಭ ಇರುವುದರಿಂದ ಅನೇಕರು ಈ ತಳಿ ಬಗ್ಗೆ ಆಸಕ್ತಿ ಹೊಂದಿದ್ದಾರೆ. ನಿಮಗೂ ಕೂಡ ಮುರ್ರಾ ತಳಿಯ ಬಗ್ಗೆ ಕೆಲವು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸ ಬಯಸುತ್ತಿದ್ದೇವೆ.
ಈ ತಳಿಯ ವಿಶೇಷತೆಗಳೇನು? ಈ ತಳಿಯ ಎಮ್ಮೆಗಳನ್ನು ಖರೀದಿಸಲು ರೈತರಿಗೆ ಸರ್ಕಾರದಿಂದ ಏನೆಲ್ಲ ನೆರವು ಸಿಗುತ್ತದೆ ಮತ್ತು ಅದನ್ನು ಪಡೆಯುವುದು ಹೇಗೆ? ಎನ್ನುವುದರ ವಿವರ ಇಂತಿದೆ ನೋಡಿ…
ಮುರ್ರಾ ತಳಿಯ ವಿಶೇಷತೆಗಳು:-
* ಹಾಲು ಉತ್ಪಾದನೆಗೆ ಮುರ್ರಾ ಎಮ್ಮೆ ಹೆಸರುವಾಸಿಯಾಗಿದೆ. ಇದು ಪಂಜಾಬ್, ಹರಿಯಾಣ ಮತ್ತು ದೆಹಲಿಯಂತಹ ಪ್ರದೇಶಗಳಲ್ಲಿ ಬೆಳೆಯುವ ತಳಿಯಾಗಿದೆ.
* ಪ್ರತಿದಿನ 30 ಲೀಟರ್ ಹಾಲನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
* ಈ ತಳಿ ಎಮ್ಮೆಗಳ ಗರ್ಭಧಾರಣೆಯ ಅವಧಿ ಸರಾಸರಿ 310 ದಿನಗಳು.
* ದೊಡ್ಡ ಗಾತ್ರದ ಬಾಗಿದ ಕೊಂಬುಗಳನ್ನು ಹೊಂದಿವೆ.
* ಆಕರ್ಷಕ ಕಪ್ಪು ಬಣ್ಣದ ಪ್ರಕಾಶಮಾನವಾದ ಕಣ್ಣುಗಳು ಮತ್ತು ತೆಳುವಾದ ಕುತ್ತಿಗೆಯನ್ನು ಹೊಂದಿರುತ್ತವೆ.ಕಪ್ಪು ಮತ್ತು ಬಿಳಿ ಕೂದಲಿನ ಟಫ್ಟ್ ಹೊಂದಿರುವ ಇವುಗಳಿಗೆ ಬಾಲ ಉತ್ತಮವಾಗಿರುತ್ತದೆ.
* ದೊಡ್ಡ ಹಿಂಭಾಗದ ಪ್ರದೇಶವನ್ನು ಹೊಂದಿರುವ ಗೋಚರ ರಕ್ತನಾಳಗಳು ಮತ್ತು ಉತ್ತಮ ಸ್ಥಳಾವಕಾಶದ ಉದರಗಳು, ದೃಢ ಸ್ನಾಯುಗಳು ತಂಪಾದ ಹವಾಮಾನಕ್ಕೆ ಹೊಂದಿಕೊಳ್ಳುವುದಕ್ಕೆ ಅನುಕೂಲಕರವಾಗಿದೆ.
* ಈ ಎಮ್ಮೆಯ ಹಾಲಿನಲ್ಲಿ ಕೊಬ್ಬಿನಾಂಶ ಸರಾಸರಿ 7.3%.
ಇವುಗಳ ಬೆಲೆ ಹಾಗೂ ಸರ್ಕಾರದಿಂದ ಸಿಗುವ ನೆರವು:-
* ಮುರ್ರಾ ಎಮ್ಮೆಗಳ ಮಾರುಕಟ್ಟೆ ಬೆಲೆ 50,000 ರೂ.ಗಳಿಂದ 2 ಲಕ್ಷ ರೂ.ಗಳವರೆಗೆ ಇರುತ್ತದೆ, ಇದು ಅವುಗಳ ಉತ್ತಮ ಗುಣಮಟ್ಟದ ಹಾಲಿನ ಮೌಲ್ಯದ ಮೇಲೆ ಆಧಾರಿತವಾಗಿರುತ್ತದೆ.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ, ಮಿಶ್ರ ತಳಿಯ ಹಸು ಘಟಕದ ವೆಚ್ಚದ ಮೇಲೆ ಸರ್ಕಾರವು 90% ಸಬ್ಸಿಡಿಯನ್ನು ನೀಡುತ್ತದೆ.
ಸಬ್ಸಿಡಿ ಪಡೆಯಲು ಯಾರು ಅರ್ಹರು?
* ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ಪಶುಸಂಗೋಪನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ ಈ ಸಬ್ಸಿಡಿ ಯೋಜನೆಯಲ್ಲಿ ಆದ್ಯತೆ ಇರುತ್ತದೆ.
* ಮಹಿಳೆಯರು ಮತ್ತು ಅಂಗವಿಕಲರು ಕೂಡ ಆದ್ಯತೆಯನ್ನು ಪಡೆಯುತ್ತಾರೆ. ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪಶು ಸಂಗೋಪನೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ತೆರಳಿ ವಿವರ ಪಡೆಯಿರಿ.