ನಮ್ಮ ದೇಶದ ಕೃಷಿ ಪ್ರಧಾನ ದೇಶವಾದರೂ ಕೂಡ ಇಲ್ಲಿನ ಕೃಷಿ ಮಳೆ ಜೊತೆ ಆಡುವ ಜೂಜಾಟ ಎಂದೇ ಹೆಸರುವಾಸಿಯಾಗಿದೆ. ಭಾರತದ ಆರ್ಥಿಕತೆಯಲ್ಲಿ ಮೊದಲ ಹಂತದಲ್ಲಿರುವ ಈ ಕೃಷಿ ಕ್ಷೇತ್ರದ ಉತ್ಪಾದನೆ ಹೆಚ್ಚಾಗಬೇಕು ಎಂದರೆ ನೀರಾವರಿ ಸೌಲಭ್ಯ ಇರಬೇಕು. ಹಾಗಾಗಿ ಜನರು ಕೊಳವೆ ಬಾವಿಗಳನ್ನು ಅನುಸರಿಸಿ ವಾಣಿಜ್ಯ ಬೆಳೆಗಳನ್ನು ತೋಟಗಾರಿಕೆ ಮಾಡಿ ತರಕಾರಿ ಹಣ್ಣುಗಳನ್ನು ಬೆಳೆದು ಆದಾಯ ಮಾಡಲು ಬಯಸುತ್ತಿದ್ದಾರೆ.
ಈ ಸೌಲಭ್ಯ ಸಿಗಬೇಕು ಎಂದರೆ ನಮ್ಮ ಜಮೀನಿನಲ್ಲಿ ನೀರಿನ ಸೆಲೆ ಸಿಗಬೇಕು, ಹೀಗಿದ್ದಾಗ ಮಾತ್ರ ನಾವು ಬೋರ್ವೆಲ್ ತೆಗೆಸಿ ನಮ್ಮ ಕನಸು ನನಸು ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಸಾಲ ಹೊತ್ತು ಕೊಳ್ಳಬೇಕಾಗುತ್ತದೆ.
ಈಗಲೂ ಕೂಡ ಹಳ್ಳಿಗಳಲ್ಲಿ ಜ್ಯೋತಿಷ್ಯ ಕೇಳಿ ಅಥವಾ ತೆಂಗಿನಕಾಯಿಯಲ್ಲಿ ದಾರದಲ್ಲಿ, ರಾಡ್ ನಲ್ಲಿ, ಬೀಗದ ಕೈನಲ್ಲಿ ಪರೀಕ್ಷೆ ಮಾಡಿಸಿ ನೀರಿನ ಸೆಲೆ ಎಲ್ಲಿದೆ ಎನ್ನುವುದನ್ನು ಹೇಳಿದ್ದನ್ನು ನಂಬಿ ಬೋರ್ವೆಲ್ ಪಾಯಿಂಟ್ ಮಾಡಿಸಿ ಕಾಕತಾಳೀಯ ಎನ್ನುವಂತೆ ಸಕ್ಸಸ್ ಆದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಫೇಲ್ ಆಗಿ ಸಾಲದ ಸುಳಿಗೆ ಸಿಲುಕಿದ ರೈತರ ಬಗ್ಗೆ ಕೇಳಿರುತ್ತೇವೆ ನೋಡಿರುತ್ತೇವೆ.
ಈ ಸುದ್ದಿ ಓದಿ:-PF ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್, ವೇತನ ಮಿತಿ 15,000 ದಿಂದ 21,000ಕ್ಕೆ ಹೆಚ್ಚಳ.!
ಹೀಗಾಗಬಾರದು ಎಂದರೆ ಟೆಕ್ನಾಲಜಿ ಬಳಸುವುದು ಉತ್ತಮ ಈಗ ಟೆಕ್ನಾಲಜಿ ಆಧಾರಿತವಾಗಿ ನಿಖರವಾದ ಬೋರ್ವೆಲ್ ಪಾಯಿಂಟ್ ಹೇಳುವ ಅನೇಕ ತಂತ್ರಜ್ಞರು ಇದ್ದಾರೆ. ಇವರನ್ನು ಸಂಪರ್ಕಿಸಿದರೆ ಸರಿಯಾದ ಗೈಡೆನ್ಸ್ ಸಿಗುತ್ತದೆ ಈ ಮೂಲಕ ರೈತನಿಗಾಗುವ ನ’ಷ್ಟವು ಕೂಡ ತಪ್ಪುತ್ತದೆ.
ಸದ್ಯಕ್ಕೆ USA ಟೆಕ್ನಾಲಜಿ ಬಳಸಿ ಕರ್ನಾಟಕದಾದ್ಯಂತ ಬೋರ್ವೆಲ್ ಪಾಯಿಂಟ್ ಗಳನ್ನು ಮಾಡಿಕೊಡುತ್ತಿರುವ ಮತ್ತು ಇವರು ಹೇಳಿದ ಮಾರ್ಗದಲ್ಲಿ 99% ಸಕ್ಸಸ್ ಆಗಿರುವ ಒಬ್ಬ ವಿಶೇಷ ವ್ಯಕ್ತಿ ಈ ಯುಎಸ್ಎ ಟೆಕ್ನಾಲಜಿ ಬಗ್ಗೆ ಹೇಳಿದ ಮಾಹಿತಿಯನ್ನು ಈ ಲೇಖನದಲ್ಲಿ ರೈತರಿಗಾಗಿ ಈ ಲೇಖನದಲ್ಲಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ.
ಇದರಲ್ಲಿ ಮ್ಯಾಕ್ಸ್ ಕಂಪನಿಯ 3 ಸಾಧನಗಳನ್ನು ಪ್ರಮುಖವಾಗಿ ಬಳಸುತ್ತಾರೆ. ಮೊದಲನೇದು ಲೊಕೇಟರ್ ಇದು ಎಲ್ ಶೇಪ್ ನಲ್ಲಿ ಇರುವ ಎರಡು ಇನ್ಸ್ಟ್ರುಮೆಂಟ್ ಆಗಿರುತ್ತದೆ ಇದನ್ನು ಎರಡು ಕೈಗಳಲ್ಲಿ ಹಿಡಿದುಕೊಂಡು ಆನ್ ಮಾಡಿದರೆ ನೀರಿನ ಸೆಲೆ ಎಲ್ಲಿದೆ ಎನ್ನುವುದನ್ನು ಅದು ಸೌಂಡ್ ಮಾಡಿ ಲೊಕೇಶನ್ ತಿಳಿಸುತ್ತದೆ.
ಈ ಸುದ್ದಿ ಓದಿ:-ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ FD ಇಟ್ಟರೆ ಎಷ್ಟು ಹಣ ಲಾಭ ಸಿಗುತ್ತದೆ ಗೊತ್ತಾ.? ನಿಮ್ಮ ಹಣ ದುಪ್ಪಟ್ಟು ಮಾಡಲು ಇದೇ ಬೆಸ್ಟ್
ಬಳಿಕ ಇದನ್ನು ಆಫ್ ಮಾಡಿ ಟ್ಯಾಬ್ ಕನೆಕ್ಷನ್ ಕೊಟ್ಟು ಪ್ರೊಫೈಲರ್ ಎನ್ನುವ ಇನ್ನೊಂದು ಡಿವೈಸ್ ಕನೆಕ್ಟ್ ಮಾಡಿಕೊಳ್ಳಬೇಕು. ಇದು 10 ಅಡಿ ಅಂತರದಲ್ಲಿ ನೀರಿನ ಸೆಲೆ ಎಲ್ಲಿದೆ ಎನ್ನುವುದನ್ನು ಸ್ಕ್ಯಾನ್ ಮಾಡಿ ರಿಪೋರ್ಟ್ ಸಮೇತ ತಿಳಿಸುತ್ತದೆ. ಇದಾಗಿ ಕೊನೆಯಲ್ಲಿ ಬರುವುದೇ IP. ಇದು ಎಷ್ಟು ಆಳಕ್ಕೆ ಬೋರ್ವೆಲ್ ಹಾಕಿದರೆ ನೀರು ಬರುತ್ತದೆ ಎನ್ನುವುದನ್ನು ಯಥಾವತ್ತಾಗಿ ಹೇಳುತ್ತದೆ.
ತಪ್ಪದೇ ಈ ಟೆಕ್ನಾಲಜಿ ಬಳಸಿಕೊಂಡು ಟೆಕ್ನಾಲಜಿ ಸಹಾಯದಿಂದ ನಿಮ್ಮ ಕೃಷಿ ಕನಸನ್ನು ನನಸು ಮಾಡಿಕೊಳ್ಳಿ. ನಿಮಗೇನಾದರೂ ಈ ತಂತ್ರಜ್ಞರ ಸಹಾಯ ಬೇಕೆಂದರೆ ಅಂಕಣದ ಕೊನೆಯಲ್ಲಿ ನಾವು ನೀಡುವ ನಂಬರಿಗೆ ಸಂಪರ್ಕಿಸಿ ಕರ್ನಾಟಕದ ಯಾವುದೇ ಮೂಲೆಗೆ ಬೇಕಾದರೂ ಬಂದು ತಮ್ಮ ಟೀಮ್ ಜೊತೆ ರೈತರಿಗೆ ಇವರು ಮಾರ್ಗದರ್ಶನ ಮಾಡುತ್ತಾರೆ.
ಆದರೆ ಒಂದು ಭಾಗದಲ್ಲಿ ಒಬ್ಬ ರೈತರಿದ್ದರೆ ದೂರದ ಭಾಗವಾಗಿದ್ದರೆ ಬರುವುದು ಕಷ್ಟವಾಗಬಹುದು ಯಾಕೆಂದರೆ ಇವರು ಬೆಂಗಳೂರಿನಲ್ಲಿ ಇರುತ್ತಾರೆ ಹಾಗಾಗಿ ಹತ್ತಿರದಲ್ಲಿ ನಾಲ್ಕೈದು ರೈತರಿಗಾಗಿ ಒಟ್ಟಿಗೆ ಆರ್ಡರ್ ಸಿಕ್ಕಿದರೆ ಖಂಡಿತ ಬರುತ್ತಾರೆ. ಈ ವಿಚಾರವಾಗಿ ಯಾವುದೇ ಗೊಂದಲ ಇದ್ದರೂ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದರೂ ಈ ಸಂಖ್ಯೆಗೆ ಸಂಪರ್ಕಿಸಿ.
9880626035