ಅದೊಂದು ಕಾಲವಿತ್ತು. ಕೆಲಸಕ್ಕೆ ಬಾರದವರನ್ನು ಹೋಗಿ ಕತ್ತೆ ಕಾಯಿ, ನೀನು ಅದಕ್ಕೆ ಲಾಯಕ್ಕು ಎಂದು ಬಯ್ಯುತ್ತಿದ್ದರು. ಆದರೆ ಕಾರ್ಯ ವಾಸಿ ಕತ್ತೆ ಕಾಲು ಹಿಡಿ ಎಂಬ ಗಾದೆ ಮಾತು ಕೂಡ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಅತ್ತೆಗೆ ಒಂದು ಕಾಲ ಕತ್ತೆಗೂ ಒಂದು ಕಾಲ ಬರುವಂತೆ ಈಗ ಕತ್ತೆಗೂ ಕಾಲ ಬಂದಿದೆ.
ಕತ್ತೆಗೂ ಈಗ ಎಂತಹ ಯೋಗ ಬಂದಿದೆ ಎಂದರೆ ಮನೆಯಲ್ಲಿ ಇತರೆ ಸಾಕು ಪ್ರಾಣಿಗಳನ್ನು ಸಾಕುವುದಕ್ಕಿಂತ ಕತ್ತೆ ಸಾಕಿದರೆ ಒಂದೇ ವರ್ಷದಲ್ಲಿ ಆ ರೈತನ ಇಡೀ ಆರ್ಥಿಕತೆ ಚಿತ್ರಣನೇ ಬದಲಾಗಿ ಹೋಗುತ್ತದೆ. ಇದಕ್ಕೆಲ್ಲ ಕಾರಣವಾಗಿರುವ ಅಂಶವೇನೆಂದರೆ ಕತ್ತೆಯ ಹಾಲು.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇದ್ದವರಿಗೆ ಗೊತ್ತಿರುತ್ತದೆ. ಹಳ್ಳಿಗಳಲ್ಲಿ ಚಿಕ್ಕ ಮಕ್ಕಳು ಸರಿಯಾಗಿ ಊಟ ಮಾಡದಿದ್ದರೆ, ಅವರಿಗೆ ಜೀರ್ಣಶಕ್ತಿ ಕುಂದಿದ್ದರೆ, ಪದೇಪದೇ ಕಾಯಿಲೆ ಬೀಳುತ್ತಿದ್ದರೆ ಅಥವಾ ತುಂಬಾ ಸೊರಗಿ ಹೋಗಿದ್ದರೆ ಕತ್ತೆ ಹಾಲು ಕುಡಿಸುತ್ತಿದ್ದರು. ಪರಮಾಶ್ಚರ್ಯ ಎನ್ನುವಂತೆ ಈ ರೀತಿ ಕತ್ತೆ ಹಾಲು ಕುಡಿಸಿದ ಮರುದಿನದಿಂದಲೇ ಅವರು ಚೇತರಿಸಿಕೊಳ್ಳುತ್ತಿದ್ದರು.
ಈ ಸುದ್ದಿ ಓದಿ:- ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 2 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!
ಇದರಿಂದ ಕತ್ತೆ ಹಾಲು ಎಷ್ಟು ಪೌಷ್ಟಿಕಾಂಶ ಪೂರಿತ ಎನ್ನುವುದು ಸಾಬೀತಾಗಿದೆ. ದಿನ ಕಳೆದಂತೆ ಊರೂರ ಮೇಲೆ ಕತ್ತೆ ಹೊಡೆದುಕೊಂಡು ಬರುತ್ತಿದ್ದ ಅಗಸರ ಬದಲು ಕತ್ತೆ ಹಾಲು ಡೈರಿ ಗಳಲ್ಲಿ ಸಿಗುವಂತಹ ಪ್ರಾಡಕ್ಟ್ ಆಗಿ ಹೋಗಿದೆ. ಇಂತಹ ಲಾಭದಾಯಕ ಉದ್ಯಮ ಆರಂಭಿಸುವ ರೈತನಿಗೆ ಈ ಕಂಪನಿಗಳೇ ಸಾಕಷ್ಟು ಅನುಕೂಲತೆ ಮಾಡಿಕೊಟ್ಟು ಹಾಲನ್ನು ಬೈ ಬ್ಯಾಕ್ ಕೂಡ ಮಾಡುತ್ತಿದೆ.
ಹೀಗೆ ಕತ್ತೆಯನ್ನು ಸಾಕಿದ ರೈತ ಕತ್ತಿ ದಯೆಯಿಂದ ಅದೃಷ್ಟವಂತನಾಗಿದ್ದಾನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ರೈತನೊಬ್ಬ ತನ್ನ 5 ಎಕರೆ ಜಮೀನಿನಲ್ಲಿ ಪಡೆಯಲಾಗದ ಆದಾಯವನ್ನು ಅರ್ಧ ಎಕರೆ ಕತ್ತೆ ಸಾಕಲು ಬಿಟ್ಟುಕೊಂಡು ಅಗ್ಗದಲ್ಲಿ ಸಿಗುವ ವಸ್ತುಗಳಿಂದಲೇ ಶೆಡ್ ಮಾಡಿಕೊಂಡ ರೈತನು ಕತ್ತೆ ಹಾಲಿಗೆ ಬ್ರಾಂಡ್ ಆಗಿರುವ ಜೆನ್ನಿ ಮಿಲ್ಕ್ ಕಂಪನಿಯಿಂದ ಕತ್ತೆಗಳನ್ನು ಕೊಂಡುಕೊಂಡಿದ್ದಾನೆ.
ವಿಶೇಷವೇನೆಂದರೆ, ಈ ಕತ್ತೆಗಳನ್ನು ಮೂರು ಕತ್ತೆಗಳ ಜೊತೆ ಒಂದು ಕರು ಸೇರಿಸಿ ಕಾಂಬೋ ಮಾಡಿ ಮಾಡಿಕೊಡಲಾಗುತ್ತದೆ. ಗರ್ಭಿಣಿಗಳಾದ ಕತ್ತೆಗಳನ್ನು ಹಿಂಪಡೆದು ಮತ್ತೆ ಹಾಲು ಕೊಡುವ ಕತ್ತೆಗಳನ್ನು ಎಕ್ಸ್ಚೇಂಜ್ ಮಾಡಿಕೊಡಲಾಗುತ್ತದೆ. ಪ್ರತಿ ಕತ್ತೆಗಳಿಗೂ ಇನ್ಸುರೆನ್ಸ್ ಇದ್ದು ಇವು ಕಾಯಿಲೆ ಬಿದ್ದರೆ ಸೂಕ್ತ ವೈದ್ಯರನ್ನು ತಕ್ಷಣವೇ ಕರೆಸಿಕೊಡುವ ವ್ಯವಸ್ಥೆಯನ್ನು ಕಂಪನಿಯೇ ಜವಾಬ್ದಾರಿ ಹೊತ್ತುಕೊಂಡಿದೆ.
ಈ ಸುದ್ದಿ ಓದಿ:- ವಾಹನ ಮಾಲೀಕರಿಗೆ ಅಪ್ಡೇಟ್, HSRP ನಂಬರ್ ಪ್ಲೇಟ್ ಹಾಕದವರಿಗೆ RTO ನಿಂದ ಹೊಸ ಸೂಚನೆ.!
ಒಂದು ವೇಳೆ ಕತ್ತೆ ಮೃ.ತ ಪಟ್ಟಿದ್ದೇ ಆದಲ್ಲಿ ರಿಪ್ಲೇಸ್ಮೆಂಟ್ ಕತ್ತೆಯನ್ನು ಕೂಡ ಕೊಡುವ ಬದಲು ಕಂಪನಿ ಕೊಟ್ಟಿದೆ. ಸದ್ಯಕ್ಕೆ ಆರು ಕತ್ತೆಗಳಿಂದ ಒಂದೊಂದು ಕತ್ತೆಯಿಂದ 500ಲೀ, 600ಲೀ ಹಾಲು ಗಳನ್ನು ಪಡೆಯುತ್ತಿದ್ದರಂತೆ. ಕತ್ತೆಗಳನ್ನು ಕಟ್ಟಿ ಹಾಕುವುದಿಲ್ಲ, ನಾವು ಬಿಟ್ಟರೆ ಅದು ಮೇಯ್ದುಕೊಂಡು ವಾಪಸ್ ಬರುತ್ತದೆ.
ಮೊದಲು ಕರುಗಳಿಗೆ ಪೂರ್ತಿಯಾಗಿ ಹಾಲು ಕೊಡಬೇಕು ಹಾಗಿದ್ದಾಗ ಮಾತ್ರ ಕತ್ತೆಗಳು ಸರಿಯಾಗಿ ಹಾಲು ಕರೆಸಿಕೊಳ್ಳುತ್ತವೆ ಇಲ್ಲವಾದಲ್ಲಿ ನಮಗೂ ಸಮಸ್ಯೆ ಅವು ನಿಲ್ಲುವುದಿಲ್ಲ. ದಿನದಲ್ಲಿ ಒಂದು ಬಾರಿ ಮಾತ್ರ ಹಾಲು ಪಡೆದುಕೊಳ್ಳುತ್ತೇವೆ ಪ್ರತಿದಿನ 9:00 ಗಂಟೆಗೆ ಹಾಲು ಪಡೆದೇ ಕತ್ತೆಗಳನ್ನು ಹೊರಕ್ಕೆ ಬಿಡುವುದು ಅದು ಸಾಧ್ಯವಾಗದ ದಿನ 6:00 ಗಂಟೆ ಮೇಲೆ ಹಾಲು ಪಡೆಯುತ್ತೇವೆ.
ಕರೆದ ಹಾಲು ಗಳನ್ನು ಜೆನ್ನಿ ಮಿಲ್ಕ್ ಕಂಪನಿಯ ಕೊಟ್ಟಿರುವ ಬಾಟಲ್ ಗಳಲ್ಲಿ ಸಂಗ್ರಹಿಸಿ ಅವರೇ ಕೊಟ್ಟಿರುವ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡುತ್ತೇವೆ, ಬೇರೆ ಹಾಲುಗಳನ್ನು ಮಿಕ್ಸ್ ಮಾಡಿದರೆ ಕಂಪನಿಯವರಿಗೆ ಗೊತ್ತಾಗಿ ಬಿಡುತ್ತದೆ ಆದರೆ ಆ ಕೆಲಸ ನಾವು ಮಾಡುವುದಿಲ್ಲ. ಒಂದು ಲೀಟರ್ ಗೆ ರೂ.2000 ಕೊಡುತ್ತದೆ ಮತ್ತೆ ಇದು ಲಾಭವಲ್ಲದೇ ಇನ್ನೇನು? ಈ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದರೆ ವಿಡಿಯೋವನ್ನು ಕೊನೆವರೆಗೂ ನೋಡಿ ಮತ್ತು ಕಂಪನಿಯ ಈ ವಿಳಾಸಕ್ಕೆ ಭೇಟಿ ಕೊಡಿ.
ಈ ಸುದ್ದಿ ಓದಿ:- ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ PUC, ಡಿಪ್ಲಮೋ, ಪದವಿ ಮತ್ತು ಎಲ್ಲಾ ಕೋರ್ಸ್ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಗೆ ಅರ್ಜಿ ಆಹ್ವಾನ.!
ಜೆನ್ನಿ ಮಿಲ್ಕ್,
PVK Plaza,
Hambi Road,
Hospet – 583201.
Jenny Milk – 8050899260, 8073509830.