ಅವಳಿ ಜವಳಿ ಮಕ್ಕಳು ಹುಟ್ಟಲು ಕಾರಣವೇನು ಗೊತ್ತ.? ಲಕ್ಷಕ್ಕೆ ಒಬ್ಬರಿಗೆ ಮಾತ್ರ ಈ ರೀತಿ ಆಗೋದು ಇದರ ಹಿಂದಿರುವ ಅಸಲಿ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

 

WhatsApp Group Join Now
Telegram Group Join Now

ಮನೆಯಲ್ಲಿ ಮಕ್ಕಳಿರುವುದೇ ಒಂದು ಸೌಭಾಗ್ಯ ತಾಯಿಯಾಗುವುದಂತೂ ಪ್ರತಿ ಹೆಣ್ಣಿನ ಕನಸು ಮತ್ತು ಅದು ಆಕೆಯ ಮೇಲಿರುವ ಜವಾಬ್ದಾರಿಯೂ ಕೂಡ. ಮನೆಯಲ್ಲಿ ಯಾರಿಗಾದರೂ ಮಕ್ಕಳಾಗುತ್ತಿದೆ ಎನ್ನುವ ವಿಷಯ ತಿಳಿದರೇ ಸಾಕು ಆ ಮನೆಯ ವಾತಾವರಣವೇ ಬದಲಾಗಿಬಿಡುತ್ತದೆ. ಪ್ರತಿದಿನ ಕೂಡ ಸಂಭ್ರಮದಿಂದ ಕೂಡಿರುತ್ತದೆ ಅದ್ಯಾವುದೋ ಹೊಸ ರೀತಿ ಚೈತನ್ಯ ಎಲ್ಲೆಡೆ ತುಂಬಿಕೊಳ್ಳುತ್ತದೆ.

ಪ್ರತಿ ದಿನವನ್ನು ಕೂಡ ಲೆಕ್ಕ ಹಾಕಿ ಕಳೆಯುತ್ತಿರುತ್ತಾರೆ ಮನೆಮಂದಿ. ಆ ಮಗುವಿನ ಜೊತೆ ಆಟ ಆಡುತ್ತಿದ್ದರೆ ಎಂತಹದೇ ದೊಡ್ಡ ಸಮಸ್ಯೆ ಇದ್ದರೂ ಕೂಡ ಮರೆತು ನಾವು ಮಕ್ಕಳಾಗಿ ಬಿಡಬಹುದು. ಈ ರೀತಿ ಒಂದು ಮಗುವಿನ ಆಗಮನ ಬದುಕಿನ ಇಡೀ ಚಿತ್ರಣವನ್ನೇ ಬದಲಾಯಿಸಿ ಬಿಡುತ್ತದೆ. ಇನ್ನು ಅದು ಅವಳಿ ಜವಳಿ ಆಗಿಬಿಟ್ಟರಂತೂ ಆ ಸಂಭ್ರಮಕ್ಕೆ ಪಾರವೇ ಇಲ್ಲ ಎರಡು ಮಕ್ಕಳ ಲಾಲನೆ ಪಾಲನೆಯೇ ಮನೆಮಂದಿಯ ಕೆಲಸ ಆಗಿಬಿಡುತ್ತದೆ.

ಇಬ್ಬರನ್ನು ಸಮಾಧಾನ ಪಡಿಸುತ್ತಾ ಸುಧಾರಿಸುತ್ತಾ ವರ್ಷಗಳು ಕಳೆಯುವುದೇ ತಿಳಿಯುವುದಿಲ್ಲ ನಾವು ಎಷ್ಟೇ ಫಾಸ್ಟ್ ಜನರೇಷನ್ ಅವರು ಆಗಿದ್ದರು ಕೂಡ ಮಗು ವಿಷಯದಲ್ಲಿ ಇನ್ನು ನಮ್ಮ ಭಾವನೆಗಳು ಬದಲಾಗಿಲ್ಲ. ಹಾಗಾಗಿ ಮಕ್ಕಳ ವಿಷಯದಲ್ಲೂ ಅಷ್ಟೇ ಒಂದೇ ಬಾರಿಗೆ ಎರಡು ಮಕ್ಕಳು ಆಗುತ್ತದೆ ಎಂದರೆ ಅದು ಇನ್ನು ವಿಶೇಷ ಎನಿಸಿಕೊಳ್ಳುತ್ತದೆ. ಇದು ತೀರಾ ಕಡಿಮೆ ಜನರಿಗೆ ಸಿಗುವ ಸೌಭಾಗ್ಯ. ಆದ್ದರಿಂದ ಹುಟ್ಟುವ ಮಕ್ಕಳು ಹಾಗೂ ಅದರ ತಾಯಿ ಮತ್ತು ಇಡೀ ಕುಟುಂಬಕ್ಕೆ ಅದೊಂದು ರೀತಿಯ ಸ್ಪೆಷಲ್.

ಯಾವ ಹಂತದಲ್ಲಿ ಈ ರೀತಿ ಅವಳಿ ಮಕ್ಕಳು ಆಗುತ್ತಿವೆ ಎಂದು ತಿಳಿದು ಬರುತ್ತದೆ ಎಂದರೆ ವೈದ್ಯಕೀಯ ಲೋಕವು ಹೇಳುತ್ತದೆ ತಾಯಿ ಗರ್ಭಿಣಿ ಆಗಿದ್ದಾಳೆ. ಎಂದು ತಿಳಿದು ಮೊದಲ ಬಾರಿ ಸ್ಕ್ಯಾನ್ ಮಾಡಿಸುವ ಸಮಯದಲ್ಲಿಯೇ ಹುಟ್ಟುವ ಮಕ್ಕಳು ಒಂದ ಎರಡ ಎಂದು ತಿಳಿದು ಬರುತ್ತದೆಯಂತೆ. ಅವಳಿ ಜವಳಿ ಮಕ್ಕಳು ಆಗುವುದರಲ್ಲಿ ಕೂಡ ಎರಡು ರೀತಿ ಇದೆ ಮನೋಗೈಜೆಟಿಕ್ ಮತ್ತು ಡೈಜೋಗೈಜೇಟಿಕ್. ಒಂದೇ ಎಂರಿಯೋದಲ್ಲಿ ಬೆಳೆಯುತ್ತಿರುವ ಮಕ್ಕಳನ್ನು ಮನೋಗೈಜೆಟಿಕ್ ಹಾಗೂ ಬೇರೆ ಬೇರೆ ಎಂರಿಯೋದಲ್ಲಿ ಬೆಳೆಯುತ್ತಿರುವ ಮಕ್ಕಳನ್ನು ಡೈಜೋಗೈಜೆಟಿಕ್ ಎಂದು ಕರೆಯಲಾಗುತ್ತದೆ.

ಮನೋಗೈಜಟಿಕ್ ಆಗಿರುವ ಮಕ್ಕಳು ಅನುವಂಶಿಕರಣ ಸಂರಕ್ಷಣೆ ಒಂದೇ ರೀತಿ ಇರುವುದರಿಂದ ಅವರು ಒಂದೇ ರೀತಿ ಕಾಣುತ್ತಾರೆ. ಆದರೆ ಡೈಜೋ ಗೈಜೆಟಿಕ್ ಮಕ್ಕಳು ಎರಡು ಬೇರೆ ಬೇರೆ ಎಕ್ಸ್ ಇಂದ ಪೋರ್ಟಿ ಲೈಟ್ ಆಗಿರುವುದರಿಂದ ಅವರು ಬೇರೆ ಬೇರೆ ರೀತಿ ಕಾಣುತ್ತಾರೆ. ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚಾಗಿರುವುದು ಪತಿ ಅಥವಾ ಪತ್ನಿ ಅವಳಿಗಳಾಗಿದ್ದರೆ ಹೆಚ್ಚಾಗಿರುತ್ತದೆ ಈ ರೀತಿ ಅವಳು ಜವಳಿ ಮಕ್ಕಳು ಆಗುವ ಸಾಧ್ಯತೆ ತಾಯಿ ಕಡೆಯಿಂದ ಬರುತ್ತದೆ.

ಮನೆಯಲ್ಲಿ ಅವಳಿ ಜೋಡಿ ಈಗಾಗಲೇ ಇದ್ದರೆ, ಅದು ತಾಯಿಯ ಕಡೆಯವರಿಗೆ ಅವಳಿ ಜವಳಿ ಮಕ್ಕಳು ಈಗಾಗಲೇ ಇದ್ದರೆ ಇಂತಹ ಕುಟುಂಬಗಳಲ್ಲಿ ಮತ್ತೆ ಮತ್ತೆ ಅವಳಿ ಜವಳಿ ಮಕ್ಕಳುಗಳು ಹುಟ್ಟುತ್ತಿರುತ್ತಾರೆ. 35 ವರ್ಷದ ಮೇಲೆ ಗರ್ಭ ಧರಿಸುವವರೆಗೆ ಅವಳು ಜವಳಿ ಆಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಎರಡು ಮೂರು ಮಕ್ಕಳಾದ ನಂತರ ಮತ್ತೆ ತಾಯಿ ಆಗುವವರೆಗೂ ಕೂಡ ಅವಳು ಜವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಫರ್ಟಿಲಿಟಿ ಚಿಕಿತ್ಸೆಯಿಂದ ಮಕ್ಕಳು ಪಡೆಯುವವರಿಗೂ ಸಹ ಅವಳಿ ಮಕ್ಕಳಾಗುವ ಸಾಧ್ಯತೆ ಇರುತ್ತದೆ. ಒಂದು ರಿಸರ್ಚ್‌ ನಾ ಪ್ರಕಾರ ಈ ರೀತಿ ಅವಳಿ ಮಕ್ಕಳಿಗೆ ತಾಯಿ ಆಗುವವರು ದೀರ್ಘಕಾಲ ಆರೋಗ್ಯವಾಗಿ ಬದುಕಿರುತ್ತಾರಂತೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now