ಮೋಸದಿಂದ ಹಕ್ಕು ಬಿಡುಗಡೆ ಪತ್ರ ಬರೆಸಿಕೊಂಡರೆ ಪರಿಹಾರ ಏನು ನೋಡಿ

  ಹಕ್ಕು ಬಿಡುಗಡೆ ಪತ್ರ ಎಂದರೆ ಒಂದು ಪಿತ್ರಾರ್ಜಿತ ಆಸ್ತಿಯಲ್ಲಿ ತಮ್ಮ ಪಾಲಿಗೆ ಬರಬೇಕಾದ ಆಸ್ತಿ ಹಕ್ಕನ್ನು ತಮ್ಮ ಸ್ವಂತ ಇಚ್ಛೆಯಿಂದ ತ್ಯಾಗ ಮಾಡುವುದಾಗಿದೆ. ಉದಾಹರಣೆಯೊಂದಿಗೆ ಹೇಳುವುದಾದರೆ ಒಬ್ಬ ತಂದೆಗೆ ನಾಲ್ಕು ಜನ ಮಕ್ಕಳು ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬರು ಹೆಣ್ಣು ಮಗಳಿರುತ್ತಾಳೆ ಎಂದುಕೊಳ್ಳೋಣ ಆ ತಂದೆಗೆ 5 ಎಕರೆ ಜಮೀನು ಪಿತ್ರಾರ್ಜಿತ ಆಸ್ತಿ ಇರುತ್ತದೆ. ಅವಿಭಕ್ತ ಕುಟುಂಬದ ಆಸ್ತಿಯು ವಿಭಾಗ ಆದಾಗ ತಂದೆಯ ಆಸ್ತಿಯು ನಾಲ್ಕು ಜನ ಮಕ್ಕಳಿಗೂ ತಲಾ ಒಂದೊಂದು ಎಕರೆಯಾಗಿ … Read more

ಆಸ್ತಿ ಬೇಡ ಎಂದು ಪತ್ರ ಬರೆದು ಕೊಟ್ಟಿದ್ದೀರಾ.? ಹಾಗಾದರೆ ಮುಂದೆ ಪರಿಹಾರ ಏನು ನೋಡಿ.!

  ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಅವರ ತವರಿನ ಆಸ್ತಿಗೆ ಸಂಬಂಧಪಟ್ಟ ಹಾಗೆ ಈ ರೀತಿ ಸಮಸ್ಯೆಗಳು ಆಗುತ್ತಿರುತ್ತವೆ. ಕೆಲವು ಹೆಣ್ಣು ಮಕ್ಕಳ ಸ್ವಇಚ್ಛೆಯಿಂದಲೇ ತವರು ಮನೆ ಯಾವುದೇ ಆಸ್ತಿ ಬೇಡ ಎಂದು ಹಕ್ಕು ಬಿಡುಗಡೆ ಪತ್ರದಲ್ಲಿ ಸಹಿ ಮಾಡಿ ಕೊಟ್ಟಿರುತ್ತಾರೆ ಆದರೆ ಎಲ್ಲ ಹೆಣ್ಣು ಮಕ್ಕಳಿಗೂ ಇಂತಹ ಪರಿಸ್ಥಿತಿ ಇರುವುದಿಲ್ಲ. ಯಾಕೆಂದರೆ ಮದುವೆಯಾಗಿ ಆ ಹೆಣ್ಣು ಮಗಳು ಹೋದಮೇಲೆ ಸಹೋದರರು ಅಥವಾ ತವರು ಮನೆ ಕಡೆಯವರು ಆಕೆಯನ್ನು ವಿಚಾರಿಸಿಕೊಳ್ಳದೆ ಇರುವುದು ಅಥವಾ ತನ್ನ ಪತಿಯ ಮನೆಯಲ್ಲಿ ಬಹಳ … Read more

ಸೈಟ್, ಜಮೀನು ವ್ಯಾಜ್ಯ ಕೋರ್ಟ್ ನಲ್ಲಿ ಇದ್ದಾಗ ಕಟ್ಟಡ ಕಾಮಗಾರಿ ಮಾಡಬಹುದ.?

  ಒಮ್ಮೊಮ್ಮೆ ಜೀವನದಲ್ಲಿ ನಾವು ಊಹಿಸಲು ಸಾಧ್ಯವಾಗದ ರೀತಿ ಕಷ್ಟಗಳು ಎದುರಾಗುತ್ತವೆ. ಅದರಲ್ಲೂ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳು ಬಂದರೆ ಜೀವನದ ಅಭದ್ರತೆ ಹೆಚ್ಚಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಸ್ತಿ ವಿಚಾರವಾಗಿ ಹಣಕಾಸಿನ ವಿಚಾರದ ಬಗ್ಗೆ ಕೋರ್ಟ್ ಕಚೇರಿ ಅಲೆಯುವಂತಹ ಸನ್ನಿವೇಶಗಳ ಹೆಚ್ಚಾಗಿ ಬರುತ್ತಿವೆ. ಈ ಬಗ್ಗೆ ಎಷ್ಟು ಜಾಗೃತಿಯಿಂದ ಇದ್ದರೂ ಸಾಲದು. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಸುಳಿಯೊಳಗೆ ನಾವು ಸಿಲುಕಿ ಬಿಡುತ್ತೇವೆ. ಉದಾಹರಣೆಯೊಂದಿಗೆ ವಿವರಿಸುವುದಾದರೆ ನಮಗೆ ಒಂದು ಸೈಟ್ ಅಥವಾ ಜಮೀನು ಇರುತ್ತದೆ ಇದರ … Read more

ಗಂಡ ಹೆಂಡತಿಗೆ ಮಕ್ಕಳು ಇಲ್ಲದೆ ಇದ್ದಲ್ಲಿ ಅವರ ನಂತರ ಆಸ್ತಿ ಯಾರ ಪಾಲಾಗುತ್ತೆ.?

ಇಂದು ಸಮಾಜದಲ್ಲಿ ಆಸ್ತಿ ವಿಚಾರವಾಗಿ ಸಾಕಷ್ಟು ಗೊಂದಲ ಇದೆ. ಪ್ರತಿ ಕುಟುಂಬದಲ್ಲೂ ಕೂಡ ಮನಸ್ತಾಪ ಉಂಟಾಗುವುದಕ್ಕೆ ಮುಖ್ಯ ಕಾರಣವೇ ಹಣಕಾಸು ವಿಷಯವಾಗಿದ್ದು, ಈ ಆಸ್ತಿ ವಿವಾದ ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ, ತಂದೆ ಮಕ್ಕಳ, ಗಂಡ-ಹೆಂಡತಿಯ ನಡುವಿನ ಬಾಂಧವ್ಯಕ್ಕೂ ಹುಳಿ ಹಿಂಡುತ್ತಿದೆ. ಪ್ರತಿನಿತ್ಯ ಕೂಡ ಕೋರ್ಟು ಕಚೇರಿ ಎಂದು ಅಲೆಯುವವರಲ್ಲಿ ಶೇಕಡಾವಾರು ಹೆಚ್ಚಿನ ಮಂದಿ ಆಸ್ತಿ ಸಂಬಂಧಿಸಿದ ವಿಷಯಕ್ಕಾಗಿಯೇ ಹೋರಾಡುತ್ತಿದ್ದಾರೆ. ಇಷ್ಟೆಲ್ಲ ಕಾರಣ ಇರುವುದರಿಂದ ಪ್ರತಿಯೊಬ್ಬರು ಆಸ್ತಿ ಸಂಬಂಧಪಟ್ಟ ಹಕ್ಕು ಅಧಿಕಾರಗಳ ವಿಷಯವಾಗಿ ಕೆಲವು ಸಾಮಾನ್ಯ ವಿಷಯಗಳನ್ನು ತಿಳಿದುಕೊಂಡಿರಲೇಬೇಕು. ಹಾಗಾಗಿ … Read more

ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿ ಎಂದರೇನು ಇದಕ್ಕೆ ನಿಜವಾದ ವಾರಸುದಾರರು ಯಾರು ಆಗುತ್ತಾರೆ ನೋಡಿ.!

  ಪ್ರತಿಯೊಬ್ಬರಿಗೂ ಕೂಡ ತಮ್ಮ ಕುಟುಂಬದ ಆಸ್ತಿ ವಿವರ ಗೊತ್ತಿರಬೇಕು. ಪ್ರತಿ ವ್ಯಕ್ತಿಗೂ ಖಂಡಿತವಾಗಿ ಮನೆ ಇರುತ್ತದೆ, ಖಾಲಿ ನಿವೇಶನ ಇರುತ್ತದೆ, ಹೊಲ ಗದ್ದೆ ಜಮೀನು ಇರುತ್ತದೆ. ಇದು ಯಾರು ಸ್ವತ್ತು? ಯಾರ ಹೆಸರಿನಲ್ಲಿದೆ? ಯಾರಿಂದ ತಂದೆಗೆ ಬಂದಿದೆ ಇದೆಲ್ಲವನ್ನು ತಿಳಿದುಕೊಂಡಿರಬೇಕು. ಹೀಗಿದ್ದಾಗ ಮಾತ್ರ ಮುಂದೆ ಆಸ್ತಿ ಸಂಬಂಧಿಸಿದವಾಗಿ ಯಾವುದೇ ತಕರಾರು ಬಂದರು ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇತ್ಯರ್ಥ ಮಾಡಿಕೊಳ್ಳಬಹುದು. ಈ ವಿಚಾರ ಬಂದಾಗ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿ ಎನ್ನುವ ಎರಡು ವಿಭಾಗವನ್ನು ನೋಡುತ್ತೇವೆ. … Read more

ಗಂಡನ ಆಸ್ತಿಯಲ್ಲಿ ವಿಧವೆಗೆ ಪಾಲು ಸಿಗುತ್ತ.? ಕಾನೂನು ಏನು ಹೇಳುತ್ತೆ ಗೊತ್ತ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಆಸ್ತಿಯಲ್ಲಿ ವಿಧವೆಯ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾದ ಅಂಶವಾಗಿದೆ. ಆಸ್ತಿಯಲ್ಲಿ ವಿಧವೆಯ ಹಕ್ಕುಗಳು ಸ್ಪಷ್ಟವಾಗಿಯೇ ಇವೆ. ಆಕೆ ಪತಿಯ ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿ ಎರಡರಲ್ಲೂ ಪಾಲು ಪಡೆಯುವ ಹಕ್ಕು ಹೊಂದಿರುತ್ತಾಳೆ. ಮಕ್ಕಳಿದ್ದರೆ ಆಸ್ತಿ ಹಕ್ಕು ಇನ್ನಷ್ಟು ವಿಭಜನೆಯಾಗುತ್ತದೆ. ಹೌದು, 1938ರಲ್ಲಿ ಮಹಿಳಾ ಹಕ್ಕು ಎಂಬ ಕಾನೂನು ಬರುತ್ತದೆ. ಈ ವೇಳೆ ವಿಧವೆಗೆ ಆಸ್ತಿ ಹಕ್ಕು ಕೊಡೋದಿಲ್ಲ. ನಂತ್ರ, 1956ರಲ್ಲಿ ಹಿಂದೂ ಸಕ್ಷೇಷನ್‌ ಆಕ್ಟ್‌ ಬರುತ್ತದೆ. ಇದರಲ್ಲಿ ಮಹಿಳೆಯರಿಗೆ, ವಿಧವೆಯರಿಗೆ ಹಾಗೂ ಹುಟ್ಟಿದಂತಹ … Read more

ಲವ್ ಮ್ಯಾರೇಜ್ ಮಾಡಿಕೊಳ್ಳುವ ಮೊದಲು ಈ ವಿಷಯಗಳನ್ನು ತಿಳಿದುಕೊಂಡಿರಿ.!

  ಇತ್ತೀಚೆಗೆ ಗಂಡನ ಮೇಲೆ ಪೋಕ್ಸೋ ಕೇಸ್ ಹಾಕುವವರನ್ನು ನೋಡುತ್ತಿದ್ದೇವೆ. ಲವ್ ಮ್ಯಾರೇಜ್ ಆದಾಗ ಹೆಣ್ಣಿನ ಕಡೆಯವರು ತಮ್ಮ ಮಗಳು ಮದುವೆ ಆದ ಹುಡುಗನ ಅಂದರೆ ಮಗಳ ಗಂಡನ ಮೇಲೆಯೇ ಕಿಡ್ನಾಪ್ ಕೇಸ್ ಗಳನ್ನು ಹಾಕುತ್ತಿದ್ದಾರೆ. ಈ ರೀತಿ 370, ಫೋಕ್ಸ್, ರೇಪ್ ಕೇಸ್ ಗಳಲ್ಲಿ ಐದರಿಂದ ಏಳು ವರ್ಷಗಳವರೆಗೆ ಗಂಡನಾದವನು ಜೈಲಿಗೆ ಅಲೆಯುತ್ತಿರುತ್ತಾನೆ. ಎಷ್ಟೋ ಪ್ರಕರಣಗಳಲ್ಲಿ ಲವ್ ಮ್ಯಾರೇಜ್ ಆದ ಕಾರಣಕ್ಕಾಗಿಯೇ ಆ ಹುಡುಗರು ಅನ್ಯಾಯವಾಗಿ ಈ ರೀತಿಯ ಕೇಸ್ ಗಳಲ್ಲಿ ತಗಲಿ ಹಾಕಿಕೊಂಡಿರುತ್ತಾರೆ. ಹಾಗಾಗಿ … Read more

ರಾಜ್ಯದಲ್ಲಿ SC / ST ಗೆ ಸೇರಿದ ಜಾಗ ಖರೀದಿಸಬಹುದಾ‌.? ಕಾನೂನಿನಲ್ಲಿ ಈ ಬಗ್ಗೆ ಏನಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕಳೆದ ವರ್ಷ ಕರ್ನಾಟಕ ರಾಜ್ಯ ಸರ್ಕಾರವು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ (PTCL Amendment Bill) 2023 ನ್ನು ಜಾರಿಗೆ ತಂದಿತು. 20 ಜುಲೈ, 2023ರಂದು ನಡೆದ ವಿಧಾನಸಭಾ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ (Revenue Minister Krishna Bairegowda) ಈ ಅಮೆಂಡ್ ಮೆಂಟ್ ಮಂಡಿಸಿದ್ದರು. ಇದು ಹೇಳುವುದೇನೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸರ್ಕಾರದಿಂದ ಜೀವನಕ್ಕಾಗಿ ಮಂಜೂರಾಗಿರುವ ಕೃಷಿ ಭೂಮಿಯನ್ನು ಯಾವುದೇ ವ್ಯಕ್ತಿ ಅಥವಾ ಕಂಪನಿ … Read more

ಇನ್ಮುಂದೆ ಬಡವರಿಗೆ 6 ತಿಂಗಳಲ್ಲಿ ನ್ಯಾಯ ಸಿಗುತ್ತೆ, ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕರ್ನಾಟಕವು ತ್ವರಿತ ನ್ಯಾಯದ ಭರವಸೆ ನೀಡುವ ಹೊಸ ಸಿವಿಲ್ ಪ್ರೊಸೀಜರ್ ಕೋಡ್ (Civil Procedure Code) ಸೂಚಿಸಿದೆ. ಈ ಮಸೂದೆಯನ್ನು ಕಳೆದ ವರ್ಷ ಜುಲೈನಲ್ಲಿ ಅಂಗೀಕರಿಸಲಾಗಿತ್ತು ಆದರೆ ಅದು ಈ ವರ್ಷ 18 ಫೆಬ್ರವರಿ, 2024 ರಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು (President Draupadi Marmu) ಅವರಿಂದ ಒಪ್ಪಿಗೆ ಪಡೆಯಿತು. ಇನ್ನು ಮುಂದೆ ಸಣ್ಣ ರೈತರಿಗೆ ಹಾಗೂ ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಕೇವಲ ಆರು ತಿಂಗಳ ಒಳಗೆ ನ್ಯಾಯ ಕೊಡಿಸಬೇಕು ಎನ್ನುವುದೇ ಈ … Read more

ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ…

  ನಮ್ಮ ದೇಶದಲ್ಲಿ ಹಣ ಮಾಡುವ, ಆಸ್ತಿ ಖರೀದಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಕೂಡ ಇದೆ. ಆದರೆ, ಈ ಎಲ್ಲ ವಿಚಾರದಲ್ಲೂ ಕೂಡ ಸಾಕಷ್ಟು ಕಾನೂನು ನಿಯಮಗಳು ಇವೆ. ಇದನ್ನು ಮೀರಿದ್ದಲ್ಲಿ ಮುಂದೊಂದು ದಿನ ಕಾನೂನು ರೀತಿಯ ತೊಡಕುಗಳನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಕುರಿತಾದ ಸಾಮಾನ್ಯ ಜ್ಞಾನ ಇರಲೇಬೇಕು. ಅತಿ ಮುಖ್ಯವಾಗಿ ಹೇಳುವುದಾದರೆ ನೀವು ಯಾವ ಆಸ್ತಿಯನ್ನು ಖರೀದಿ ಮಾಡುತ್ತೀರಿ ಮತ್ತು ಎಷ್ಟು ಹಣಕ್ಕೆ ಖರೀದಿ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ನೀವು ಆಸ್ತಿ ತೆರಿಗೆಯನ್ನು … Read more