ಇಂದು ಸಮಾಜದಲ್ಲಿ ಆಸ್ತಿ ವಿಚಾರವಾಗಿ ಸಾಕಷ್ಟು ಗೊಂದಲ ಇದೆ. ಪ್ರತಿ ಕುಟುಂಬದಲ್ಲೂ ಕೂಡ ಮನಸ್ತಾಪ ಉಂಟಾಗುವುದಕ್ಕೆ ಮುಖ್ಯ ಕಾರಣವೇ ಹಣಕಾಸು ವಿಷಯವಾಗಿದ್ದು, ಈ ಆಸ್ತಿ ವಿವಾದ ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ, ತಂದೆ ಮಕ್ಕಳ, ಗಂಡ-ಹೆಂಡತಿಯ ನಡುವಿನ ಬಾಂಧವ್ಯಕ್ಕೂ ಹುಳಿ ಹಿಂಡುತ್ತಿದೆ.
ಪ್ರತಿನಿತ್ಯ ಕೂಡ ಕೋರ್ಟು ಕಚೇರಿ ಎಂದು ಅಲೆಯುವವರಲ್ಲಿ ಶೇಕಡಾವಾರು ಹೆಚ್ಚಿನ ಮಂದಿ ಆಸ್ತಿ ಸಂಬಂಧಿಸಿದ ವಿಷಯಕ್ಕಾಗಿಯೇ ಹೋರಾಡುತ್ತಿದ್ದಾರೆ. ಇಷ್ಟೆಲ್ಲ ಕಾರಣ ಇರುವುದರಿಂದ ಪ್ರತಿಯೊಬ್ಬರು ಆಸ್ತಿ ಸಂಬಂಧಪಟ್ಟ ಹಕ್ಕು ಅಧಿಕಾರಗಳ ವಿಷಯವಾಗಿ ಕೆಲವು ಸಾಮಾನ್ಯ ವಿಷಯಗಳನ್ನು ತಿಳಿದುಕೊಂಡಿರಲೇಬೇಕು.
ಹಾಗಾಗಿ ಈ ಅಂಕಣದಲ್ಲಿ ಒಂದು ವೇಳೆ ಗಂಡ ಹೆಂಡತಿ ಇಬ್ಬರಿಗೂ ಮಕ್ಕಳು ಇಲ್ಲದೆ ಇದ್ದ ಪಕ್ಷದಲ್ಲಿ ಅವರ ಪಾಲಿನ ಆಸ್ತಿ ಯಾರಿಗೆ ಹೋಗುತ್ತದೆ ಎನ್ನುವ ಈ ಒಂದು ವಿಚಾರದ ಬಗ್ಗೆ ಮಾಹಿತಿ ತಿಳಿಸಲು ಬಯಸುತ್ತಿದ್ದೇವೆ. ಆಸ್ತಿ ವಿವಾದ ಎನ್ನುವುದು ಹೇಳುವಷ್ಟು ಸುಲಭವಾದ ವಿಚಾರವೂ ಕೂಡ ಅಲ್ಲ ಯಾಕೆಂದರೆ ಇದರಲ್ಲಿ ಸಾಕಷ್ಟು ಜಠಿಲತೆಗಳು ಇರುತ್ತವೆ.
ಈ ಸುದ್ದಿ ಓದಿ:- ಮನೆಯಲ್ಲಿ ಸ್ವಿಚ್ ಬೋರ್ಡ್ ಎಲ್ಲೆಲ್ಲಿ ಎಷ್ಟೆಷ್ಟು ಹಾಕಬೇಕು.? ಮನೆ ಕಟ್ಟುವವರು ತಪ್ಪದೆ ನೋಡಿ.!
ಇವುಗಳನ್ನು ಬಿಡಿಸುತ್ತಾ ಹೋದಂತೆ ವಿಷಯ ತಿಳಿಯಾಗುತ್ತ ಹೋಗುತ್ತದೆ. ಒಂದೇ ಬಾರಿಗೆ ಗಂಡ ಹೆಂಡತಿಗೆ ಮಕ್ಕಳಿಲ್ಲ ಎಂದರೆ ಆಸ್ತಿ ಇಂತವರಿಗೆ ಹೋಗುತ್ತದೆ ಎಂದು ಹೇಳಲು ಬರುವುದಿಲ್ಲ. ಅದರಲ್ಲೂ ಕೂಡ ಸಂದರ್ಭಗಳನ್ನು ಅನುಸರಿಸುತ್ತದೆ. ಉದಾಹರಣೆಗೆ ಗಂಡ ಮೊದಲು ಸತ್ತಿದ್ದು ನಂತರ ಹೆಂಡತಿ ಒಂದು ಮಗುವನ್ನು ದತ್ತು ತಗೊಂಡಿದ್ದರೆ ಹೆಂಡತಿ ಹಾಗೂ ಆ ಮಗುವಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ಬರುತ್ತದೆ.
ಒಂದುವೇಳೆ ಗಂಡ ಹೆಂಡತಿ ಇಬ್ಬರು ತೀರು ಹೋಗಿದ್ದರೆ ಮತ್ತು ಗಂಡನಿಗೆ ಪಿತ್ರಾರ್ಜಿತ ಆಸ್ತಿ ಇದೆ ಎಂದರೆ ಮೊದಲ ಹಂತದ ವಾರಸುದರರಾದ ತಾಯಿ ಹಾಗೂ ಹೆಂಡತಿಯಲ್ಲಿ ಹೆಂಡತಿ ಕೂಡ ಜೀವಂತ ಇಲ್ಲದ ಕಾರಣ ತಾಯಿಗೆ ಆಸ್ತಿ ಹಕ್ಕು ಹೋಗುತ್ತದೆ. ಹೆಂಡತಿಯು ಮತ್ತು ತಾಯಿ ಇಬ್ಬರು ತೀರಿ ಹೋಗಿದ್ದಲ್ಲಿ ಗಂಡನ ಸಹೋದರರು ಅಥವಾ ಸಹೋದರರ ಮಕ್ಕಳು ಎರಡನೇ ಹಂತದ ವಾರಸುದಾರರಾಗುತ್ತಾರೆ
ಅವರಿಗೆ ಪಾಲು ಹೋಗುತ್ತದೆ ಒಂದು ವೇಳೆ ಈ ಆಸ್ತಿಯು ಹೆಂಡತಿಗೆ ಆಕೆಯ ತವರು ಮನೆಯಿಂದ ಬಂದ ಆಸ್ತಿ ಆಗಿದ್ದರೆ ಹೆಂಡತಿ ತೀರಿಕೊಂಡ ನಂತರ ಮೊದಲನೇ ಹಂತದ ವಾರಸುದಾರರಾದ ಆಕೆಯ ತಾಯಿಗೆ ಆಸ್ತಿ ಹಕ್ಕು ಹೋಗುತ್ತದೆ. ಒಂದು ವೇಳೆ ಇಬ್ಬರು ಸೇರಿ ಮನಸ್ಸೋ ಇಚ್ಛೆಯಿಂದ ತಾವು ಬದುಕಿದ್ದಾಗಲೇ ಯಾವುದೋ ಧಾರ್ಮಿಕ ದತ್ತಿಗಳಿಗೆ ಸ್ವಯಾರ್ಜಿತ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿ ಆಗಲಿ ಸೇರಬೇಕು ಎಂದು ಮರಣ ಶಾಸನ ಬರೆಸಿದ್ದರೆ ಅವರ ನಂತರ ಸೇರುತ್ತದೆ.
ಈ ಸುದ್ದಿ ಓದಿ:- ಬಿಡುಗಡೆ ಪತ್ರ ಎಂದರೇನು? ಇದು ಪಿತ್ರಾರ್ಜಿತ ಆಸ್ತಿಗೆ ಅನ್ವಯಿಸುತ್ತ.?
ಆದರೆ ಆ ವಿಷಯ ಆ ಸಂಸ್ಥೆಗಳಿಗೆ ಗೊತ್ತಾಗುವವರೆಗೂ ಕೂಡ ಕುಟುಂಬಸ್ಥರಲ್ಲಿ ಯಾರಾದರೂ ಅದನ್ನು ಅನುಭೋಗ ಮಾಡಿಕೊಂಡು ಹೋಗುತ್ತಿರುತ್ತಾರೆ. ನಂತರ ಯಾವುದಾದರೂ ಕಾನೂನು ತಾಪತ್ರಯ ಬಂದಾಗ ವಿಷಯ ಹೊರಬರುತ್ತದೆ. ಒಂದು ವೇಳೆ ಗಂಡ ಹೆಂಡತಿ ಸ್ವಂತ ಸಂಪಾದನೆಯಿಂದ ಆಸ್ತಿ ಸಂಪಾದನೆ ಮಾಡಿದ್ದರೆ ಸ್ವಯಾರ್ಜಿತ ಆಸ್ತಿಯನ್ನು ಅವರಿಗೆ ಇಷ್ಟ ಬಂದ ಯಾವುದೇ ಸಂಬಂಧಿಕ ಸಹೋದರ ಅಥವಾ ಮತ್ತಾರಿಗೆ ಬೇಕಾದರೂ ಸ್ವ ಇಚ್ಛೆಯಿಂದ ದಾನ ಪತ್ರದ ಮೂಲಕ ಆಸ್ತಿ ಹಕ್ಕು ವರ್ಗಾವಣೆ ಮಾಡಬಹುದು.
ಇಲ್ಲವಾದಲ್ಲಿ ತಮ್ಮ ನಂತರ ಯಾರಿಗೆ ಹೋಗಬೇಕು ಎಂದು ವಿಲ್ ಬರೆದು ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು. ಈ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ನಿಮ್ಮ ಹತ್ತಿರದಲ್ಲಿರುವ ನ್ಯಾಯಾಲಯಕ್ಕೆ ಭೇಟಿ ನೀಡಿ, ಕಾನೂನು ಸಲಹಾ ಕೇಂದ್ರವನ್ನು ಸಂಪರ್ಕಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.