ಬೆಂಗಳೂರಿನಲ್ಲಿದ್ದು ಉದ್ಯೋಗ ಅರಸುತ್ತಿರುವ ಅಥವಾ ಬೆಂಗಳೂರಿನಲ್ಲಿ ಉದ್ಯೋಗ ಮಾಡಲು ಬಯಸುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ KEA ಕಡೆಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (BDA Recruitment) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ KEA ಪ್ರಕಟಣೆಯನ್ನು ಹೊರಡಿಸಿ ಪರೀಕ್ಷೆಗಳನ್ನು ನಡೆಸಿ ಅರ್ಹರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ.
ಈ ನೇಮಕಾತಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಪುರುಷ ಮತ್ತು ಮಹಿಳಾ ಅರ್ಹ ಅಭ್ಯರ್ಥಿಗಳು ಪ್ರಯತ್ನಿಸಬಹುದಾಗಿತ್ತು ಎಲ್ಲರಿಗೂ ಅನುಕೂಲವಾಗಲಿ ಎನ್ನುವ ಸದ್ದುದೇಶದಿಂದ ಈ ಲೇಖನದಲ್ಲಿ ನೋಟಿಫಿಕೇಶನ್ ನಲ್ಲಿ ಹುದ್ದೆ ಬಗ್ಗೆ ತಿಳಿಸಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಗಂಡ ಹೆಂಡತಿಗೆ ಮಕ್ಕಳು ಇಲ್ಲದೆ ಇದ್ದಲ್ಲಿ ಅವರ ನಂತರ ಆಸ್ತಿ ಯಾರ ಪಾಲಾಗುತ್ತೆ.?
ನೇಮಕಾತಿ ಸಂಸ್ಥೆ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಉದ್ಯೋಗ ಸಂಸ್ಥೆ:- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 25 ಹುದ್ದೆಗಳು
ಹುದ್ದೆಗಳ ವಿವರ:-
* ಪ್ರಥಮ ದರ್ಜೆ ಸಹಾಯಕರು
* ದ್ವಿತೀಯ ದರ್ಜೆ ಸಹಾಯಕರು
ಉದ್ಯೋಗ ಸ್ಥಳ:- ಬೆಂಗಳೂರು…
ವೇತನ ಶ್ರೇಣಿ:-
* ಪ್ರಥಮ ದರ್ಜೆ ಸಹಾಯಕರು – ರೂ.27,650 ರಿಂದ ರೂ.52,650
* ದ್ವಿತೀಯ ದರ್ಜೆ ಸಹಾಯಕರು – ರೂ.21,400 ರಿಂದ ರೂ.42,000
ಈ ಸುದ್ದಿ ಓದಿ:- ಬಿಡುಗಡೆ ಪತ್ರ ಎಂದರೇನು? ಇದು ಪಿತ್ರಾರ್ಜಿತ ಆಸ್ತಿಗೆ ಅನ್ವಯಿಸುತ್ತ.?
ಶೈಕ್ಷಣಿಕ ವಿದ್ಯಾರ್ಹತೆ:-
* ಪ್ರಥಮ ದರ್ಜೆ ಸಹಾಯಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು ಅಥವಾ ಅದಕ್ಕೆ ತತ್ಸಮಾನವಾದ ವಿದ್ಯಾರ್ಹತೆಯನ್ನು ಪಡೆದಿರಬೇಕು.
* ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ದ್ವಿತೀಯ PUC ಅಥವಾ ITI ಅಥವಾ ಡಿಪ್ಲೋಮಾ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು.
ಈ ಸುದ್ದಿ ಓದಿ:- ಟೈಲ್ಸ್ ಮಾರ್ಬಲ್ ಗ್ರಾನೈಟ್ ನಿಮ್ಮ ಮನೆಗೆ ಯಾವುದು ಉತ್ತಮ ನೋಡಿ.!
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* 2A / 2B / 3A / 3B ವರ್ಗದ ಅಭ್ಯರ್ಥಿಗಳಿಗೆ 03 ವರ್ಷಗಳು
* SC / ST / ಪ್ರವರ್ಗ – 1ರ ಅಭ್ಯರ್ಥಿಗಳಿಗೆ 05 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು
ಈ ಸುದ್ದಿ ಓದಿ:- SC / ST ಸೈಟ್ ಜಮೀನು ಯಾವುದನ್ನು ಬೇಕಾದರೂ ಧೈರ್ಯದಿಂದ ತೆಗೆದುಕೊಳ್ಳಬಹುದು ಆದರೆ ಈ ದಾಖಲೆಗಳು ಇರಬೇಕು.!
ಅರ್ಜಿ ಶುಲ್ಕ:-
* ಅರ್ಜಿ ಶುಲ್ಕವನ್ನು ಆನ್ಲೈನ್ ವಿಧಾನದಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಅಥವಾ UPI ಪೇಮೆಂಟ್ ಮೂಲಕ ಪಾವತಿಸಬೇಕು.
* ಸಾಮಾನ್ಯ ಹಾಗೂ 2A / 2B / 3A / 3B ವರ್ಗದ ಅಭ್ಯರ್ಥಿಗಳಿಗೆ ರೂ.750
* SC / ST ಮತ್ತು ಪ್ರವರ್ಗ – 1ರ ಅಭ್ಯರ್ಥಿಗಳಿಗೆ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.500
ಅರ್ಜಿ ಸಲ್ಲಿಸುವ ವಿಧಾನ:-
* https://kea.kar.nic.in ಅಧಿಕೃತ ವೆಬ್ ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬೇಕು
* ಪೂರಕ ದಾಖಲೆಗಳನ್ನು ಒದಗಿಸಿ ಅರ್ಜಿ ಶುಲ್ಕ ಪಾವತಿಸಿದ ಮೇಲೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಗೊಳ್ಳುತ್ತದೆ ನಂತರ ತಪ್ಪದೇ ಇ-ರಸೀದಿಗಳನ್ನು ಪಡೆಯಬೇಕು.
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ಸಂದರ್ಶನ
ಈ ಸುದ್ದಿ ಓದಿ:- ಕೇವಲ 45 ಸಾವಿರದ ಈ ಮಿಷನ್ ನಿಂದ ತಿಂಗಳಿಗೆ ಒಂದು ಲಕ್ಷ ದುಡಿಯಬಹುದು ಯಾವುದೇ ಅನುಭವ ಬೇಕಾಗಿಲ್ಲ.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 25 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24 ಏಪ್ರಿಲ್, 2024.