ಮನೆ ಕಟ್ಟಿಸುವ ವಿಚಾರ ಬಂದಾಗ ಪ್ರತಿಯೊಂದು ವಿಷಯವು ಕೂಡ ತುಂಬಾ ಇಂಪಾರ್ಟೆಂಟ್. ಯಾಕೆಂದರೆ ಅದು ಬದಲಾಯಿಸುವ ವಿಚಾರವು ಕೂಡ ಅಲ್ಲ ಜೊತೆಗೆ ಪದೇ ಪದೇ ಅದಕ್ಕೆ ಇನ್ವೆಸ್ಟ್ ಮಾಡಲು ಹಣ ಇರುವುದಿಲ್ಲ ಬಹುತೇಕ ಸಮಯದಲ್ಲಿ ಆಪ್ಷನ್ ಕೂಡ ಇರುವುದಿಲ್ಲ.
ಹಾಗಾಗಿ ಮನೆ ಕಟ್ಟುವ ಮುನ್ನವೇ ಎಲ್ಲದಕ್ಕೂ ಸರಿಯಾಗಿ ಪ್ಲಾನ್ ಮಾಡಿ ತಿಳಿದವರ ಸಹಾಯ ತೆಗೆದುಕೊಂಡು ಮತ್ತು ಇದರ ಬಗ್ಗೆ ನೀವು ಸಹ ಸ್ವಲ್ಪ ಯೋಚನೆ ಮಾಡಿ ನಿರ್ಧಾರಗಳನ್ನು ಮಾಡಬೇಕು ಆಗ ಮಾತ್ರ ನಮಗೆ ತೃಪ್ತಿಕರವಾದ ರೀತಿಯಲ್ಲಿ ಮನೆ ಆಗುತ್ತದೆ.
ಸದ್ಯಕ್ಕೆ ನೀವು ಮನೆ ಕಟ್ಟುತ್ತೀರ ಫ್ಲೋರಿಂಗ್ ಹಂತದಲ್ಲಿ ಇದ್ದೀರಾ ಎಂದರೆ ಸದ್ಯಕ್ಕೆ ನಿಮ್ಮ ಯೋಚನೆಗೆ ಬರುವುದು ಟೈಲ್ಸ್ ಹಾಕಿಸಬೇಕೋ? ಮಾರ್ಬಲ್ ಹಾಕಿಸಬೇಕೋ? ಅಥವಾ ಗ್ರಾನೈಟ್ ಗೆ ಹಾಕಿಸಬೇಕೇ? ಯಾವುದು ಬೆಸ್ಟ್ ಎಂದು. ಇದರ ಬಗ್ಗೆಯೇ ಈ ಲೇಖನದಲ್ಲಿ ಕೆಲ ಮಾಹಿತಿ ತಿಳಿಸಲು ಇಚ್ಛಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಕಂದಾಯ ಇಲಾಖೆ ನೇಮಕಾತಿ, PUC ಆಗಿದ್ರೆ ಸಾಕು ಅರ್ಜಿ ಸಲ್ಲಿಸಿ ವೇತನ 42,000/-
ಈ ಮೂರಕ್ಕೂ ಕೂಡ ತಮ್ಮದೇ ಆದ ಪ್ಲಸ್ ಹಾಗೂ ಮೈನಸ್ ಪಾಯಿಂಟ್ ಗಳು ಇವೆ. ಬೆಲೆ ವಿಚಾರವಾಗಿ ಹೇಳುವುದಾದರೆ ಟೈಲ್ಸ್ ಗಳಿಗಿಂತಲೂ ಗ್ರಾನೈಟ್ ಎರಡು ಪಟ್ಟು ದುಬಾರಿ, ಗ್ರಾನೆಟ್ ಗಿಂತಲೂ ಮಾರ್ಬಲ್ ಎರಡು ಪಟ್ಟು ದುಬಾರಿ ಆಗಿದೆ.
ಹಾಗೆ ಲುಕ್ ಕೂಡ ಒಂದಕ್ಕಿಂತ ಒಂದು ಸ್ವಲ್ಪ ಚೇಂಜಸ್ ಇರುತ್ತದೆ ಇನ್ನು ಬಾಳಿಕೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಹೇಳುವುದಾದರೆ ಗ್ರಾನೆಟ್ ಗಳಿಗೆ ಹೆಚ್ಚು ಭಾರವನ್ನು ತಡೆದುಕೊಳ್ಳುವ ಶಕ್ತಿ ಇದೆ ಮತ್ತು ಸುಲಭವಾಗಿ ಒಡೆಯಲು ಆಗುವುದಿಲ್ಲ ಹೆಚ್ಚಾಗಿ ಕಲೆಗಳು ಕೂಡ ಆಗುವುದಿಲ್ಲ. ಟೈಲ್ಸ್ ಭಾರ ತಡೆಯುವುದಿಲ್ಲ ಸ್ವಲ್ಪ ವೇಟ್ ಜಾಸ್ತಿ ಇರುವ ವಸ್ತು ಬಿದ್ದರೆ ಹೊಡೆಯುತ್ತವೆ ಮತ್ತು ಸರಿಯಾಗಿ ಫ್ಲೋರಿಂಗ್ ಮಾಡದೆ ಇದ್ದಾಗ ಅದು ಬೆಂಡ್ ಆಗುತ್ತದೆ.
ಟೈಲ್ಸ್ ಗಳಲ್ಲಿ ಯಾವುದಾದರೂ ಮಧ್ಯದಲ್ಲಿ ಒಂದು ಸಮಯದಲ್ಲಿ ಹೊಡೆದು ಹೋದರೆ ಅದಕ್ಕೆ ಬದಲಾಯಿಸಲು ಸೇಮ್ ಪ್ಯಾಟರ್ನ್ ಸಿಗುವುದು ಬಹಳ ಕಷ್ಟ ಹಾಗಾಗಿ ಮನೆ ಕಟ್ಟಿಸುವ ಪ್ಯಾಟರ್ನ್ ಬಾಕ್ಸ್ ಒಂದು ಬಾಕ್ಸ್ ಹೆಚ್ಚಾಗಿ ತೆಗೆದುಕೊಳ್ಳಿ ಎಂದು ಸಲಹೆ ನೀಡಲಾಗುತ್ತದೆ. ಇದು ನಿಲಕ್ಷಿಸುವ ವಿಚಾರ ಅಂತೂ ಅಲ್ಲವೇ ಅಲ್ಲ.
ಈ ಸುದ್ದಿ ಓದಿ:- ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!
ಇನ್ನು ಮಾರ್ಬಲ್ ವಿಚಾರಕ್ಕೆ ಬಂದರೆ ಇದು ಬಾರಿ ಆದರೂ ಕೂಡ ಅದಕ್ಕೆ ತಕ್ಕಾನಾದ ಉತ್ತಮ ಫ್ಯೂಚರ್ಸ್ ಗಳನ್ನು ಹೊಂದಿದೆ. ಆದರೆ ಇದಕ್ಕಿರುವ ಒಂದೇ ಮೈನಸ್ ಪಾಯಿಂಟ್ ಏನೆಂದರೆ ಇದು ಬಹಳ ಶೀತ ಗುಣ ಹೊಂದಿದೆ. ಹಾಗಾಗಿ ಶೀತ ಪ್ರಕೃತಿ ಇರುವವರು ಇದನ್ನು ಚೂಸ್ ಮಾಡದೆ ಇರುವುದೇ ಒಳ್ಳೆಯದು.
ಹೊರಗೆ ಚಳಿ ಮಳೆ ಇದ್ದಾಗ ಮನೆ ಒಳಗೆ ಇನ್ನು ಹೆಚ್ಚಿಗೆ ಕೋಲ್ಡ್ ಆಗಿಬಿಡುತ್ತದೆ ಅಷ್ಟು ಮಾರ್ಬಲ್ ಶೀತ ಗುಣ ಹೊಂದಿದೆ ಹಾಗಾಗಿ ನಿರ್ಧಾರ ಮಾಡುವಾಗ ಎಲ್ಲವನ್ನು ಕೂಡ ಕಾಂಟ್ಯಾಕ್ಟರ್ ಜವಾಬ್ದಾರಿಗೆ ಬಿಡುವ ಬದಲು ನೀವು ಸ್ವಲ್ಪ ಯೋಚನೆ ಮಾಡುವುದು ಒಳ್ಳೆಯದು.
ನಿಮ್ಮ ಬಜೆಟ್ ಗೆ ಅನುಗುಣವಾಗಿ ಯಾವಾಗಲೂ ಯೋಚಿಸಿ ಹಾಗೆ ಬಾಳಿಕೆ ವಿಚಾರವನ್ನು ಕೂಡ ಗಮನದಲ್ಲಿ ಇಟ್ಟುಕೊಳ್ಳಿ ಮತ್ತೊಂದು ವಿಚಾರವೇನೆಂದರೆ ಯಾವುದಕ್ಕೆ ಯಾವ ರೀತಿಯ ಟೈಲ್ಸ್ ಹಾಕಿಸಬೇಕು, ಮಾರ್ಬಲ್ ಅಥವಾ ಗ್ರಾನೈಟ್ ಎಲ್ಲಿ ಬಳಸಬೇಕು ಎನ್ನುವುದರ ಬಗ್ಗೆ ತಿಳಿದುಕೊಂಡು ಬಳಸಿದಾಗ ಇನ್ನು ಸ್ವಲ್ಪ ಖರ್ಚು ಉಳಿಸಬಹುದು.
ಈ ಸುದ್ದಿ ಓದಿ:- ಲೋಕಸಭೆ ಚುನಾವಣೆ ಹಿನ್ನೆಲೆ LPG ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ವರ್ಷಕ್ಕೆ 3 ಸಿಲಿಂಡರ್ ಉಚಿತ.!
ಯಾಕೆಂದರೆ ಕಿಚನ್ ನಲ್ಲಿ ವಾಶ್ ರೂಂಗೆ ಲಿವಿಂಗ್ ರೂಮ್ಗೆ ಈ ರೀತಿ ಸ್ಥಳಕ್ಕೆ ಅನುಗುಣವಾಗಿ ಇವುಗಳನ್ನು ಬಳಸಲಾಗುವುದರಿಂದ ಈ ರೀತಿ ವ್ಯತ್ಯಾಸ ಆಗುತ್ತದೆ. ಇದರ ಕುರಿತು ನಿಮಗೆ ಇನ್ನು ವಿವರವಾಗಿ ಮಾಹಿತಿ ಬೇಕು ಎಂದರೆ ವಿಡಿಯೋವನ್ನು ಪೂರ್ತಿಯಾಗಿ ನೋಡಿ.