ಎಲೆಕ್ಟ್ರಿಕಲ್ ವಾಹನಗಳ (EV) ಉತ್ಪಾದನೆ ಮತ್ತು ಬಳಕೆ ವಿಚಾರದಲ್ಲಿ ಭಾರತ ಹೊಸ ಕ್ರಾಂತಿಯತ್ತ ಮುನ್ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಆಟೋಮೊಬೈಲ್ಸ್ ಕಂಪನಿಗಳು ಮಾತ್ರವಲ್ಲದೆ ಸರ್ಕಾರವು ಕೂಡ ಈ ವಿಚಾರವನ್ನು ಪ್ರೋತ್ಸಾಹಿಸುತ್ತಿದೆ ಇದಕ್ಕೆ ಕಾರಣ ಕೂಡ ಇದೆ.
ಹೆಚ್ಚುತ್ತಿರುವ ಇಂಧನದರ ಮತ್ತು ನವೀಕರಿಸಲಾಗದ ಸಂಪನ್ಮೂಲಗಳ ಕೊರತೆ ತಣಿಸಿ ಈ ಹಾದಿಯಾಗಿ ಇಂಧನ ಬಳಕೆಯಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ಪರಿಸರ ಮಾಲಿನ್ಯದಿಂದ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಕಾಪಾಡಿ ಇಡುವ ಉದ್ದೇಶದಿಂದಾಗಿ ಸರ್ಕಾರ (Government) ಕೂಡ ಎಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಸಹಾಯ ನೀಡಿ ಪ್ರೋತ್ಸಾಹಿಸುತ್ತಿದೆ.
ಈ ಸುದ್ದಿ ಓದಿ:- ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಸರ್ಕಾರದಿಂದ 1200 ಹಣ ಪಡೆಯಿರಿ.!
ಆದರೂ ಕೂಡ ವಾಹನಗಳ ಬೆಲೆ ದುಬಾರಿ ಎಂದು ಬೇಸರ ಪಡುವವರಿಗೆ ಈಗ ಇ-ಮೊಬಿಲಿಟಿ ನೆಕ್ಸ್ ಜೆನ್ ಎನರ್ಜಿ (Nexgen Energy) ಕಡೆಯಿಂದ ಸಿಹಿ ಸುದ್ದಿ ಇದೆ. ಪೆಟ್ರೋಲ್ ಬೈಕ್ ಗಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನವನ್ನು ನೀವೀಗ ಖರೀದಿಸಬಹುದಾಗಿದೆ ಇದರ ಕುರಿತಾದ ಮಾಹಿತಿ ಹೀಗಿದೆ ನೋಡಿ.
ನೋಯ್ಡಾ ಮೂಲದ ಇ-ಮೊಬಿಲಿಟಿ ಕಂಪನಿ ನೆಕ್ಸ್ಜೆನ್ ಎನರ್ಜಿಯು ಕಳೆದ ವಾರ ಕೈಗೆಟುಕುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕೂಡ ವಾಹನ ಖರೀದಿಸಲು ಸಾಧ್ಯವಾಗುವಂತಹ ಅವಕಾಶ ಮಾಡಿಕೊಟ್ಟಿದೆ. ಈ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಯಮಿ ಹಾಗೂ ಬಾಲಿವುಡ್ ನಟರಾಗಿರುವ ಸುನೀಲ್ ಶೆಟ್ಟಿರವರು (Sunil Shetty) ಅನಾವರಣಗೊಳಿಸಿದರು.
ಈ ಸುದ್ದಿ ಓದಿ:- ಮಹಿಳೆಯರಿಗೆ ಉಚಿತ ಸ್ಟವ್ ವಿತರಣೆ ಆಸಕ್ತರು ರೀತಿ ಅರ್ಜಿ ಸಲ್ಲಿಸಿ.!
ಈ ಸ್ಕೂಟರ್ ಬೆಲೆಯು ಕೇವಲ 36,990 ರೂ.ಗಳಿಂದ ಪ್ರಾರಂಭವಾಗುತ್ತದೆ ಎನ್ನುವುದು ಎಲ್ಲಕ್ಕಿಂತ ಆಕರ್ಷಣೀಯ ವಿಷಯವಾಗಿದೆ. ಇದು ಭಾರತದಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ದ್ವಿಚಕ್ರ ವಾಹನ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ ಮುಂದಿನ ವರ್ಷದ ಅಂತ್ಯದೊಳಗೆ ಕಂಪನಿಯು ವಿಶ್ವದ ಅತ್ಯಂತ ಕೈಗೆಟುಕುವ ಬೆಲೆಯ ಕಾರನ್ನು ಬಿಡುಗಡೆ ಮಾಡಲು ಕೂಡ ಯೋಜನೆ ಹಾಕಿಕೊಂಡಿದೆ.
ನೆಕ್ಸ್ ಜೆನ್ ಎನರ್ಜಿಯಾ ಅಧ್ಯಕ್ಷ ಪಿಯೂಷ್ ದ್ವಿವೇದಿರವರು (Piyush Dwivedi) ಈ ಬಗ್ಗೆ ಮಾತನಾಡಿ, ಮುಂಬರುವ ಪೀಳಿಗೆಗೆ ಎಲೆಕ್ಟ್ರಿಕ್ ವಾಹನಗಳು ಕೈಗೆಟಕುವ ಬೆಲೆಯಲ್ಲಿ ಸಿಗುವಂತೆ ಮಾಡಬೇಕು ಇದರ ಮೂಲಕ ಪ್ರತಿಯೊಬ್ಬ ಭಾರತೀಯನ ಬಳಿಯೂ ಕೂಡ ಆತನ ಅವಶ್ಯಕತೆಗೆ ವಾಹನ ಇರುವಂತೆ ಆಗಬೇಕು ಮತ್ತು ಎಲೆಕ್ಟ್ರಿಕಲ್ ವಾಹನಗಳ ಬಳಕೆ ಉತ್ತೇಜಿಸಿ ಮುಂದಿನ ಪೀಳಿಗೆಗೆ ಸ್ವಚ್ಛ ಮತ್ತು ಆರೋಗ್ಯಕರ ಭವಿಷ್ಯವನ್ನು ಖಾತ್ರಿಪಡಿಸುವುದು ಕಂಪನಿಯ ಗುರಿಯಾಗಿದೆ.
ಈ ಸುದ್ದಿ ಓದಿ:- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಬೃಹತ್ ಉದ್ಯೋಗವಕಾಶ, 2,500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.! ವೇತನ 25,300/-
ಈ ಉದ್ದೇಶ ಇಟ್ಟುಕೊಂಡು ಕಂಪನಿಯು ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸಿದೆ. ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಯೋಜಿಸಲಾಗುತ್ತಿದೆ. ಇದು ಸಾಧ್ಯವಾದರೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ರೂ. 5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ದೊರೆಯಲಿದೆ. ಇದು ಮಧ್ಯಮ ವರ್ಗದ ಜನರಿಗೆ ಕಾರು ಖರೀದಿಸುವುದನ್ನು ಸುಲಭಗೊಳಿಸುತ್ತದೆ.
ಈ ನಿಟ್ಟಿನಲ್ಲಿ ಕಂಪನಿ ಹೆಜ್ಜೆ ಕೂಡ ಇಟ್ಟಿದ್ದು ಮಾರ್ಚ್ ನಲ್ಲಿ ರೂ.1,000 ಕೋಟಿ ಮೊತ್ತದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಘಟಕವನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ತಿಳಿಸಿದರು. ಸದ್ಯಕ್ಕೆ ಕಂಪನಿಯು ಈ ಹಣಕಾಸು ವರ್ಷದಲ್ಲಿ ದ್ವಿಚಕ್ರ ವಾಹನ ವಿಷಯದಲ್ಲಿ 500 ಕೋಟಿ ರೂ.ಗಿಂತ ಹೆಚ್ಚಿನ ಮಾರಾಟವನ್ನು ದಾಟುವ ಗುರಿಯನ್ನು ಹೊಂದಿದೆ.
ಈ ಸುದ್ದಿ ಓದಿ:- ಗಂಡನ ಆಸ್ತಿಯಲ್ಲಿ ವಿಧವೆಗೆ ಪಾಲು ಸಿಗುತ್ತ.? ಕಾನೂನು ಏನು ಹೇಳುತ್ತೆ ಗೊತ್ತ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
500 ಕ್ಕೂ ಹೆಚ್ಚು ವಿತರಕರು ಮತ್ತು ಎಲೆಕ್ಟ್ರಿಕಲ್ ವೆಹಿಕಲ್ ವಲಯದಲ್ಲಿ ಸುಮಾರು 50,000 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹೊರಟಿದೆ ಎನ್ನುವುದನ್ನು ಸಹ ತಿಳಿಸಿದರು. ಇ-ಮೊಬಿಲಿಟಿ ಸಾಧ್ಯವಾದಷ್ಟು ಬೇಗ ತನ್ನಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಭಾರತದ ವಾಹನ ಉದ್ಯಮದಲ್ಲಿ ಆಶ್ಚರ್ಯಕರ ಬದಲಾವಣೆಗಳು ಉಂಟಾಗುವುದರಲ್ಲಿ ಅನುಮಾನವೇ ಇಲ್ಲ.