ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಈಗ ಸುವರ್ಣ ಕಾಲವಾಗಿದೆ. ಯಾಕೆಂದರೆ ಒಂದಾದ ಮೇಲೆ ಒಂದರಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನ ಮಾಡಿ ಪರೀಕ್ಷೆಗಳನ್ನು ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಆ ಪ್ರಕಾರವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (BMTC) ಮತ್ತು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (GTTC) ವತಿಯಿಂದ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಹಲವು ವರ್ಷಗಳ ಬಳಿಕ ಬೃಹತ್ ಸಂಖ್ಯೆಯಲ್ಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA Notification) ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ.
ಈ ಸುದ್ದಿ ಓದಿ:- SBI ಬ್ಯಾಂಕ್ ನಲ್ಲಿ ನೇರ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲ ಆಸಕ್ತರು ಅರ್ಜಿ ಸಲ್ಲಿಸಿ.!
ಈ ಬಾರಿ ಸಾವಿರಾರು ಅಭ್ಯರ್ಥಿಗಳ ಸರ್ಕಾರಿ ಹುದ್ದೆ ಕನಸು ನನಸಾಗಲಿದೆ ಎಂದು ಭಾವಿಸಲಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಎಲ್ಲರಿಗೂ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ನೋಟಿಫಿಕೇಶನ್ ನಲ್ಲಿರುವ ಪ್ರಮುಖ ಸಂಗತಿಗಳ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ನೇಮಕಾತಿ ಸಂಸ್ಥೆ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)
ಹುದ್ದೆ ಹೆಸರು:- ನಿರ್ವಾಹಕರು
ಒಟ್ಟು ಹುದ್ದೆಗಳ ಸಂಖ್ಯೆ:- 2576 ಹುದ್ದೆಗಳು
ಹುದ್ದೆಗಳ ವಿವರ:-
GTTC – 76 ಹುದ್ದೆಗಳು
BMTC – 2500 ಹುದ್ದೆಗಳು.
ಈ ಸುದ್ದಿ ಓದಿ:- ಸ್ವಂತ ಉದ್ಯಮ ಮಾಡಲು ಸರಕಾರದಿಂದ ಸಿಗಲಿದೆ 10 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!
ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ರೂ.18,300 ರಿಂದ ರೂ.25,300 ವೇತನ ಸಿಗುತ್ತದೆ.
* ವೇತನದ ಜೊತೆಗೆ ಉಚಿತ ಬಸ್ ಪಾಸ್, ಉಚಿತ ವೈದ್ಯಕೀಯ ಸೌಲಭ್ಯಗಳು, ಪಿಂಚಣಿ ಯೋಜನೆ, ಉತ್ಸವ ಭತ್ಯೆ ಇತರ ಸೌಲಭ್ಯಗಳು ಇರುತ್ತವೆ.
ಉದ್ಯೋಗ ಸ್ಥಳ:- ಬೆಂಗಳೂರು…
ಶೈಕ್ಷಣಿಕ ವಿದ್ಯಾರ್ಹತೆ:-
* ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ PUC ಪರೀಕ್ಷೆಯನ್ನು ಯಾವುದೇ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು
* ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯಿಂದ 3 ವರ್ಷಗಳ ಡಿಪ್ಲೊಮಾ ಜೊತೆಗೆ ಮೋಟಾರು ವಾಹನ ಪರವಾನಗಿ & ಬ್ಯಾಡ್ಜ್ ಹೊಂದಿರಬೇಕು.
ಈ ಸುದ್ದಿ ಓದಿ:- SSLC ಪಾಸಾದವರಿಗೆ ಚಾಲಕ ಹಾಗೂ ಗ್ರೂಪ್ ಡಿ ಹುದ್ದೆಗಳು, ಸರ್ಕಾರಿ ಹುದ್ದೆ ಆಸೆ ಇದ್ದವರು ತಪ್ಪದೆ ಅರ್ಜಿ ಸಲ್ಲಿಸಿ.! ವೇತನ 42,000
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* SC / ST ಪ್ರವರ್ಗ-1ರ ಅಭ್ಯರ್ಥಿಗಳಿಗೆ 05 ವರ್ಷಗಳು
* ಮಾಜಿ ಸೈನಿಕ / ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
https://cetonline.karnataka.gov.in/kea/kbknrk2023 ಲಿಂಕ್ ಕ್ಲಿಕ್ ಮಾಡುವ ಮೂಲಕ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಸೂಚನೆಗಳನ್ನು ಪಾಲಿಸಿ ಅರ್ಜಿ ಸಲ್ಲಿಸಿ.
* ಅರ್ಜಿ ಶುಲ್ಕ ಪಾವತಿಸಿ ಇ-ರಸೀದಿ ಪಡೆಯಿರಿ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ಭವಿಷ್ಯದ ಬಳಕೆಗಾಗಿ ಅರ್ಜಿ ಸ್ವೀಕೃತಿ ಪ್ರತಿ ಪ್ರಿಂಟ್ ಮಾಡಿಕೊಳ್ಳಿ.
ಈ ಸುದ್ದಿ ಓದಿ:- RTO ಆಫೀಸಿಗೆ ಹೋಗದೆ ಆನ್ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಿಧಾನ.!
ಅರ್ಜಿ ಶುಲ್ಕ:-
* SC / ST, ಪ್ರವರ್ಗ -1, ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.500
* ಇತರೆ ಅಭ್ಯರ್ಥಿಗಳಿಗೆ ರೂ.750
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ಸಂದರ್ಶನ
* ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 19ನೇ ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 19ನೇ ಮೇ, 2024.