ಆತ್ಮನಿರ್ಭರ್ ಭಾರತ್ ಎನ್ನುವ ಧ್ಯೇಯಯೊಂದಿಗೆ ಸ್ವಂತ ಉದ್ಯೋಗ ಮಾಡುವವರನ್ನು ಪ್ರೋತ್ಸಾಹಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Govenment) ಹಲವು ಯೋಜನೆಗಳ ಮೂಲಕ ನೆರವು ನೀಡುತ್ತಿವೆ. ವಿದ್ಯಾವಂತ ಯುವಕ ಯುವತಿಯರು ಉದ್ಯೋಗ ಮಾಡುವುದರ ಬದಲು ಉದ್ಯಮ ಮಾಡಲು ಆಸಕ್ತಿ ವಹಿಸುವುದಾದರೆ ಸರಕಾರದ ಈ ಯೋಜನೆಗಳ ಮೂಲಕ ಪ್ರಯೋಜನ ಪಡೆಯಬಹುದು.
ಇಂತಹ ಯೋಜನೆಗಳಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ (Pradhana Mantri Mudra Yojane) ಕೂಡ ಒಂದಾಗಿದೆ. ಉತ್ಪಾದನೆ, ವ್ಯಾಪಾರ ಅಥವಾ ಸೇವಾ ಮತ್ತು ಕೃಷಿಯೇತರ ವಲಯದಲ್ಲಿ ತೊಡಗಿ ಆದಾಯವನ್ನು ಉತ್ಪಾದಿಸುವ ಕಿರು ಉದ್ಯಮಗಳಿಗೆ ಗರಿಷ್ಠ ರೂ.10 ಲಕ್ಷದವರೆಗೆ ಈ ಯೋಜನೆ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತದೆ. ಬಹಳ ಅನುಕೂಲಕರವಾಗಿರುವ ಈ ಯೋಜನೆ ಮಾಹಿತಿ ಎಲ್ಲರಿಗೂ ತಿಳಿಯಲಿ ಎನ್ನುವ ಉದ್ದೇಶದಿಂದ ಈ ಲೇಖನದಲ್ಲಿ ಯೋಜನೆ ಕುರಿತ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ.
ಈ ಸುದ್ದಿ ಓದಿ:- SSLC ಪಾಸಾದವರಿಗೆ ಚಾಲಕ ಹಾಗೂ ಗ್ರೂಪ್ ಡಿ ಹುದ್ದೆಗಳು, ಸರ್ಕಾರಿ ಹುದ್ದೆ ಆಸೆ ಇದ್ದವರು ತಪ್ಪದೆ ಅರ್ಜಿ ಸಲ್ಲಿಸಿ.! ವೇತನ 42,000
ಯೋಜನೆ ಹೆಸರು:- ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY),
ಪರಿಚಯ:- ಮುದ್ರಾ (MUDRA) ಎಂದರೆ ಮೈಕ್ರೋ ಯುನಿಟ್ಸ್ ಡೆವಲಪ್ಮೆಂಟ್ ಅಂಡ್ ರಿಫಿನೆನ್ಸ್ ಏಜೆನ್ಸಿ ಎಂದು ಅರ್ಥವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಸಣ್ಣ ಪುಟ್ಟ ಉದ್ಯಮ ಮಾಡುವವರಿಗೆ ಕಿರು ಸಾಲ (Micro Credit Loan) ನೀಡಲು ಈ ಯೋಜನೆಯನ್ನು ಏಪ್ರಿಲ್ 08ರಂದು ಆರಂಭಿಸಿದರು.
ಯಾರು ಅರ್ಹರು:-
* 18 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಯೋಜನೆಯಡಿ ಸಾಲ ಪಡೆಯಬಹುದು
* ನಿಮ್ಮ ಯೋಜನೆಯ ಆಧಾರದ ಮೇಲೆ ಸಾಲದ ಮೊತ್ತ ನಿರ್ಧಾರ ಆಗುತ್ತದೆ, ಮತ್ತು ಇದಕ್ಕೆ ಪೂರಕವಾಗಿ ಕೇಳಲಾಗುವ ಎಲ್ಲ ದಾಖಲೆಗಳನ್ನು ಒದಗಿಸಬೇಕು
* ವಿದ್ಯಾಭ್ಯಾಸ ಮುಗಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗದೇ ಇದ್ದಲ್ಲಿ ಅಥವಾ ತಾವೇ ಉದ್ದಿಮೆ ಮಾಡಲು ಬಯಸಿದರೂ ಬಂಡವಾಳದ ಕೊರತೆ ಇದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವ ಈ ಯೋಜನೆಯ ನೆರವು ಪಡೆಯಬಹುದು
* ಹಿಂದುಳಿದ ವರ್ಗಗಳದವರಿಗೆ ಹೆಚ್ಚಿನ ಆದ್ಯತೆ
ಸಿಗುವ ನೆರವು:-
* ಮೂರು ವಿಭಾಗದಲ್ಲಿ ಕನಿಷ್ಠ ರೂ.50,000 ದಿಂದ ಗರಿಷ್ಠ ರೂ.10 ಲಕ್ಷದವರೆಗೆ ಸಾಲ ಪಡೆಯಬಹುದು
1. ಶಿಶು ಸಾಲದಡಿ ರೂ.50,000 ವರೆಗೂ ಸಾಲ ದೊರೆಯುತ್ತದೆ
2. ಕಿಶೋರ ಸಾಲದಡಿ ರೂ.50,000 ದಿಂದ 5 ಲಕ್ಷ ವರೆಗೆ ಸಾಲವನ್ನು ಪಡೆಯಬಹುದು.
* ತರುಣ್ ಸಾಲದಡಿ ರೂ.5 ಲಕ್ಷ ದಿಂದ 10 ಲಕ್ಷದವರೆಗೆ ಸಾಲ ಪಡೆಯಬಹುದು.
ಈ ಸುದ್ದಿ ಓದಿ:-RTO ಆಫೀಸಿಗೆ ಹೋಗದೆ ಆನ್ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಿಧಾನ.!
* ತರುಣ್ ಸಾಲದ ಮೊತ್ತದ 0.50% ಬಡ್ಡಿ ವಿಧಿಸಲಾಗುತ್ತದೆ. ಇತರೆ ಸರಕಾರಿ ಯೋಜನೆಗಳು ಲಿಂಕ್ ಆಗಿದ್ದರೆ ಮತ್ತು ಅದರಲ್ಲಿ ಸಬ್ಸಿಡಿ ಒದಗಿಸುವ ಆಯ್ಕೆ ಇದ್ದರೆ ಸಬ್ಸಿಡಿಯನ್ನು ಪರಿಗಣಿಸಲಾಗುತ್ತದೆ.
* ಈ ಸಾಲ ಮತ್ತು ಸಾಲಗಳ ಬಡ್ಡಿದರವು ಫಲಾನುಭವಿಯ ಬ್ಯಾಂಕ್ ವ್ಯವಹಾರ, ಕ್ರೆಡಿಟ್ ಸ್ಕೋರ್ ಗಳ ಮೇಲೆ ಅವಲಂಬಿಸಿರುತ್ತದೆ.
ಯಾವೆಲ್ಲ ಉದ್ಯಮಗಳಿಗೆ ಸಾಲ ಪಡೆಯಬಹುದು:-
* ಕಿರಾಣಿ ಅಂಗಡಿ
* ಆಟೋರಿಕ್ಷಾ
* ಟ್ಯಾಕ್ಸಿಗಳನ್ನು ತೆಗೆದುಕೊಂಡು ಬಾಡಿಗೆಗೆ ಬಿಡುವಂತಹ ವ್ಯಾಪಾರ
* ಟೈಲರಿಂಗ್ ಶಾಪ್
* ಬ್ಯೂಟಿ ಪಾರ್ಲರ್ ಹಾಗೂ ಸಲೂನ್ ಗಳು,
* ಗ್ಯಾರೇಜ್ ಅಂಗಡಿ
* ಜೆರಾಕ್ಸ್ ಶಾಪ್
* ಹಪ್ಪಳ ಹಾಗೂ ಉಪ್ಪಿನಕಾಯಿ ತಯಾರಿಸುವ ಫ್ಯಾಕ್ಟರಿ
* ಆಹಾರ ಉತ್ಪನ್ನಗಳ ತಯಾರಿ
* ಜವಳಿ ಕ್ಷೇತ್ರ
* ವ್ಯಾಯಾಮ ಶಾಲೆ
* ಕೋಳಿ ಸಾಕಣೆ
* ಸಣ್ಣ ಪುಟ್ಟ ಉತ್ಪಾದಕ ಅಂಗಡಿ
* ಬಟ್ಟೆ ನೇಯುವಂತಹ ಸಣ್ಣ ಉದ್ಯಮ
* ಇನ್ನು ಮುಂತಾದ ಸಣ್ಣಪುಟ್ಟ ಉದ್ದಿಮೆಗಳು
ಅರ್ಜಿ ಸಲ್ಲಿಸುವ ವಿಧಾನ:-
ನಿಮ್ಮ ಹತ್ತಿರದ ಪಬ್ಲಿಕ್ ಸೆಕ್ಟರ್ ಯೂನಿಯನ್ ಬ್ಯಾಂಕಿನಲ್ಲಿ (Union Bank) ಮುದ್ರಾ ಯೋಜನೆಯ ಸಾಲವನ್ನು ಪಡೆಯಲು ಫಾರ್ಮನ್ನು ಕೊಡಬೇಕಾಗುತ್ತದೆ.
ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು
1. ಆಧಾರ್ ಕಾರ್ಡ್
2. ಪಾನ್ ಕಾರ್ಡ್
3. ಖಾಯಂ ವಿಳಾಸ
4. ವ್ಯಾಪಾರದ ವಿಳಾಸ ಮತ್ತುಮಾಲಿಕತ್ವದ ಪುರಾವೆ
5. 3 ವರ್ಷಗಳ ಬ್ಯಾಲೆನ್ಸ್ ಶೀಟ್
6. ಆದಾಯ ತೆರಿಗೆ ರಿಟರ್ನ್ಸ್ ಸ್ವಯಂ ಮೌಲ್ಯಮಾಪನ ರಿಟರ್ನ್ಸ್
7. ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
8. ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
ಸಾಲ ನೀಡುವ ಬ್ಯಾಂಕ್ ಗಳ ವಿವರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,
1. ಬ್ಯಾಂಕ್ ಆಫ್ ಇಂಡಿಯಾ,
2. ಬ್ಯಾಂಕ್ ಆಫ್ ಮಹಾರಾಷ್ಟ್ರ,
3. ಬ್ಯಾಂಕ್ ಆಫ್ ಬರೋಡ,
4. ಕಾರ್ಪೊರೇಷನ್ ಬ್ಯಾಂಕ್,
5. ಕೆನರಾ ಬ್ಯಾಂಕ್.
6. ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್,
7. ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್,
8. ಡೆಕ್ಕನ್ ಗ್ರಾಮೀಣ ಬ್ಯಾಂಕ್,
9. ಬಿಹಾರ ಗ್ರಾಮೀಣ ಬ್ಯಾಂಕ್,
10. ಸಪ್ತಗಿರಿ ಗ್ರಾಮೀಣ ಬ್ಯಾಂಕ್.
11. ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ,
12. HDFC ಬ್ಯಾಂಕ್ ಲಿಮಿಟೆಡ್,
13. ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್,
14. DCB ಬ್ಯಾಂಕ್ ಲಿಮಿಟೆಡ್,
15. ಕ್ಯಾಥೋಲಿಕ್ ಸೀರಿಯಲ್ ಬ್ಯಾಂಕ್ ಲಿಮಿಟೆಡ್,
16. ಫೆಡರಲ್ ಬ್ಯಾಂಕ್ ಲಿಮಿಟೆಡ್ .
* ಗುಜರಾತ್ ಸ್ಟೇಟ್ ಕೋ – ಆಫ್ ಬ್ಯಾಂಕ್,
* ರಾಜಕೋಟ್ ನಾಗರಿಕ ಸಹಕಾರಿ ಬ್ಯಾಂಕ್,
* ಕಳುಪ್ಪುರ್ ಕಮರ್ಷಿಯಲ್ ಸಹಕಾರ ಬ್ಯಾಂಕ್,
MGI ಹಾಗೂ
* MBFC ವಲಯದ ಫೈನಾನ್ಸಿಯಲ್ ಕಂಪನಿಗಳು.