Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಆಸ್ತಿಯಲ್ಲಿ ವಿಧವೆಯ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾದ ಅಂಶವಾಗಿದೆ. ಆಸ್ತಿಯಲ್ಲಿ ವಿಧವೆಯ ಹಕ್ಕುಗಳು ಸ್ಪಷ್ಟವಾಗಿಯೇ ಇವೆ. ಆಕೆ ಪತಿಯ ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿ ಎರಡರಲ್ಲೂ ಪಾಲು ಪಡೆಯುವ ಹಕ್ಕು ಹೊಂದಿರುತ್ತಾಳೆ. ಮಕ್ಕಳಿದ್ದರೆ ಆಸ್ತಿ ಹಕ್ಕು ಇನ್ನಷ್ಟು ವಿಭಜನೆಯಾಗುತ್ತದೆ.
ಹೌದು, 1938ರಲ್ಲಿ ಮಹಿಳಾ ಹಕ್ಕು ಎಂಬ ಕಾನೂನು ಬರುತ್ತದೆ. ಈ ವೇಳೆ ವಿಧವೆಗೆ ಆಸ್ತಿ ಹಕ್ಕು ಕೊಡೋದಿಲ್ಲ. ನಂತ್ರ, 1956ರಲ್ಲಿ ಹಿಂದೂ ಸಕ್ಷೇಷನ್ ಆಕ್ಟ್ ಬರುತ್ತದೆ. ಇದರಲ್ಲಿ ಮಹಿಳೆಯರಿಗೆ, ವಿಧವೆಯರಿಗೆ ಹಾಗೂ ಹುಟ್ಟಿದಂತಹ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸಹ ಆಸ್ತಿ ಹಕ್ಕನ್ನು ಕೊಡುತ್ತಾರೆ.
ಈ ಸುದ್ದಿ ಓದಿ:-BSNL ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 50,500
ತದನಂತರ ನ್ಯಾಯಾಲಯಗಳಲ್ಲಿ ಈ ಬಗ್ಗೆ ವಾದಗಳು ಇನ್ನು ಮುಂದುವರೆದಿದ್ದು, ಕೂಡ ಆಸ್ತಿ ಹಕ್ಕು ಯಾರಿಗೆ ಸೇರಬೇಕು ಎಂಬ ಬಗ್ಗೆ ಸ್ಪಷ್ಟತೆಗಾಗಿ ಚರ್ಚೆ ನಡೆಯುತ್ತಲೇ ಇವೆ. ಇತ್ತೀಚಿಗೆ ಸುಪ್ರೀಂ ನೀಡಿದಂತ ತೀರ್ಪಿನಲ್ಲಿ ಇಲ್ಲಿ ಕಾನೂನಿನ ಪ್ರಕಾರ, ಗಂಡ ಬದುಕಿರುವವರೆಗೂ ಆಸ್ತಿಯಲ್ಲಿ ಹೆಂಡತಿಗೆ ಯಾವುದೇ ಹಕ್ಕು ಇರುವುದಿಲ್ಲ. ಆದರೆ, ಗಂಡ ಸತ್ತ ನಂತರ ಪಿತ್ರಾರ್ಜಿತ ಆಸ್ತಿ ಆಗಲಿ ಅಥವಾ ಸ್ವಯಾರ್ಜಿತ ಆಸ್ತಿಯಾಗಲಿ ಅ ಆಸ್ತಿಯು ಹೆಂಡತಿ ಹಾಗೂ ಆತನ ಮಕ್ಕಳಿಗೆ ಸೇರುತ್ತದೆ.
ಕಾನೂನಾತ್ಮಕವಾಗಿ ಅಂದ್ರೆ, ರಿಜಿಸ್ಟ್ರೇಷನ್ ಆಗಿ ಮದುವೆಯಾಗಿದ್ದರೆ ಗಂಡ ಸತ್ತ ನಂತರ ಆತನ ಆಸ್ತಿ ಹೆಂಡತಿಗೆ ಸೇರುತ್ತದೆ. ಉದಾಹರಣೆ ಮೂಲಕ ಹೇಳೋದಾದ್ರೆ, ಒಬ್ಬ ತಂದೆಗೆ 11 ಎಕರೆ ಆಸ್ತಿಯಿದ್ದು, ಆತ 10 ಮಕ್ಕಳನ್ನು ಹೊಂದಿರುತ್ತಾನೆ. ತಂದೆಯ ಮರಣದ ನಂತ್ರ ಆ ಆಸ್ತಿಯು 10 ಮಕ್ಕಳು ಹಾಗೂ ಆತನ ಪತ್ನಿಗೂ ಸಮನಾಗಿ ಹಂಚಿಕೆಯಾಗುತ್ತದೆ.
ಇನ್ನೂ, ಬೆಂಗಳೂರಿನ ಶಾಂತಾ ಜೋಷಿ (85) ಅವರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಜೋಷಿಯವರ ಪತಿ ತನ್ನ ಮನೆಯನ್ನು ವಾರಸುದಾರರಿಗೆ ಹಸ್ತಾಂತರ ಮಾಡದೆ ನಿಧನ ಹೊಂದಿದ್ದರು. ತಂದೆ ಆಸ್ತಿಯಲ್ಲಿ ಜೋಷಿ ಪುತ್ರ ಪಾಲು ಕೇಳಿದಾಗ ಸಮಸ್ಯೆ ಉದ್ಭವಿಸಿತ್ತು. ಶಾಂತಾ ಅವರು ಅದೇ ಮನೆಯಲ್ಲಿ ವಾಸವಿದ್ದಾರಲ್ಲದೆ ಬೇರೆ ಕಡೆ ಹೋಗುವ ಸ್ಥಿತಿಯಲ್ಲಿರಲಿಲ್ಲ.
ಈ ಸುದ್ದಿ ಓದಿ:-ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಅನ್ನೋದನ್ನ ನಿಮ್ಮ ಮೊಬೈಲ್ ಮೂಲಕವೇ ಈ ರೀತಿ ಚೆಕ್ ಮಾಡಿ.!
ಇದು ದೀರ್ಘಕಾಲೀನ ಕಾನೂನು ಹೋರಾಟವೇ ಆಗಿತ್ತು. ಕೊನೆಗೂ ಆ ಆಸ್ತಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಮಗನ ಪಾಲು ಕೊಡಬೇಕಾಯಿತು. ಈಗ ಶಾಂತಾ ಜೋಷಿ ಕೋಲ್ಕತಾದಲ್ಲಿ ಮಗಳ ಜತೆ ವಾಸಿಸುತ್ತಿದ್ದಾರೆ. ಗಮನಿಸಬೇಕಾದ ವಿಷಯ ಏನೆಂದರೆ ವಿಧವೆ ಇನ್ನೊಂದು ಮದುವೆ ಆದರೂ ಸಹ ಮೊದಲ ಪತಿಯ ಆಸ್ತಿಯಲ್ಲಿ ಹಕ್ಕು ಹೊಂದಿರುತ್ತಾಳೆ. ಒಡಹುಟ್ಟಿದವರ ನಡುವಿನ ಆಸ್ತಿ ವ್ಯಾಜ್ಯದಲ್ಲೂ ಹೆಚ್ಚೂ ಕಡಿಮೆ ಎಲ್ಲ ವಿಚಾರಗಳು ಒಂದೇ ಆಗಿರುತ್ತವೆ.
ಒಡಹುಟ್ಟಿದವರು ಜಂಟಿಯಾಗಿ ಆಸ್ತಿ ಖರೀದಿ ಮಾಡಿ ಯಾವುದೇ ದಾಖಲೆಗಳನ್ನು ಹೊಂದಿರದಿದ್ದ ಪಕ್ಷದಲ್ಲಿ ಆಸ್ತಿ ಹಕ್ಕು ಸಮಾನವಾಗಿ ಹಂಚಲ್ಪಡುತ್ತದೆ. ಬಹುತೇಕ ಆಸ್ತಿ ಸಂಬಂಧಿ ಪ್ರಕರಣಗಳು ಅಡ್ಡಿ ಉಂಟಾಗುವುದು ಈ ಹಂತದಲ್ಲೇ. ಏಕೆಂದರೆ ಆಸ್ತಿ ಹಂಚಿಕೆಯ ವಿಚಾರದಲ್ಲಿ ಯಾರಾದರೊಬ್ಬರು ತಗಾದೆ ತೆಗೆದೇ ತೆಗೆಯುತ್ತಾರೆ.
ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಹಿಂದೂ ವಿಧವೆಯ ಆಸ್ತಿ ಹಕ್ಕು ಕೇವಲ ಔಪಚಾರಿಕ ಹಕ್ಕಲ್ಲ, ಅದು ಆಧ್ಯಾತ್ಮಿಕ ಹಾಗೂ ನೈತಿಕವಾಗಿ ಆಕೆಯ ಸಂಪೂರ್ಣ ಹಕ್ಕು ಎಂದು ಸ್ಪಷ್ಟಪಡಿಸಿದೆ. ತನ್ನ ಆಸ್ತಿಯ ಹಕ್ಕನ್ನು ಅನ್ಯರೊಬ್ಬರಿಗೆ ನೀಡಿ ವೀಲುನಾಮೆ ಮಾಡಿದ್ದ ಆಂಧ್ರದ ವಿಧವೆಯೊಬ್ಬರ ಹಕ್ಕನ್ನು ಎತ್ತಿಹಿಡಿದಿದ್ದ ಆಂಧ್ರ ಹೈಕೋರ್ಟ್ ನ ತೀರ್ಪನ್ನು ಸುಪ್ರೀಂ ಸಮರ್ಥಿಸಿದೆ.
ಈ ಸುದ್ದಿ ಓದಿ:-ಬೆಳೆ ವಿಮೆ ಪಟ್ಟಿ ಬಿಡುಗಡೆ, ನಿಮ್ಮ ಅರ್ಜಿ ಸ್ಟೇಟಸ್ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!
ತನ್ನ ಆಸ್ತಿಯನ್ನು ಆಕೆ ಇಷ್ಟ ಬಂದಂತೆ ಬಳಸಿಕೊಳ್ಳಲು ಸ್ವತಂತ್ರಳು ಎಂದು ನ್ಯಾಯಪೀಠ ಹೇಳಿದೆ. ಹಿಂದೂ ಕಾನೂನಿನಲ್ಲಿ, ಪತ್ನಿಗೆ ಜೀವನಾಂಶ ನೀಡುವ ಬಾಧ್ಯತೆ ಪತಿಯದ್ದಾಗಿದೆ. ವಿಧವೆಗೆ ಆಸ್ತಿ ನೀಡಬೇಕಾದ್ದು ಔಪಚಾರಿಕವಲ್ಲ, ಅದು ಆಕೆಯ ಮೌಲಿಕ, ಆಧ್ಯಾತ್ಮಿಕ, ನೈತಿಕ ಹಕ್ಕು. ಕಾಯ್ದೆಯ 14(1) ವಿಧಿಯನ್ವಯ ಜೀವನಾಂಶ ಆಕೆಯ ಸಂಪೂರ್ಣ ಹಕ್ಕಾಗುತ್ತದೆ ಎಂದಿದೆ.