ರೈತರಿಗೆ (farmers) ಅವರ ಜಮೀನಿನ ಆಧಾರದ ಮೇಲೆ ಸಹಕಾರಿ ಬ್ಯಾಂಕ್ ಗಳಲ್ಲಿ ಹಾಗೂ ರಾಷ್ಟ್ರೀಕತ ಬ್ಯಾಂಕ್ ಗಳಲ್ಲಿ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಕೂಡ ಜಮೀನು ಆಧಾರಿತವಾಗಿ ಕೃಷಿ ಸಾಲ (Crop loan) ನೀಡಲಾಗುತ್ತದೆ. ಈ ರೀತಿ ಕೃಷಿ ಸಾಲ ಪಡೆಯುವುದಕ್ಕೂ ಹಾಗೂ ಕೃಷಿ ಸಾಲ ಹೊಂದಿರುವ ಕೃಷಿ ಭೂಮಿ ಮೇಲೆ ಮತ್ತೆ ಬೇರೆ ವಹಿವಾಟು ನಡೆಸಬೇಕು ಎಂದರು ಅಥವಾ ಅದನ್ನು ಪರಬಾರೆ ಮಾಡಬೇಕೆಂದರೂ ಹಲವಾರು ಕಂಡೀಷನ್ ಗಳು ಇವೆ.
ಕೆಲವರಿಗೆ ತಮ್ಮ ಜಮೀನ ಮೇಲೆ ಎಷ್ಟು ಕೃಷಿ ಸಾಲ ಇದೆ ಎನ್ನುವುದು ಗೊತ್ತಿರುವುದಿಲ್ಲ ಇನ್ನೂ ಕೆಲವರಿಗೆ ಪೋಷಕರ ಹೆಸರಿನಲ್ಲಿ ಜಮೀನು ಇರುತ್ತದೆ ಹಾಗಾಗಿ ಎಷ್ಟು ಸಾಲ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಮಕ್ಕಳಿಗೆ ಲೆಕ್ಕಾಚಾರ ಸಿಕ್ಕಿರುವುದಿಲ್ಲ.
ಈ ಸುದ್ದಿ ಓದಿ:- ಬೆಳೆ ವಿಮೆ ಪಟ್ಟಿ ಬಿಡುಗಡೆ, ನಿಮ್ಮ ಅರ್ಜಿ ಸ್ಟೇಟಸ್ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!
ಈ ರೀತಿ ಸಮಸ್ಯೆ ಇದ್ದರೆ ಪಹಣಿ (RTC) ಆಧಾರಿತವಾಗಿ ಆ ಜಮೀನ (Agriculture land Base) ಮೇಲೆ ಎಷ್ಟು ಸಾಲ ಇದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳುವ ವಿಧಾನವನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಈಗ ಎಲ್ಲಾ ಕ್ಷೇತ್ರವು ಡಿಜಿಟಲೀಕರಣಗೊಂಡಿರುವುದರಿಂದ ಆನ್ಲೈನಲ್ಲಿ ಸುಲಭವಾಗಿ ನೀವು ಈ ಮಾಹಿತಿ ಪಡೆಯಬಹುದು.
* ಮೊದಲಿಗೆ
https://landrecords.karnataka.gov.in/Service2/ ಲಿಂಕ್ ಮೇಲೆ ಕ್ಲಿಕ್ ಮಾಡಿ
* ಕಂದಾಯ ಇಲಾಖೆಯ (Revenue Department) ಭೂಮಿ ಆನ್ಲೈನ್ (Bhoomi Online) ಲ್ಯಾಂಡ್ ರಿಕಾರ್ಡ್ (Land Record) ಪೇಜ್ ಓಪನ್ ಆಗುತ್ತದೆ.
* ನೀವು ಅದರಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ತಾಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬೇಕು, ಮುಂದಿನ ಹಂತದಲ್ಲಿ ಜಮೀನಿನ ಸರ್ವೆ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಬೇಕು.
* ಸರ್ನೋಕ್ ನಲ್ಲಿ ಸ್ಟಾರ್ (*) ಆಯ್ಕೆ ಮಾಡಿಕೊಳ್ಳಬೇಕು, ಮುಂದೆ ನಿಮ್ಮ ಹಿಸ್ಸಾ ನಂಬರ್ ನಮೂದಿಸಬೇಕು (ಹಿಸ್ಸಾ ನಂಬರ್ ಗೊತ್ತಿಲ್ಲದೇ ಇದ್ದರೆ ಸ್ಟಾರ್ (*) ಆಯ್ಕೆ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಮಣ್ಣು ಇಲ್ಲದೆ, ಬರಿ ನೀರಲ್ಲಿ ಟೆರೇಸ್ ಮೇಲೆ ಅಥವಾ ಬಾಲ್ಕನಿಯಲ್ಲಿ ತಿಂಗಳಿಗೆ 60KG ಬೇಕಾದರೂ ತರಕಾರಿ ಬೆಳೆಯಬಹುದು.!
* ಇದಾದ ನಂತರ 2023-24ನೇ ವರ್ಷ ಆಯ್ಕೆ ಮಾಡಿಕೊಂಡು Fetch details ಮೇಲೆ ಕ್ಲಿಕ್ ಮಾಡಿ
* ತಕ್ಷಣ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರ್ ನಲ್ಲಿ ಬರುವ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ. ಅದರ ಎದುರುಗಡೆ ಆ ಸರ್ವೆ ನಂಬರ್ ನಲ್ಲಿ ಬರುವ ಜಮೀನಿನ ಮಾಲಿಕರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣಿಸುತ್ತದೆ.ಅದರ ಮುಂದುಗಡೆ ಕಾಣುವ View ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ.
* ಅದರಲ್ಲಿ ನೀವು ಸೆಲೆಕ್ಟ್ ಮಾಡಿದ ಸರ್ವೆ ನಂಬರ್ ಜಮೀನಿನ ಪ್ರಸ್ತತ ಪಹಣಿ ಪೂರ್ತಿ ಮಾಹಿತಿ ಸಿಗುತ್ತದೆ.
* ಜಮೀನಿನ ಮಾಲಿಕರ ಹೆಸರು, ತಂದೆಯ ಹೆಸರು ಜಮೀನಿನ ಮಾಲಿಕರ ಹೆಸರು ಜಂಟಿಯಾಗಿದಿದ್ದರೆ ಯಾರ ಯಾರ ಹೆಸರು ಜಂಟಿಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಂಟಿಯಾಗಿದೆ, ಜಮೀನಿನ ಒಟ್ಟು ವಿಸ್ತೀರ್ಣ ಎಷ್ಟು ಎಂಬ ಮಾಹಿತಿ ಇರುತ್ತದೆ. ಅದರೊಂದಿಗೆ ಮುಟೇಶನ್ ನಂಬರ್ ಕೂಡ ಇರುತ್ತದೆ.
ಈ ಸುದ್ದಿ ಓದಿ:- ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 17ನೇ ಕಂತಿನ ಹಣ ಬಿಡುಗಡೆ.!
* ಒಂದು ವೇಳೆ ನೀವು ನಿಮ್ಮ ಜಮೀನಿನ ಮೇಲೆ ಸಾಲ ಪಡೆದಿದ್ದರೆ ಎಷ್ಟು ಸಾಲ ಪಡೆದಿದ್ದೀರಿ ಹಾಗೂ ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಪ್ರಸ್ತುತ ಯಾವ ಬೆಳೆ ಬೆಳದಿದ್ದೀರಿ ಜಮೀನಿನಲ್ಲಿ ನೀರಾವರಿ ಸೌಲಭ್ಯ ಇದೆಯೇ ಇತ್ಯಾದಿ ಪೂರ್ತಿ ಮಾಹಿತಿ ಸಿಗುತ್ತದೆ.