ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ರೈತರಿಗಾಗಿ (for Farmers) ಕೈಗೊಂಡ ಯೋಜನೆಗಳಲ್ಲಿ ರೈತರಿಗೂ ಕೂಡ ಪ್ರೋತ್ಸಾಹ ಧನ ನೀಡುವಂತಹ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು (PM Kisan Samman Nidhi Scheme) ಬಹಳ ವಿಶೇಷವಾದ್ದದ್ದು.
ಫೆಬ್ರವರಿ 24, 2019ರಲ್ಲಿ ಪ್ರಧಾನಿಗಳು ದೇಶದ 14 ಕೋಟಿಗಿಂತ ಹೆಚ್ಚು ರೈತರಿಗೆ ಮೊದಲ ಬಾರಿಗೆ ಈ ಯೋಜನೆಯಡಿ ಹಣ ಬಿಡುಗಡೆ ಮಾಡಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಯುಕ್ತವಾಗಿ ಅಂದಿನಿಂದ ಪ್ರತಿ ಆರ್ಥಿಕ ವರ್ಷದಲ್ಲಿ ಮೂರು ಕಂತುಗಳಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ರೈತನಿಗೆ ರೂ.2000 ಪ್ರೋತ್ಸಾಹ ಧನವು ಯಾವುದೇ ಮಧ್ಯವರ್ತಿ ಕಾಟ ಇಲ್ಲದೆ ನೇರವಾಗಿ ರೈತನ ಖಾತೆಗೆ DBT ಮೂಲಕ ತಲುಪುತ್ತಿದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 8ನೇ ಕಂತಿನ ಹಣ ಈ ದಿನದಂದು ಬಿಡುಗಡೆ, ಇನ್ನು ಸಹ ಒಂದು ಕಂತಿನ ಹಣ ಪಡೆಯಲಾಗದವರು ಈ ರೀತಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ.!
ಇಂದಿಗೆ ಯಶಸ್ವಿಯಾಗಿ ಇದೇ ಫೆಬ್ರವರಿವರೆಗೆ ಒಟ್ಟು 16 ಕಂತುಗಳ ಹಣ ಬಿಡುಗಡೆ ಆಗಿದೆ ಈಗ ಮುಂಗಾರಿನ ಸಮಯವಾಗಿದ್ದು ರೈತರ ತಮ್ಮ ಕೃಷಿ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರದ ಯೋಜನೆ ಹಣ ನೆರವಾಗುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ 17 ನೇ ಕಂತಿನ (17th installment) ಹಣದ ಬಿಡುಗಡೆ ಕುರಿತಂತೆ ಒಂದು ಅಪ್ಡೇಟ್ ಹೊರಬಿದ್ದಿದೆ.
ಕೇಂದ್ರ ಸರ್ಕಾರ ಆರ್ಥಿಕ ಇಲಾಖೆಯು ಬಹಳ ಕಟ್ಟುನಿಟ್ಟಾಗಿ ಈ ಆದೇಶವನ್ನು ಹೊರಡಿಸಿದ್ದು ಈಗಾಗಲೇ ಬಹುತೇಕ ರೈತರಿಗೆ ಇದು ತಲುಪಿದೆ ಮತ್ತು ಅವರು ಸರ್ಕಾರದ ಸೂಚನೆಯನ್ನು ಅನುಸರಿಸಿದ್ದಾರೆ. 17ನೇ ಕಂತಿನ ಹಣ ಬಿಡುಗಡೆ ಸಮಯಕ್ಕಾಗಿ ಮಾತ್ರವಲ್ಲದೆ ಈ ಹಿಂದೆಯೂ ಕೂಡ ಹಲವು ಬಾರಿ ಸರ್ಕಾರ ಇದನ್ನು ಎಚ್ಚರಿಸಿದೆ. ಆದೆನೆಂದರೆ ಸರ್ಕಾರ ಯಾವುದೇ ಯೋಜನೆಯಾದರೂ ಅದಕ್ಕೆ ಕೆಲವು ಮಾನದಂಡಗಳು ಇರುತ್ತವೆ.
ಈ ಸುದ್ದಿ ಓದಿ:- ವಾಹನ ಸವಾರರಿಗೆ ಸರ್ಕಾರದ ಕಡೆಯಿಂದ ಶಾ-ಕಿಂಗ್ ನ್ಯೂಸ್.!
ರೈತರಾಗಿದ್ದರು ಈ ಮಾನದಂಡಗಳನ್ನು ಪೂರೈಸುವ ಸಣ್ಣ ಹಾಗೂ ಅತಿ ಸಣ್ಣ ರೈತರು ಮಾತ್ರ ಇಂತಹ ಯೋಜನೆಗಳಿಗೆ ಅರ್ಹರಾಗಿರುತ್ತಾರೆ. ಆದರೆ ಸರ್ಕಾರಕ್ಕೆ ವಂಚಿಸಿ ಹಣ ಪಡೆಯುವ ಉದ್ದೇಶದಿಂದ ಅನೇಕರು ನಕಲಿ ದಾಖಲೆಗಳ ಸೃಷ್ಟಿಸಿ ಅಥವಾ ಅಸಲಿ ಮಾಹಿತಿಯನ್ನು ಮರೆಮಾಚಿ ತಾವು ಸಣ್ಣ ರೈತರು ಎಂದು ಹೇಳಿಕೊಂಡು ಈ ಯೋಜನೆಗೆ ಹಣ ಪಡೆಯುತ್ತಿದ್ದಾರೆ.
ಇದಕ್ಕೆಲ್ಲ ಕಡಿವಾಣ ಹಾಕಲು ಸರ್ಕಾರ FID ಕಡ್ಡಾಯಗೊಳಿಸಿದೆ. FID ಅಂದರೆ ಏನು ಎಂದರೆ ರೈತನು FRUITS ತಂತ್ರಾಂಶದಲ್ಲಿ ತನ್ನ ಆಧಾರ್ ಹಾಗೂ ಬ್ಯಾಂಕ್ ಖಾತೆಯನ್ನು RTC ಯೊಂದಿಗೆ ಲಿಂಕ್ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಸರ್ಕಾರಕ್ಕೆ ರೈತನ ಅಸಲಿ ಸರಿಯಾದ ಮಾಹಿತಿ ಸಿಗುತ್ತದೆ ಮತ್ತು ಅನರ್ಹರಿಗೆ ಹಣ ತಲುಪಿ ಅರ್ಹರು ವಂಚಿತರಾಗುವುದು ತಪ್ಪುತ್ತದೆ.
ಈ ಸುದ್ದಿ ಓದಿ:- 5 ಎಕರೆ ಒಳಗೆ ಭೂಮಿ ಇರುವ ಎಲ್ಲಾ ರೈತರಿಗೂ ಸರ್ಕಾರದಿಂದ ವರ್ಷಕ್ಕೆ 31,000 ಸಿಗಲಿದೆ.!
ಇದರೊಂದಿಗೆ ಈಗ ಸೂಚಿಸಿರುವ ಮತ್ತೊಂದು ನಿಯಮ ಏನೆಂದರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹಣ ಪಡೆಯುವುದಕ್ಕಾಗಿ ಕೂಡ ಇದೇ ಪೋರ್ಟಲ್ ಗೆ ಭೇಟಿಯಾಗಿ ರೈತನು ತನ್ನ ಭೂಮಿ ಹಾಗೂ ಆಧಾರ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ನೀಡಿ ಇ-ಕೆವೈಸಿ (E-KYC) ಧೃಡೀಕರಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ.
ಒಂದು ವೇಳೆ ಇದುವರೆಗೂ ನೀವು ಇವುಗಳನ್ನು ಪಾಲಿಸಿಲ್ಲವಾದರೆ 15 ಹಾಗೂ 16ನೇ ಕಂತಿನ ಹಣದಿಂದ ವಂಚಿತರಾಗಿರುತ್ತೀರಿ. ಒಂದು ವೇಳೆ ಅದೃಷ್ಟದಿಂದ ಆ ಸಮಯದಲ್ಲಿ ಹಣ ಬಂದಿದ್ದರೂ ಈಗಲಾದರೂ ಈ ನಿಯಮಗಳನ್ನು ಪೂರೈಸದಿದ್ದರೆ ನಿಮಗ ಕಡಾ ಖಂಡಿತವಾಗಿ 17ನೇ ಕಂತಿನ ಹಣ ಸಿಗುವುದಿಲ್ಲ ಹಾಗಾಗಿ ಕೂಡಲೇ ಹತ್ತಿರದ ಸೇವಾ ಸಿಂಧು ಕೇಂದ್ರಗಳಿಗೆ (CSC) ಹೋಗಿ ಈ ಪ್ರಕ್ರಿಯೆ ಪೂರ್ತಿಗೊಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.