ಕರ್ನಾಟಕ ರಾಜ್ಯದ ರೈತರಿಗೆ ಸರ್ಕಾರದಿಂದ ಈಗ ಸದ್ಯಕ್ಕೆ ಒಂದು ಸಿಹಿ ಸುದ್ದಿ ಇದೆ, ಈ ವರ್ಷ ಕಂಡು ಕೇಳರಿಯದ ಬರಗಾಲವನ್ನು ಅನುಭವಿಸಿ ಸಮಸ್ಯೆಯಲ್ಲಿದ್ದ ಅನ್ನದಾತರಿಗೆ ಈಗಷ್ಟೇ ಸರ್ಕಾರದಿಂದ ಮೊದಲನೇ ಕಂತಿನ ಬರ ಪರಿಹಾರ ಹಣವು ವರ್ಗಾವಣೆ ಆಗಿದೆ ಮತ್ತು ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದಲೂ ಕೂಡ ಸಿಗಬೇಕಿರುವ ನೆರವನ್ನು ದೊರಕಿಸಿಕೊಡುವ ಭರವಸೆಯನ್ನು ಕೇಂದ್ರ ಸರ್ಕಾರ ತೋರಿದೆ.
ಇದನ್ನು ಹೊರತುಪಡಿಸಿ ಅನೇಕ ಕಲ್ಯಾಣ ಯೋಜನೆಗಳನ್ನು ರೈತರಿಗಾಗಿ ಸರ್ಕಾರಗಳು ಕೈಗೊಳ್ಳುತ್ತಿವೆ ಮತ್ತು ಪ್ರತಿವರ್ಷ ಕೂಡ ಬಜೆಟ್ ಮಂಡಳಿಯಾದಾಗ ರಾಜ್ಯದ ರೈತರ ಶ್ರೇಯೋಭಿವೃದ್ಧಿಗಾಗಿಯೇ ಕೃಷಿ ಕ್ಷೇತ್ರಕ್ಕಾಗಿ ದೊಡ್ಡ ಮೊತ್ತದ ಅನುದಾನವನ್ನು ಮೀಸಲಿಡಲಾಗುತ್ತದೆ. ಅಂತೆಯೇ ಈಗ 2023-24 ನೇ ಸಾಲಿನಲ್ಲಿ ಕೈಕೊಳ್ಳಲಾಗಿರುವ ಕೆಲ ಯೋಜನೆಗಳ ವಿವರಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- EC ಎಂದರೇನು.? ಆಸ್ತಿ ಖರೀದಿಸಲು EC ಏಕೆ ಮುಖ್ಯ ಇಲ್ಲಿದೆ ನೋಡಿ ಪೂರ್ತಿ ಡೀಟೇಲ್ಸ್.!
2023-24 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಈಗ ರಾಜ್ಯ ಸರ್ಕಾರ ಮುಂದಾಗಿದೆ, ಮತ್ತು ಇದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಕೂಡಲೇ ಆಸಕ್ತ ರೈತರಿಗೆ ಅರ್ಜಿ ಸಲ್ಲಿಸುವಂತೆ ಕೇಳಲಾಗಿದೆ. ರೈತರಿಗೆ ಮುಖ್ಯವಾಗಿ ಬೇಕಾಗಿರುವುದು ನೀರಿನ ಸೌಕರ್ಯ ಹಾಗೂ ನಾವು ಬೆಳೆದ ಬೆಳೆಯು ಹಾಳಾಗದಂತೆ ರಕ್ಷಣೆ ಇದರ ಕುರಿತಾಗಿಯೇ ಕ್ರಮ ಕೈಗೊಳ್ಳಲು ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ.
ಸಣ್ಣ ಹಾಗೂ ಅತಿ ಸಣ್ಣ ರೈತರ ಸರ್ಕಾರದ ಈ ಯೋಜನೆಗಳ ನೆರವನ್ನು ಪಡೆಯಬಹುದು. ಯಾವ ಸೌಲಭ್ಯಗಳು ಸಿಗುತ್ತವೆ? ಹೇಗೆ ಅರ್ಜಿ ಸಲ್ಲಿಸುವುದು? ಬೇಕಾಗುವ ದಾಖಲೆಗಳೇನು ಇತ್ಯಾದಿ ವಿವರ ತಿಳಿದುಕೊಳ್ಳಲು ಲೇಖವನ್ನು ವನ್ನು ಪೂರ್ತಿಯಾಗಿ ಓದಿ.
ಯೋಜನೆಯ ಹೆಸರು:- ಕರ್ನಾಟಕ ಸರ್ಕಾರದ ಕೃಷಿಭಾಗ್ಯ ಯೋಜನೆ.
ಯೋಜನೆಯ ಗುರಿ :- ಅಂತರ್ಜಲ ವೃದ್ಧಿ ಮತ್ತು ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೇಸಿಗೆಯಲ್ಲಿಯೂ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಕಲ್ಪಿಸಲು ನೆರವಾಗುವುದು
ಈ ಸುದ್ದಿ ಓದಿ:- 1 BHK 3.5 ಲಕ್ಷದಲ್ಲಿ, 2BHK 6 ಲಕ್ಷದಲ್ಲಿ ಕೇವಲ 7 ದಿನಕ್ಕೆ ರೆಡಿ ಆಗುತ್ತದೆ ನಿಮ್ಮ ಕನಸಿನ ಸ್ವಂತ ಮನೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಸಿಗುವ ಸೌಲಭ್ಯಗಳು:-
* ಕ್ಷೇತ್ರ ಬದು ನಿರ್ಮಾಣಕ್ಕೆ ನೆರವು
* ಕೃಷಿ ಹೊಂಡ ನಿರ್ಮಾಣಕ್ಕೆ ನೆರವು (Krishi Honda Scheme)
* ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸಿಕೊಳ್ಳಲು ನೆರವು(GI Wire Fencing)
* ಕೃಷಿ ಹೊಂಡದಿಂದ ನೀರು ಎತ್ತಲು ಪಂಪ್ ಸೆಟ್ ವ್ಯವಸ್ಥೆ ಮಾಡಿಕೊಳ್ಳಲು ನೆರವು
* ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ ನೀರಾವರಿ ಕೈಗೊಳ್ಳುವ ರೈತರಿಗೆ ನೆರವು (ತುಂತುರು ನೀರಾವರಿ /ಹನಿ ನೀರಾವರಿ)
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ರೈತನಿಂದ ಅರ್ಜಿ
* ಅರ್ಜಿಧಾರನ ಆಧಾರ್ ಕಾರ್ಡ್
* ರೈತರ ಭಾವಚಿತ್ರ
* FID
(FID ಇಲ್ಲವಾದಲ್ಲಿ ಆಧಾರ್ ಪ್ರತಿ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ ನೀಡಿ ಹತ್ತಿರದ CSC ಕೇಂದ್ರಕ್ಕೆ ಹೋಗಿ FRUITS ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು FID ಪಡೆದುಕೊಳ್ಳಬೇಕು)
ಅರ್ಹತಾ ಮಾನದಂಡಗಳು:-
* ಕರ್ನಾಟಕದ ರೈತರಿಗಷ್ಟೇ ಅರ್ಜಿ ಸಲ್ಲಿಸಲು ಅವಕಾಶ
* ಅರ್ಜಿ ಸಲ್ಲಿಸಲು 18 ವರ್ಷ ಮೇಲ್ಪಟ್ಟಿರಬೇಕು
* ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು, ರೈತನು ಕೃಷಿಯಲ್ಲಿ ತೊಡಗಿಕೊಂಡಿರಬೇಕು.
ಅರ್ಜಿ ಸಲ್ಲಿಸುವುದು ವಿಧಾನ:-
* ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
* ಸ್ವೀಕೃತವಾದ ಅರ್ಹ ಅರ್ಜಿಗಳ ಜೇಷ್ಠತೆಯನ್ವಯ ಹಾಗೂ ಹೋಬಳಿಗೆ ನಿಗದಿಪಡಿಸಿದ ಗುರಿಗಳ ಅನ್ವಯ ಕಾರ್ಯಕ್ರಮ ಹಂಚಲಾಗುತ್ತದೆ ಹಾಗಾಗಿ ಮೊದಲು ಅರ್ಜಿ ಸಲ್ಲಿಸದವರಿಗೆ ಆದ್ಯತೆ.