ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಹಣ ಬರಲ್ಲ.!

 

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರ (Karnataka Government) ಕುಟುಂಬದ ಮುಖ್ಯಸ್ಥೆಗೆ (HOF Women) ರೂ.2000 ಸಹಾಯಧನ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಏಳು ತಿಂಗಳು ತುಂಬಿದೆ. ಈಗಾಗಲೇ ಎಲ್ಲಾ ಅರ್ಹ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ರೂ.14,000 ನೆರವು ಸರ್ಕಾರದಿಂದ ಸಿಕ್ಕಿದ್ದು ಎಂಟನೇ ಕಂತಿನ ಹಣದ (8th Installment) ಕುರಿತು ಕೂಡ ಒಂದು ಬಿಗ್ ಅಪ್ಡೇಟ್ ಇದೆ.

ಅದೇನೆಂದರೆ ಏಪ್ರಿಲ್ 2ನೇ ವಾರದಿಂದ 8ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವು ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ಬಲವಾದ ಮೂಲಗಳಿಂದ ದೊರೆತಿದೆ. ಇದರ ಜೊತೆಗೆ ಎಂಟನೇ ಕಂತಿನ ಹಣ ಪಡೆಯಲು ಕೆಲವು ಕಂಡಿಶನ್ ಗಳನ್ನು ಕೂಡ ಹೇರಲಾಗಿದ್ದು ಈ ನಿಯಮಗಳನ್ನು ಪೂರೈಸದೆ ಇರುವ ಮಹಿಳೆಯರಿಗೆ ಎಂಟನೇ ಕಂತಿನ ಹಣ ಬರುವುದಿಲ್ಲ, ಹಾಗಾಗಿ ಇವುಗಳನ್ನು ಕೂಡ ಪರೀಕ್ಷಿಸಿಕೊಳ್ಳಲು ಕೂಡ ಸೂಚಿಸಲಾಗಿದೆ.

ಈ ಸುದ್ದಿ ಓದಿ:-BSNL ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 50,500
ಹಣ ತಲುಪದೇ ಇರಲು ಕಾರಣಗಳು:-

* ಗೃಹಲಕ್ಷ್ಮಿ ಯೋಜನೆ ಹಣವು ನೇರವಾಗಿ ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತಿದೆ. ಈ ರೀತಿ ಹಣ ತಲುಪಲು ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಈ ಮೂರರಲ್ಲೂ ಸಹ ದಾಖಲಾತಿ ಪುರಾವೆಗಳು ಒಂದೇ ರೀತಿ ಇರಬೇಕು. ಹೆಸರಿನ ವ್ಯತ್ಯಾಸ ಅಥವಾ ಇನ್ನಿತರ ವ್ಯತ್ಯಾಸಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ.

* ಬ್ಯಾಂಕ್ ಖಾತೆ ಆಕ್ಟಿವ್ ಆಗಿರಬೇಕು, ಬ್ಯಾಂಕ್ ಖಾತೆಗೆ e-KYC ಆಗಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆಯೂ ಆಕ್ಟಿವ್ ಆಗಿ ಇರಬೇಕು ಇಲ್ಲವಾದಲ್ಲಿ ಕೂಡ ಹಣ ವರ್ಗಾವಣೆ ಆಗುವುದಿಲ್ಲ.
* ಇದು ರೇಷನ್ ಕಾರ್ಡ್ ಆಧಾರಿತ ಯೋಜನೆ ಆಗಿರುವುದರಿಂದ ರೇಷನ್ ಕಾರ್ಡ್ ಸಕ್ರಿಯವಾಗಿಲ್ಲ ಮತ್ತು e-KYC ಆಗದೆ ಇದ್ದ ಪಕ್ಷದಲ್ಲಿ ಗೃಹಲಕ್ಷ್ಮಿ ಹಣ ಬರುವುದಿಲ್ಲ.

ಈ ಸುದ್ದಿ ಓದಿ:- 5 ಎಕರೆ ಒಳಗೆ ಭೂಮಿ ಇರುವ ಎಲ್ಲಾ ರೈತರಿಗೂ ಸರ್ಕಾರದಿಂದ ವರ್ಷಕ್ಕೆ 31,000 ಸಿಗಲಿದೆ.!

* ಇದರೊಂದಿಗೆ ಮತ್ತೊಂದು ಮುಖ್ಯವಾದ ಕಂಡಿಷನ್ ಏನೆಂದರೆ ಯಾರು ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ಆಧಾರ್ ಅಪ್ಡೇಟ್ ಮಾಡಿಸಲು ಆಗಿಲ್ಲ ಅವರು ಉಚಿತವಾಗಿ ಕೂಡಲೇ ಆಧಾರ್ ಅಪ್ಡೇಟ್ ಮಾಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಮಾಹಿತಿ ಸರಿಯಿದ್ದರೂ ಆಧಾರ್ ಅಪ್ಡೇಟ್ ಮಾಡಿಸಿರದ ಕಾರಣ ಆಧಾರ್ ಲಿಂಕ್ ಆಗಿರುವ ಯಾವುದೇ ಯೋಜನೆಯ ಹಣಗಳು ತಲುವುದಿಲ್ಲ.
* ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಯಶಸ್ವಿ ಆಗದೆ ಇರುವುದು ಕೂಡ ಒಂದು ಕಾರಣವಾಗಿರಬಹುದು.

ಪರಿಹಾರ:-

* ನಿಮಗೆ ಇದುವರೆಗೂ ಒಂದು ಕಂತಿನ ಹಣ ಕೂಡ ಬಂದಿಲ್ಲ ಅಥವಾ ಒಂದೆರಡು ಕಂತು ಹಣ ವರ್ಗಾವಣೆಯಾಗಿ ನಂತರ ಸ್ಥಗಿತಗೊಂಡಿದೆ ಎಂದರೆ ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಡಿ.
* ಅಥವಾ ಈ ಕೆಳಗೆ ತಿಳಿಸಲಾಗುವ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ತಾಲೂಕು ವ್ಯಾಪ್ತಿಯಲ್ಲಿ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಛೇರಿಯಲ್ಲಿ ಇರುವ CDPO ಅಧಿಕಾರಿಗಳಿಗೆ ದಾಖಲೆಗಳ ಸಮೇತವಾಗಿ ಅರ್ಜಿ ಕೊಡಿ. ಅವರು ಸ್ಥಳದಲ್ಲಿಯೇ ನಿಮ್ಮ ಸಮಸ್ಯೆ ಪರಿಶೀಲಿಸಿ ಪರಿಹಾರ ಮಾಡಿಕೊಡುತ್ತಾರೆ.

1. ರೇಷನ್ ಕಾರ್ಡ್
2. ಆಧಾರ್ ಕಾರ್ಡ್
3. ಬ್ಯಾಂಕ್ ಪಾಸ್ ಬುಕ್ ವಿವರ ಮತ್ತು
4. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ವೀಕೃತಿ ಪ್ರತಿ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now