ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರದ ಕಡೆಯಿಂದ ಇತ್ತೀಚಿನ ದಿನಗಳಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತಂತೆ ಬ್ಯಾಕ್ ಟು ಬ್ಯಾಕ್ ನೋಟಿಫಿಕೇಶನ್ ಆಗಿ ಸಿಹಿ ಸುದ್ದಿ ಸಿಗುತ್ತಿದೆ.
ಈಗ ಇದೇ ಸಾಲಿನಲ್ಲಿ ಮತ್ತೊಂದು ನೋಟಿಫಿಕೇಶನ್ ಆಗಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ (VO) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದಾದ್ಯಂತ ಇರುವ ಎಲ್ಲ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಈ ನೋಟಿಫಿಕೇಶನ್ ಗಳನ್ನು ಪೂರೈಸುವುದಾದರೆ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದು. ಇವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನಾವು ಸಹ ಅಧಿಸೂಚನೆಯಲ್ಲಿರುವ ಪ್ರಮುಖ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಲೋಕಸಭೆ ಚುನಾವಣೆ ಹಿನ್ನೆಲೆ LPG ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ವರ್ಷಕ್ಕೆ 3 ಸಿಲಿಂಡರ್ ಉಚಿತ.!
ನೇಮಕಾತಿ ಸಂಸ್ಥೆ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಉದ್ಯೋಗ ಇಲಾಖೆ:- ಕಂದಾಯ ಇಲಾಖೆ (Revenue Department)
ಹುದ್ದೆ ಹೆಸರು:- ಗ್ರಾಮ ಆಡಳಿತ ಅಧಿಕಾರಿ (Village Administration Officer)
ಒಟ್ಟು ಹುದ್ದೆಗಳ ಸಂಖ್ಯೆ:- 1000 ಹುದ್ದೆಗಳು
ಹುದ್ದೆಗಳ ವಿವರ:-
* ಉಳಿಕೆ ಮೂಲ ವೃಂದ – 869 ಹುದ್ದೆಗಳು
* ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ – 131 ಹುದ್ದೆಗಳು
ಉದ್ಯೋಗ ಸ್ಥಳ:- ಕರ್ನಾಟಕದಾದ್ಯಂತ…
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ. 21,400 ರಿಂದ ರೂ. 42,000 ಶ್ರೇಣಿಯಲ್ಲಿ ವೇತನ ಸಿಗುವುದರೊಂದಿಗೆ ಇನ್ನು ಕೆಲವು ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ.
ಈ ಸುದ್ದಿ ಓದಿ:-ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!
ಶೈಕ್ಷಣಿಕ ವಿದ್ಯಾರ್ಹತೆ:-
* ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ PUC ಯನ್ನು ಆರ್ಟ್ಸ್ / ಕಾಮರ್ಸ್ ಅಥವಾ ಸೈನ್ಸ್ ಇತ್ಯಾದಿ ಯಾವುದೇ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಇದಕ್ಕೆ ತತ್ಸಮಾನವಾದ ವಿದ್ಯಾರ್ಥಿ ಪಡೆದಿರಬೇಕು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* 2A, 2B, 3A, 3B ಅಭ್ಯರ್ಥಿಗಳಿಗೆ 03 ವರ್ಷಗಳು
* SC / ST, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 05 ವರ್ಷಗಳು
ಈ ಸುದ್ದಿ ಓದಿ:-ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಸರ್ಕಾರದಿಂದ 1200 ಹಣ ಪಡೆಯಿರಿ.!
ಅರ್ಜಿ ಶುಲ್ಕ:-
* ಅಜಿ ಶುಲ್ಕವನ್ನು ಆನ್ಲೈನ್ನಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬೇಕು
* SC / ST, ಪ್ರವರ್ಗ – 1, ಮಾಜಿ ಸೈನಿಕ, ವಿಕಲಚೇತನ ಅಭ್ಯರ್ಥಿಗಳಿಗೆ – ರೂ.500
* ಇತರೆ ಅಭ್ಯರ್ಥಿಗಳಿಗೆ ರೂ.750
ಅರ್ಜಿ ಸಲ್ಲಿಸುವ ವಿಧಾನ:-
https://karnemaka.kar.nic.in/trialrun/home.aspx ಲಿಂಕ್ ಕ್ಲಿಕ್ ಮಾಡಿ
* ಅರ್ಜಿ ಸಲ್ಲಿಸುವ ಅಪ್ಲಿಕೇಶನ್ ಫಾರಂ ಓಪನ್ ಆಗುತ್ತದೆ ಅದರಲ್ಲಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ದಾಖಲೆ ಸಂಖ್ಯೆಗಳನ್ನು ಸರಿಯಾಗಿ ನಮೂದಿಸಿ
* ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ ಇ-ರಸೀದಿ ಪಡೆಯಿರಿ. ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಕೂಡ ಪಡೆಯಿರಿ
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ಸಂದರ್ಶನ
* ದಾಖಲೆಗಳ ಪರಿಶೀಲನೆ
ಈ ಸುದ್ದಿ ಓದಿ:-ಮನೆ ಕಟ್ಟುವ ಪ್ಲಾನ್ ನಲ್ಲಿ ಇದ್ದೀರಾ.? ವಾರ್ಡ್ರೋಬ್ ಮಾಡಿಸುವುದಾದರೆ ಈ ಐಡಿಯಾಗಳ ಬಗ್ಗೆ ತಿಳಿದುಕೊಂಡಿರಲೇಬೇಕು.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 05 ಮೇ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 04 ಮೇ, 2024
* ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – 07 ಮೇ, 2024.