SC / ST ಸೈಟ್ ಜಮೀನು ಯಾವುದನ್ನು ಬೇಕಾದರೂ ಧೈರ್ಯದಿಂದ ತೆಗೆದುಕೊಳ್ಳಬಹುದು ಆದರೆ ಈ ದಾಖಲೆಗಳು ಇರಬೇಕು.!

ಕಳೆದ ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು PTCL ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯ ಪ್ರಕಾರವಾಗಿ SC / ST ಜಮೀನನ್ನು ಯಾರು ಇನ್ನು ಮುಂದೆ ಕೊಂಡುಕೊಳ್ಳುವಂತಿಲ್ಲ ಮತ್ತು ಈ ಹಿಂದೆ ಪರಾಭಾರೆ ಆಗಿದ್ದರೂ ಮೋ’ಸ ವಂ’ಚ’ನೆ ಅಥವಾ ಬೆದರಿಕೆಯಿಂದ ವರ್ಗಾವಣೆಯಾಗಿ ಕೇಸ್ ಕೋರ್ಟ್ ನಲ್ಲಿ ಇದ್ದರೆ ಅದಕ್ಕೆ ಯಾವುದೇ ವರ್ಷದಲ್ಲಿ ಮಾರಾಟವಾಗಿದ್ದರೂ ಅದಕ್ಕೂ ಈ ಕಾನೂನು ಅನ್ವಯಿಸುತ್ತದೆ.

WhatsApp Group Join Now
Telegram Group Join Now

ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಧೈರ್ಯ ಬಂದಿದೆ ಯಾಕೆಂದರೆ ಈ ತಲೆಮಾರಿನ ಹಿಂದಿನವರು ಬಹಳ ಮುಗ್ಧರಾಗಿದ್ದರು ಅಸಹಾಯಕರಾಗಿದ್ದರು ಅವರಿಗೆ ಅಕ್ಷರ ಜ್ಞಾನವು ಕಡಿಮೆ ಇತ್ತು ಅವರಿಗೆ ಕಡಿಮೆ ಹಣ ಕೊಟ್ಟು ಅಗ್ರಿಮೆಂಟ್ ಮಾಡಿ ಈ ರೀತಿ ಮಾಡಿಕೊಂಡು ಸೇಲ್ ಡಿಡ್ ಮಾಡಿ ಮೋ’ಸ ಮಾಡಿರುವ ಉದಾಹರಣೆ.

ಈ ಸುದ್ದಿ ಓದಿ:- ಕೇವಲ 45 ಸಾವಿರದ ಈ ಮಿಷನ್ ನಿಂದ ತಿಂಗಳಿಗೆ ಒಂದು ಲಕ್ಷ ದುಡಿಯಬಹುದು ಯಾವುದೇ ಅನುಭವ ಬೇಕಾಗಿಲ್ಲ.!

ಮತ್ತು ಬೇರೆ ಯಾವುದೋ ಸಣ್ಣ ಪುಟ್ಟ ಸಾಲ ಕೊಟ್ಟು ಅಡಮಾನ ಇಟ್ಟುಕೊಂಡು ಅದಕ್ಕೆ ವಜಾ ಮಾಡಿ ಸಹಿ ಹಾಕಿಸಿಕೊಂಡು ಆಸ್ತಿ ಕಿತ್ತುಕೊಂಡ ಉದಾಹರಣೆಗಳು ಕೂಡ ಇವೆ, ಈಗ ಅವರ ಮಕ್ಕಳು ಕೋರ್ಟ್ ನಲ್ಲಿ ಚಾಲೆಂಜ್ ಮಾಡಿ ಅವುಗಳನ್ನು ವಾಪಸ್ ಪಡೆಯುತ್ತಿದ್ದಾರೆ ಇವುಗಳಿಗೂ ಅವಕಾಶ ಮಾಡಿಕೊಡಲಾಗಿದೆ.

ಆದರೆ ಯಾವುದೇ ಒಂದು ವಿಷಯ ಆದರೂ ಅದರ ಅನುಕೂಲತೆ ಜೊತೆಜೊತೆಗೆ ಅನಾನುಕೂಲತೆ ಕೂಡ ಇರುವುದರಿಂದ ಈ ಕಾಯ್ದೆ ಬಂದ ಮೇಲೂ ಕೂಡ ಎರಡು ರೀತಿ ಸಮಸ್ಯೆಗಳು ಎದುರಾಗಿವೆ. ಒಂದನೇ ಸಮಸ್ಯೆ ಏನೆಂದರೆ, ಉದ್ದೇಶಪೂರ್ವಕವಾಗಿ ಅವರೇ ಆಸ್ತಿ ಮಾರಾಟ ಮಾಡಬೇಕಾದ ಸಂದರ್ಭ ಬಂದರು ಕೂಡ ಈಗ ಯಾರು ಖರೀದಿಸಲು ಸಿದ್ಧರಿಲ್ಲ ಇದು ಸಮಸ್ಯೆಯಾಗಿದೆ.

ಈ ಸುದ್ದಿ ಓದಿ:-ಮನೆ ಕಟ್ಟಿಸುವಾಗ ಈ ವಿಚಾರಗಳು ತಿಳಿದಿದ್ದರೆ 4-5 ಲಕ್ಷ ಹಣ ಉಳಿಸಬಹುದು, ಪ್ರತಿಯೊಬ್ಬರು ತಿಳಿದುಕೊಳ್ಳಿ ಮುಂದೆ ಪಶ್ಚಾತಾಪ ಪಡುವುದು ತಪ್ಪುತ್ತದೆ.!

ಈ ಬಗ್ಗೆ ಕಾನೂನು ಏನು ಹೇಳುತ್ತದೆ ಎನ್ನುವ ವಿಚಾರ ಮತ್ತು ಬಹಳ ಹಿಂದೆ ಅಂದರೆ ಉದಾಹರಣೆಗೆ ಬೆಂಗಳೂರಿನಂತಹ ಮಹಾನಗರದಲ್ಲಿ ಸುಮಾರು 30 ವರ್ಷಗಳ ಹಿಂದೆ ಒಬ್ಬ SC ವ್ಯಕ್ತಿಯ 10 ಎಕರೆ ಜಮೀನನ್ನು ಮತ್ತೊಬ್ಬರು ಕೊಂಡು ಹೀಗೆ ಕೈಯಿಂದ ಕೈಗೆ ವರ್ಗಾವಣೆಯಾಗಿ ಕೊನೆಗೆ 100 ಸೈಟ್ ಮಾಡಿ 100 ಸೈಟ್ ಗಳಲ್ಲಿ ನೂರು ಜನ ಮನೆ ಕಟ್ಟಿಕೊಂಡು ಇದ್ದಾರೆ ಎಂದು ಕೊಳ್ಳೋಣ.

ಈಗ ಆ ಜಮೀನು ಮೊದಲು ಯಾರಿಂದ ವರ್ಗಾವಣೆ ಆಯ್ತು ಅವರ ಮಕ್ಕಳು ಕೇಸ್ ಹಾಕಿದರು ಅದನ್ನು ವಾಪಸ್ ಕೊಡಲೇಬೇಕಾಗುತ್ತದೆ. ಆದರೆ ಈಗ ಅಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಸಮಸ್ಯೆ ಆಗುತ್ತಿದೆ ಹಾಗಾಗಿ ಇದಕ್ಕೇನು ಪರಿಹಾರ ಎನ್ನುವ ಪ್ರಶ್ನೆ ತಲೆದೋರಿದೆ ಅದರ ಬಗ್ಗೆಯೂ ಕೆಲವು ವಿಷಯಗಳನ್ನು ತಿಳಿಸಿ ತಿಳಿ ಮಾಡಲು ಬಯಸುತಿದ್ದೇವೆ.

ಈ ಸುದ್ದಿ ಓದಿ:-ಹಳೆಯ ಸ್ಕೂಟರ್ ಹೈಬ್ರಿಡ್ ಮಾಡ್ತಾರೆ, ಪೆಟ್ರೋಲ್ ಮತ್ತು ಬ್ಯಾಟರಿ ಎರಡರಲ್ಲೂ ಚಲಿಸುತ್ತದೆ ಎಷ್ಟು ದೂರ ಬೇಕಾದರೂ ಹೋಗಬಹುದು.!

ಆ ಪ್ರಕಾರವಾಗಿ ಇರುವ ಕಾನೂನು ನಿಯಮಗಳು ಏನೆಂದರೆ SC / ST ಗೆ ಗೌರ್ಮೆಂಟ್ ನಿಂದ ಗ್ರಾಂಟ್ ಎಂದು ಯಾವುದೇ ಜಮೀನು ಮಂಜೂರು ಆಗಿದ್ದರೂ ಅವರು ಕೆಲ ವರ್ಷಗಳವರೆಗೆ ಯಾರಿಗೂ ಅದನ್ನು ಮಾರಾಟ ಮಾಡುವಂತಿರಲಿಲ್ಲ. ಆ ಸಮಯದಲ್ಲಿ ಮಾರಾಟ ಮಾಡಿದರೆ ಅಥವಾ ಅವಧಿ ನಂತರವೂ ಮಾರಾಟ ಮಾಡಿದರೆ ಅಂತಹ ಕೇಸ್ ಗಳಿಗೆ ಈ ನಿಯಮ ಅನ್ವಯ ಆಗುತ್ತದೆ.

ಒಂದು ವೇಳೆ ಈ ರೀತಿ ಗ್ರಾಂಟ್ ಆದ ಭೂಮಿಯನ್ನು ತಮ್ಮ ಜಾತಿಯವರಿಗೆ ವರ್ಗಾವಣೆ ಮಾಡಬಹುದಾ ತೊಂದರೆ ಇದ್ದಾಗ ಎನ್ನುವ ಅನುಮಾನ ಅನೇಕರಿಗೆ ಇದೆ. ಯಾರಿಗೂ ಮಾರಾಟ ಮಾಡುವಂತೆಯೇ ಇಲ್ಲ ಎಂದು ಕಾನೂನಿನಲ್ಲಿ ಇದೆ. ಒಂದು ವೇಳೆ ಬಹಳ ಕಷ್ಟ ಇದ್ದು ಈ ರೀತಿ ಮಾರಾಟ ಮಾಡಲೇಬೇಕಾದ ಪರಿಸ್ಥಿತಿ ಇದ್ದರೆ ಜಿಲ್ಲಾಧಿಕಾರಿಗಳ ಮುಂದೆ ಪರ್ಮಿಷನ್ ಗಾಗಿ ಅರ್ಜಿ ಹಾಕಿ ಅವರ ಅನುಮತಿ ತೆಗೆದುಕೊಂಡೇ ಮಾರಾಟ ಮಾಡಬೇಕು.

ಈ ಸುದ್ದಿ ಓದಿ:-ಹೆಣ್ಣು ಮಕ್ಕಳ ಪಾಲನ್ನು ಅಣ್ಣತಮ್ಮಂದಿರು ಕೊಡದೇ ಇದ್ದರೆ ಅಥವಾ ಹಕ್ಕು ಖುಲಾಸೆ ಪತ್ರ ಬರೆಸಿ ಮೋಸ ಮಾಡಿದ್ದರೆ ಏನು ಮಾಡಬೇಕು ಗೊತ್ತಾ.?

ಆದರೆ SC / ST ಗಳ ಸ್ವಯಾರ್ಜಿತ ಜಮೀನು ಏನಾದರೂ ಈ ರೀತಿ ಬೇರೆಯವರಿಗೆ ವರ್ಗಾವಣೆ ಮಾಡಿದರೆ ಅದರಿಂದ ಯಾವುದೇ ಸಮಸ್ಯೆ ಇಲ್ಲ ಯಾರಿಗೆ ಬೇಕಾದರೂ ಅವರ ಪಾಲಿನ ಪಿತ್ರಾರ್ಜಿತ ಆಸ್ತಿಯನ್ನು ಕುಟುಂಬದವರ ಅನುಮತಿಯೊಂದಿಗೆ ವರ್ಗಾವಣೆ ಮಾಡಬಹುದು. ಈ ರೀತಿ ಸಮಸ್ಯೆಗಳು ಬರಬಾರದು ಎಂದರೆ ಆಸ್ತಿ ಖರೀದಿ ಮಾಡುವ ಸಮಯದಲ್ಲಿ ಮದರ್ ಡಿಡ್ ನೋಡಬೇಕು ಅದರಲ್ಲಿ ಯಾರಿಗೆ ಆಸ್ತಿ ಯಾವ ಮೂಲದಿಂದ ಬಂದಿದೆ ಎನ್ನುವ ಸರಿಯಾದ ಮಾಹಿತಿ ಸಿಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now