ಒಮ್ಮೊಮ್ಮೆ ಜೀವನದಲ್ಲಿ ನಾವು ಊಹಿಸಲು ಸಾಧ್ಯವಾಗದ ರೀತಿ ಕಷ್ಟಗಳು ಎದುರಾಗುತ್ತವೆ. ಅದರಲ್ಲೂ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳು ಬಂದರೆ ಜೀವನದ ಅಭದ್ರತೆ ಹೆಚ್ಚಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಸ್ತಿ ವಿಚಾರವಾಗಿ ಹಣಕಾಸಿನ ವಿಚಾರದ ಬಗ್ಗೆ ಕೋರ್ಟ್ ಕಚೇರಿ ಅಲೆಯುವಂತಹ ಸನ್ನಿವೇಶಗಳ ಹೆಚ್ಚಾಗಿ ಬರುತ್ತಿವೆ.
ಈ ಬಗ್ಗೆ ಎಷ್ಟು ಜಾಗೃತಿಯಿಂದ ಇದ್ದರೂ ಸಾಲದು. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಸುಳಿಯೊಳಗೆ ನಾವು ಸಿಲುಕಿ ಬಿಡುತ್ತೇವೆ. ಉದಾಹರಣೆಯೊಂದಿಗೆ ವಿವರಿಸುವುದಾದರೆ ನಮಗೆ ಒಂದು ಸೈಟ್ ಅಥವಾ ಜಮೀನು ಇರುತ್ತದೆ ಇದರ ಮೇಲೆ ಕೋರ್ಟ್ ನಲ್ಲಿ ವ್ಯಾಜ್ಯ ಇರುತ್ತದೆ ಆದರೆ ನಾವು ಈಗಾಗಲೇ ಅದರಲ್ಲಿ ಕನ್ಸ್ಟ್ರಕ್ಷನ್ ಶುರು ಮಾಡಿರುತ್ತೇವೆ ಇದನ್ನು ಮುಂದುವರಿಸಿದರೆ ಒಳ್ಳೆಯದೇ ಅಥವಾ ನಷ್ಟವಾಗುತ್ತದೆಯೇ ಇದನ್ನು ನಿಲ್ಲಿಸಬೇಕೆ ಎನ್ನುವುದ ಗೊಂದಲ ಶುರು ಆಗುತ್ತದೆ.
ಈ ಬಗ್ಗೆ ಕಾನೂನಿನ ಪರಿಹಾರವನ್ನು ಕೇಳುವುದಾದರೆ ಜಮೀನಿನ ವ್ಯಾಜ್ಯ ಯಾವ ಸ್ವರೂಪದ್ದು ಎನ್ನುವುದರ ಮೇಲೆ ಇದು ನಿರ್ಧಾರ ಆಗುತ್ತದೆ. ಜಮೀನಿನ ಹಕ್ಕು ನಿಮ್ಮದು ಎಂದು ನಿರ್ಧಾರ ಆಗೋದಕ್ಕೆ ತಕರಾರು ಇದೆಯಾ ಅಥವಾ ಪಿತ್ರಾರ್ಜಿತ ಆಸ್ತಿ ಆಗಿದ್ದು ಅಣ್ಣ ತಮ್ಮಂದಿರ ನಡುವೆ ಭಾಗ ಆಗುವಾಗ ತನಗೆ ಯಾವ ಪಾಲು ಬೇಕು ಎನ್ನುವುದರ ಮೇಲೆ ತಕರಾರು ಇದೆಯಾ?
ಈ ಸುದ್ದಿ ಓದಿ:- ಇಂಟೀರಿಯರ್ ಮಾಡಿಸುವಾಗ ಹೀಗೆ ಮಾಡಿಸಿ ಲೇಟೆಸ್ಟ್ ಟ್ರೆಂಡ್ ಫಾಲೋ ಮಾಡಿ.!
ಅಥವಾ ಆ ಸಹೋದರರಲ್ಲಿ ಯಾರಾದರೂ ಒಬ್ಬರು ನಿಮಗೆ ಸೇಲ್ ಮಾಡಿ ಅದರಲ್ಲಿ ನೀವು ಕನ್ಸ್ಟ್ರಕ್ಷನ್ ಮಾಡುತ್ತಿದ್ದೀರಾ? ಅಥವಾ ಈ ರೀತಿ ಅಣ್ಣತಮ್ಮಂದಿರಲ್ಲಿ ವ್ಯಾಜ್ಯ ಇದ್ದ ಜಮೀನನ್ನು ನಿಮಗೆ ಮೋಸ ಮಾಡಿ ಸೇಲ್ ಮಾಡಿದ್ದಾರಾ? ಹೀಗೆ ಆ ಕೇಸ್ ಸ್ವಭಾವ ಹೇಗಿದೆ ಎನ್ನುವುದನ್ನು ವಿವರವಾಗಿ ಪರಿಶೀಲಿಸಿದ ಮೇಲೆ ನೀವು ದಾವೇ ಹೂಡಿರುವ ಕೋರ್ಟ್ ನ್ಯಾಯಾಧೀಶರ ತಿಳುವಳಿಕೆ ಮತ್ತು ಅವರ ವಿವೇಚನಾ ಶಕ್ತಿ ಇದೆಲ್ಲದರ ಮೇಲೂ ಕೂಡ ಇದು ನಿರ್ಧಾರ ಆಗುತ್ತದೆ.
ಆದರೆ ನಿಮಗೆ ಒಂದು ಅವಕಾಶ ಇದೆ ಅದು ಪಿತ್ರಾರ್ಜಿತ ಆಸ್ತಿ ಎನ್ನುವುದು ಸ್ಪಷ್ಟ ಆದರೆ ಅಣ್ಣ-ತಮ್ಮಂದಿರ ನಡುವೆ ವಿಭಾಗ ಆಗಬೇಕಿದೆ ಎಂದರೆ ನೀವು ಕೋರ್ಟ್ ಮುಂದೆ ಹೇಳಬಹುದು. ನಾನು ಈಗಾಗಲೇ ಈ ಸಹೋದರರಲ್ಲಿ ಒಬ್ಬನ ಪಾಲಿನ ಆಸ್ತಿಯನ್ನು ತೆಗೆದುಕೊಂಡು ಬಿಟ್ಟಿದ್ದೇನೆ ಹಾಗೂ ಅದರಲ್ಲಿ ಕನ್ಸ್ಟ್ರಕ್ಷನ್ ಶುರು ಮಾಡಿದ್ದೇನೆ. ನೀವು ದಯವಿಟ್ಟು ಆ ಭಾಗ ಅವನಿಗೆ ಬರುವಂತೆ ಮಾಡಿದರೆ ನನ್ನ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಈಕ್ವಿಟೇಬಲ್ ಅಲಾಟ್ಮೆಂಟ್ ಮಾಡಿಸಿಕೊಳ್ಳಬಹುದು.
ಆದರೆ ಎಲ್ಲಾ ಸಂದರ್ಭದಲ್ಲಿ ಇದೇ ಪರವಾಗಿ ತೀರ್ಪು ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಈಗ ಈಕ್ವಿಟೇಬಲ್ ಅಲಾಟ್ಮೆಂಟ್ನಲ್ಲಿ ನ್ಯಾಯ ನಿಧಿ ಧರ್ಮ ಸತ್ಯ ಎಲ್ಲವನ್ನು ಕೂಡ ನೋಡಲಾಗುತ್ತದೆ. ಒಂದು ವೇಳೆ ಆತ ನಿಮಗೆ ಮಾರಿರುವ ಜಾಗವು ಹೆಚ್ಚು ಬೆಲೆ ಬಾಳುವುದಾಗಿದ್ದು ಅಕ್ಕಪಕ್ಕ ಪ್ರಯೋಜನವಿಲ್ಲದ ಜಮೀನು ಸಹೋದರರ ಪಾಲಿಗೆ ಹೋಗುವ ಜಮೀನು ಇದ್ದಾಗ ಸಹೋದರರಿಗೂ ಮೋಸವಾಗುತ್ತದೆ ಇದನ್ನೆಲ್ಲ ಗಮನಿಸಿ ಕೋರ್ಟ್ ತೀರ್ಮಾನ ಮಾಡುತ್ತದೆ.
ಈ ಸುದ್ದಿ ಓದಿ:- ಮನೆಯಲ್ಲಿ ಇರೋರಿಗೆ ಬೆಸ್ಟ್ ಬಿಜಿನೆಸ್ ಇದು.! ಕೇವಲ 30 ರೂಪಾಯಿ ಇದ್ದರೆ ಸಾಕು ಈ ಬಿಜಿನೆಸ್ ಮಾಡಿಸಬಹುದು, ಮಸಿ ಕೆಂಡದಿಂದ ಕೋಟಿ ಕೋಟಿ ಗಳಿಸಿ.!
ಇನ್ನು ಕೆಲವು ಪ್ರಕರಣಗಳಲ್ಲಿ ವಕೀಲರಿಂದ ತಪ್ಪುಗಳಾಗುತ್ತವೆ. ಕನ್ಸ್ಟ್ರಕ್ಷನ್ ಸಮಯದಲ್ಲಿ ಅಥವಾ ಯಾವುದೇ ಹಂತದಲ್ಲಿ ಇದ್ದಾಗ ದಾವೆ ಬಿದ್ದಿದ್ದರು ಕೋರ್ಟ್ ಗೆ ಒಂದು ವೇಳೆ ಪ್ರತಿವಾದಿಗಳ ಪರವಾಗಿ ತೀರ್ಮಾನವಾದರೆ ಅದನ್ನು ಡೆಮೊಲಿಶ್ ಮಾಡಿ ಪ್ರಾಪರ್ಟಿ ಕೊಡುತ್ತೇವೆ ಎಂದು ಮೆಮೋ ಕೊಟ್ಟು ಬಿಡುತ್ತಾರೆ.
ಈ ರೀತಿ ಮಾಡುವುದು ತಪ್ಪು ಏಕೆಂದರೆ ಇದರಿಂದ ನಷ್ಟವೇ ಆಗುತ್ತದೆ. ಅಪೀಲುಗಳು ಹಾಕಿ ವೀರನ ಕೋರ್ಟ್ ಗಳಿಗೆ ಹೋಗುವ ಸಮಯ ಶ್ರಮಜೊತೆಗೆ ಒಂದು ವೇಳೆ ತೀರ್ಪು ಅಲ್ಲಿಯೂ ವಿರುದ್ಧವಾಗಿ ಬಂದರೆ ಕನ್ಸ್ಟ್ರಕ್ಷನ್ ಮಾಡಿದ ವ್ಯಕ್ತಿಯ ಶ್ರಮ, ಸಮಯ, ಆತನ ಭಾವನಾತ್ಮಕ ಸಂಬಂಧ ಇದೆಲ್ಲದಕ್ಕೂ ಹಾನಿ ಆಗುತ್ತದೆ. ಹಾಗಾಗಿ ಈ ರೀತಿ ತಕರಾರು ಪ್ರಾಪರ್ಟಿಗಳಲ್ಲಿ ಕನ್ಸ್ಟ್ರಕ್ಷನ್ ಮಾಡುವುದು ಅಥವಾ ಆರಂಭಿಸಿದ ಮೇಲೆ ದಾವೇ ಬಿದ್ದರೂ ಅದನ್ನು ಅಲ್ಲಿಗೆ ನಿಲ್ಲಿಸುವುದು ಹೆಚ್ಚು ಸೂಕ್ತ ಎನ್ನುವುದು ಕಾನೂನು ತಜ್ಞರ ಸಲಹೆ.