ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಅವರ ತವರಿನ ಆಸ್ತಿಗೆ ಸಂಬಂಧಪಟ್ಟ ಹಾಗೆ ಈ ರೀತಿ ಸಮಸ್ಯೆಗಳು ಆಗುತ್ತಿರುತ್ತವೆ. ಕೆಲವು ಹೆಣ್ಣು ಮಕ್ಕಳ ಸ್ವಇಚ್ಛೆಯಿಂದಲೇ ತವರು ಮನೆ ಯಾವುದೇ ಆಸ್ತಿ ಬೇಡ ಎಂದು ಹಕ್ಕು ಬಿಡುಗಡೆ ಪತ್ರದಲ್ಲಿ ಸಹಿ ಮಾಡಿ ಕೊಟ್ಟಿರುತ್ತಾರೆ ಆದರೆ ಎಲ್ಲ ಹೆಣ್ಣು ಮಕ್ಕಳಿಗೂ ಇಂತಹ ಪರಿಸ್ಥಿತಿ ಇರುವುದಿಲ್ಲ.
ಯಾಕೆಂದರೆ ಮದುವೆಯಾಗಿ ಆ ಹೆಣ್ಣು ಮಗಳು ಹೋದಮೇಲೆ ಸಹೋದರರು ಅಥವಾ ತವರು ಮನೆ ಕಡೆಯವರು ಆಕೆಯನ್ನು ವಿಚಾರಿಸಿಕೊಳ್ಳದೆ ಇರುವುದು ಅಥವಾ ತನ್ನ ಪತಿಯ ಮನೆಯಲ್ಲಿ ಬಹಳ ಕಷ್ಟ ಇರುವುದು ಅಥವಾ ಪತಿಯ ಮನೆಯಲ್ಲಿ ಒತ್ತಡ ಇರುವುದು ಇನ್ಯಾವುದೇ ರೀತಿ ಸಮಸ್ಯೆಯಿಂದ ತವರು ಮನೆಯ ಆಸ್ತಿಯಲ್ಲಿ ಪಾಲು ಕೇಳಬೇಕಾದ ಸನ್ನಿವೇಶ ಬರಬಹುದು.
ಇದು ತಪ್ಪು ಎಂದು ಹೇಳಲು ಬರುವುದಿಲ್ಲ. ಯಾಕೆಂದರೆ 2006ರಲ್ಲಿ ಆದ ಹಿಂದೂ ಉತ್ತರಾಧಿತ್ವ ಕಾಯ್ದೆ ತಿದ್ದುಪಡಿ ಪ್ರಕಾರವಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸಮಾನ ಅಧಿಕಾರ ಹೊಂದಿರುತ್ತಾರೆ.
ಈ ಸುದ್ದಿ ಓದಿ:- ಹೊಸ ಫ್ರಿಜ್ ಖರೀದಿ ಮಾಡುವವರು & ಮನೆಯಲ್ಲಿ ಫ್ರಿಜ್ ಇರುವವರು ಈ ರೀತಿ ತಪ್ಪು ಮಾಡಬೇಡಿ.!
ಆದರೆ ಅವಿಭಜಿತ ಕುಟುಂಬದ ನಡುವೆ ಆಸ್ತಿ ವರ್ಗಾವಣೆ ಆಗುವಾಗ ವಿಭಾಗ ಆಗುವಾಗ ಹೆಣ್ಣು ಮಕ್ಕಳು ಸಹೋದರರಿಗೆ ತಮಗೆ ಪಾಲು ಬೇಡ ಎನ್ನುವ ಇಚ್ಛೆ ಇದ್ದರೆ ಹಕ್ಕು ಬಿಡುಗಡೆ ಪತ್ರದ ಮೂಲಕ ತಮ್ಮ ಹಕ್ಕು ತ್ಯಾಗ ಮಾಡಿ ಬಿಟ್ಟು ಕೊಡಬಹುದು. ಈ ಸಮಯದಲ್ಲಿ ಉಡುಗೊರೆ ರೂಪದಲ್ಲಿ ಬೇರೆ ಏನನ್ನಾದರೂ ಪಡೆಯಬಹುದು ಅಥವಾ ಅದಕ್ಕೆ ಸರಿಸಮಾನವಾದ ಮತ್ತೊಂದು ಪ್ರಾಪರ್ಟಿ ಪಡೆಯಬಹುದು ಅಥವಾ ಏನನ್ನು ಪಡೆಯಲು ಇರಬಹುದು.
ಸಮಸ್ಯೆ ಏನೆಂದರೆ ಈ ರೀತಿ ಹಕ್ಕು ಬಿಡುಗಡೆ ಪತ್ರದಲ್ಲಿ ಎಲ್ಲರೂ ನಿಜಾಂಶ ಹೇಳಿ ಸಹಿ ತೆಗೆದುಕೊಂಡು ಇರುವುದಿಲ್ಲ ಇದನ್ನು ಬೇರೆ ಯಾವುದು ದಾಖಲೆ ಎಂದು ಅಥವಾ ಆರು ಕೋಟಿ ಬೆಲೆ ಬಾಳುವ ಪ್ರಾಪರ್ಟಿಗೆ ಕೇವಲ 10 ಲಕ್ಷವನ್ನು ಉಡುಗೊರೆ ಎಂದು ಕೊಟ್ಟು ಇನ್ಯಾವುದೋ ರೀತಿಯಲ್ಲಿ ಸಹೋದರಿಯರಿಗೆ ಮೋಸ ಮಾಡಿ ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿರಬಹುದು.
ಸಹಿ ಹಾಕಿದ ನಂತರ ಇದು ಅವರ ಅರಿವಿಗೆ ಬಂದಿರಬಹುದು. ಇಂತಹ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ ತಮ್ಮ ಪಾಲಿನ ಆಸ್ತಿ ಪಡೆದುಕೊಳ್ಳಲು ಸರಿಯಾದ ಭಾಗ ಪಡೆದುಕೊಳ್ಳಲು ಅವಕಾಶ ಇದೆಯೇ ಈಗಾಗಲೇ ಅವರು ಸಹಿ ಮಾಡಿ ಕೊಟ್ಟಿರುವ ಹಕ್ಕು ಬಿಡುಗಡೆ ಪತ್ರದಿಂದ ಸಮಸ್ಯೆ ಆಗಲಿದೆಯೇ ಎಂದು ಅನೇಕರ ಪ್ರಶ್ನೆ.
ಈ ಸುದ್ದಿ ಓದಿ:-ಕೇವಲ 10 ಅಡಿ ಜಾಗದಲ್ಲಿ ಕೇಸರಿ ಬೆಳೆದು ಲಕ್ಷ ಲಕ್ಷ ಗಳಿಸುತ್ತಿರುವ ರೈತ.!
ಇದಕ್ಕೆ ಪರಿಹಾರ ಏನಿದೆ ಎಂದರೆ ಹಕ್ಕು ಬಿಡುಗಡೆ ಪತ್ರ ಎಂದು ಹೆಸರಿಗೆ ಹೇಳುವುದು ಮಾತ್ರವಲ್ಲ ಯಾಕೆಂದರೆ, ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬಾಯಿ ಮಾತಿನಲ್ಲಿ ಹೇಳಿ ಕ್ಲಿಯರ್ ಮಾಡಿಕೊಳ್ಳುತ್ತಾರೆ ಇದು ನಡೆಯುವುದಿಲ್ಲ ಹಕ್ಕು ಬಿಡುಗಡೆ ಪತ್ರವನ್ನು ಮಾಡಿಸಿ ಸಹಿ ಪಡೆದುಕೊಂಡಿರುವುದು ಮಾತ್ರವಲ್ಲದೆ ಅದನ್ನು ರಿಜಿಸ್ಟರ್ ಕೂಡ ಮಾಡಿಸಿಕೊಳ್ಳಬೇಕು.
ಈ ರೀತಿಯಾಗಿ ರಿಜಿಸ್ಟರ್ ಮಾಡಿಸದ ಹಕ್ಕು ಬಿಡುಗಡೆ ಪತ್ರ ಕೋರ್ಟ್ ನಲ್ಲಿ ಮಾನ್ಯ ಆಗುವುದಿಲ್ಲ. ನೀವು ನಿಮ್ಮ ಸರಿಯಾದ ಪಾಲು ಕೇಳಿ ದಾವೇ ಹೂಡಬಹುದು ಒಂದು ವೇಳೆ ಸಹಿ ಹಾಕಿದ್ದು ನಿಜವಾಗಿದ್ದರು ಪ್ರಾಪರ್ಟಿ ವ್ಯಾಲ್ಯೂ ಅತಿ ಹೆಚ್ಚಿನ ಮಟ್ಟದಲ್ಲಿದ್ದು ಬಹಳ ಕಡಿಮೆ ಪ್ರಮಾಣದ ಹಣ ನೀಡಿ ಸಹಿ ಮಾಡಿಕೊಂಡಿದ್ದರೆ ಇದನ್ನು ಕೂಡ ನೀವು ಕೋರ್ಟ್ ನಲ್ಲಿ ಪ್ರೂವ್ ಮಾಡಬಹುದು. ಖಂಡಿತವಾಗಿಯೂ ನಿಮ್ಮ ಪಾಲಿನ ಸರಿಯಾದ ಭಾಗ ಪಡೆದುಕೊಳ್ಳಲು ನಿಮಗೆ ಅವಕಾಶ ಇದ್ದೇ ಇದೆ. ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ಕೊಡಿ.