ಜಗತ್ತಿನ ದುಬಾರಿ ಮಸಾಲೆಗಳಲ್ಲಿ ಕೇಸರಿಗೆ ಮೊದಲನೇ ಸ್ಥಾನ. ಚಿನ್ನದಷ್ಟು ಬೆಲೆ ಇರುವ ಈ ಕೆಂಪು ಬಣ್ಣದ ಮಸಾಲೆಯನ್ನು ರೆಡ್ ಗೋಲ್ಡ್ ಎಂದು ಕೂಡ ಕರೆಯುತ್ತಾರೆ. ಒಂದು ಗ್ರಾಂ ಗೆ 200 ರೂಪಾಯಿಗಿಂತಲೂ ಹೆಚ್ಚಿಗೆ ಬೆಲೆಬಾಳುವ ಇದು ಲಾಭದಾಯಕ ಕೃಷಿಯೇ ಸರಿ.
ಆದರೆ ಈ ಕೃಷಿಯನ್ನು ಎಲ್ಲಾ ಭಾಗಗಳಲ್ಲೂ ಮಾಡಲು ಸಾಧ್ಯವಿಲ್ಲ ಅದಕ್ಕೆ ಅದರದೇ ಆದ ವಾತಾವರಣ ಮಣ್ಣು ಅವಶ್ಯಕತೆ ಇರುತ್ತದೆ ನಮ್ಮ ದೇಶದಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳಲ್ಲಿ ಮಾತ್ರ ಕೇಸರಿ ಬೆಳೆಯಲಾಗುತ್ತದೆ. ಪ್ರಪಂಚದಲ್ಲಿ ಸ್ಪೇನ್, ಇಟಲಿ, ಇರಾನ್ ಮತ್ತಿತರ ಕೆಲವೇ ದೇಶಗಳಲ್ಲಿ ಕೇಸರಿ ಬೆಳೆಯಲಾಗುತ್ತದೆ.
ಕೇಸರಿ ಪೋಷಕಾಂಶಗಳ ಆಗರವಾಗಿದ್ದು, ಔಷಧೀಯ ಗುಣಗಳನ್ನು ಕೂಡ ಹೊಂದಿದೆ ಇಷ್ಟೆಲ್ಲ ಲಾಭದಾಯಕವಾಗಿರುವ ಮತ್ತು ಬೇಡಿಕೆ ಇರುವ ಈ ಕೃಷಿಯನ್ನು ಮಾಡುವುದರಿಂದ ರೈತನ ಆದಾಯ ಉತ್ತಮ ಮಟ್ಟಕ್ಕೆ ತಲುಪುತ್ತದೆ ಎನ್ನುವುದು ನಿಶ್ಚಿತ.
ಈ ಸುದ್ದಿ ಓದಿ:- ಮನೆಯಲ್ಲಿ ಇರೋರಿಗೆ ಬೆಸ್ಟ್ ಬಿಜಿನೆಸ್ ಇದು.! ಕೇವಲ 30 ರೂಪಾಯಿ ಇದ್ದರೆ ಸಾಕು ಈ ಬಿಜಿನೆಸ್ ಮಾಡಿಸಬಹುದು, ಮಸಿ ಕೆಂಡದಿಂದ ಕೋಟಿ ಕೋಟಿ ಗಳಿಸಿ.!
ಆದರೆ ಆಸಕ್ತಿ ಇದ್ದರೂ ಕೂಡ ಕೇಸರಿ ಬೆಳೆಯನ್ನು ಎಲ್ಲೆಡೆ ಬೆಳೆಯಲು ಸಾಧ್ಯವಿಲ್ಲ ಎನ್ನುವುದೇ ಬೇಸರ. ಆದರೆ ಬೆಳಗಾವಿಯ ಒಬ್ಬ ರೈತ ಇದ್ದನು ಚಾಲೆಂಜ್ ಆಗಿ ತೆಗೆದುಕೊಂಡು ಗೆದ್ದಿದ್ದಾರೆ. ಸಂರಕ್ಷಿತ ಬೇಸಾಯ ಪದ್ಧತಿ (Aeroponic culture) ಮೂಲಕ ಕರ್ನಾಟಕದಲ್ಲಿ ಕೇಸರಿ ಕೃಷಿ ಮಾಡಿ ಹೆಸರುವಾಸಿಯಾಗಿದ್ದಾರೆ.
ವಿಶ್ವದ ಹಲವೆಡೆ ಈ ತಂತ್ರಜ್ಞಾನ ಬಳಸಿಕೊಂಡು ಕೇಸರಿ ಬೆಳೆ ಬೆಳೆಯುತ್ತಿದ್ದಾರೆ ಇದರ ಬಗ್ಗೆ ಅರಿತ ಬೆಳಗಾವಿಯ ಟಿಕ್ಕಿಯೊಬ್ಬರು ತಾವು ಕೂಡ ಈ ಪ್ರಯೋಗ ಮಾಡಲೇಬೇಕು ಎಂದು ನಿರ್ಧರಿಸಿ ಪ್ರಯತ್ನಪಟ್ಟು ಯಶಸ್ವಿಯಾಗಿ ಇಂದು ಮಾದರಿ ರೈತ ಕೂಡ ಆಗಿದ್ದಾರೆ.
ಸಾಮಾನ್ಯವಾಗಿ ಕೇಸರಿ ಬೆಳೆಯುವ ವಿಧಾನ ಹೇಗಿರುತ್ತದೆ ಎಂದರೆ ಕಾಶ್ಮೀರದಂತಹ ಪ್ರದೇಶಗಳಲ್ಲಿ ಕೇಸರಿ ಗೆಡ್ಡೆಗಳನ್ನು ಮಣ್ಣಿನಲ್ಲಿ ಹೂತು ಉಳಿಮೆ ಮಾಡಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಮಣ್ಣು ನೀರು ಬಳಸಿ ಬಯಲಿನಲ್ಲಿ ನಿಂತು ಈ ಕೃಷಿ ಮಾಡಿದರೆ ಈ ಏರೋಫೋನಿಕ್ ವಿಧಾನ ಸಂಪೂರ್ಣ ಬಗ್ಗೆ ವಿರುದ್ಧವಾದ ವಿಧಾನವಾಗಿದೆ ಯಾಕೆಂದರೆ ನೀರು ಹಾಗೂ ಮಣ್ಣು ಎರಡನ್ನು ಬಳಸದೆ ಇಲ್ಲಿ ಕೇಸರಿಯನ್ನು ಬೆಳೆಯಲಾಗುತ್ತದೆ.
ಈ ಸುದ್ದಿ ಓದಿ:-BDA ನಲ್ಲಿ ಉದ್ಯೋಗವಕಾಶ, FDA, SDA, ಅಸಿಸ್ಟೆಂಟ್ ಹುದ್ದೆಗಳು ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.! ವೇತನ 52,650
ಇದು ಆಶ್ಚರ್ಯ ಅಲ್ಲದೆ ಮತ್ತೇನು ಇದು ಕೂಡ ಸಾಧ್ಯವೇ ಎಂದು ಅನಿಸುತ್ತದೆ ಖಂಡಿತ ಸಾಧ್ಯವಾಗಿದೆ ಕೇಸರಿ ಬೆಳೆಯಲು ಬೇಕಾದ ಹವಾಗುಣವನ್ನು (temperature) ಕೃತಕವಾಗಿ ಲ್ಯಾಬ್ ಗಳಲ್ಲಿ ನಿರ್ಮಾಣ ಮಾಡಿ ಕೇಸರಿಯನ್ನು ಬೆಳೆಯಲಾಗುತ್ತಿದೆ. ಇವರು ನೀಡುವ ಸಲಹೆ ಪ್ರಕಾರವಾಗಿ ಮೊದಮೊದಲಿಗೆ ಇದನ್ನು ಪ್ರಯೋಗ ಮಾಡುವವರು 10*10 ರೂಮ್ ನಲ್ಲಿ ಈ ರೀತಿ ಕೃತಕ ವಿಧಾನದಲ್ಲಿ ಪ್ರಯತ್ನಿಸಿ ನೋಡಬೇಕು.
ನಿಮಗೆ ಗ್ಯಾರೆಂಟಿ ಆದಮೇಲೆ ಆ ವಿಧಾನ ಗೊತ್ತಾಗಿ ಲಾಭ ಬಂದಮೇಲೆ ದೊಡ್ಡ ಪ್ರಮಾಣದಲ್ಲಿ ಮಾಡಬೇಕು ಎನ್ನುವ ಸಲಹೆಯನ್ನು ನೀಡುತ್ತಾರೆ. ಕೋಲ್ಡ್ ಕಂಟೇನರ್ ಬಳಸಿ ಲ್ಯಾಬ್ ಗಳಲ್ಲಿ, ಶೆಡ್ ಗಳಲ್ಲಿ, ದೊಡ್ಡ ದೊಡ್ಡ ರೂಮ್ ಗಳಲ್ಲಿ ಈ ಆರ್ಟಿಫಿಷಿಯಲ್ ವಿಧಾನ ಬಳಸಿ ಕೇಸರಿ ಬೆಳೆಯಬಹುದು.
ಆದರೆ ರೂಮ್ ಟೆಂಪರೇಚರ್ ಮೇಂಟೇನ್ ಮಾಡಬೇಕು ಎನ್ನುವುದೇ ದೊಡ್ಡ ಚಾಲೆಂಜ್ ಮತ್ತು ಅದು ಸಾಧ್ಯವಾದರೆ ಮಾತ್ರ ಈ ಕೃಷಿ ಕೈ ಹಿಡಿಯುವುದು ಎನ್ನುವ ಎಚ್ಚರಿಕೆಯನ್ನು ನೀಡುತ್ತಾರೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರಜತ್ ಕುಮಾರ್ ಎನ್ನುವವರು ಈಗ ಕೃಷಿ ಕಡೆಗೂ ಕೂಡ ಮುಖ ಮಾಡಿ ಈ ರೀತಿ ಹೊಸ ಪ್ರಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೇಸರಿ ಕೃಷಿ ಬಗ್ಗೆ ಇನ್ನಷ್ಟು ಮಾಹಿತಿ ಇವರಿಂದ ಪಡೆಯಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.