ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿಸುವ ಮುನ್ನ ಈ ತೀರ್ಪಿನ ಬಗ್ಗೆ ತಿಳಿದುಕೊಳ್ಳಿ…

 

WhatsApp Group Join Now
Telegram Group Join Now

ನಮ್ಮ ದೇಶದಲ್ಲಿ ಹಣ ಮಾಡುವ, ಆಸ್ತಿ ಖರೀದಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಕೂಡ ಇದೆ. ಆದರೆ, ಈ ಎಲ್ಲ ವಿಚಾರದಲ್ಲೂ ಕೂಡ ಸಾಕಷ್ಟು ಕಾನೂನು ನಿಯಮಗಳು ಇವೆ. ಇದನ್ನು ಮೀರಿದ್ದಲ್ಲಿ ಮುಂದೊಂದು ದಿನ ಕಾನೂನು ರೀತಿಯ ತೊಡಕುಗಳನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಕುರಿತಾದ ಸಾಮಾನ್ಯ ಜ್ಞಾನ ಇರಲೇಬೇಕು.

ಅತಿ ಮುಖ್ಯವಾಗಿ ಹೇಳುವುದಾದರೆ ನೀವು ಯಾವ ಆಸ್ತಿಯನ್ನು ಖರೀದಿ ಮಾಡುತ್ತೀರಿ ಮತ್ತು ಎಷ್ಟು ಹಣಕ್ಕೆ ಖರೀದಿ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ನೀವು ಆಸ್ತಿ ತೆರಿಗೆಯನ್ನು (Property Tax) ಕೂಡ ಪಾವತಿ ಮಾಡಬೇಕು. ಆಸ್ತಿ ಖರೀದಿ ನಿಯಮ ಮತ್ತು ಆಸ್ತಿ ತೆರಿಗೆ ನಿಯಮ ಪ್ರತಿಯೊಬ್ಬರಿಗೂ ತಿಳಿದಿರಬೇಕು ಎನ್ನುವ ಕಾರಣದಿಂದ ಈ ಅಂಕಣದಲ್ಲಿ ಕೆಲ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.

ಆಸ್ತಿ ಖರೀದಿ ಮಾಡುವ ಸಮಯದಲ್ಲಿ ತಮ್ಮ ಹೆಸರಿನಲ್ಲಿ ಮಾತ್ರವಲ್ಲದೆ ತಮ್ಮ ಬದಲು ಪತ್ನಿ ಅಥವಾ ಪೋಷಕರು ಅಥವಾ ಮಕ್ಕಳ ಹೆಸರಿನಲ್ಲಿ ಆಸ್ತಿ ಖರೀದಿ ಮಾಡುವವರು ಕೂಡ ಇದ್ದಾರೆ. ಇಂದು ನಾವು ಈ ಅಂಕಣದಲ್ಲಿ ಹೆಂಡತಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿದ್ದರೆ ಆ ಆಸ್ತಿಯ ನಿಜವಾದ ಹಕ್ಕುದಾರರು ಯಾರಾಗಿರುತ್ತಾರೆ ಎನ್ನುವ ಬಗ್ಗೆ ಹೈ ಕೋರ್ಟ್ ಈ ಹಿಂದೆ ನಡೆದಿರುವ ಕೇಸ್ ಗಳಲ್ಲಿ ತನ್ನ ತೀರ್ಪು ಏನು ಕೊಟ್ಟಿದೆ ಎನ್ನುವ ವಿಚಾರದ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ ಇನ್ಮುಂದೆ ಅಡ್ವಾನ್ಸ್ ಕೊಡುವ ಹಾಗಿಲ್ಲ.!

ಮೃ’ತ ತಂದೆಯ ಹೆಸರಿನಲ್ಲಿದ್ದ ಆಸ್ತಿಯ ಹಕ್ಕನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಮಗನೊಬ್ಬ ಅರ್ಜಿ ಸಲ್ಲಿಸಿದ್ದ ವೇಳೆ ವಾದ ವಿವಾದವನ್ನು ಆಲಿಸಿದ ಕೋರ್ಟ್ ಕೊಟ್ಟ ತೀರ್ಪು ಹೀಗಿತ್ತು. ಸಾಮಾನ್ಯವಾಗಿ ಹಿಂದೂ ಧರ್ಮಕ್ಕೆ ಸೇರಿದ ಪತಿಯು ಆತನ ಹೆಂಡತಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡುವ ಸಾಧ್ಯತೆ ಇರುತ್ತದೆ.

ಕುಟುಂಬದ ಮೇಲಿನ ಕಾಳಜಿಯಿಂದ ಆತ ಗೃಹಿಣಿಯಾಗಿರುವ ತನ್ನ ಪತ್ನಿ ಹೆಸರಿನಲ್ಲಿಯೇ ಆಸ್ತಿ ಖರೀದಿ ಮಾಡಿರಬಹುದು ಆದರೆ ಆ ಆಸ್ತಿಯ ಹಕ್ಕು ಕುಟುಂಬದ ಇನ್ನಿತರ ಸದಸ್ಯರಿಗೂ ಕೂಡ ಇರುತ್ತದೆ ಎಂದು ಕೋರ್ಟ್ ತಿಳಿಸಿದೆ. ಗೃಣಿಯಾಗಿರುವ ಮತ್ತು ಸ್ವತಂತ್ರ ಆದಾಯದ ಮೂಲವನ್ನು ಹೊಂದಿರದ ಹಿಂದೂ ಪತ್ನಿಯ ಹೆಸರಿನಲ್ಲಿ ಪತಿಯು ಖರೀದಿಸಿದ ಆಸ್ತಿಯು ಒಟ್ಟು ಕುಟುಂಬದ ಆಸ್ತಿ ಆಗಲಿದೆ ಎಂದು ಪ್ರಕರಣ ಒಂದರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ಪಾಲ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ತನ್ನ ತಂದೆ ಖರೀದಿಸಿದ ಆಸ್ತಿಯಲ್ಲಿ ಪಾಲುಕೋರಿ ಮನವಿ ಸಲ್ಲಿಸಿದ್ದ ಮಗನ ಪ್ರಕರಣವೊಂದರಲ್ಲಿ ಈ ತೀರ್ಪು ಹೊರ ಹೊಮ್ಮಿದೆ. ಪ್ರಕರಣದ ವಿವರ ನೋಡುವುದಾದರೆ ಈ ಪ್ರಕರಣದಲ್ಲಿ ಮಗನು ತನ್ನ ಮೃ’ತ ತಂದೆಯ ಆಸ್ತಿಯಲ್ಲಿ ಪಾಲು ಕೇಳಿ ಮೇಲ್ಮನವಿ ಸಲ್ಲಿಸಿದ್ದ.

ಈ ಸುದ್ದಿ ಓದಿ:- ಸ್ವಂತ ಆಸ್ತಿ, ಜಮೀನು ಇರುವವರಿಗೆ ವಿಶೇಷ ತೆರಿಗೆ ನಿಯಮ, ಏಪ್ರಿಲ್ 1 ರಿಂದಲೇ ಜಾರಿ.!

ಈತನ ತಂದೆಯು ಗೃಹಿಣಿಯಾಗಿದ್ದ ಯಾವುದೇ ಸ್ವತಂತ್ರ ಆದಾಯ ಮೂಲ ಹೊಂದಿರದ ಆತನ ತಾಯಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡಿದ್ದರು. ನಂತರ ಬೆಳವಣಿಗೆಗಳಿಂದಾಗಿ ತಾಯಿ ಮಗನ ಮಧ್ಯೆ ಆಸ್ತಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಎದುರಾದವು. ತಾಯಿಯು ಈ ಆಸ್ತಿಯನ್ನು ಅರ್ಜಿದಾರ ಮಗನ ಬದಲು ತನ್ನ ಬೇರೊಬ್ಬ ಮಗನಿಗೆ ಕೊಡಲು ಬಯಸಿದ್ದರು.

ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ ಮಗನ ಪರವಾಗಿ ವಾದಿಸಿದ ವಕೀಲರು ಈ ಆಸ್ತಿಯು ತಾಯಿಯ ವೈಯಕ್ತಿಕ ಆಸ್ತಿಯಲ್ಲ ಅವಿಭಕ್ತ ಕುಟುಂಬದ ಆಸ್ತಿ ಎಂದು ವಾದ ಮಂಡಿಸಿದರು. ಅನೇಕ ವರ್ಷಗಳವರೆಗೆ ನಡೆದ ಕೇಸ್ ನಲ್ಲಿ ಕೊನೆಯದಾಗಿ ತೀರ್ಪು ಮಗನ ಪರವಾಗಿ ಆಯಿತು.

ಯಾವುದೇ ಆದಾಯ ಮೂಲ ಇಲ್ಲದ ಹೆಂಡತಿ ಹೆಸರಿನಲ್ಲಿ ಪತಿ ಖರೀದಿಸಿದ ಆಸ್ತಿಯು ಕುಟುಂಬದ ಆಸ್ತಿ ಎಂದು ಊಹಿಸಬಹುದು ಇದು ಕೂಡ ಅವಿಭಕ್ತ ಕುಟುಂಬದ ಆಸ್ತಿಯೆಂದು ಪರಿಗಣಿಸಿ ಮೂರನೇ ವ್ಯಕ್ತಿಯ ವರ್ಗಾವಣೆಯಾಗದಂತೆ ಆಸ್ತಿಯ ರಕ್ಷಣೆ ಅಗತ್ಯ ಮತ್ತು ನಿಜ ಸಹೋದರ ನಡುವೆ ವಿವಾದ ಇನ್ನೂ ಉಳಿದಿದೆ ಎಂದು ನ್ಯಾಯಾಲಯ ತೀರ್ಪು ಕೊಟ್ಟಿದೆ.

ಈ ಸುದ್ದಿ ಓದಿ:- ಕೆಲಸ ಬಿಟ್ಟು ಷೇರ್ ಮಾರ್ಕೆಟ್ ನಲ್ಲಿ ತಿಂಗಳಿಗೆ 3 ಲಕ್ಷ ಲಾಭ ಮಾಡುತ್ತಿರುವ ಯುವಕ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now