ಇನ್ನು ಕೂಡ ನಮ್ಮ ದೇಶದಲ್ಲಿ ಅನೇಕರು ಬಾಡಿಗೆ ಮನೆಗಳಲ್ಲಿ (Rent House) ವಾಸಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಇರುವ ಬಡವರಿಂದ ಹಿಡಿದು ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗ ಅರಸಿ ಇನ್ಯಾವುದೇ ಕಾರಣಕ್ಕಾಗಿ ಬಾಡಿಗೆಗೆ ಹೋಗುತ್ತಿರುವ ಎಲ್ಲರಿಗೂ ಕೂಡ ಬಾಡಿಗೆ ಮನೆಗಳ ಆಧಾರ.
ಆದರೆ ಇಂದು ಬಾಡಿಗೆದಾರ (tenant) ಹಾಗೂ ಮಾಲೀಕರ (Hkuse Owner) ನಡುವೆ ಆಗುತ್ತಿರುವ ಸಂಘರ್ಷಗಳು ಸರ್ಕಾರ ಮಟ್ಟಕ್ಕೆ ತಲುಪುವಂತಾಗಿದೆ. ಯಾಕೆಂದರೆ ವಿಪರೀತವಾಗಿ ಬಾಡಿಗೆ ಡಿಮ್ಯಾಂಡ್ ಮಾಡುವ ಮಾಲೀಕರು ಮತ್ತು ಮನೆ ಮಾಲೀಕರು ಎಂದ ಮಾತ್ರಕ್ಕೆ ಅವರದ್ದೇ ಆದ ಕಾನೂನುಗಳು ಮಾಡಿ ಬಾಡಿಗೆದಾರದಿಂದ ಸುಲಿಗೆ ಮಾಡುವುದು ಮಾತ್ರವಲ್ಲದೆ.
ಮಾನಸಿಕ ಹಿಂ’ಸೆ ಕೊಡುವುದು ಮತ್ತು ಅದೇ ರೀತಿಯಾಗಿ ಬಾಡಿಗೆಗೆ ಬಂದ ಬಾಡಿಗೆದಾರನು ಕೂಡ ನಂತರ ಮನೆ ಮಾಲೀಕರಿಗೆ ತೊಂದರೆ ಕೊಡುವುದು ಈ ಎಲ್ಲ ಸಮಸ್ಯೆಗಳನ್ನು ಮತ್ತು ಇದಕ್ಕೆ ಸಂಬಂಧಿಸಿದಂತಹ ಕೇಸ್ ಗಳನ್ನು ಪರಿಗಣಿಸಿದ ಸರ್ಕಾರವು ಈಗ ಮಾಡರ್ನ್ ಟೆನಾಲ್ಟ್ ಆಕ್ಟ್ (Modern Tenant act) ಎನ್ನುವ ಒಂದು ಕಾಯ್ದೆಯನ್ನು ಜಾರಿಗೆ ತಂದಿದೆ.
ಈ ಸುದ್ದಿ ಓದಿ:- ಸ್ವಂತ ಆಸ್ತಿ, ಜಮೀನು ಇರುವವರಿಗೆ ವಿಶೇಷ ತೆರಿಗೆ ನಿಯಮ, ಏಪ್ರಿಲ್ 1 ರಿಂದಲೇ ಜಾರಿ.!
02 ಜೂನ್, 2021 ರಂದು ಈ ಕಾನೂನು ಜಾರಿಗೆ ಬಂದಿದ್ದು ಇದರಲ್ಲಿ ಗ್ರಾಮ ಪಂಚಾಯಿತಿ ಅಥವಾ ಪುರಸಭೆ ಅಥವಾ ನಗರಸಭೆಯಲ್ಲಿ ಇರುವ ಮನೆಗಳಿಗೆ ಎಷ್ಟು ಬಾಡಿಗೆ ನಿಗದಿಪಡಿಸಬೇಕು. ಯಾವ ಆಧಾರದ ಮೇಲೆ ನಿಗದಿಪಡಿಸಬೇಕು ಎನ್ನುವುದರಿಂದ ಹಿಡಿದು ಮುಖ್ಯವಾಗಿ ಬಾಡಿಗೆದಾರ ಹಾಗೂ ಮಾಲೀಕರ ನಡುವೆ ಇರುವ ಬಿಕ್ಕಟ್ಟಾದ ಮನೆ ಖಾಲಿ ಮಾಡುವಾಗ ಪೇಂಟ್ ಚಾರ್ಜಸ್ ಮತ್ತು ಪ್ಲಂಬಿಂಗ್, ಎಲೆಕ್ಟ್ರಿಕಲ್ ಚಾರ್ಜಸ್ ಹೆಚ್ಚಿಗೆ ಕಟ್ಟಿಸಿಕೊಳ್ಳುವ ವಿಚಾರ ಹಾಗೂ ಅತಿ ಹೆಚ್ಚಿನ ಅಡ್ವಾನ್ಸ್ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕಾನೂನು ಮಾಡಲಾಗಿದೆ.
ಇದುವರೆಗೂ ಕೂಡ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಅಡ್ವಾನ್ಸ್ ಎಂದು ಹತ್ತು ತಿಂಗಳ ಬಾಡಿಗೆಯನ್ನು ಮುಂಚಿತವಾಗಿ ಪಡೆದುಕೊಳ್ಳುತ್ತಿದ್ದರು ಮತ್ತು ಬಾಡಿಗೆಗೆ ಅಂಗಡಿ ಮುಂಗಟ್ಟು ಇಟ್ಟುಕೊಳ್ಳುವವರೆಗೂ ಕೂಡ ಇದೇ ರೀತಿ ಮಾಡಲಾಗುತ್ತಿತ್ತು. ಮತ್ತು ಅವರು ಮನೆ ಖಾಲಿ ಮಾಡುವಾಗ ಪೈಂಟ್ ಚಾರ್ಜಸ್ ಕಡಿತ ಮಾಡಿ ಮತ್ತು ನಡುವೆ ಪ್ಲಂಬಿಂಗ್ ಅಥವಾ ಎಲೆಕ್ಟ್ರಿಸಿಟಿ ಸಂಬಂಧ ಪಟ್ಟ ಹಾನಿಗಳಾಗಿದ್ದರೆ ಅದಕ್ಕೂ ಕೂಡ ಹಣ ಕಡಿತಗೊಳಿಸಿ ಅಡ್ವಾನ್ಸ್ ನಲ್ಲಿ ಉಳಿದ ಹಣವನ್ನು ಕೊಡಲಾಗುತ್ತಿತ್ತು.
ಆದರೆ ಈಗ ತಂದಿರುವ ಹೊಸ ನಿಯಮದ ಪ್ರಕಾರ ಅಂಗಡಿ ಮುಂಗಟ್ಟುಗಳಲ್ಲಿ ಬಾಡಿಗೆಗೆ ಇರುವವರು ಆರು ತಿಂಗಳ ಬಾಡಿಗೆಯನ್ನು ಮಾತ್ರ ಅಡ್ವಾನ್ಸ್ ಆಗಿ ಕೊಡಬಹುದು ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವವರಾದರೆ ಕೇವಲ ಎರಡು ತಿಂಗಳ ಬಾಡಿಗೆ ಹಣದಷ್ಟು ಹಣವನ್ನು ಮಾತ್ರ ಅಡ್ವಾನ್ಸ್ ಎಂದು ತೆಗೆದುಕೊಳ್ಳಬೇಕು ಎಂದು ನಿಯಮ ಮಾಡಲಾಗಿದೆ.
ಈ ಸುದ್ದಿ ಓದಿ:- ಕೆಲಸ ಬಿಟ್ಟು ಷೇರ್ ಮಾರ್ಕೆಟ್ ನಲ್ಲಿ ತಿಂಗಳಿಗೆ 3 ಲಕ್ಷ ಲಾಭ ಮಾಡುತ್ತಿರುವ ಯುವಕ.!
ಮತ್ತು ಯಾವುದೇ ಪೇಂಟಿಂಗ್, ಪ್ಲಂಬಿಂಗ್, ಎಲೆಕ್ಟ್ರಿಸಿಟಿ ಇವುಗಳನ್ನು ಬಾಡಿಗೆದಾರದಿಂದ ವಸೂಲಿ ಮಾಡುವಂತಿಲ್ಲ ಆದರೆ ಮನೆಗೆ ಇಂಟೀರಿಯರ್ ಗೀಸರ್ ಈ ರೀತಿಯ ವಸ್ತುಗಳು ಹಾನಿಗೊಳಗಾದರೆ ಆಗ ಹಣ ಕಳಿತಗೊಳಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಇನ್ನು ಮಾಲೀಕರಿಗೆ ಕೂಡ ಒಂದು ಶುಭ ಸಮಾಚಾರ ಇದ್ದು 11 ತಿಂಗಳು ಅಥವಾ ಎರಡು ವರ್ಷ ಈ ರೀತಿ ಮನೆ ಅಗ್ರಿಮೆಂಟ್ ಮಾಡಿಕೊಂಡು.
ಅವಧಿ ಮುಗಿದ ಮೇಲೆ ಮನೆ ಖಾಲಿ ಮಾಡದೆ ತೊಂದರೆ ಕೊಡುವ ಬಾಡಿಗೆದಾರರಿಂದ ಅಷ್ಟು ತಿಂಗಳವರೆಗೆ ದುಪ್ಪಟ್ಟು ಪಾಡಿಗೆ ಹಣ ವಸೂಲಿ ಮಾಡಬಹುದು ಎನ್ನುವ ಕಾನೂನು ಜಾರಿಗೆ ತರಲಾಗಿದೆ ಮತ್ತು ಎಲ್ಲಾ ಜಿಲ್ಲಾ ಕಚೇರಿಗಳನ್ನು ಕೂಡ ಟೆನಾಂಟ್ ಅಥಾರಿಟಿ (Tenant Authority) ಸ್ಥಾಪಿಸಿ ಬಾಡಿಗೆದಾರ ಹಾಗೂ ಮನೆ ಮಾಲೀಕರುಗಳ ದೂರುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸಲು ಇತ್ಯರ್ಥ ಪಡಿಸಲಾಗುವುದು ಎಂದು ಈ ಕಾಯ್ದೆಯಲ್ಲಿ ತಿಳಿಸಲಾಗಿದೆ. ಈ ಕಾಯ್ದೆ ಜಾರಿಗೆ ಬಂದ ನಂತರ ಮಾಡಿಕೊಳ್ಳಲಾಗುವ ಬಾಡಿಗೆ ಅಗ್ರಿಮೆಂಟ್ ಗಳಿಗೆ ಇದು ಅನ್ವಯವಾಗಲಿದೆ.