ನೀರಿನ ಸಂರಕ್ಷಣೆ ವಿಚಾರ ಬಂದಾಗ ಕರ್ನಾಟಕದ ಪ್ರಗತಿಪರ ಕೃಷಿಕ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಮಳೆ ಕೊಯ್ಲುಗೆ ಹೆಸರುವಾಸಿಯಾಗಿರುವ ವಾಟರ್ ಗಾಂಧಿ, ವಾಟರ್ ವಾರಿಯರ್ ವಾಟರ್ ಮ್ಯಾಜಿಷಿಯನ್ ಎಂದೇ ಹೆಸರು ಪಡೆದಿರುವ ಅಯ್ಯಪ್ಪ ಮಸಗಿ ಯವರ ಬಗ್ಗೆ ಕೇಳಿಯೇ ಇರುತ್ತೇವೆ.
ಮಳೆ ನೀರು ಕೃಷಿ ಭೂಮಿಯಲ್ಲಿಯೇ ಇಂಗಬೇಕು ದೇಶದ ಯಾವುದೇ ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ರೈತರಿಗೆ ಕೃಷಿ ಕೆಲಸಕ್ಕಾಗಿ ನೀರಿನ ಕೊರತೆ ಎನ್ನುವ ಮಾತು ಬರಬಾರದು ಎನ್ನುವುದಕ್ಕಾಗಿ ಹಲವಾರು ರೀತಿಯ ಪ್ರಯೋಗ ಮಾಡಿ ಹತ್ತಾರು ತಂತ್ರಗಳನ್ನು ಪರಿಚಯಿಸಿದ ಇವರ ಕೆರೆಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಮಾಡಿರುವ ಸಾಧನೆಯನ್ನು 2012 ರಲ್ಲಿ ಲಿಮ್ಕಾ ಬುಕ್‌ಗೆ ಸೇರಿಸಲಾಗಿದೆ.
ಇದಕ್ಕಾಗಿಯೇ ರಾಷ್ಟ್ರಪತಿ ಮತ್ತು ರಾಜ್ಯ ಪ್ರಶಸ್ತಿಗಳೂ ಲಭಿಸಿವೆ. ತುಮಕೂರು ಜಿಲ್ಲೆಯ ಕೊರಟಗೆರೆಯ ಸಮೀಪದಲ್ಲಿರುವ ಕುರುಬರಹಳ್ಳಿಯಲ್ಲಿ 26 ಎಕರೆ ಸಾಮಾನ್ಯ ಭೂಮಿ ಖರೀದಿಸಿ ಇಂದು ಏಳು ವರ್ಷದ ಶ್ರಮದಲ್ಲಿ ರೈನ್ ಶಾಡೋ ಏರಿಯಾದಲ್ಲೇ ವರ್ಷಪೂರ್ತಿ ನೀರಿರುವ ಹಾಗೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಜಮೆ ಆಗಿದೆಯೇ ಇಲ್ಲವೇ ಎನ್ನುವುದನ್ನು ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ, ಈ ವಿಧಾನದಲ್ಲಿ ಚೆಕ್ ಮಾಡಿ.!
ಅಯ್ಯಪ್ಪ ಮಸಗಿಯವರನ್ನು ಅಪ್ರತಿಮ ಸಾಧಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಮಳೆನೀರು ಕೊಯ್ಲು ವಿಚಾರದಲ್ಲಿ ಅಪಾರ ಅನುಭವ ಹೊಂದಿರುವ ಇವರು ಇದರ ಪ್ರಾಮುಖ್ಯತೆಯನ್ನು ಅನುಕೂಲತೆಯನ್ನು ಎಲ್ಲಾ ವೇದಿಕೆಗಳಲ್ಲಿ ಸಾರಿ ಸಾರಿ ಹೇಳುತ್ತಿದ್ದಾರೆ ಮತ್ತು ಇದಕ್ಕಾಗಿ ತಮ್ಮದೇ ಆದ ಸ್ವಂತ ಖರ್ಚಿನಲ್ಲಿ ವಾಟರ್ ಲೆಟರಸಿ ಫೌಂಡೇಶನ್ ಸ್ಥಾಪಿಸಿದ್ದಾರೆ.
ಕೊಳವೆ ಬಾವಿ ಮರುಪೂರಣದ ಬಗ್ಗೆ ಕೂಡ ಅರಿವು ಮೂಡಿಸುತ್ತಿರುವ ಇವರು ತಮ್ಮ ಕೃಷಿ ಭೂಮಿಯಲ್ಲೂ ಕೂಡ ಇದನ್ನು ಅಳವಡಿಸಿಕೊಂಡು ಮೊದಲಿಗೆ 900 ಅಡಿ ತೆರೆದರೆ ನೇರ ಬರೆದ ಬಾವಿಯಲ್ಲಿ 20 ಅಡಿಗೆ, ನೀರು ಸದ್ದು ಮಾಡುವಂತೆ ಚಮತ್ಕಾರ ಮಾಡಿ ತೋರಿದ್ದಾರೆ. ಎಲ್ಲರೂ ಬೋರ್ ಫೇಲ್ ಆದ ಮೇಲೆ ರಿಚಾರ್ಜ್ ಮಾಡಿಸಿದರೆ ಇವರು ಹಾಕಿಸಿದಾಗಲೇ ರಿಚಾರ್ಜ್ ಮಾಡಿಸಿ ಈಗ ಸುತ್ತಲೂ ನೀರಿನ ಕೊರತೆ ಇದ್ದರು ತಮ್ಮ ಜಮೀನಿನಲ್ಲಿ ಸಮೃದ್ಧಿಯಾಗಿ ಬಿಳಿರಾಗಿ, ಭತ್ತ, ತರಕಾರಿ, ಹಣ್ಣು ಮತ್ತು ಅರಣ್ಯ ಕೃಷಿಯನ್ನೂ ಮಾಡುತ್ತಿದ್ದಾರೆ.
ರಕ್ತ ಚಂದನ, ಮಲ್ಬಾರ್ ಬೇವು, ಬೆಳ್ಳಿ ಮರ ಸೇರಿದಂತೆ ಒಟ್ಟು 10000 ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಅಲ್ಲದೆ 2013 ರಿಂದ ಸಂಪೂರ್ಣವಾಗಿ ಸಾವಯವ ಕೃಷಿಯನ್ನೇ ಮಾಡುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. ಬೋರ್ವೆಲ್ ರಿಚಾರ್ಜ್ ಮಾಡಿಸುವುದು ಹೇಗೆಂದರೆ ಮೊದಲಿಗೆ ರೀಚಾರ್ಜ್ ಪಿಟ್ ಸ್ಪಾಟ್ ಅನ್ನು ಗುರುತಿಸಬೇಕು. ಕೊಳವೆ ಬಾವಿಯ ಸುತ್ತಲಿನ ರೀಚಾರ್ಜ್ ಪಿಟ್‌ನ ಅಳತೆ 10 ಅಡಿ* 10 ಅಡಿ * 8 ಅಡಿ ಇರಬೇಕು.
ಈ ಸುದ್ದಿ ಓದಿ:- ಕೇಂದ್ರ ಸರ್ಕಾರದ ಹೊಸ ಯೋಜನೆ, ಮಹಿಳೆಯರಿಗೆ ತಿಂಗಳಿಗೆ 15 ಸಾವಿರ ಹಣ ಬರುವ ಯೋಜನೆ.! ಇಲ್ಲಿದೆ ನೋಡಿ ಸಂಪೂರ್ಣ ವಿವರ.!
ಈ ರೀಚಾರ್ಜ್ ಪಿಟ್ 2 ಅಡಿ ದೂರದಲ್ಲಿ 18 ಅಡಿ*12 ಅಡಿ*6 ಅಡಿ ಅಳತೆಯ ನೀರಿನ ಸಂಗ್ರಹದ ಹೊಂಡವನ್ನು ತೆರೆಯಬೇಕು, ಹಾಗೆಯೇ ಅಗೆಯುವಾಗ ಶೇಖರಣಾ ಗೋಡೆಯನ್ನು ಮಾಡಲು ಈ ಹೊಂಡಗಳ ನಡುವೆ 3ಅಡಿ ಅಗಲ ಮತ್ತು 5ಅಡಿ ಆಳದ ಬ್ಲಾಕ್ ಕೂಡ ಅಗೆದು ಪಿಟ್ ಕೆಳಭಾಗದಿಂದ 1.5 ಅಡಿವರೆಗೆ ಜಲ್ಲಿ ಕಲ್ಲುಗಳಿಂದ ತುಂಬಿರಬೇಕು. ಮೇಲಿನ 40 ಅಡಿಯಲ್ಲಿ ಕೇಸಿಂಗ್ ಇರಬೇಕು.
ಕೇಸಿಂಗ್ ಪೈಪ್ ಮೇಲೆ ಸಣ್ಣ ರಂಧ್ರಗಳನ್ನು ಮಾಡಿ ಕವಚದ ಸುತ್ತಲೂ ತೆಂಗಿನಕಾಯಿ ಹಗ್ಗದ ಸಹಾಯದಿಂದ ಬಲೆ ಒರೆಸಿ ಕೊಳವೆ ಬಾವಿಯ ಸುತ್ತಲೂ ನಾಲ್ಕು ಸಿಮೆಂಟ್ ರಿಂಗ್‌ಗಳನ್ನು ಹಾಕಿ ಕೊಳವೆ ಬಾವಿಯನ್ನು ನೆಲಮಟ್ಟದವರೆಗೆ ಮುಚ್ಚಿದರೆ ಈಗ ರೀಚಾರ್ಜ್ ಪಿಟ್ ಕಲ್ಲು, ಅಪ್ಪಳಿಸಿದ ಕಲ್ಲುಗಳು, ಮರಳು ಮತ್ತು ಮತ್ತೆ ನೆಲಮಟ್ಟದವರೆಗೆ ಆ ಕ್ರಮದಲ್ಲಿ ಅಪ್ಪಳಿಸಿದ ಕಲ್ಲುಗಳಿಂದ ತುಂಬುತ್ತದೆ.
ಕೊನೆಯದಾಗಿ ರೀಚಾರ್ಜ್ ಪಿಟ್ ಗಡಿ ಕ್ಲೋಸ್ ಮಾಡಲು ಕಾಂಕ್ರೀಟ್ ಮಿಶ್ರಣವನ್ನು ಬಳಸಿದರೆ ಮಳೆನೀರು ನೇರವಾಗಿ ರೀಚಾರ್ಜ್ ಪಿಟ್‌ಗೆ ಸುರಿಯುವುದನ್ನು ತಡೆಯುತ್ತದೆ. ಸೀಪಿಂಗ್ ಆದ ನೀರು ಶೇಖರಣೆ ಆಗುತ್ತದೆ ಎಲ್ಲಕ್ಕಿಂತ ಹೆಚ್ಚಾಗಿ ಭೂಮಿಯಲ್ಲಿ ನೀರು ಇಂಗುತ್ತದೆ. ಎಲ್ಲರೂ ಇದನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತೇನೆ ಎಂದು ಹೇಳುತ್ತಾರೆ ಅಯ್ಯಪ್ಪ ಮಸಗಿಯವರು ಅವರ ಕಡೆಯಿಂದಲೇ ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.