ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ (Gruhalakshmi and Annabhagya Amount) ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥನ ಸ್ಥಾನದಲ್ಲಿರುವ ಮಹಿಳೆಯು ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ ರೂ.2000 ಹಾಗೂ ಅನ್ನ ಭಾಗ್ಯ ಯೋಜನೆಯಿಂದ ಕುಟುಂಬದ ಎಲ್ಲಾ ಸದಸ್ಯರ ಐದು ಕೆಜಿ ಹೆಚ್ಚುವರಿ ಅಕ್ಕಿ ಹಣವನ್ನು DBT ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆಯಬಹುದು.
ಈ ಸುದ್ದಿ ನೋಡಿ:- ಆಸ್ತಿ ಮತ್ತು ಜಮೀನಿಗೆ ಕರಾರು ಪತ್ರ, ಒಪ್ಪಂದ ಪತ್ರ ಬರೆಯುವುದು ಹೇಗೆ ನೋಡಿ.!
ಆದರೆ ಯೋಜನೆ ಆರಂಭವಾದಗಳಿಂದ ಕೇಳಿ ಬರುತ್ತಿರುವ ಸಾಮಾನ್ಯ ಸಮಸ್ಯೆ ಏನೆಂದರೆ, ಅರ್ಹರಾಗಿದ್ದರು ಅನೇಕ ಮಹಿಳೆಯರಿಗೆ ಈ ಯೋಜನೆಗಳ ಹಣ ಬರುತ್ತಿಲ್ಲ ಎನ್ನುವುದು. ಇದಕ್ಕೆ ಪ್ರಮುಖ ಕಾರಣ ಹಾಗೂ ಪರಿಹಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಕಾರಣಗಳು:-
* ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿ ಇಲ್ಲದೆ ಇರುವುದು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಆಗದೆ ಇರುವುದು
* ರೇಷನ್ ಕಾರ್ಡ್ ಸಕ್ರಿಯವಾಗಿ ಇಲ್ಲದೆ ಇರುವುದು ಮತ್ತು ರೇಷನ್ ಕಾರ್ಡ್ ನಲ್ಲಿ ಇ-ಕೆವೈಸಿ ಅಪ್ಡೇಟ್ ಆಗದೆ ಇರುವುದು. ಸದಸ್ಯರ ಹೆಸರುಗಳಲ್ಲಿ ಹೆಸರಿನ ವ್ಯತ್ಯಾಸವಾಗಿರುವುದು ಅದರಲ್ಲೂ ಕುಟುಂಬದ ಮುಖ್ಯ ಹೆಸರು ನೀಡಿರುವ ದಾಖಲೆಗಳಲ್ಲಿ ವ್ಯತ್ಯಾಸವಾಗಿದ್ದರೆ ಸರ್ಕಾರದ ಈ ಯೋಜನೆಗಳ ನೆರವು ಸಿಗುವುದಿಲ್ಲ.
ಈ ಸುದ್ದಿ ನೋಡಿ:- 1 ರೂಪಾಯಿ ಖರ್ಚು ಮಾಡದೆ ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಕಂಪ್ಯೂಟರ್ ಕೋರ್ಸ್ ಕಲಿತು ಉಚಿತವಾ ಸರ್ಟಿಫಿಕೇಟ್ ಕೂಡ ಪಡೆಯಬಹುದು, ಇಲ್ಲಿದೆ ನೋಡಿ ಮಾಹಿತಿ…!
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ (Gruhalaksmi Camp) ಮತ್ತು ಅನ್ನಭಾಗ್ಯ ಯೋಜನೆ ಹಣ ಪಡೆಯಲು ಸಮಸ್ಯೆ ಆಗಿರುವವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ (fair price shop) ಶಿಬಿರಗಳನ್ನು ಏರ್ಪಡಿಸಿ ಸಮಸ್ಯೆ ಬಗೆಹರಿಸಿ ಕೊಡಲಾಗುತ್ತಿದೆ. ಆದರೆ ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ ಅಥವಾ ತಡೆಹಿಡಿಯಲಾಗಿದ್ದರೆ ನೀವು ಮತ್ತೆ ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು.
ಕೆಲವರು ಸರ್ಕಾರ ಸೂಚಿಸಿರುವ ಮನದಂಡಗಳನ್ನು ಮೀರಿ BPL ರೇಷನ್ ಕಾರ್ಡ್ ಪಡೆದಿದ್ದಾರೆ ಇಂಥವರಿಗೆ ಅನ್ನ ಭಾಗ್ಯ ಯೋಜನೆ ಹಣ ಬರುವುದಿಲ್ಲ. ಪ್ರತಿ ತಿಂಗಳು ಕೂಡ ಆಹಾರ ಇಲಾಖೆ ಅಧಿಕಾರಿಗಳು ರೇಷನ್ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಅನಧಿಕೃತ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದ್ದಾರೆ.
ಈ ಸುದ್ದಿ ನೋಡಿ:- ಬಾಡಿಗೆ & ಭೋಗ್ಯ ಮನೆಯಲ್ಲಿ ಇರುವವರು ಈ ವಿಷಯ ತಪ್ಪದೆ ತಿಳಿದುಕೊಳ್ಳಿ.! ಹೊಸ ರೂಲ್ಸ್.!
ಈ ರೀತಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ ರದ್ದಾಗಿರುವ ತಿಂಗಳಿನಿಂದ ನಿಮಗೆ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಬಂದಿರುವುದಿಲ್ಲ. ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಏನಾಗಿದೆ ಎಂದು ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿ ತಿಳಿದುಕೊಂಡು ಅದಕ್ಕೆ ಕಾರಣವನ್ನು ಸಹ ತಿಳಿದುಕೊಳ್ಳಬಹುದು ನಂತರ ಪರಿಹಾರಕ್ಕಾಗಿ ಮುಂದಿನ ಕ್ರಮ ಕೈಗೊಳ್ಳಬಹುದು.
ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವ ವಿಧಾನ:-
* Google ನಲ್ಲಿ https://aahar.com ಎಂದು ಟೈಪ್ ಮಾಡಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ ಸಿಗುತ್ತದೆ ಕ್ಲಿಕ್ ಮಾಡಿ
* ಮುಖಪುಟದಲ್ಲಿ ಇ-ಸೇವೆಗಳು (e-services) ಆಪ್ಷನ್ ಸೆಲೆಕ್ಟ್ ಮಾಡಿ ಮತ್ತು ನಿಮ್ಮ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಿಕೊಳ್ಳುವ ಆಕ್ಷನ್ ಕೂಡ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ
* ಎಡಭಾಗದಲ್ಲಿ ಸೇವೆಗಳ ಲಿಸ್ಟ್ ಇರುತ್ತದೆ ಅದರಲ್ಲಿ ಇ-ಪಡಿತರ ಚೀಟಿ ಎನ್ನುವ ಆಪ್ಷನ್ ಕ್ಲಿಕ್ ಮಾಡಿ.
* ರದ್ದುಗೊಳಿಸಲಾದ / ತಡೆಹಿಡಿಯಲಾದ ಪಟ್ಟಿ ಎನ್ನುವ ಆಪ್ಷನ್ ಇರುತ್ತದೆ ಇದರಲ್ಲಿ ಪ್ರತಿ ತಿಂಗಳು ಅಪ್ಡೇಟ್ ಆಗುತ್ತಿರುತ್ತದೆ ಇದರ ಮೇಲೆ ಕ್ಲಿಕ್ ಮಾಡಿ.
* ಸ್ಕ್ರೀನ್ ಮೇಲೆ ಕೆಲವು ಆಪ್ಷನ್ ನೀಡಲಾಗಿರುತ್ತದೆ ಅದರಲ್ಲಿ ನಿಮ್ಮ District, Thaluk, Month, Year ಇದರಲ್ಲಿ ನಿಮ್ಮ ಜಿಲ್ಲೆ, ತಾಲೂಕು ನೀವು ಪರಿಶೀಲಿಸುತ್ತಿರುವ ತಿಂಗಳು ಹಾಗೂ 2024 ಎಂದು ಸೆಲೆಕ್ಟ್ ಮಾಡಿ Go ಕ್ಲಿಕ್ ಮಾಡಿ.
ಈ ಸುದ್ದಿ ನೋಡಿ:- ಇನ್ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ.! 1 ರೂಪಾಯಿ ಹಣ ಕಟ್ಟುವಂತಿಲ್ಲ ಯಾರಿಗೆ ಈ ಸೌಲಭ್ಯ ಸಿಗಲಿದೆ ನೋಡಿ.!
* ನೀವು ಸೆಲೆಕ್ಟ್ ಮಾಡಿರುವ ಮಾಹಿತಿ ಪ್ರಕಾರ ನಿಮ್ಮ ತಾಲೂಕಿನಲ್ಲಿ ಎಷ್ಟೆಲ್ಲ ರೇಷನ್ ಕಾರ್ಡ್ ಗಳು ಆ ತಿಂಗಳಿನಲ್ಲಿ ರದ್ದಾಗಿವೆ ಅಥವಾ ತಡೆಹಿಡಿಯಲಾಗಿದೆ ರೇಷನ್ ಕಾರ್ಡ್ ನಂಬರ್ ಸಮೇತ ಲಿಸ್ಟ್ ಬರುತ್ತದೆ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ ಹೆಸರು ಇದೆ ಯಾವ ಕಾರಣಕ್ಕಾಗಿ ರದ್ದಾಗಿದೆ ಮಾಹಿತಿ ಇರುತ್ತದೆ.
ಒಂದು ವೇಳೆ ಆದಾಯ ಮಿತಿ ಹೆಚ್ಚಾಗಿರುವ ಕಾರಣದಿಂದ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ದರೆ ನೀವು ನಿಮ್ಮ ಕುಟುಂಬದಲ್ಲೇ ಆದಾಯ ಪಾವತಿದಾರರಾಗಿರುವ ಅಥವಾ ಸರ್ಕಾರಿ ಹುದ್ದೆಯಲ್ಲಿರುವ ಆ ಸದಸ್ಯನ ಹೆಸರನ್ನು ರೇಷನ್ ಕಾರ್ಡ್ ನಿಂದ ಡಿಲೀಟ್ ಮಾಡಿಸುವ ಮೂಲಕ ಮತ್ತೆ ಕಾರ್ಡ್ ಸ್ಥಿತಿ ಸಕ್ರಿಯಗೊಳಿಸಿಕೊಳ್ಳಬಹುದು ಆಹಾರ ಇಲಾಖೆ ಭೇಟಿ ಕೊಟ್ಟು ಅವರ ಸೂಚನೆ ಅನುಸಾರ ಪರಿಹಾರ ಪಡೆದುಕೊಳ್ಳಿ.
https://youtu.be/UWXHa6QntuI?si=zpIInyWnVMQ8i2ay