ಜನಸಾಮಾನ್ಯರು ತಮಗೆ ಗ್ಯಾಸ್ಟಿಕ್ ಸಮಸ್ಯೆ ಆಗಿದೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಅಸಲಿಗೆ ಗ್ಯಾಸ್ಟ್ರಿಕ್ ಅನ್ನುವ ಪದವೇ ಮೆಡಿಕಲ್ ನಲ್ಲಿ ಇಲ್ಲ. ಗ್ಯಾಸ್ಟರಿಯೋಸಿಸ್ ಮತ್ತು ಗ್ಯಾಸ್ಟ್ರಿಕ್ ಅಲ್ಸರ್ ಎನ್ನುವ ಸಮಸ್ಯೆಗಳಿವೆ. ಈ ರೀತಿ ಸಮಸ್ಯೆ ಆದಾಗ ಔಷಧಿ ಅಂಗಡಿಗಳಿಗೆ ಹೋಗಿ ಯಾವುದೋ ಮಾತ್ರೆ ಅಥವಾ ಟಾನಿಕ್ ತೆಗೆದುಕೊಂಡು ಸುಮ್ಮನಾಗುತ್ತೇವೆ.
ಆ ಮಾತ್ರೆಗಳನ್ನು ತೆಗೆದುಕೊಂಡ ತಕ್ಷಣ ಎದೆ ಉರಿ, ನೋವು ಅಥವಾ ಹುಳಿತೇಗು ಕಡಿಮೆ ಆದಂತೆ ಅನಿಸುತ್ತದೆ ಹಾಗಾಗಿ ಕಾಯಿಲೆ ವಾಸಿಯಾಯಿತು ಎಂದುಕೊಳ್ಳುತ್ತೇವೆ. ಆದರೆ ಇದು ಬಹಳ ದೊಡ್ಡ ತಪ್ಪು. ಇದನ್ನು ನ್ಯಾಚುರಲ್ ಆಗಿ ಕಂಟ್ರೋಲ್ ಮಾಡಲು ಪ್ರಯತ್ನಿಸಬೇಕು. ಯಾವುದೇ ಔಷಧಿಯಿಂದಲೂ ಇದಕ್ಕೆ ಪರ್ಮನೆಂಟ್ ಸಲ್ಯೂಷನ್ ಸಿಗುವುದಿಲ್ಲ ಔಷಧಿಗಳು ಟೆಂಪರರಿ ಆಗಿ ಮಾತ್ರ ಕೆಲಸ ಮಾಡುತ್ತವೆ ಎನ್ನುತ್ತಾರೆ ವೈದ್ಯರು.
ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ ಬರುತ್ತೆ.? ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!
ಹಾಗಾದರೆ ಈ ರೀತಿ ಗ್ಯಾಸ್ಟ್ರಿಯಾಸಿಸ್ ಮತ್ತು ಗ್ಯಾಸ್ಟ್ರಿಕ್ ಅಲ್ಸರ್ ಉಂಟಾಗುವುದಕ್ಕೆ ಕಾರಣವೇನು ಎಂದು ತಿಳಿದುಕೊಳ್ಳಬೇಕು ಆಗ ಮಾತ್ರ ಪರಿಹಾರ ಮಾಡಲು ಸಾಧ್ಯ ಗ್ಯಾಸ್ಟ್ರಿಯಾಸಿಸ್ ಹೆಚ್ಚಾದಾಗ ಗ್ಯಾಸ್ಟಿಕ್ ಅಲ್ಸರ್ ಆಗುತ್ತದೆ. ಇದಕ್ಕೆ ಮುಖ್ಯವಾದ ಕಾರಣ ಏನು ಎಂದರೆ ವಿವರಿಸುವುದಾದರೆ ನಮ್ಮ ಜಠರದಲ್ಲಿ ಹೈಡ್ರೋಕ್ಲೋರಿಕ್ ಆಸಿಡ್ ಎನ್ನುವ ಆಸಿಡ್ ಉತ್ಪತ್ತಿ ಆಗುತ್ತದೆ.
ಇದು ಕೆಮಿಕಲ್ ಎಂದೇ ಹೇಳಬಹುದು. ಆದರೆ ಇದು ಒಂದು ಒಳ್ಳೆಯ ಆಸಿಡ್ ಆಗಿದೆ. ನಮ್ಮ ದೇಹ ಹೇಗೆ ಇದನ್ನು ಉತ್ಪತ್ತಿ ಮಾಡುತ್ತದೆ ಎಂದರೆ ನಮ್ಮ ಬಾಯಿಯಲ್ಲಿ ಲಾವರಸ ಬರುವ ರೀತಿಯಲ್ಲಿ ಸಹಜವಾಗಿ ಜಠರದಲ್ಲಿ ಈ ಹೈಡ್ರೋಕ್ಲೋರಿಕ್ ಆಸಿಡ್ ಬರುತ್ತದೆ. ಒಬ್ಬ ಮನುಷ್ಯ ಪ್ರತಿನಿತ್ಯವೂ ಕೂಡ ಬೆಳಗ್ಗೆ 9:00 ಟಿಫನ್ ಮಾಡುತ್ತಿದ್ದಾನೆ, ಮಧ್ಯಾಹ್ನ 1:00ಗೆ ಊಟ ಮಾಡುತ್ತಿದ್ದಾನೆ, ರಾತ್ರಿ 7:00ಗೆ ಊಟ ಮಾಡುತ್ತಿದ್ದಾನೆ ಎಂದರೆ ಆ ಸಮಯಕ್ಕೆ ಸರಿಯಾಗಿ ಆಸಿಡ್ ರಿಲೀಸ್ ಆಗಿರುತ್ತದೆ ಇದು ದೇಹದ ಸಹಜ ಗುಣ.
ಪ್ರಕೃತಿಯೂ ಕೂಡ ಇದಕ್ಕೆ ಹೊಂದಿಕೊಂಡಿರುತ್ತದೆ. ಈ ರೀತಿ ದೇಹದಲ್ಲಿ ಹೈಡ್ರೋಕ್ಲೋರಿಕ್ ಆಸಿಡ್ ಉತ್ಪತ್ತಿ ಆದ ಸಮಯಕ್ಕೆ ನಾವು ಆಹಾರ ಸೇವನೆ ಮಾಡಿದರೆ ಅದು ಆಹಾರದ ಜೊತೆ ಬೆರೆತು ನಮ್ಮ ದೇಹಕ್ಕೆ ಬೇಕಾದ ಒಂದು ಒಳ್ಳೆಯ ಪೋಷಕಾಂಶವಾಗುತ್ತದೆ. ಒಂದು ವೇಳೆ ನಾವು ಹೈಡ್ರೋಕ್ಲೋರಿಕ್ ಆಸಿಡ್ ಬಿಡುಗಡೆ ಆದ ಮೇಲು ಆಹಾರ ನೀಡಲಿಲ್ಲ ಎಂದರೆ ಅದು ಬ್ಯಾಡ್ ಕೆಮಿಕಲ್ ಆಗುತ್ತದೆ.
ಹೈಡ್ರೋಕ್ಲೋರಿಕ್ ಆಸಿಡ್ ನ ಲಕ್ಷಣ ಏನೆಂದರೆ ನಾವು ತಿಂದ ಆಹಾರವನ್ನು ಜೀರ್ಣಿಸುವುದು. ಈಗ ನೀವೇ ಯೋಚಿಸಿ ಆಹಾರವನ್ನು ಜೀರ್ಣಿಸುವಷ್ಟು ಶಕ್ತಿ ಇರುವ ಈ ಹೈಡ್ರೋಕ್ಲೋರಿಕ್ ಆಸಿಡ್ ಗೆ ನಾವು ಆಹಾರವನ್ನು ಕೊಡದೆ ಇದ್ದಾಗ ಏನಾಗುತ್ತದೆ ಎಂದು. ಅದು ಸಹಜವಾಗಿ ಜಠರವನ್ನೇ ಸುಡಲು ಶುರು ಮಾಡುತ್ತದೆ.
ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನಿಗೆ ಕಷ್ಟ ತಪ್ಪಿದ್ದಲ್ಲ.! ಯಾವ್ಯಾವ ವಸ್ತುಗಳು ಗೊತ್ತಾ.?
ಅಂತಹ ಸಮಯದಲ್ಲಿ ನಮಗೆ ಹಸಿವಾದಾಗ ಊಟ ಮಾಡದೆ ಇದ್ದರೆ ಹೊಟ್ಟೆ ಚುರುಕ್ ಎನ್ನುವ ಅನುಭವ ಆಗಿರುತ್ತದೆ. ಈ ರೀತಿ ಜಠರ ಸುಟ್ಟು ಅಥವಾ ಸವೆದು ಕೊನೆಗೊಂದು ದಿನ ಇದು ಓವರ್ ಆದಾಗ ಹೋಲ್ ಕೂಡ ಆಗಿಬಿಡುತ್ತದೆ ಇದು ತುಂಬಾ ಕ್ರಿಟಿಕಲ್ ಕಂಡಿಶನ್ ಇಂತಹ ಸಮಯದಲ್ಲಿ ವ್ಯಕ್ತಿ ತಿಂದ ಆಹಾರ ಹೊರಗೆ ರಿಲೀಸ್ ಆಗಿಬಿಡುತ್ತದೆ.
ಆಗ ಅವರಿಗೆ ಆಹಾರ ಕೊಡದೆ ಗ್ಲುಕೋಸ್ ಹಾಕಿ ಸರ್ಜರಿ ಮಾಡಬೇಕಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಬೆಳಗ್ಗೆ ಸಮಯ ಊಟ ಮಿಸ್ ಮಾಡಬಾರದು, ದೇಹಕ್ಕೆ ಬೇಕಾದಷ್ಟು ನೀರು ಕುಡಿಯಬೇಕು, ಒಬ್ಬ ವಯಸ್ಕ ವ್ಯಕ್ತಿ ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರು ಕುಡಿಯಲೇ ಬೇಕು, ಪೋಷಕಾಂಶ ಯುಕ್ತ ಆಹಾರ ಸೇವಿಸಬೇಕು, ಆದಷ್ಟು ಮನೆಯಲ್ಲಿ ಮಾಡಿದ ಶುದ್ಧವಾದ ಆಹಾರ ಪದಾರ್ಥಗಳನ್ನೇ ಸೇವಿಸಬೇಕು, ಈ ರೀತಿ ಅಭ್ಯಾಸ ರೂಡಿಸಿಕೊಂಡು ನ್ಯಾಚುರಲ್ ಆಗಿ ಸಮಸ್ಯೆ ಕಂಟ್ರೋಲ್ ಮಾಡಿಕೊಳ್ಳಬೇಕು.