ಒಬ್ಬ ವ್ಯಕ್ತಿಯು ತನ್ನ ಸ್ವಯಾರ್ಜಿತವಾದ ಆಸ್ತಿಯನ್ನು ಅಥವಾ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ತನ್ನ ಪಾಲಿನ ಆಸ್ತಿಯನ್ನು (property) ತನ್ನ ಇಷ್ಟದ ಪ್ರಕಾರ ಬೇರೆಯವರಿಗೆ ನೀಡುವುದನ್ನು ದಾನಪತ್ರದ (gift deed) ಮೂಲಕ ನೀಡುವುದು ಎನ್ನುತ್ತಾರೆ. ಈ ಸಮಯದಲ್ಲಿ ಕಂದಾಯ ಇಲಾಖೆ (rules) ನಿಯಮಗಳಂತೆ ಆಸ್ತಿಯ ಹಕ್ಕನ್ನು ಅವರು ಬಯಸಿದ ವ್ಯಕ್ತಿಗೆ ವರ್ಗಾವಣೆ ಮಾಡಿ ರಿಜಿಸ್ಟ್ರರ್ (Register) ಮಾಡಿರಲಾಗುತ್ತದೆ.
ಯಾವುದಾದರೂ ಒಂದು ಸಂದರ್ಭದಲ್ಲಿ ದಾನ ಮಾಡಲಾದ ಆಸ್ತಿಯನ್ನು ಆ ವ್ಯಕ್ತಿ ವಾಪಸ್ (Registration cancel) ಪಡೆಯಬೇಕು ಎಂದರೆ ಸಾಧ್ಯವಾಗುತ್ತದೆ ಎಂದುಕೊಳ್ಳಬೇಡಿ. ಯಾಕೆಂದರೆ, ಅದು ಅವರದ್ದೇ ಆಸ್ತಿ ಅವರೇ ಕೊಟ್ಟಿದ್ದು ಎಂದು ಭಾವಿಸಿದರೆ ಅದು ಖಂಡಿತ ತಪ್ಪು.
ಯಾಕೆಂದರೆ ಕಾನೂನಿನ ಪ್ರಕಾರ ಒಂದು ಬಾರಿ ದಾನ ಎಂದು ಆಸ್ತಿಯನ್ನು ಕೊಟ್ಟ ಮೇಲೆ ಅದನ್ನು ವಾಪಸ್ ಪಡೆಯುವುದು ಅಷ್ಟು ಸುಲಭ ಅಲ್ಲ. ಆದರೆ ಕೆಲವು ಕ್ರಿಟಿಕಲ್ ಕಂಡೀಷನ್ ಗಳಲ್ಲಿ ಮಾತ್ರ ಇವುಗಳನ್ನು ವಾಪಸ್ ಪಡೆಯಲು ಅವಕಾಶವಿದೆ ಅದು ಹೇಗೆ ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ.
● ಒಬ್ಬ ವ್ಯಕ್ತಿಯು ತನ್ನ ಪಿತ್ರಾರ್ಜಿತ ಆಸ್ತಿಯನ್ನು ದಾನ ಪತ್ರವಾಗಿ ಕೊಟ್ಟಿರುತ್ತಾನೆ ಎಂದಿಟ್ಟುಕೊಳ್ಳೋಣ ಆದರೆ ಕುಟುಂಬ ವಿಭಾಗ ಆಗುವ ಮೊದಲೇ ತನ್ನ ಹೆಸರಿನಲ್ಲಿ ಆಸ್ತಿ ಇದೆ ಎಂದು ಅದನ್ನು ತನಗೆ ಇಷ್ಟ ಬಂದ ಒಬ್ಬ ಮಕ್ಕಳಿಗೆ ಕೊಟ್ಟರೆ, ಉಳಿದ ವಾರಸುದಾರರು ಅದನ್ನು ಕೋರ್ಟಿನಲ್ಲಿ ಚಾಲೆಂಜ್ ಮಾಡಿ ಈಗಾಗಲೇ ಆಗಿರುವ ರಿಜಿಸ್ಟರ್ ಅನ್ನು ಕ್ಯಾನ್ಸಲ್ ಮಾಡಿಸಬಹುದು.
ಆಸ್ತಿ ಖರೀದಿ & ಮಾರಟ ಮಾಡುವವರಿಗೆ ಪ್ರಮುಖ ಸುದ್ದಿ ನಾಳೆಯಿಂದ ಜಾರಿ ಆಗಲಿದೆ ಹೊಸ ರೂಲ್ಸ್.!
● ಒಂದು ವೇಳೆ ಆಸ್ತಿಯನ್ನು ಮೋಸದಿಂದ ಅಥವಾ ಬಲವಂತದಿಂದ ಅಥವಾ ಕ್ರಿಮಿನಲ್ ಆಕ್ಟಿವಿಟಿ ಮೂಲಕ ರಿಜಿಸ್ಟರ್ ಮಾಡಿಸಿಕೊಂಡರೆ. ಆ ಆಸ್ತಿಯ ಮಾಲೀಕರು ಕೋರ್ಟ್ ನಲ್ಲಿ ನ್ಯಾಯ ಕೇಳಬಹುದು ಮತ್ತು ಅದಕ್ಕೆ ತಕ್ಕನಾದ ಪುರಾವೆಗಳನ್ನು ಕೋರ್ಟಿಗೆ ಸಲ್ಲಿಸಿ ನಂತರ ತಮ್ಮಿಂದ ಕಸಿದುಕೊಳ್ಳಲಾದ ಆಸ್ತಿಯ ರಿಜಿಸ್ಟ್ರಾರ್ ಕ್ಯಾನ್ಸಲ್ ಮಾಡಿಸಿ ವಾಪಸ್ ಪಡೆಯಬಹುದು.
● ತಾವು ಆಸ್ತಿಯನ್ನು ನೀಡುವಾಗ ಯಾವುದಾದರು ಕಂಡಿಶನ್ ಹಾಕಿದ್ದರೆ, ಕಂಡಿಶನ್ ಮೇರೆಗೆ ತಮ್ಮ ಆಸ್ತಿಯನ್ನು ಮತ್ತೊಬ್ಬರಿಗೆ ರಿಜಿಸ್ಟರ್ ಮಾಡಿ ಕೊಟ್ಟಿದ್ದರೆ ಅವರು ಆ ಕಂಡೀಶನ್ ಗಳನ್ನು ಪೂರೈಸದೆ ಇದ್ದಲ್ಲಿ ಆಗ ಅದಕ್ಕೆ ಸಂಬಂಧಪಟ್ಟ ಹಾಗೆ ಕೋರ್ಟ್ನಲ್ಲಿ ದಾವೇ ಹೂಡಿ ಸಾಕ್ಷಿಗಳನ್ನು ಒದಗಿಸಿ ಅಂತಹ ರಿಜಿಸ್ಟರ್ ಗಳನ್ನು ಕ್ಯಾನ್ಸಲ್ ಮಾಡಿಸಬಹುದು.
● ಸೀನಿಯರ್ ಸಿಟಿಜನ್ ಆಕ್ಟ್ – 2017 (Senior Citizen act) ಪ್ರಕಾರ ಪೋಷಕರು ತಮ್ಮ ಮಕ್ಕಳಿಗೆ ತಮ್ಮ ಪಾಲಿನ ಸ್ವಯಾರ್ಜಿತ ಅಥವಾ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಕೊಟ್ಟಿರುತ್ತಾರೆ. ಅಂತಹ ಸಂದರ್ಭದಲ್ಲಿ ತಂದೆ ತಾಯಿಯ ಮೂಲಭೂತ ಅವಶ್ಯಕತೆಯಾದ ವಸತಿ, ಆಹಾರ ಮತ್ತು ಬಟ್ಟೆ ಹಾಗೂ ಮೆಡಿಕಲ್ ಖರ್ಚುಗಳನ್ನು ಮಕ್ಕಳು ಪೂರೈಸಬೇಕಾದದ್ದು ಅವರ ಜವಾಬ್ದಾರಿ ಆಗಿರುತ್ತದೆ.
ಆಸ್ತಿ ಪಡೆದ ನಂತರ ಮಕ್ಕಳು ಹೆತ್ತವರನ್ನು ತಿರಸ್ಕಾರ ಮಾಡಿದ್ದರೆ, ಅಂತಹ ಸಮಯದಲ್ಲಿ ಪೋಷಕರು ಕೋರ್ಟ್ ನಲ್ಲಿ ಈ ಆಕ್ಟ್ ಮೂಲಕ ತಾವು ಮಾಡಿಕೊಟ್ಟಿದ್ದ ರಿಜಿಸ್ಟರ್ ಕ್ಯಾನ್ಸಲ್ ಮಾಡಿಸಿ ತಮ್ಮ ಹೆಸರಿಗೆ ಆಸ್ತಿಯನ್ನು ಹಿಂಪಡೆಯಬಹುದು, ಇತ್ತೀಚಿನ ದಿನಗಳಲ್ಲಿ ಈ ಆಕ್ಟ್ ಹೆಚ್ಚು ಸುದ್ದಿಯಲ್ಲಿದೆ.
ಮೊದಲನೇ ಕಂತಿನ ಹಣ ಬಾರದೇ ಇರುವವರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!
● ಒಂದು ಆಸ್ತಿಯನ್ನು ಮತ್ತೊಬ್ಬರಿಗೆ ದಾನಪತ್ರ ಮಾಡಿಕೊಳ್ಳುವಾಗ ದಾನ ಮಾಡಿ ಕೊಡುವುದು ಮಾತ್ರವಲ್ಲದೆ ಅದನ್ನು ಪಡೆಯುವವರೆಗೂ ಕೂಡ ಅದು ಇಷ್ಟ ಇರಬೇಕು, ಯಾಕೆಂದರೆ ಆ ಪತ್ರಗಳಲ್ಲಿ ಇಬ್ಬರು ಸಹಿ ಮಾಡಬೇಕು ದಾನ ಪಡೆಯುವವರಿಗೆ ಇಷ್ಟ ಇಲ್ಲದಿದ್ದಾಗ ಅದನ್ನು ರಿಜಿಸ್ಟರ್ ಮಾಡಲಾಗುವುದಿಲ್ಲ.
● ದಾನಪತ್ರ ಮಾಡಿಕೊಟ್ಟ ನಂತರ ಅದನ್ನು ರಿಜಿಸ್ಟರ್ ಮಾಡಿಸಬೇಕಾದದ್ದು ಕಡ್ಡಾಯ, ಒಂದು ವೇಳೆ ದಾನಪತ್ರ ಮಾಡಿಕೊಟ್ಟಿದ್ದರೂ ಆ ಆಸ್ತಿ ಮಾಲೀಕರು ಮೃ’ತ ಪಟ್ಟಿದ್ದರೆ ಅಂತಹ ಸಂದರ್ಭಗಳಲ್ಲಿ ಅದು ಮಾನ್ಯವಾಗುವುದಿಲ್ಲ. ಆ ವ್ಯಕ್ತಿ ಮೃ’ತ ಪಟ್ಟ ನಂತರ ಅವರ ಆಸ್ತಿಯನ್ನು ರಿಜಿಸ್ಟರ್ ಮಾಡಲು ಆಗುವುದಿಲ್ಲ.